ಬ್ರೇಕಿಂಗ್ ನ್ಯೂಸ್
02-06-21 11:55 am GIZBOT Mutthuraju H M ಡಿಜಿಟಲ್ ಟೆಕ್
ಟೆಕ್ ವಲಯದಲ್ಲಿ ಸ್ಮಾರ್ಟ್ಫೋನ್ಗಳು ಹೆಚ್ಚಿನ ಜನಪ್ರಿಯತೆಯನ್ನು ಪಡೆದುಕೊಂಡಿವೆ. ಇದೇ ಕಾರಣಕ್ಕೆ ಹಲವು ಕಂಪೆನಿಗಳು ಹೊಸ ಮಾದರಿಯ ಸ್ಮಾರ್ಟ್ಫೋನ್ಗಳನ್ನು ಪರಿಚಯಿಸುತ್ತಲೇ ಬಂದಿವೆ. ಇನ್ನು ಭಾರತದ ಸ್ಮಾರ್ಟ್ಫೋನ್ ಮಾರುಕಟ್ಟೆಯಲ್ಲಿ ಹೊಸ ಸ್ಮಾರ್ಟ್ಫೋನ್ಗಳ ಭರಾಟೆ ಜೋರಾಗಿಯೆ ಇದೆ. ಆದರೆ ಕಳೆದ ತಿಂಗಳು ಕೋವಿಡ್ ಎರಡನೇ ಅಲೆಯ ಕಾರಣದಿಂದಾಗಿ ಹಲವು ಕಂಪೆನಿಗಳು ಹೊಸ ಸ್ಮಾರ್ಟ್ಫೋನ್ ಬಿಡುಗಡೆಗೆ ಮುಂದಾಗಿರಲಿಲ್ಲ. ಇದೀಗ ಜೂನ್ ತಿಂಗಳಲ್ಲಿ ತಮ್ಮ ಸ್ಮಾರ್ಟ್ಫೋನ್ಗಳನ್ನು ಪರಿಚಯಿಸುಲು ತುದಿಗಾಲಲ್ಲಿ ನಿಂತಿವೆ.
ಹೌದು, ಭಾರತದಲ್ಲಿ COVID-19 ಎರಡನೇ ಅಲೆ ಕಾರಣದಿಂದ ಕಳೆದ ತಿಂಗಳು ಹೆಚ್ಚಿನ ಪ್ರಮಾಣದಲ್ಲಿ ಹೊಸ ಸ್ಮಾರ್ಟ್ಫೋನ್ಗಳು ಲಾಂಚ್ ಆಗಿರಲಿಲ್ಲ. ಆದರೆ ಜೂನ್ ತಿಂಗಳಲ್ಲಿ ಕೆಲವು ಸ್ಮಾರ್ಟ್ಫೋನ್ಗಳು ಬಿಡುಗಡೆ ಆಗುವ ನಿರೀಕ್ಷೆ ಇದೆ. ಇವುಗಳಲ್ಲಿ ಮಧ್ಯ ಶ್ರೇಣಿಯ ಮತ್ತು ಪ್ರೀಮಿಯಂ ಫ್ಲ್ಯಾಗ್ಶಿಪ್ ಸ್ಮಾರ್ಟ್ಫೋನ್ಗಳು ಕೂಡ ಸೇರಿವೆ. ಹಾಗಾದ್ರೆ ಜೂನ್ 2021 ರಲ್ಲಿ ಬಿಡುಗಡೆ ಆಗುವ ಪ್ರಮುಖ ಸ್ಮಾರ್ಟ್ಫೋನ್ಗಳ ಬಗ್ಗೆ ತಿಳಿಸಿಕೊಡ್ತೀವಿ ಮುಂದೆ ಓದಿರಿ.

ಒನ್ಪ್ಲಸ್ ನಾರ್ಡ್ CE 5G
ಒನ್ಪ್ಲಸ್ ಸಂಸ್ಥೆ ತನ್ನ ಹೊಸ ಒನ್ಪ್ಲಸ್ ನಾರ್ಡ್ CE 5G ಸ್ಮಾರ್ಟ್ಫೋನ್ ಅನ್ನು ಇದೇ ಜೂನ್ 10 ರಂದು ಭಾರತದಲ್ಲಿ ಬಿಡುಗಡೆ ಮಾಡಲು ಸಿದ್ಧತೆ ನಡೆಸಿದೆ. ಇನ್ನು ಈ ಸ್ಮಾರ್ಟ್ಫೋನ್ 6.43 ಇಂಚಿನ ಅಮೋಲೆಡ್ ಡಿಸ್ಪ್ಲೇ ಹೊಂದಿರಲಿದೆ. ಈ ಡಿಸ್ಪ್ಲೇ 90Hz ರಿಫ್ರೆಶ್ ರೇಟ್ ಅನ್ನು ಒಳಗೊಂಡಿರಲಿದೆ. ಇದು ಕ್ವಾಲ್ಕಾಮ್ ಸ್ನಾಪ್ಡ್ರಾಗನ್ 750G SoC ಪ್ರೊಸೆಸರ್ ಅನ್ನು ಹೊಂದಿರಲಿದೆ ಎಂದು ಹೇಳಲಾಗುತ್ತದೆ. ಇನ್ನು ಈ ಸ್ಮಾರ್ಟ್ಫೋನ್ 64ಮೆಗಾಪಿಕ್ಸೆಲ್ ಸಾಮರ್ಥ್ಯದ ಮುಖ್ಯ ಕ್ಯಾಮೆರಾ ಹೊಂದಿರಲಿದೆ. ಇದರ ಬೆಲೆ ಅಂದಾಜು 20,000 ರೂ.ಇರಬಹುದು ಎನ್ನಲಾಗಿದೆ.

ರಿಯಲ್ಮಿ GT 5G
ಮಾರ್ಚ್ನಲ್ಲಿ ಚೀನಾದಲ್ಲಿ ಬಿಡುಗಡೆಯಾದ ರಿಯಲ್ಮಿ GT 5G ಸ್ಮಾರ್ಟ್ಫೋನ್ ಜೂನ್ ತಿಂಗಳಲ್ಲಿ ಭಾರತ ಮತ್ತು ಯುರೋಪಿಯನ್ ಮಾರುಕಟ್ಟೆಗಳಲ್ಲಿ ಬಿಡುಗಡೆಯಾಗುವ ನಿರೀಕ್ಷೆಯಿದೆ. ಇನ್ನು ಈ ಸ್ಮಾರ್ಟ್ಫೋನ್ 6.43-ಇಂಚಿನ ಫುಲ್ ಹೆಚ್ಡಿ + ಸೂಪರ್ ಅಮೋಲೆಡ್ ಡಿಸ್ಪ್ಲೇಯನ್ನು ಹೊಂದಿದೆ. ಇದು 120Hz ರಿಫ್ರೆಶ್ ರೇಟ್, 1000 ನಿಟ್ಸ್ ಗರಿಷ್ಠ ಬ್ರೈಟ್ನೆಸ್, ಮತ್ತು ಕಾರ್ನಿಂಗ್ ಗೊರಿಲ್ಲಾ 5 ಪ್ರೊಟೆಕ್ಷನ್ ಹೊಂದಿರಲಿದೆ. ಇನ್ನು ಈ ಸ್ಮಾರ್ಟ್ಫೋನ್ ಕ್ವಾಲ್ಕಾಮ್ ಸ್ನಾಪ್ಡ್ರಾಗನ್ 888 5G ಎಸ್ಒಸಿ ಪ್ರೊಸೆಸರ್ ಹೊಂದಿರಲಿದೆ. ಇದು ಟ್ರಿಪಲ್ ರಿಯರ್ ಕ್ಯಾಮೆರಾ ಹೊಂದಿದೆ, ಇದರಲ್ಲಿ ಮುಖ್ಯ ಕ್ಯಾಮೆರಾ 64 ಮೆಗಾಪಿಕ್ಸೆಲ್ ಸೆನ್ಸಾರ್ ಇರಲಿದೆ. ಇದರ ಬೆಲೆ ಬಗ್ಗೆ ಯಾವುದೇ ಮಾಹಿತಿ ಇಲ್ಲ.

iQOO Z3 5G
iQOO Z3 5G ಸ್ಮಾರ್ಟ್ಫೋನ್ ಕೂಡ ಇದೇ ತಿಂಗಳು ಭಾರತದಲ್ಲಿ ಬಿಡುಗಡೆ ಆಗಲಿದೆ. ಇನ್ನು ಈ ಸ್ಮಾರ್ಟ್ಫೋನ್ 6.58-ಇಂಚಿನ ಫುಲ್ ಹೆಚ್ಡಿ + ಡಿಸ್ಪ್ಲೇಯನ್ನು ಹೊಂದಿರಲಿದೆ. ಇದು ಕ್ವಾಲ್ಕಾಮ್ ಸ್ನಾಪ್ಡ್ರಾಗನ್ 768GSoC ಪ್ರೊಸೆಸರ್ ಹೊಂದಿದ್ದು, ಆಂಡ್ರಾಯ್ಡ್ 11 ಆಧಾರಿತ ಐಕ್ಯೂಒ ಯುಐ 1.0 ಕಸ್ಟಮ್ ಸ್ಕಿನ್ನಲ್ಲಿ ಕಾರ್ಯನಿರ್ವಹಿಸುತ್ತದೆ. ಇನ್ನು ಈ ಸ್ಮಾರ್ಟ್ಫೋನ್ ಕ್ವಾಡ್ ರಿಯರ್ ಕ್ಯಾಮೆರಾ ಸೆಟಪ್ ಹೊಂದಿದ್ದು, ಮುಖ್ಯ ಕ್ಯಾಮೆರಾ 64 ಮೆಗಾಪಿಕ್ಸೆಲ್ ಸೆನ್ಸಾರ್ ಹೊಂದಿದೆ. ಇದರ ಬೆಲೆ ಬಗ್ಗೆ ಕೂಡ ಯಾವುದೇ ಮಾಹಿತಿ ಇಲ್ಲ.

ಒಪ್ಪೊ ರೆನೋ 6 ಸರಣಿ
ಒಪ್ಪೊ ರೆನೋ 6 ಸರಣಿಯು ಈ ತಿಂಗಳ ಕೊನೆಯಲ್ಲಿ ಭಾರತದಲ್ಲಿ ಬಿಡುಗಡೆಯಾಗುವ ನಿರೀಕ್ಷೆಯಿದೆ. ಈ ಸರಣಿ ಕಳೆದ ತಿಂಗಳು ಚೀನಾದಲ್ಲಿ ಬಿಡುಗಡೆ ಆಗಿದೆ. ಇನ್ನು ಒಪ್ಪೊ ರೆನೋ 6 ಸರಣಿ ಸ್ಮಾರ್ಟ್ಫೋನ್ಗಳು ವಿಭಿನ್ನ ಗಾತ್ರದ ಫುಲ್ ಹೆಚ್ಡಿ + ಅಮೋಲೆಡ್ ಡಿಸ್ಪ್ಲೇ ಹೊಂದಿವೆ. ಈ ಡಿಸ್ಪ್ಲೇ 90Hz ರಿಫ್ರೆಶ್ ರೇಟ್ ಹೊಂದಿದ್ದು, ಕಾರ್ನಿಂಗ್ ಗೊರಿಲ್ಲಾ ಗ್ಲಾಸ್ 5 ಪ್ರೊಟೆಕ್ಷನ್ ಬೆಂಬಲದೊಂದಿಗೆ ಬರಲಿವೆ.
(Kannada Copy of Gizbot Kannada)
28-10-25 07:18 pm
Bangalore Correspondent
ಆರೆಸ್ಸೆಸ್ ಚಟುವಟಿಕೆ ನಿರ್ಬಂಧಿಸುವ ಸರ್ಕಾರಿ ಸ್ಥಳದ...
28-10-25 03:40 pm
ನವೆಂಬರ್ ಕುತೂಹಲ, ದೆಹಲಿ ಭೇಟಿಗೆ ತೆರಳಿದ ಡಿಕೆಶಿಗೆ...
27-10-25 10:52 pm
ಕಾಂಗ್ರೆಸಿನಲ್ಲಿ ಮತ್ತೊಬ್ಬ ಏಕನಾಥ್ ಶಿಂಧೆ, ಪವಾರ್ ಹ...
27-10-25 10:42 pm
ಡಿಕೆಶಿ ದಿಢೀರ್ ದೆಹಲಿಗೆ ದೌಡು ; ವಿಶೇಷ ಏನೂ ಇಲ್ಲ,...
26-10-25 07:33 pm
26-10-25 11:01 pm
HK News Desk
ಅಂಗೈಯಲ್ಲಿ ಡೆತ್ ನೋಟ್ ಬರೆದಿಟ್ಟು ಸರ್ಕಾರಿ ವೈದ್ಯೆ...
26-10-25 05:38 pm
ಮುಂದಿನ ವಾರದಿಂದಲೇ ತಮಿಳುನಾಡಿನಲ್ಲಿ ಮತದಾರ ಪಟ್ಟಿಯ...
25-10-25 09:36 pm
Vemuri Kaveri Travels Bus Accident, Fire, Ill...
25-10-25 02:28 pm
Kurnool Bus Fire, Accident, Latest News: ಹೈದರ...
24-10-25 05:43 pm
28-10-25 08:36 pm
Mangalore Correspondent
ಸ್ಪೀಕರ್ ಕೊಠಡಿ- ಶಾಸಕರ ಭವನ ನವೀಕರಣ ನೆಪದಲ್ಲಿ ಭಾರೀ...
28-10-25 03:36 pm
ಲಾರಿ ಧಾವಂತಕ್ಕೆ ಹೆದ್ದಾರಿ ದಾಟುತ್ತಿದ್ದ ಪಾದಚಾರಿ ಬ...
27-10-25 11:01 pm
ತಾಯಿ- ಮಗಳು ತೆರಳುತ್ತಿದ್ದ ಸ್ಕೂಟರಿಗೆ ಕಾರು ಡಿಕ್ಕಿ...
27-10-25 10:25 pm
ಆಟವಾಡುತ್ತಲೇ ತೆರೆದ ಬಾವಿಗೆ ಬಿದ್ದ ಎರಡು ವರ್ಷದ ಹೆಣ...
27-10-25 10:03 pm
27-10-25 05:29 pm
HK News Desk
ದುಬೈನಲ್ಲಿ ಕುಳಿತು ಬೆಂಗಳೂರಿನ ಫೈನಾನ್ಸ್ ಕಂಪನಿಗೆ ಕ...
27-10-25 04:04 pm
ಶಬರಿಮಲೆಯಲ್ಲಿ ಕದ್ದ ಚಿನ್ನ ಬಳ್ಳಾರಿ ಜುವೆಲ್ಲರಿಗೆ ಮ...
25-10-25 10:00 pm
SP Arun, Puttur: ಗೋಸಾಗಾಟ ತಡೆದ ಪ್ರಕರಣ ; ಯಾವುದೇ...
25-10-25 02:14 pm
Surathkal Murder Attempt, Arrest, Crime; ಸುರತ...
24-10-25 08:20 pm