ಬ್ರೇಕಿಂಗ್ ನ್ಯೂಸ್
10-05-21 04:57 pm GIZBOT: Mutthuraju H M ಡಿಜಿಟಲ್ ಟೆಕ್
ಜನಪ್ರಿಯ ಇ-ಕಾಮರ್ಸ್ ತಾಣ ಫ್ಲಿಪ್ಕಾರ್ಟ್ ತನ್ನ ಆನ್ಲೈನ್ ಗ್ರಾಹಕರಿಗೆ ಏನಾದರೂ ಒಂದು ವಿಶೇಷ ಕೊಡುಗೆ ನೀಡುತ್ತಲೆ ಬಂದಿದೆ. ವಿಶೇಷ ದಿನಗಳಲ್ಲಿ ವಿಶೇಷ ರಿಯಾಯಿತಿ ಸೇಲ್ಗಳನ್ನು ಆಯೋಜಿಸುತ್ತಲೇ ಇದೆ. ಇದೇ ಕಾರಣಕ್ಕೆ ಇತ್ತೀಚಿನ ದಿನಗಳಲ್ಲಿ ಬಹುತೇಕ ಮಂದಿ ಇ-ಕಾಮರ್ಸ್ ತಾಣಗಳಲ್ಲಿಯೇ ಸ್ಮಾರ್ಟ್ಫೋನ್ ಖರೀದಿಸಲು ಮುಂದಾಗುತ್ತಿದ್ದಾರೆ. ಇನ್ನು ಹಬ್ಬದ ದಿನಗಳಲ್ಲಿ ಫ್ಲಿಪ್ಕಾರ್ಟ್ ಭರ್ಜರಿ ಡಿಸ್ಕೌಂಟ್ ನೀಡುವ ಮೂಲಕ ಹಬ್ಬದ ವಾತಾವರಣವನ್ನೇ ನಿರ್ಮಾಣ ಮಾಡಿಬಿಡುತ್ತದೆ. ಸದ್ಯ ಇದೀಗ ಆಪಲ್ ಫೋನ್ ಪ್ರಿಯರಿಗಾಗಿ ಆಪಲ್ ಡೇಸ್ ಸೇಲ್ ಅನ್ನು ಆಯೋಜಿಸಿದೆ.
ಹೌದು, ಫ್ಲಿಪ್ಕಾರ್ಟ್ ಇ-ಕಾಮರ್ಸ್ ಪ್ಲಾಟ್ಫಾರ್ಮ್ನಲ್ಲಿ ಇಂದಿನಿಂದ 'ಆಪಲ್ ಡೇಸ್' ಸೇಲ್ ಲೈವ್ ಆಗಿದದೆ. ಇಂದು ಪ್ರಾರಂಭವಾಗಿರುವ ಈ ಸೇಲ್ ಇದೇ ಮೇ 14ರ ವರೆಗೂ ಇರಲಿದೆ. ಇನ್ನು ಈ ಆಪಲ್ ಡೇಸ್ ಸೇಲ್ನಲ್ಲಿ ಆಪಲ್ ಐಫೋನ್ಗಳಿಗೆ, ಆಪಲ್ ಮ್ಯಾಕ್ಬುಕ್, ಆಪಲ್ ಐಫೋಡ್ಗಳಿಗೆ ಅತ್ಯುತ್ತಮ ರಿಯಾಯಿತಿ ನೀಡಲಾಗುತ್ತಿದ್ದು, ವಿಶೇಷ ಇಎಮ್ಐ ಸೌಲಭ್ಯಗಳ ಆಯ್ಕೆ ಸಹ ಇದೆ. ಡಿಸ್ಕೌಂಟ್ನಲ್ಲಿ ಐಫೋನ್ ಖರೀದಿಸಬೇಕು ಎಂದುಕೊಂಡವರಿಗೆ ಇದು ಸೂಕ್ತ ಸಮಯವಾಗಿದೆ. ಹಾಗಾದ್ರೆ ಫ್ಲಿಪ್ಕಾರ್ಟ್ ಆಪಲ್ ಡೇಸ್ ಸೇಲ್ ಮೇಳದಲ್ಲಿ ಯಾವೆಲ್ಲ ಐಫೋನ್ಗಳು ರಿಯಾಯಿತಿ ಪಡೆದಿವೆ ಎನ್ನುವುದನ್ನು ಮುಂದೆ ತಿಳಿಯೋಣ.
ಫ್ಲಿಪ್ಕಾರ್ಟ್ನಲ್ಲಿ ಐದು ದಿನಗಳ ಆಪಲ್ ಡೇಸ್ ಸೇಲ್ ನಡೆಯಲಿದೆ. ಈ ಸೇಲ್ನಲ್ಲಿ ಐಫೋನ್ 12, ಐಫೋನ್ 12 ಮಿನಿ, ಐಫೋನ್ 12 ಪ್ರೊ ಮತ್ತು ಐಫೋನ್ 12 ಪ್ರೊ ಮ್ಯಾಕ್ಸ್ಗೆ ತ್ವರಿತ ರಿಯಾಯಿತಿ ಆಫರ್ ಅನ್ನು ನೀಡಲಾಗುತ್ತಿದೆ. ಅಲ್ಲದೆ ಹೊಸ ಐಫೋನ್ 12 ಮಾದರಿಗಳ ಖರೀದಿಗೆ ಗ್ರಾಹಕರು 6,000 ರೂ.ಗಳ ತ್ವರಿತ ರಿಯಾಯಿತಿ ಕೊಡುಗೆಯನ್ನು ಪಡೆಯಬಹುದು. ಐಫೋನ್ 12 ಮಾದರಿಯ ಯಾವೆಲ್ಲಾ ಪೊನ್ಗಳಿಗೆ ರಿಯಾಯಿತಿ ದೊರೆಯಲಿದೆ ಅನ್ನೊದನ್ನ ಕೆಳಗಿನ ಹಂತಗಳಲ್ಲಿ ತಿಳಿಯಿರಿ.
ಐಫೋನ್ 12
ಆಪಲ್ ಡೇಸ್ ಸೇಲ್ ಸಮಯದಲ್ಲಿ, ಫ್ಲಿಪ್ಕಾರ್ಟ್ನಲ್ಲಿ ಐಫೋನ್ 12 ಅನ್ನು ಅನ್ನು 71,900 ರೂ.ಗೆ ಖರೀದಿಸಬಹುದಾಗಿದೆ. ಇದು ಮೂಲ 64GB ಶೇಖರಣಾ ಮಾದರಿಯ ಮೂಲ ಬೆಲೆ 79,900 ರೂ. ಆಗಿದೆ. ಹೆಚ್ಡಿಎಫ್ಸಿ ಬ್ಯಾಂಕ್ ಕಾರ್ಡ್ಗಳು ಮತ್ತು ಇಎಂಐ ವಹಿವಾಟುಗಳ ಮೂಲಕ ಮಾಡಿದ ಖರೀದಿಗೆ ಗ್ರಾಹಕರು ತ್ವರಿತವಾಗಿ 6,000 ರೂ.ಗಳ ರಿಯಾಯಿತಿ ಪಡೆಯಬಹುದು. ಇದರಲ್ಲಿ ಗಮನಿಸಬೇಕಾದ ಅಂಶವೆಂದರೆ 71,900 ರೂ.ಗಳ ಆಫರ್ ಬೆಲೆಯು ಹೆಚ್ಡಿಎಫ್ಸಿ ಕಾರ್ಡ್ಗಳನ್ನು ಬಳಸಿಕೊಂಡು ಖರೀದಿಸಿದಾಗ ಅನ್ವಯವಾಗುವ ತ್ವರಿತ ರಿಯಾಯಿತಿ ಮೌಲ್ಯವನ್ನು ಒಳಗೊಂಡಿದೆ.
ಐಫೋನ್ 12 ಮಿನಿ
ಇನ್ನು ಫ್ಲಿಪ್ಕಾರ್ಟ್ ಆಪಲ್ ಡೇಸ್ ಸೇಲ್ನಲ್ಲಿ ಐಫೋನ್ 12 ಮಿನಿ ಕೂಡ ತ್ವರಿತ ರಿಯಾಯಿತಿ ಆಫರ್ ಸೇರಿದಂತೆ 61,900 ರೂಗಳಲ್ಲಿ ಲಭ್ಯವಿದೆ. ಇದರ ಮೂಲ ಬೆಲೆ 69,900 ರೂ. ಆಗಿದೆ. ಹೆಚ್ಡಿಎಫ್ಸಿ ಬ್ಯಾಂಕ್ ಕಾರ್ಡ್ಗಳು ಮತ್ತು ಇಎಂಐ ವಹಿವಾಟುಗಳಲ್ಲಿ 6,000 ರೂ.ಗಳ ತ್ವರಿತ ರಿಯಾಯಿತಿ ಕೊಡುಗೆಯೊಂದಿಗೆ ಮಿನಿ ರೂಪಾಂತರವು ಲಭ್ಯವಿದೆ. ಆಸಕ್ತ ಗ್ರಾಹಕರು 128GB ಮತ್ತು 256GB ಮಾದರಿಗಳ ಖರೀದಿಗೆ 6,000 ರೂ ತ್ವರಿತ ರಿಯಾಯಿತಿ ಪಡೆಯಬಹುದು.
ಐಫೋನ್ 12 ಪ್ರೊ
ಐಫೋನ್ 12 ಪ್ರೊ ಕೂಡ 1,10,900 ರೂ.ಗಳ ಆರಂಭಿಕ ಬೆಲೆಯಲ್ಲಿ ಲಭ್ಯವಿದೆ. ಇದರ ಮೂಲ ಬೆಲೆ 128GB ಶೇಖರಣಾ ಮಾದರಿಗೆ 119,900 ರೂ. ಆಗಿದೆ. ಇನ್ನು ಆಪಲ್ ಡೇಸ್ ಸೇಲ್ನಲ್ಲಿ ಗ್ರಾಹಕರು ಹೆಚ್ಡಿಎಫ್ಸಿ ಬ್ಯಾಂಕ್ ಕಾರ್ಡ್ಗಳು ಮತ್ತು ಇಎಂಐ ವಹಿವಾಟುಗಳ ಮೂಲಕ ಮಾಡಿದ ಖರೀದಿಗೆ 5,000 ರೂ.ಗಳ ತ್ವರಿತ ರಿಯಾಯಿತಿ ಪಡೆಯಬಹುದು.
ಐಫೋನ್ 12 ಪ್ರೊ ಮ್ಯಾಕ್ಸ್
ಇದಲ್ಲದೆ ಆಪಲ್ ಡೇಸ್ ಸೇಲ್ನಲ್ಲಿ ಐಫೋನ್ 12 ಪ್ರೊ ಮ್ಯಾಕ್ಸ್ ಮಾದರಿ 1,20,900 ರೂಗಳಲ್ಲಿ ಲಭ್ಯವಿದೆ. ಇದರ ಮೂಲ ಬೆಲೆ 129,900 ರೂ. ಆಗಿದೆ. ಹೆಚ್ಡಿಎಫ್ಸಿ ಬ್ಯಾಂಕ್ ಕಾರ್ಡ್ಗಳು ಮತ್ತು ಇಎಂಐ ವಹಿವಾಟುಗಳ ಮೂಲಕ ಮಾಡಿದ ಖರೀದಿಗಳಿಗೆ ಐಫೋನ್ 12 ಪ್ರೊ ಮ್ಯಾಕ್ಸ್ 5,000 ರೂ.ಗಳ ತ್ವರಿತ ರಿಯಾಯಿತಿಯೊಂದಿಗೆ ಲಭ್ಯವಿದೆ.
ಇವುಗಳ ಜೊತೆಗೆ ಫ್ಲಿಪ್ಕಾರ್ಟ್ ಆಪಲ್ ಡೇಸ್ ಸೇಲ್ನಲ್ಲಿ ಐಫೋನ್ 11 ಅನ್ನು 48,999 ರೂಗಳಿಗೆ, ಐಫೋನ್ ಎಕ್ಸ್ಆರ್ 36,999 ರೂಗಳಿಗೆ, ಐಫೋನ್ ಎಸ್ಇ 128GB ಮಾದರಿಯನ್ನು 33,999 ರೂಗಳಿಗೆ ಮತ್ತು ಐಫೋನ್ 11 ಪ್ರೊ ಅನ್ನು 74,999 ರೂಗಳಲ್ಲಿ ಖರೀದಿಸಬಹುದಾಗಿದೆ.
(Kannada Copy of Gizbot Kannada)
12-09-25 08:26 pm
HK News Desk
Yatnal, Maddur: ರಾಜ್ಯದಲ್ಲಿ ಹೊಸ ಹಿಂದು ಪಾರ್ಟಿ ಕ...
12-09-25 03:04 pm
ಸಾಹಸಸಿಂಹ ವಿಷ್ಣುವರ್ಧನ್, ಹಿರಿಯ ನಟಿ ಬಿ.ಸರೋಜಾದೇವಿ...
11-09-25 10:11 pm
ಈದ್ ಮೆರವಣಿಗೆ : ಶಿವಮೊಗ್ಗದಲ್ಲಿ ಪಾಕಿಸ್ತಾನ್ ಜಿಂದಾ...
09-09-25 10:52 pm
U T Khader: ಯುಟಿ ಖಾದರ್ ಏಕಪಕ್ಷೀಯ ತೀರ್ಮಾನ ತೆಗೆದ...
09-09-25 09:14 pm
12-09-25 11:33 am
HK News Desk
ನೇಪಾಳದಲ್ಲಿ ಕಮ್ಯುನಿಸ್ಟ್ ಸರಕಾರ ಪತನ ; ಹೊಸ ನಾಯಕ ಯ...
10-09-25 04:22 pm
ನೇಪಾಳದಲ್ಲಿ ಹಿಂಸಾಚಾರ ತೀವ್ರ ; ದೇಶ ಬಿಟ್ಟು ಓಡಿದ ಪ...
09-09-25 11:09 pm
ನೂತನ ಉಪ ರಾಷ್ಟ್ರಪತಿಯಾಗಿ ಎನ್.ಡಿ.ಎ ಮೈತ್ರಿಕೂಟದ ಸಿ...
09-09-25 09:38 pm
ಕಾಸರಗೋಡು ; ರಾಷ್ಟ್ರೀಯ ಹೆದ್ದಾರಿ ದಾಟಲೆತ್ನಿಸಿದ ಮಹ...
08-09-25 11:06 pm
12-09-25 09:25 pm
Mangalore Correspondent
Sameer Md, Dharmasthala: ವಿದೇಶದಿಂದ ಫಂಡ್ ಬಂದಿ...
12-09-25 08:53 pm
RTI Dharmasthala Hostels, Mahesh Thimarodi: ಧ...
12-09-25 07:43 pm
Mangalore Road Accident, Pothole, Survery: ರಸ...
12-09-25 05:34 pm
Mangalore Police, Sudheer Reddy: ಶಾಂತಿ ಕಾಪಾಡಲ...
12-09-25 12:58 pm
12-09-25 05:31 pm
Udupi Correspondent
Mangalore Police, Arrest: ಉರ್ವಾದಲ್ಲಿ ಪೊಲೀಸ್ ಕ...
11-09-25 09:13 pm
Mangalore Fake Documents, Crime, Arrest: ಸರ್ಕ...
11-09-25 08:52 pm
ಅಮೆರಿಕ ಅಧ್ಯಕ್ಷರ ಆಪ್ತ, ಬಲಪಂಥೀಯ ಕಾರ್ಯಕರ್ತ ಚಾರ್ಲ...
11-09-25 02:25 pm
Mangalore Police, Communial Case, Arrest, Cri...
08-09-25 10:34 pm