ಬ್ರೇಕಿಂಗ್ ನ್ಯೂಸ್
29-04-21 05:46 pm Source: Gizbot Bureau ಡಿಜಿಟಲ್ ಟೆಕ್
ಭಾರತದಲ್ಲಿ COVID-19 ಎರಡನೇ ಅಲೆ ವ್ಯಾಪಕವಾಗಿ ಹರಡುತ್ತಿದೆ. ದಿನೇ ದಿನೇ ಕೊರೊನಾ ಸೊಂಕಿತರ ಸಂಖ್ಯೆಯ ಪ್ರಮಾಣ ವೇಗವಾಗಿ ಹೆಚ್ಚುತ್ತಿದೆ. ಇದೇ ಕಾರಣಕ್ಕೆ ಈಗಾಗಲೇ ಹಲವು ರಾಜ್ಯಗಳು ಕೆಲವು ವಾರಗಳ ಮಟ್ಟಿಗೆ ಲಾಕ್ಡೌನ್ ಘೋಷಿಸಿವೆ. ನಮ್ಮ ಕರ್ನಾಟಕ ಸರ್ಕಾರ ಕೂಡ ಎರಡು ವಾರಗಳ ಕಾಲ ಕಠಿಣ ಕರ್ಪ್ಯೂ ನಿಯಮ ಜಾರಿಗೊಳಿಸಿದೆ. ಪ್ರತಿಯೊಬ್ಬರೂ ಮನೆಯಲ್ಲಿಯೇ ಇರುವುದು ಮತ್ತು ಅಗತ್ಯ ವಸ್ತುಗಳನ್ನು ಖರೀದಿಸಲು ಹೊರಡುವಾಗ ಮಾಸ್ಕ್ ಧರಿಸುವುದು ಕಡ್ಡಾಯವಾಗಿದೆ. ಅಲ್ಲದೆ ಕೊರೊನಾ ವೈರಸ್ನ ಯಾವುದೇ ರೋಗಲಕ್ಷಣಗಳನ್ನು ಹೊಂದಿದ್ದರೆ, ನೀವು ಕೋವಿಡ್ ಪರೀಕ್ಷೆ ಮಾಡಿಸಿಕೊಳ್ಳಬೇಕು. ಪರೀಕ್ಷೆ ಮಾಡಿದ ನಂತರ, COVID-19 ಟೆಸ್ಟ್ ರಿಸಲ್ಟ್ ಅನ್ನು ಆನ್ಲೈನ್ನಲ್ಲಿಯೇ ಪರಿಶೀಲಿಸಬಹುದು.
ಹೌದು, ನಿಮಲ್ಲಿ ಕೊರೊನಾ ರೋಗಲಕ್ಷಣಗಳು ಕಂಡು ಬಂದಿದ್ದರೆ ಮೊದಲು ನಿಮ್ಮ ಹತ್ತಿರದ COVID-19 ಪರೀಕ್ಷಾ ಕೇಂದ್ರಗಳಲ್ಲಿ ಕೋವಿಡ್ ಟೆಸ್ಟ್ ಮಾಡಿಸಿಕೊಳ್ಳುವುದು ಉತ್ತಮ. ನಂತರ ನಿಮ್ಮ ಕೋವಿಡ್ ಟೆಸ್ಟ್ ರಿಸಲ್ಟ್ಗಾಗಿ ನೀವು ಮತ್ತೆ ಕೋವಿಡ್ ಟೆಸ್ಟ್ ಸೆಂಟರ್ಗೆ ಹೋಗಬೇಕಾದ ಅವಶ್ಯಕತೆಯಿಲ್ಲ. ನೀವು ಮನೆಯಲ್ಲಿಯೇ ಕುಳಿತು ನಿಮ್ಮ ಕೋವಿಡ್ ಟೆಸ್ಟ್ ರಿಸಲ್ಟ್ ಅನ್ನು ಆನ್ಲೈನ್ನಲ್ಲಿಯೇ ಪರಿಶೀಲಿಸಬಹುದು. ಹಾಗಾದ್ರೆ ಆನ್ಲೈನ್ನಲ್ಲಿ ಕೋವಿಡ್-19 ಟೆಸ್ಟ್ ರಿಸಲ್ಟ್ ಅನ್ನು ವೀಕ್ಷಿಸುವುದು ಹೇಗೆ ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತಿವಿ ಓದಿರಿ.
ಪ್ರಸ್ತುತ ನಿಮ್ಮ ಸ್ಥಳೀಯ ಆರೋಗ್ಯ ಕೇಂದ್ರಗಳಲ್ಲಿಯೇ ನೀವು ಕೋವಿಡ್-19 ಟೆಸ್ಟ್ ಅನ್ನು ಮಾಡಿಸಬಹುದು. ಅಲ್ಲದೆ ಕೋವಿಡ್ 19 ಟೆಸ್ಟ್ ಮಾಡಲು ನಿಮ್ಮ ಬಳಿ ಗಂಟಲು ದ್ರವ ಮಾದರಿಯನ್ನು ಸಂಗ್ರಹಿಸಲು ನಿಮ್ಮ ಮನೆ ಬಾಗಿಲಿಗೆ ಬರುವ ತಂತ್ರಜ್ಞರನ್ನು ಕಳುಹಿಸುವ ಲ್ಯಾಬ್ಗಳು ಕೂಡ ಇವೆ. ಇವುಗಳನ್ನು ಆರೋಗ್ಯ ಸಹಾಯವಾಣಿಗಳ ಮೂಲಕ ಸಂಪರ್ಕಿಸಬಹುದು. ಇನ್ನು ನೀವು ಆರ್ಟಿ-ಪಿಸಿಆರ್ ಪರೀಕ್ಷೆಗೆ ನಿಮ್ಮ ಮಾದರಿಯನ್ನು ನೀಡುವ ಮೊದಲು ನಿಮ್ಮ ಹೆಸರು ಮತ್ತು ನಿಮ್ಮ ಫೋನ್ ಸಂಖ್ಯೆಯನ್ನು ನೀವು ನೀಡಬೇಕಾಗುತ್ತದೆ, ಇದರ ಮೂಲಕ ನಿಮ್ಮನ್ನು ಕೋವಿಡ್-19 ಪರೀಕ್ಷೆಗೆ ನೋಂದಾಯಿಸಲಾಗುತ್ತದೆ. ಇಲ್ಲಿ ನೀವು ನೀಡುವ ಹೆಸರು ಹಾಗೂ ಫೋನ್ ನಂಬರ್ ಆಧಾರದ ಮೇಲೆ ನಿಮ್ಮ COVID-19 ಪರೀಕ್ಷಾ ಫಲಿತಾಂಶವನ್ನು ಆನ್ಲೈನ್ನಲ್ಲಿ ಪರಿಶೀಲಿಸಬಹುದಾಗಿದೆ. ಇದಕ್ಕಾಗಿಯೇ ಹಲವಾರು ಪ್ಲಾಟ್ಫಾರ್ಮ್ಗಳು ಕೂಡ ಲಭ್ಯವಿವೆ. ಅವುಗಳಲ್ಲಿ ಕೆಲವು ಪ್ಲಾಟ್ಫಾರ್ಮ್ಗಳ ಮಾಹಿತಿ ಇಲ್ಲಿದೆ ಓದಿರಿ.
ಲ್ಯಾಬ್ನ ವೆಬ್ಸೈಟ್ನಲ್ಲಿ COVID-19 ಟೆಸ್ಟ್ ರಿಸಲ್ಟ್ ಅನ್ನು ತಿಳಿಯುವುದು ಹೇಗೆ?
ಹಂತ 1: ಖಾಸಗಿ ಲ್ಯಾಬ್ನ ಪರೀಕ್ಷಾ ಕೇಂದ್ರದಲ್ಲಿ ನಿಮ್ಮ ಮೊಬೈಲ್ ಸಂಖ್ಯೆ ಮತ್ತು ಹೆಸರಿನೊಂದಿಗೆ ನೋಂದಾಯಿಸಿ, ಮತ್ತು ಪರೀಕ್ಷೆಗೆ ನಿಮ್ಮ ಮಾದರಿಯನ್ನು ನೀಡಿ.
ಹಂತ 2: ಪರೀಕ್ಷೆ ಮುಗಿದ ನಂತರ ಮತ್ತು COVID-19 ರಿಸಲ್ಟ್ ಹೊರಬಂದ ನಂತರ, ನಿಮ್ಮ ನೋಂದಾಯಿತ ಫೋನ್ನಲ್ಲಿ ನೀವು SMS ಪಡೆಯುತ್ತೀರಿ.
ನಿಮ್ಮ COVID-19 ಪರೀಕ್ಷಾ ಫಲಿತಾಂಶವನ್ನು ಪರಿಶೀಲಿಸಲು SMS ಸಾಮಾನ್ಯವಾಗಿ ಲಿಂಕ್ ಅನ್ನು ಒಳಗೊಂಡಿರುತ್ತದೆ. ಈ ಲಿಂಕ್ ಅನ್ನು ಕ್ಲಿಕ್ ಮಾಡಿ ಮತ್ತು ನಿಮ್ಮ ಫಲಿತಾಂಶವನ್ನು ಪರಿಶೀಲಿಸಬಹುದು.
ಸ್ಯಾಂಪಲ್ ID / SRF ID ಯೊಂದಿಗೆ COVID-19 ಟೆಸ್ಟ್ ರಿಸಲ್ಟ್ ಪರಿಶೀಲಿಸುವುದು ಹೇಗೆ?
ಹಂತ 1: ನೀವು COVID-19 ಗಾಗಿ ಸರ್ಕಾರಿ ಪರೀಕ್ಷಾ ಕೇಂದ್ರದಲ್ಲಿ ನಿಮ್ಮ ಹೆಸರು ಮತ್ತು ಮೊಬೈಲ್ ಸಂಖ್ಯೆಯನ್ನು ನೋಂದಾಯಿಸಿಕೊಳ್ಳಬೇಕು ಮತ್ತು ನಿಮ್ಮ ಮಾದರಿಯನ್ನು ನೀಡಿ.
ಹಂತ 2: ನಿಮ್ಮ ಪರೀಕ್ಷೆಗಾಗಿ ನಿಮಗೆ ಮಾದರಿ ID ಅಥವಾ SRF ID ಸಹ ನೀಡಲಾಗುವುದು, ಅದನ್ನು ನಿಮ್ಮ ಮೊಬೈಲ್ ಸಂಖ್ಯೆಗೆ ಲಿಂಕ್ ಮಾಡಲಾಗುತ್ತದೆ.
ಹಂತ 3: ಪರೀಕ್ಷೆ ಮುಗಿದ ನಂತರ ಮತ್ತು ಫಲಿತಾಂಶಗಳು ಲಭ್ಯವಾದರೆ, ನಿಮ್ಮ ನೋಂದಾಯಿತ ಮೊಬೈಲ್ ಸಂಖ್ಯೆಯಲ್ಲಿ ನೀವು SMS ಪಡೆಯುತ್ತೀರಿ.
ಹಂತ 4: ಐಸಿಎಂಆರ್ ವೆಬ್ಸೈಟ್ ಅಥವಾ ನಿಮ್ಮ ರಾಜ್ಯ ಸಿಒವಿಐಡಿ -19 ವೆಬ್ಸೈಟ್ ತೆರೆಯಿರಿ. ಮುಂದೆ, ಮಾದರಿ ID ಅಥವಾ SRF ID ಅನ್ನು ನಮೂದಿಸಿ. ಕ್ಯಾಪ್ಚಾ ಕೂಡ ಇರಬಹುದು, ಅದನ್ನು ಸರಿಯಾಗಿ ನಮೂದಿಸಬೇಕಾಗಿದೆ. ಒಮ್ಮೆ ಮಾಡಿದ ನಂತರ, ನಿಮ್ಮ COVID-19 ಪರೀಕ್ಷಾ ಫಲಿತಾಂಶವು ವೆಬ್ ಪುಟದಲ್ಲಿ ಕಾಣಿಸುತ್ತದೆ.
ಹಾಗೆ ನೋಡಿದರೆ ಪ್ರತಿ COVID-19 ಟೆಸ್ಟ್ ಕೇಸ್ ಕೂಡ ತನ್ನದೇ ಆದ ಸ್ಯಾಂಪಲ್ ID ಅಥವಾ SRF ID ಯನ್ನು ಹೊಂದಿರುತ್ತದೆ, ಇದು ಖಾಸಗಿ ಲ್ಯಾಬ್ಗಳಲ್ಲಿ ಮಾಡಿದ ಪರೀಕ್ಷೆಯನ್ನು ಸಹ ಒಳಗೊಂಡಿದೆ. ಈ ಐಡಿಗಳೊಂದಿಗೆ ನಿಮ್ಮ COVID-19 ಪರೀಕ್ಷಾ ಫಲಿತಾಂಶವನ್ನು ಪರಿಶೀಲಿಸಲು ನೀವು ಯಾವಾಗಲೂ ರಾಜ್ಯ ಸರ್ಕಾರದ ವೆಬ್ಸೈಟ್ ಅಥವಾ ಐಸಿಎಂಆರ್ ವೆಬ್ಸೈಟ್ಗೆ ಹೋಗಬಹುದು.
This News Article Is A Copy Of GIZBOT BUREAU
15-03-25 03:55 pm
HK News Desk
Elephant attack, Belur, Hassan: ಕಾಡಾನೆ ದಾಳಿ ;...
15-03-25 12:33 pm
DySP Kanakalakshmi arrested, suicide: ಬೋವಿ ನಿ...
14-03-25 11:11 pm
Swamiji, Bagalkot, Police Video: ದುಡ್ಡು ಪಡೆದು...
14-03-25 08:30 pm
Shivarama Hebbar, S.T. Somashekar, Lingaraj P...
14-03-25 03:39 pm
13-03-25 03:49 pm
HK News Desk
Shiradi Ghat, Mangalore Bengalore, Mp Brijesh...
13-03-25 01:30 pm
ಪಾಕಿಸ್ತಾನದಲ್ಲಿ 500ಕ್ಕು ಹೆಚ್ಚು ಪ್ರಯಾಣಿಕರಿದ್ದ ರ...
12-03-25 11:41 am
ಅಮೆರಿಕದಲ್ಲಿ 20 ವರ್ಷದ ಭಾರತೀಯ ಮೂಲದ ಮೆಡಿಕಲ್ ವಿದ್...
10-03-25 10:17 pm
ಎಸ್ಸೆಸ್ಸೆಲ್ಸಿ ವಿದ್ಯಾರ್ಥಿನಿ ಜೊತೆಗೆ ಆಟೋ ಚಾಲಕನ ಸ...
10-03-25 11:45 am
15-03-25 04:11 pm
Mangalore Correspondent
Dr Vamana Nandavar, Mangalore Death: ತುಳು, ಕನ...
15-03-25 01:47 pm
Mangalore Student Missing, ,Kidnap, Hitein Bh...
15-03-25 12:35 pm
Mangalore, VHP, NIA, Illegal Arms: ಕರಾವಳಿಯಲ್ಲ...
14-03-25 10:35 pm
Mohan Gowda, Mangalore: ಬಿ.ಸಿ.ರೋಡಿನಲ್ಲಿ ಮಾ.16...
14-03-25 09:39 pm
14-03-25 05:02 pm
HK News Desk
Ccb Police, Firearms, Mangalore crime: ವಾಮಂಜೂ...
13-03-25 06:44 pm
Kothanur Police, Bangalore crime, Murder: ನಾಲ...
11-03-25 07:34 pm
Tanishq showroom, Bihar Robbery: ಬಿಹಾರದಲ್ಲಿ ಹ...
10-03-25 10:48 pm
Actress Ranya Rao, CBI, Gold case; ನಟಿ ರನ್ಯಾ...
09-03-25 05:06 pm