ಬ್ರೇಕಿಂಗ್ ನ್ಯೂಸ್
28-04-21 05:44 pm Source: Gizbot Bureau ಡಿಜಿಟಲ್ ಟೆಕ್
ಪ್ರಸ್ತುತ ದಿನಗಳಲ್ಲಿ ನಿಮಗೆ ತಿಳಿಯದ ಸಂಖ್ಯೆಯಿಂದ ಕರೆ ಬಂದರೆ ಮೊದಲು ನೆನಾಪಾಗೋದೆ ಟ್ರೂ ಕಾಲರ್ ಅಪ್ಲಿಕೇಶನ್. ಟ್ರೂ ಕಾಲರ್ ಅಪ್ಲಿಕೇಶನ್ ನಿಮ್ಮ ಮೊಬೈಲ್ ಸಂಖ್ಯೆಗ ಬರುವ ಅನಧಿಕೃತ ಸಂಪರ್ಕದ ಹೆಸರನ್ನು ಪತ್ತೆ ಹಚ್ಚಲು ಸಾಕಷ್ಟು ಸಹಾಯಕವಾಗಿದೆ. ಆದರೆ ಇದೇ ಟ್ರೂ ಕಾಲರ್ ಅಪ್ಲಿಕೇಶನ್ ಭಾರತದಲ್ಲಿ ಬಳಕೆದಾರರಿಗಾಗಿ ಕೋವಿಡ್ ಆಸ್ಪತ್ರೆ ಡೈರೆಕ್ಟರಿಯನ್ನು ಪ್ರಾರಂಭಿಸುವುದಾಗಿ ಪ್ರಕಟಿಸಿದೆ. ಡೈರೆಕ್ಟರಿ ಅಪ್ಲಿಕೇಶನ್ನಲ್ಲಿ ಲಭ್ಯವಿದೆ. ಬಳಕೆದಾರರು ಇದನ್ನು ಮೆನು ಅಥವಾ ಡಯಲರ್ ಮೂಲಕ ಪ್ರವೇಶಿಸಬಹುದು ಎಂದು ಹೇಳಿದೆ.
ಹೌದು, ಟ್ರೂ ಕಾಲರ್ ಅಪ್ಲಿಕೇಶನ್ ಭಾರತದಲ್ಲಿ ಕೊರೊನಾ ಸೊಂಕಿತರಿಗೆ ನೆರವಾಗುವ ನಿಟ್ಟಿನಲ್ಲಿ ಹಾಸ್ಪಿಟಲ್ ಡೈರೆಕ್ಟರಿಯನ್ನು ಪ್ರಾರಂಭಿಸುವುದಾಗಿ ಹೇಳಿದೆ. ಹೆಸರೇ ಸೂಚಿಸುವಂತೆ, ಈ ಡೈರೆಕ್ಟರಿಯು ದೇಶಾದ್ಯಂತ ಅನೇಕ ರಾಜ್ಯಗಳಿಂದ ಕೋವಿಡ್ ರೋಗಿಗಳಿಗಾಗಿ ಗೊತ್ತುಪಡಿಸಿದ ಆಸ್ಪತ್ರೆಗಳ ದೂರವಾಣಿ ಸಂಖ್ಯೆಗಳು ಮತ್ತು ವಿಳಾಸಗಳನ್ನು ನೀಡುತ್ತದೆ. ಇದನ್ನು ಅಧಿಕೃತ ಸರ್ಕಾರಿ ಮೂಲಗಳಿಂದ ಪಡೆಯಲಾಗುತ್ತದೆ ಎಂದು ಟ್ರೂಕಾಲರ್ ಹೇಳಿದೆ. ಹಾಗಾದ್ರೆ ಟ್ರೂ ಕಾಲರ್ ಪರಿಚಯಿಸಿರುವ ಡೈರೆಕ್ಟರಿಯ ವಿಶೇಷತೆ ಏನು ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತಿವಿ ಓದಿರಿ.

ಟ್ರೂ ಕಾಲರ್ ಕೋವಿಡ್ ರೋಗಿಗಳು ಹತ್ತಿರದಲ್ಲಿರುವ ಕೋವಿಡ್ ಆಸ್ಪತ್ರೆಗಳ ಬಗ್ಗೆ ಮಾಹಿತಿ ತಿಳಿಯಲು ಉಪಯೋಗವಾಗುವಂತೆ ಹಾಸ್ಪಿಟಲ್ ಡೈರೆಕ್ಟರಿ ಪರಿಚಯಿಸಿದೆ. ಇದು ಕೋವಿಡ್-ಸಂಬಂಧಿತ ಸೇವೆಗಳಿಗಾಗಿ ಪ್ರಮುಖ ಸಂಖ್ಯೆಗಳ ಬಗ್ಗೆ ಮಾಹಿತಿ ನೀಡಲಿದೆ. ಆದರೆ ಆಸ್ಪತ್ರೆಗಳಲ್ಲಿ ಲಭ್ಯವಿರುವ ಬೆಡ್ಗಳ ಬಗ್ಗೆ ಇದರಲ್ಲಿ ಮಾಹಿತಿ ದೊರೆಯುವುದಿಲ್ಲ. ಇನ್ನು ಈ ಡೈರೆಕ್ಟರಿಯಲ್ಲಿ ಆಸ್ಪತ್ರೆಯ ಪಟ್ಟಿಯನ್ನು ನೀಡಲಾಗಿದೆ. ಶೀಘ್ರದಲ್ಲೇ ಇನ್ನು ಹೆಚ್ಚಿನ ಪರಿಶೀಲನೆ ನಡೆಸಿದ ಮಾಹಿತಿಯನ್ನು ಇದರಲ್ಲಿ ಸೇರಿಸುವ ಕೆಲಸವನ್ನು ಟ್ರೂ ಕಾಲರ್ ಮಾಡುತ್ತಿದೆ.

ಇದೀಗ ಹೆಸರೇ ಸೂಚಿಸುವಂತೆ, ಟ್ರೂ ಕಾಲರ್ನ ಹಾಸ್ಪಿಟಲ್ ಡೈರೆಕ್ಟರಿಯು ದೇಶಾದ್ಯಂತ ಅನೇಕ ರಾಜ್ಯಗಳಿಂದ ಕೋವಿಡ್ ರೋಗಿಗಳಿಗಾಗಿ ಗೊತ್ತುಪಡಿಸಿದ ಆಸ್ಪತ್ರೆಗಳ ದೂರವಾಣಿ ಸಂಖ್ಯೆಗಳು ಮತ್ತು ವಿಳಾಸಗಳನ್ನು ನೀಡುತ್ತದೆ. ಇದನ್ನು ಅಧಿಕೃತ ಸರ್ಕಾರಿ ಮೂಲಗಳಿಂದ ಪಡೆಯಲಾಗುತ್ತದೆ ಎಂದು ಟ್ರೂಕಾಲರ್ ಹೇಳಿದೆ. ಅಲ್ಲದೆ ಈ ಮಾಹಿತಿಯನ್ನು ಒಂದೇ ವೇದಿಕೆಯಲ್ಲಿ ನೀವು ಪಡೆದುಕೊಳ್ಳುವುದರಿಂದ ವೇಗವಾಗಿ ನಿಮ್ಮ ಹತ್ತಿರದ ಆಸ್ಪತ್ರೆಗಳನ್ನು ಸಂಪರ್ಕಿಸಲು ಸಾಧ್ಯವಾಗಲಿದೆ.

ಇನ್ನು ಇತ್ತೀಚಿಗಷ್ಟೇ ಟ್ವಿಟರ್ ಬಳಕೆದಾರರ ಟೈಮ್ಲೈನ್ಗಳಲ್ಲಿ ಕೋವಿಡ್ -19 ಲಸಿಕೆ ಫ್ಯಾಕ್ಟ್ ಬಾಕ್ಸ್ ಅನ್ನು ಪರಿಚಯಿಸಿತು. ಲಸಿಕೆ ಪಡೆಯಲು ಹೆಚ್ಚಿನ ಜನರನ್ನು ಪ್ರೋತ್ಸಾಹಿಸುವ ಗುರಿಯನ್ನು ಬಾಕ್ಸ್ ಹೊಂದಿದೆ. ಸದ್ಯ ದೇಶದಲ್ಲಿ COVID-19 ವ್ಯಾಕ್ಸಿನೇಷನ್ವ್ಯಾಪಕವಾಗಿ ಲಭ್ಯವಾಗುತ್ತಿದ್ದಂತೆ, ದೇಶದಲ್ಲಿನ ಇತ್ತೀಚಿನ ಲಸಿಕೆ ಮಾಹಿತಿಯನ್ನು ಬಳಕೆದಾರರು ತಿಳಿದುಕೊಳ್ಳಬೇಕೆಂದು ಬಯುಸುತ್ತೇವೆ ಎಂದು ಟ್ವೀಟರ್ ಹೇಳಿದೆ. ಇನ್ನು ಲಸಿಕೆ ಸುರಕ್ಷತೆ, ಪರಿಣಾಮಕಾರಿತ್ವ ಮತ್ತು ಸಾರ್ವಜನಿಕ ಆರೋಗ್ಯ ತಜ್ಞರ ಸುದ್ದಿಗಳ ಕುರಿತು ಮೂಲಗಳಿಗೆ ಲಿಂಕ್ ಮಾಡುವ ಪ್ರಾಂಪ್ಟ್ ಅನ್ನು ಈ ವಾರ ನಿಮ್ಮ ಟೈಮ್ಲೈನ್ನಲ್ಲಿ ನೀವು ನೋಡುತ್ತೀರಿ ಎಂದು ಟ್ವಿಟರ್ ಟ್ವೀಟ್ನಲ್ಲಿ ತಿಳಿಸಿದೆ.
This News Article Is A Copy Of GIZBOT BUREAU
28-07-26 08:12 pm
HK News Staffer
ಶಿಕ್ಷಕರ ಕೊರತೆ ಇರುವ ಸರ್ಕಾರಿ ಶಾಲೆಗಳನ್ನು ಖಾಸಗಿ ಶ...
25-07-26 03:06 pm
ಧಾರವಾಡ ; ಮಗ ರೈಲು ಹಳಿಗೆ ಬಿದ್ದು ಆತ್ಮಹತ್ಯೆ, ಸಾವಿ...
23-07-26 08:05 pm
Soujanya case: ಸೌಜನ್ಯ ಪ್ರಕರಣದಲ್ಲಿ ಸಿಬಿಐಗೆ ತರಾ...
22-07-26 06:00 pm
ಸಚಿವ ಸಂಪುಟಕ್ಕೆ ಖರ್ಗೆ, ಡಿಕೆ, ಸಿದ್ದರಾಮಯ್ಯ ಪ್ರತ್...
19-07-26 08:34 pm
28-07-26 11:56 am
HK News Staffer
NEET ಬಿರುಗಾಳಿಯ ಬಳಿಕ ಕೇಂದ್ರ ಸಚಿವ ಸಂಪುಟದಲ್ಲಿ ಮಹ...
26-07-26 01:32 pm
ವಿದ್ಯಾರ್ಥಿಗಳ ಪ್ರತಿಭಟನೆ ಕಿಚ್ಚು ; ರಾಷ್ಟ್ರೀಯ ಪರೀ...
25-07-26 07:34 pm
ಅಂತೂ ವಿದ್ಯಾರ್ಥಿಗಳ ಪ್ರತಿಭಟನೆಗೆ ಮಣಿದ ಕೇಂದ್ರ ಸರ್...
25-07-26 03:07 pm
NEET ಪ್ರತಿಭಟನೆ ಹಿಂಸಾಚಾರ ; 117 ಶಂಕಿತರ ಫೋಟೋ ಬಿಡ...
24-07-26 03:25 pm
28-07-26 10:28 pm
HK News Desk
ಶಾಸಕ ಅಶೋಕ ರೈ ಹೆಸರೇಳಿ ಮಹಿಳೆಗೆ ಕರೆ ಮಾಡಿ ವಂಚನೆ ;...
28-07-26 10:23 pm
ಜಾಲತಾಣದಲ್ಲಿ ಜೆನ್ ಜೀಗಳ ಅಬ್ಬರ ; ಕಾಕ್ರೋಚ್ ಬೆನ್ನಲ...
27-07-26 09:48 pm
ಕ್ಯಾನ್ಸರ್ ವಿರುದ್ಧ ಹೋರಾಟದ ನಡುವೆಯೇ ಸೇವಾ ಕೈಂಕರ್ಯ...
27-07-26 08:24 pm
ಚಿನ್ನದ ರಿಂಗ್, ಡಾಲರ್ ಸಹಿತ ಬೆಲೆಬಾಳುವ ವಸ್ತುಗಳಿದ್...
26-07-26 09:57 pm
28-07-26 08:11 pm
HK News Staffer
Lavanya Murder Case, News: ಲಾವಣ್ಯ ಹತ್ಯೆ ಪ್ರಕರ...
28-07-26 07:07 pm
ವಿಚ್ಛೇದಿತ ಮಹಿಳೆಗೆ ಫೇಸ್ಬುಕ್ನಲ್ಲಿ ಪ್ರೀತಿಯ ನಾಟ...
28-07-26 12:28 pm
12 ವರ್ಷಗಳ ಹಿಂದಿನ ಗಂಗಾಧರ ಪಾಂಗಾಳ ಕೊಲೆ ಪ್ರಕರಣ ;...
27-07-26 11:07 pm
ಕಾಪುವಿನಲ್ಲಿ ಎಕ್ಸ್ಪ್ರೆಸ್ ಬಸ್ಗಳ ದರ್ಪ! ಟೈಮಿಂಗ್...
27-07-26 10:21 pm