ಬ್ರೇಕಿಂಗ್ ನ್ಯೂಸ್
13-05-21 04:30 pm GIZBOT Mutthuraju H M ಡಿಜಿಟಲ್ ಟೆಕ್
ಶಿಯೋಮಿ ಸಂಸ್ಥೆಯ ರೆಡ್ಮಿ ನೋಟ್ ಸರಣಿಯ ಸ್ಮಾರ್ಟ್ಫೋನ್ಗಳು ಈಗಾಗಲೇ ಮಾರುಕಟ್ಟೆಯಲ್ಲಿ ಸಖತ್ ಸೌಂಡ್ ಮಾಡಿವೆ. ಶಿಯೋಮಿ ಇತ್ತೀಚಿಗಷ್ಟೇ ರೆಡ್ಮಿ ನೋಟ್ 10 ಸರಣಿಯನ್ನು ಭಾರತದಲ್ಲಿ ಬಿಡುಗಡೆ ಮಾಡಿ ಗ್ರಾಹಕರನ್ನು ಸೆಳೆದಿದೆ. ಕಂಪನಿಯು ಅದೇ ಸರಣಿಯಲ್ಲಿ ಈಗ ರೆಡ್ಮಿ ನೋಟ್ 10S ಸ್ಮಾರ್ಟ್ಫೋನ್ ಅನ್ನು ಅನಾವರಣ ಮಾಡಿದೆ. ಈ ಸ್ಮಾರ್ಟ್ಫೋನ್ ಬಜೆಟ್ ಪ್ರೈಸ್ಟ್ಯಾಗ್ ಅನ್ನು ಹೊಂದಿದ್ದು, ಆಕರ್ಷಕ ಫೀಚರ್ಸ್ಗಳನ್ನು ಒಳಗೊಂಡಿದೆ.
ಹೌದು, ಶಿಯೋಮಿಯ ಕಂಪನಿಯು ನೂತನವಾಗಿ ರೆಡ್ಮಿ ನೋಟ್ 10S ಸ್ಮಾರ್ಟ್ಫೋನ್ ಅನ್ನು ಇಂದು ದೇಶಿಯ ಮಾರುಕಟ್ಟೆಗೆ ಬಿಡುಗಡೆ ಮಾಡಿದೆ. ಈ ಸ್ಮಾರ್ಟ್ಫೋನ್ AMOLED ಮಾದರಿಯ ಡಿಸ್ಪ್ಲೇಯನ್ನು ಹೊಂದಿದ್ದು, 5,000mAh ಸಾಮರ್ಥ್ಯದ ಬ್ಯಾಟರಿ ಬ್ಯಾಕ್ಅಪ್ ಅನ್ನು ಪಡೆದಿದೆ. ಹಾಗೆಯೇ ಈ ಫೋನ್ ಕ್ವಾಡ್ ಕ್ಯಾಮೆರಾ ರಚನೆಯನ್ನು ಪಡೆದಿದ್ದು, ಮುಖ್ಯ ಕ್ಯಾಮೆರಾವು 64 ಮೆಗಾ ಪಿಕ್ಸಲ್ ಸೆನ್ಸಾರ್ನಲ್ಲಿದೆ.

ಡಿಸ್ಪ್ಲೇ ವಿನ್ಯಾಸ
ರೆಡ್ಮಿ ನೋಟ್ 10s ಸ್ಮಾರ್ಟ್ಫೋನ್ 1080 x 2400 ಪಿಕ್ಸೆಲ್ ಸ್ಕ್ರೀನ್ ರೆಸಲ್ಯೂಶನ್ ಸಾಮರ್ಥ್ಯದ 6.43 ಇಚಿನ AMOLED ಫುಲ್ ಹೆಚ್ಡಿ ಡಿಸ್ಪ್ಲೇಯನ್ನು ಹೊಂದಿದೆ. ಇನ್ನು ಈ ಡಿಸ್ಪ್ಲೇ 20: 9 ರಚನೆಯ ಅನುಪಾತವನ್ನು ಹೊಂದಿದೆ. ಅಲ್ಲದೆ 1100 ನಿಟ್ಸ್ ಗರಿಷ್ಠ ಬ್ರೈಟ್ನೆಸ್, ಸ್ಕ್ರೀನ್ ಟು ಬಾಡಿ 83.5% ಅನುಪಾತ ಹೊಂದಿರಲಿದ್ದು, ಡಿಸ್ಪ್ಲೇ ಕಾರ್ನಿಂಗ್ ಗೊರಿಲ್ಲಾ ಗ್ಲಾಸ್ 3 ಪ್ರೊಟೆಕ್ಷನ್ ಹೊಂದಿದೆ.

ಪ್ರೊಸೆಸರ್ ಯಾವುದು
ರೆಡ್ಮಿ ನೋಟ್ 10s ಸ್ಮಾರ್ಟ್ಫೋನ್ ಮೀಡಿಯಾ ಟೆಕ್ ಹೆಲಿಯೊ G95 SoC ಪ್ರೊಸೆಸರ್ ಸಾಮರ್ಥ್ಯ ಹೊಂದಿದ್ದು, ಇದಕ್ಕೆ ಪೂರಕವಾಗಿ ಆಂಡ್ರಾಯ್ಡ್ 11 ಆಧಾರಿತ MIUI 12.5 ಬೆಂಬಲದೊಂದಿಗೆ ಕಾರ್ಯನಿರ್ವಹಿಸಲಿದೆ. ಹಾಗೆಯೇ 6GB RAM ಮತ್ತು 64GB , 6GB RAM ಮತ್ತು 128GB ಇಂಟರ್ ಸ್ಟೋರೇಜ್ ಸಾಮರ್ಥ್ಯದ ಆಯ್ಕೆ ಪಡೆದಿದೆ.

ಕ್ಯಾಮೆರಾ ವಿಶೇಷತೆ
ರೆಡ್ಮಿ ನೋಟ್ 10s ಸ್ಮಾರ್ಟ್ಫೋನ್ ಕ್ವಾಡ್ ರಿಯರ್ ಕ್ಯಾಮೆರಾ ಸೆಟಅಪ್ ಹೊಂದಿರಲಿದೆ. ಇದರಲ್ಲಿ ಮುಖ್ಯ ಕ್ಯಾಮೆರಾ 64 ಮೆಗಾ ಪಿಕ್ಸೆಲ್ ಸೆನ್ಸಾರ್, ಎರಡನೇ ಕ್ಯಾಮೆರಾ 8 ಮೆಗಾ ಪಿಕ್ಸೆಲ್ ಅಲ್ಟ್ರಾ-ವೈಡ್ ಆಂಗಲ್,2.2 ಅಪರ್ಚರ್ ಮತ್ತು 118 ಡಿಗ್ರಿ ಫೀಲ್ಡ್-ಆಫ್ ವ್ಯೂ ಹೊಂದಿದೆ. ಮೂರನೇ ಕ್ಯಾಮೆರಾ 2 ಮೆಗಾ ಪಿಕ್ಸೆಲ್ ಮ್ಯಾಕ್ರೋ ಸೆನ್ಸಾರ್ ಮತ್ತು ನಾಲ್ಕನೇ ಕ್ಯಾಮೆರಾ 2 ಮೆಗಾ ಪಿಕ್ಸೆಲ್ ಡೆಪ್ತ್ ಸೆನ್ಸಾರ್ ಹೊಂದಿದೆ. ಇದಲ್ಲದೆ 13 ಮೆಗಾ ಪಿಕ್ಸೆಲ್ ಸೆಲ್ಫಿ ಕ್ಯಾಮೆರಾವನ್ನು ಸಹ ಒಳಗೊಂಡಿದೆ.

ಬ್ಯಾಟರಿ ಮತ್ತು ಇತರೆ ಸೌಲಭ್ಯಗಳು
ರೆಡ್ಮಿ ನೋಟ್ 10s ಸ್ಮಾರ್ಟ್ಫೋನ್ 5,000mAh ಸಾಮರ್ಥ್ಯದ ಬ್ಯಾಟರಿಯನ್ನು ಹೊಂದಿದ್ದು, ಇದು 33W ಫಾಸ್ಟ್ ಚಾರ್ಜಿಂಗ್ ಅನ್ನು ಬೆಂಬಲಿಸಲಿದೆ. ಇನ್ನು ಕನೆಕ್ಟಿವಿಟಿ ಆಯ್ಕೆಯಲ್ಲಿ ಹಾಟ್ಸ್ಪಾಟ್, ವೈಫೈ, ಬ್ಲೂಟೂತ್ ಅನ್ನು ಬೆಂಬಲಿಸಲಿದೆ. ಜೊತೆಗೆ ಈ ಸ್ಮಾರ್ಟ್ಫೋನ್ ಸೈಡ್-ಮೌಂಟೆಡ್ ಫಿಂಗರ್ಪ್ರಿಂಟ್ ಸೆನ್ಸಾರ್ ಅನ್ನು ಹೊಂದಿರುತ್ತದೆ ಮತ್ತು ಎಐ ಫೇಸ್ ಅನ್ಲಾಕ್ ಅನ್ನು ಬೆಂಬಲಿಸುತ್ತದೆ.

ಬೆಲೆ ಮತ್ತು ಲಭ್ಯತೆ
ರೆಡ್ಮಿ ನೋಟ್ 10s ಸ್ಮಾರ್ಟ್ಫೋನ್ 6GB + 64GB ಸ್ಟೋರೇಜ್ ವೇರಿಯಂಟ್ ಬೆಲೆಯು 14,999 ರೂ. ಆಗಿದೆ. ಹಾಗೆಯೇ 6GB + 128GB ಸ್ಟೋರೇಜ್ ವೇರಿಯಂಟ್ ದರದವು 15,999ರೂ.ಗಳಾಗಿದೆ. ಈ ಫೋನ್ ನೀಲಿ, ಡಾರ್ಕ್ ಗ್ರೇ ಮತ್ತು ವೈಟ್ ಎಂಬ ಮೂರು ಬಣ್ಣ ಆಯ್ಕೆಗಳಲ್ಲಿ ಬರುತ್ತದೆ. ಈ ಸ್ಮಾರ್ಟ್ಫೋನ್ ಇದೇ ಮೇ 25 ರಂದು ಸೇಲ್ ಆರಂಭಿಸಲಿದೆ.
(Kannada Copy of Gizbot Kannada)
28-07-26 08:12 pm
HK News Staffer
ಶಿಕ್ಷಕರ ಕೊರತೆ ಇರುವ ಸರ್ಕಾರಿ ಶಾಲೆಗಳನ್ನು ಖಾಸಗಿ ಶ...
25-07-26 03:06 pm
ಧಾರವಾಡ ; ಮಗ ರೈಲು ಹಳಿಗೆ ಬಿದ್ದು ಆತ್ಮಹತ್ಯೆ, ಸಾವಿ...
23-07-26 08:05 pm
Soujanya case: ಸೌಜನ್ಯ ಪ್ರಕರಣದಲ್ಲಿ ಸಿಬಿಐಗೆ ತರಾ...
22-07-26 06:00 pm
ಸಚಿವ ಸಂಪುಟಕ್ಕೆ ಖರ್ಗೆ, ಡಿಕೆ, ಸಿದ್ದರಾಮಯ್ಯ ಪ್ರತ್...
19-07-26 08:34 pm
28-07-26 11:56 am
HK News Staffer
NEET ಬಿರುಗಾಳಿಯ ಬಳಿಕ ಕೇಂದ್ರ ಸಚಿವ ಸಂಪುಟದಲ್ಲಿ ಮಹ...
26-07-26 01:32 pm
ವಿದ್ಯಾರ್ಥಿಗಳ ಪ್ರತಿಭಟನೆ ಕಿಚ್ಚು ; ರಾಷ್ಟ್ರೀಯ ಪರೀ...
25-07-26 07:34 pm
ಅಂತೂ ವಿದ್ಯಾರ್ಥಿಗಳ ಪ್ರತಿಭಟನೆಗೆ ಮಣಿದ ಕೇಂದ್ರ ಸರ್...
25-07-26 03:07 pm
NEET ಪ್ರತಿಭಟನೆ ಹಿಂಸಾಚಾರ ; 117 ಶಂಕಿತರ ಫೋಟೋ ಬಿಡ...
24-07-26 03:25 pm
28-07-26 10:28 pm
HK News Desk
ಶಾಸಕ ಅಶೋಕ ರೈ ಹೆಸರೇಳಿ ಮಹಿಳೆಗೆ ಕರೆ ಮಾಡಿ ವಂಚನೆ ;...
28-07-26 10:23 pm
ಜಾಲತಾಣದಲ್ಲಿ ಜೆನ್ ಜೀಗಳ ಅಬ್ಬರ ; ಕಾಕ್ರೋಚ್ ಬೆನ್ನಲ...
27-07-26 09:48 pm
ಕ್ಯಾನ್ಸರ್ ವಿರುದ್ಧ ಹೋರಾಟದ ನಡುವೆಯೇ ಸೇವಾ ಕೈಂಕರ್ಯ...
27-07-26 08:24 pm
ಚಿನ್ನದ ರಿಂಗ್, ಡಾಲರ್ ಸಹಿತ ಬೆಲೆಬಾಳುವ ವಸ್ತುಗಳಿದ್...
26-07-26 09:57 pm
29-07-26 10:40 am
HK News Staffer
ಪತ್ನಿಗೆ ನೇಣು ಬಿಗಿದು ವಿಡಿಯೋ ಕಾಲ್ನಲ್ಲಿ ಅತ್ತೆ-ಮ...
28-07-26 08:11 pm
Lavanya Murder Case, News: ಲಾವಣ್ಯ ಹತ್ಯೆ ಪ್ರಕರ...
28-07-26 07:07 pm
ವಿಚ್ಛೇದಿತ ಮಹಿಳೆಗೆ ಫೇಸ್ಬುಕ್ನಲ್ಲಿ ಪ್ರೀತಿಯ ನಾಟ...
28-07-26 12:28 pm
12 ವರ್ಷಗಳ ಹಿಂದಿನ ಗಂಗಾಧರ ಪಾಂಗಾಳ ಕೊಲೆ ಪ್ರಕರಣ ;...
27-07-26 11:07 pm