ಬ್ರೇಕಿಂಗ್ ನ್ಯೂಸ್
05-05-21 05:08 pm Source: GIZBOT Mutthuraju H M ಡಿಜಿಟಲ್ ಟೆಕ್
ಜನಪ್ರಿಯ ಒಪ್ಪೋ ಕಂಪೆನಿ ತನ್ನ ಆಕರ್ಷಕ ಸ್ಮಾರ್ಟ್ಫೋನ್ಗಳ ಮೂಲಕ ಸೈ ಎನಿಸಿಕೊಂಡಿದೆ. ಈಗಾಗಲೇ ಹಲವು ಸ್ಮಾರ್ಟ್ಫೋನ್ಗಳನ್ನು ಪರಿಚಯಿಸಿ ಸ್ಮಾರ್ಟ್ಫೋನ್ ಪ್ರಿಯರ ಗಮನ ಸೆಳೆದಿದೆ. ಸದ್ಯ ಇದೀಗ ಒಪ್ಪೋ A54 5G ಸ್ಮಾರ್ಟ್ಫೋನ್ ಅನ್ನು ಲಾಂಚ್ ಮಾಡಿದೆ. ಇನ್ನು ಈ ಸ್ಮಾರ್ಟ್ಫೋನ್ ಕ್ವಾಲ್ಕಾಮ್ ಸ್ನಾಪ್ಡ್ರಾಗನ್ 480 5G SoC ಪ್ರೊಸೆಸರ್ ಅನ್ನು ಹೊಂದಿದೆ. ಜೊತೆಗೆ 5,000mAh ಸಾಮರ್ಥ್ಯದ ಬ್ಯಾಟರಿಯನ್ನು ಒಳಗೊಂಡಿದೆ.
ಹೌದು, ಒಪ್ಪೋ ಸಂಸ್ಥೆ ಹೊಸ ಒಪ್ಪೋ A54 5G ಸ್ಮಾರ್ಟ್ಫೋನ್ ಅನ್ನು ಯುರೋಪಿಯನ್ ಮಾರುಕಟ್ಟೆಯಲ್ಲಿ ಬಿಡುಗಡೆ ಮಾಡಿದೆ. ಇದು ಬಜೆಟ್ ಸ್ನೇಹಿ ಸ್ಮಾರ್ಟ್ಫೋನ್ ಆಗಿದ್ದು, 5G ಕನೆಕ್ಟಿವಿಟಿಯನ್ನು ಬೆಂಬಲಿಸಲಿದೆ. ಇನ್ನು ಈ ಸ್ಮಾರ್ಟ್ಫೋನ್ ಕ್ವಾಡ್ ರಿಯರ್ ಕ್ಯಾಮೆರಾ ಸೆಟಪ್ ಹೊಂದಿದೆ. ಇದರಲ್ಲಿ ಮುಖ್ಯ ಕ್ಯಾಮೆರಾ 48 ಮೆಗಾಪಿಕ್ಸೆಲ್ ಸೆನ್ಸಾರ್ ಅನ್ನು ಹೊಂದಿದೆ.
ಡಿಸ್ಪ್ಲೇ ವಿಶೇಷ
ಒಪ್ಪೋ A54 5G ಸ್ಮಾರ್ಟ್ಫೋನ್ 1,080x2,400 ಪಿಕ್ಸೆಲ್ ಸ್ಕ್ರೀನ್ ರೆಸಲ್ಯೂಶನ್ ಸಾಮರ್ಥ್ಯದ 6.5 ಇಂಚಿನ ಫುಲ್ ಹೆಚ್ಡಿ ಪ್ಲಸ್ ಡಿಸ್ಪ್ಲೇಯನ್ನು ಹೊಂದಿದೆ. ಇನ್ನು ಈ ಡಿಸ್ಪ್ಲೇ 90Hz ರಿಫ್ರೆಶ್ ರೇಟ್ ಅನ್ನು ಹೊಂದಿದೆ. ಅಲ್ಲದೆ ಇದು 180Hz ಟಚ್ ಸ್ಯಾಂಪ್ಲಿಂಗ್ ರೇಟ್ ಅನ್ನು ಪಡೆದುಕೊಂಡಿದೆ. ಜೊತೆಗೆ ಈ ಡಿಸ್ಪ್ಲೇ 90.5% ಸ್ಕ್ರೀನ್ ಟು ಬಾಡಿ ಅನುಪಾತವನ್ನು ಒಳಗೊಂಡಿದೆ.
ಪ್ರೊಸೆಸರ್
ಒಪ್ಪೋ A54 5G ಸ್ಮಾರ್ಟ್ಫೋನ್ ಕ್ವಾಲ್ಕಾಮ್ ಸ್ನಾಪ್ಡ್ರಾಗನ್ 480SoC ಪ್ರೊಸೆಸರ್ ಅನ್ನು ಹೊಂದಿದ್ದು, ಆಂಡ್ರಾಯ್ಡ್ 11 ಆಧಾರಿತ ಕಲರ್ಓಎಸ್ 11.1 ಬೆಂಬಲದೊಂದಿಗೆ ಕಾರ್ಯನಿರ್ವಹಿಸಲಿದೆ. ಹಾಗೆಯೇ ಇದು 4GB RAM ಮತ್ತು 64GB ಇಂಟರ್ ಸ್ಟೋರೇಜ್ ಅನ್ನು ಹೊಂದಿದೆ. ಇದಲ್ಲದೆ ಮೈಕ್ರೊ ಎಸ್ಡಿ ಕಾರ್ಡ್ ಮೂಲಕ ಸಂಗ್ರಹ ಸಾಮರ್ಥ್ಯವನ್ನು ವಿಸ್ತರಿಸಲು ಅವಕಾಶವನ್ನು ಸಹ ನೀಡಿದೆ.
ಕ್ಯಾಮೆರಾ ವಿನ್ಯಾಸ
ಈ ಸ್ಮಾರ್ಟ್ಫೋನ್ ಕ್ವಾಡ್ ರಿಯರ್ ಕ್ಯಾಮೆರಾ ಸೆಟಪ್ ಅನ್ನು ಹೊಂದಿದೆ. ಇದರಲ್ಲಿ ಮುಖ್ಯ ಕ್ಯಾಮೆರಾ 48 ಮೆಗಾಪಿಕ್ಸೆಲ್ ಸೆನ್ಸಾರ್, ಎರಡನೇ ಕ್ಯಾಮೆರಾ 8 ಮೆಗಾಪಿಕ್ಸೆಲ್ ಸೆನ್ಸಾರ್ ಅಲ್ಟ್ರಾ-ವೈಡ್-ಆಂಗಲ್ f/ 2.2 ಲೆನ್ಸ್ , ಮೂರನೇ ಕ್ಯಾಮೆರಾ 2 ಮೆಗಾಪಿಕ್ಸೆಲ್ ಮ್ಯಾಕ್ರೋ f/ 2.4 ಲೆನ್ಸ್ ಮತ್ತು ನಾಲ್ಕನೇ ಕ್ಯಾಮೆರಾ 2 ಮೆಗಾಪಿಕ್ಸೆಲ್ ಸೆನ್ಸಾರ್ ಸಾಮರ್ಥ್ಯದ ಮೊನೊ ಕ್ಯಾಮೆರಾ ಹೊಂದಿದೆ. ಇದಲ್ಲದೆ 16 ಮೆಗಾಪಿಕ್ಸೆಲ್ ಸೆನ್ಸಾರ್ ಸಾಮರ್ಥ್ಯದ ಸೆಲ್ಫಿ ಕ್ಯಾಮೆರಾವನ್ನು ಸಹ ಒಳಗೊಂಡಿದೆ.
ಬ್ಯಾಟರಿ ಮತ್ತು ಇತರೆ
ಒಪ್ಪೋ A54 5G ಸ್ಮಾರ್ಟ್ಫೋನ್ 5,000mAh ಸಾಮರ್ಥ್ಯದ ಬ್ಯಾಟರಿಯನ್ನು ಹೊಂದಿದ್ದು, 10W ವೇಗದ ಚಾರ್ಜಿಂಗ್ ಅನ್ನು ಬೆಂಬಲಿಸಲಿದೆ. ಇನ್ನು ಕನೆಕ್ಟಿವಿಟಿ ಆಯ್ಕೆಗಳಲ್ಲಿ ವೈ-ಫೈ, 5 ಜಿ, ಬ್ಲೂಟೂತ್ ವಿ 5.1, ಜಿಪಿಎಸ್, ಎನ್ಎಫ್ಸಿ, 3.5 ಎಂಎಂ ಹೆಡ್ಫೋನ್ ಜ್ಯಾಕ್ ಮತ್ತು ಯುಎಸ್ಬಿ ಟೈಪ್-ಸಿ ಪೋರ್ಟ್ ಸೇರಿವೆ. ಇದು ಸೈಡ್-ಮೌಂಟೆಡ್ ಫಿಂಗರ್ಪ್ರಿಂಟ್ ಸ್ಕ್ಯಾನರ್ ಅನ್ನು ಸಹ ಒಳಗೊಂಡಿದೆ.
ಬೆಲೆ ಮತ್ತು ಲಭ್ಯತೆ
ಇನ್ನು ಒಪ್ಪೋ A54 5G ಸ್ಮಾರ್ಟ್ಫೋನ್ ಏಕೈಕ 4GB RAM + 64GB ಇಂಟರ್ ಸ್ಟೋರೇಜ್ ರೂಪಾಂತರಕ್ಕೆ ಯೂರೋ 219 ಬೆಲೆ ಹೊಂದಿದೆ. ಈ ಫೋನ್ ಯುರೋಪಿಯನ್ ಮಾರುಕಟ್ಟೆಯಲ್ಲಿ ಖರೀದಿಸಲು ಲಭ್ಯವಿದೆ. ಅಂತರರಾಷ್ಟ್ರೀಯ ಲಭ್ಯತೆಯ ಬಗ್ಗೆ ಯಾವುದೇ ಮಾಹಿತಿಯನ್ನು ಹಂಚಿಕೊಂಡಿಲ್ಲ. ಈ ಸ್ಮಾರ್ಟ್ಫೋನ್ ಫೆಂಟಾಸ್ಟಿಕ್ ಪರ್ಪಲ್ ಮತ್ತು ಫ್ಲೂಯಿಡ್ ಬ್ಲ್ಯಾಕ್ ಕಲರ್ ಆಯ್ಕೆಗಳಲ್ಲಿ ಲಭ್ಯವಾಗಲಿದೆ.
This News Article Is A Copy Of GIZBOT
09-07-25 10:45 pm
Bangalore Correspondent
Chamarajanagar Heart Attack, Student; 'ಹೃದಯ"ಕ...
09-07-25 04:12 pm
ಬೆಂಗಳೂರಿನಲ್ಲಿ ಐದು ಕಡೆ ಎನ್ಐಎ ದಾಳಿ ; ಭಯೋತ್ಪಾದಕ...
09-07-25 01:53 pm
Heart attack, Dharwad, Davanagere: ಉದ್ಯಮಿ ಮಗನ...
09-07-25 11:50 am
ಸಿಎಂ ಸೀಟು ಗೊಂದಲ ಕೇವಲ ಮಾಧ್ಯಮಗಳ ಸೃಷ್ಟಿ ; ಮೊದಲು...
08-07-25 08:35 pm
07-07-25 08:45 pm
HK News Desk
ಅಮೆರಿಕದ ಟೆಕ್ಸಾಸ್ನಲ್ಲಿ ಭೀಕರ ಪ್ರವಾಹ ; 28 ಮಕ್ಕಳ...
07-07-25 04:11 pm
ಟೆಕ್ಸಾಸ್ ನಲ್ಲಿ ದಿಢೀರ್ ಪ್ರವಾಹ ; 27 ಮಂದಿ ಸಾವು,...
06-07-25 03:53 pm
ಹಿಜಾಬ್ ; ಪರೀಕ್ಷಾ ಕೊಠಡಿಗೆ ನುಗ್ಗಿ ಆವಾಜ್, ಪಿಇಎಸ್...
02-07-25 11:05 pm
Adult Film Star Kylie Page Death: ನೀಲಿ ಚಿತ್ರ...
02-07-25 05:31 pm
09-07-25 10:25 pm
Mangalore Correspondent
Mangalore Home Minister Parameshwara, Peace M...
09-07-25 10:17 pm
Peace Meeting, Mangalore, Brijesh Chowta, Ash...
09-07-25 09:01 pm
Mangalore Peace meeting Home Minister: ಎಳೆಯ ಮ...
09-07-25 07:37 pm
ಮಂಗಳೂರಿನಲ್ಲಿ ಒಂದೇ ದಿನ ಅಂತರದಲ್ಲಿ ಹಾರ್ಟ್ ಅಟ್ಯಾಕ...
09-07-25 06:53 pm
09-07-25 10:56 pm
Mangalore Correspondent
Kerala Chit Fund, Fraud, Mangalore: 20 ವರ್ಷಗಳ...
08-07-25 10:01 pm
Mangalore, Job Fraud, Crime: ಪಾರ್ಟ್ ಟೈಮ್ ಕೆಲಸ...
07-07-25 10:31 pm
Job Fraud, Mangalore, Doctor: ದುಬೈನ ಎನ್ಎಂಸಿ ಹ...
07-07-25 10:18 pm
ಹದಿನಾರರ ವಯಸ್ಸು ಹುಚ್ಚುಕೋಡಿ ಮನಸ್ಸು ; 16ರ ಹುಡುಗಿ...
07-07-25 07:13 pm