ಬ್ರೇಕಿಂಗ್ ನ್ಯೂಸ್
27-04-21 08:56 pm Source: Gizbot Bureau ಡಿಜಿಟಲ್ ಟೆಕ್
ದೇಶದ ಟೆಲಿಕಾಂ ವಲಯದಲ್ಲಿ ರಿಲಾಯನ್ಸ್ ಜಿಯೋ ಟೆಲಿಕಾಂ ಮುಂಚೂಣಿಯಲ್ಲಿ ಗುಡುತಿಸಿಕೊಂಡಿದ್ದು, ದೇಶದಲ್ಲಿ ಹೆಚ್ಚಿನ ಬಳಕೆದಾರರನ್ನು ಹೊಂದಿದೆ. ಜಿಯೋ ಟೆಲಿಕಾಂ ಚಂದಾದಾರರಿಗೆ ಹಲವು ಆಕರ್ಷಕ ಪ್ರೀಪೇಯ್ಡ್ ಯೋಜನೆಗಳನ್ನು ನೀಡಿದೆ. ಅಲ್ಲದೆ ಪೋಸ್ಟ್ಪೇಯ್ಡ್ ಯೋಜನೆಗಳನ್ನು ಪರಿಚಯಿಸಿದೆ. ಇವುಗಳಲ್ಲಿ ಅಲ್ಪಾವಧಿಯ ಹಾಗೂ ದೀರ್ಘಾವಧಿಯ ವ್ಯಾಲಿಡಿಟಿ ಯೋಜನೆಗಳು ಸೇರಿವೆ. ಇನ್ನು ನೀವು ಪೋಸ್ಟ್ಪೇಯ್ಡ್ ಬಳಕೆದಾರರಾಗಿದ್ದರೆ ಮತ್ತು ಪ್ರಿಪೇಯ್ಡ್ಗೆ ಬದಲಾಯಿಸಲು ಬಯಸಿದರೆ, ನೀವು ಆನ್ಲೈನ್ನಲ್ಲಿ ಸ್ವಿಚ್ಗಾಗಿ ಅರ್ಜಿ ಸಲ್ಲಿಸಬಹುದು ಅಥವಾ ಜಿಯೋ ಸ್ಟೋರ್ಗೆ ಭೇಟಿ ನೀಡಬಹುದು.
ಹೌದು, ರಿಲಯನ್ಸ್ ಜಿಯೋ ಭಾರತದಲ್ಲಿನ ತನ್ನ ಚಂದಾದಾರರಿಗೆ ಪೋಸ್ಟ್ಪೇಯ್ಡ್ ಮತ್ತು ಪ್ರಿಪೇಯ್ಡ್ ಯೋಜನೆಗಳನ್ನು ನೀಡುತ್ತದೆ. ಜಿಯೋ ಇತ್ತೀಚೆಗೆ ತನ್ನ ಪೋಸ್ಟ್ಪೇಯ್ಡ್ ಕೊಡುಗೆಗಳನ್ನು ಪರಿಷ್ಕರಿಸಿದೆ. ಅದರ ಯೋಜನೆಗಳು ಈಗ ರೂ. 199. ಮೂಲಕ ಶುರವಾಗಲಿದೆ. ಅಲ್ಲದೆ ಪೋಸ್ಟ್ಪೇಯ್ಡ್ ಬಳಕೆದಾರರು ಪ್ರತಿ ತಿಂಗಳ ಕೊನೆಯಲ್ಲಿ ಬಿಲ್ ಪಡೆದರೆ, ಪ್ರಿಪೇಯ್ಡ್ ಬಳಕೆದಾರರು ಪ್ರಯೋಜನಗಳನ್ನು ಪಡೆಯಲು ಮೊದಲೇ ರೀಚಾರ್ಜ್ ಮಾಡಬೇಕಾಗುತ್ತದೆ. ಹಾಗೆಯೇ ನೀವು ಪೋಸ್ಟ್ಪೇಯ್ಡ್ ನಿಂದ ಪ್ರಿಪೇಯ್ಡ್ಗೆ ಬದಲಾಗುವುದು ಕೂಡ ಸುಲಭವಾಗಿದೆ. ಅದು ಹೇಗೆ ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ಜಿಯೋ ತನ್ನ ಚಂದಾದಾರರಿಗೆ ಪೋಸ್ಟ್ಪೇಯ್ಡ್ ನಿಂದ ಪ್ರಿಪೇಯ್ಡ್ ಬದಲಾಯಿಸುವುದು ಸುಲಭವಾಗಿಸಿದೆ. ಇನ್ನು ಪ್ರಿಪೇಯ್ಡ್ ಯೋಜನೆಗಳು ಮುಕ್ತಾಯ ದಿನಾಂಕದೊಂದಿಗೆ ಬರುತ್ತವೆ ಮತ್ತು ಜಿಯೋ ಚಂದಾದಾರರು ಮಾನ್ಯತೆ ಮುಗಿದ ಪ್ರತಿ ಬಾರಿಯೂ ರೀಚಾರ್ಜ್ ಮಾಡಬೇಕಾಗುತ್ತದೆ. ಜಿಯೋ ಪ್ರಿಪೇಯ್ಡ್ ಯೋಜನೆಗಳು 10 ರೂ. ನಿಂದ ಶುರುವಾಗಲಿವೆ. ಆದರೆ ವಾರ್ಷಿಕ ಯೋಜನೆಗಳು 4,999 ರೂ. ಹೊಂದಿವೆ. ಇದೇ ಕಾರಣಕ್ಕೆ ನೀವು ಜಿಯೋ ಪೋಸ್ಟ್ಪೇಯ್ಡ್ನಿಂದ ಪ್ರಿಪೇಯ್ಡ್ಗೆ ಬದಲಾಯಿಸಲು, ಈ ಕೆಳಗಿನ ಹಂತಗಳನ್ನು ಅನುಸರಿಸಿ.
ಜಿಯೋ ಪೋಸ್ಟ್ಪೇಯ್ಡ್ನಿಂದ ಜಿಯೋ ಪ್ರಿಪೇಯ್ಡ್ಗೆ ಬದಲಾಯಿಸುವುದು ಹೇಗೆ?
ಹಂತ: 1 ಜಿಯೋ ವೆಬ್ಸೈಟ್ ತೆರೆಯಿರಿ. ಇದರಲ್ಲಿ ತೆರೆಯುವ ಅಗತ್ಯ ಪೇಜ್ನಲ್ಲಿ ನಿಮ್ಮ ಹೆಸರು ಮತ್ತು ನೋಂದಾಯಿತ ಜಿಯೋ ಪೋಸ್ಟ್ಪೇಯ್ಡ್ ಸಂಖ್ಯೆಯನ್ನು ನಮೂದಿಸಿ.
ಹಂತ: 2 ಜನರೇಟ್ ಒಟಿಪಿ ಕ್ಲಿಕ್ ಮಾಡಿ. ನಿಮ್ಮ ಫೋನ್ನಲ್ಲಿ ನಿಮಗೆ ಕಳುಹಿಸಲಾದ ಒಟಿಪಿಯನ್ನು ನಮೂದಿಸಿ, ಮೌಲ್ಯೀಕರಿಸಿ ಕ್ಲಿಕ್ ಮಾಡಿ.
ಹಂತ: 3 ಪ್ರಿಪೇಯ್ಡ್ ಆಯ್ಕೆಯಲ್ಲಿ ನನಗೆ ಆಸಕ್ತಿ ಇದೆ ಎಂದು ಆಯ್ಕೆಮಾಡಿ ಮತ್ತು ‘ಪೋರ್ಟ್ ಟು ಜಿಯೋ' ಕ್ಲಿಕ್ ಮಾಡಿ.
ಹಂತ: 4 ಸಿಮ್ ವಿತರಣೆಗಾಗಿ ನಿಮ್ಮ ವಿತರಣಾ ವಿಳಾಸವನ್ನು ಭರ್ತಿ ಮಾಡಿ ಮತ್ತು ‘ಸಬ್ಮಿಟ್ ಪೋರ್ಟ್ ಟು ಜಿಯೋ ವಿನಂತಿಯನ್ನು' ಕ್ಲಿಕ್ ಮಾಡಿ.

ಹಂತ: 5 ಜಿಯೋ ಕಸ್ಟಮರ್ ಕೇರ್ ಎಕ್ಸಿಕ್ಯುಟೀವ್ 3-4 ದಿನಗಳಲ್ಲಿ ನಿಮ್ಮ ವಿಳಾಸಕ್ಕೆ ಬರಲಿದ್ದಾರೆ. ನಂತರ ನಿಮ್ಮ ಪ್ರೂಫ್ ಆಫ್ ಐಡೆಂಟಿಟಿ (ಪಿಒಐ) ಮತ್ತು ಪ್ರೂಫ್ ಆಫ್ ಅಡ್ರೆಸ್ (ಪಿಒಎ) ನಂತಹ ದಾಖಲೆಗಳನ್ನು ಪರಿಶೀಲಿಸುವ ಮೂಲಕ ಅವರು ಮನೆಯಲ್ಲಿಯೇ ಕೆವೈಸಿ ನಡೆಸಲಿದ್ದಾರೆ. ಸ್ವೀಕಾರಾರ್ಹ ದಾಖಲೆಗಳಲ್ಲಿ ಆಧಾರ್ ಕಾರ್ಡ್, ಮತದಾರರ ಗುರುತಿನ ಚೀಟಿ, ಪಾಸ್ಪೋರ್ಟ್ ಮತ್ತು ಚಾಲನಾ ಪರವಾನಗಿ ದಾಖಲೆಗಳನ್ನು ನೀಡಬಹುದು.
ಹಂತ: 6 ಇದಲ್ಲದೆ ಬಳಕೆದಾರರು ಪರ್ಯಾಯವಾಗಿ ಹತ್ತಿರದ ಜಿಯೋ ಅಂಗಡಿಗೆ ಭೇಟಿ ನೀಡಬಹುದು, ಮೈಗ್ರೇಶನ್ ಫಾರ್ಮ್ ಅನ್ನು ಭರ್ತಿ ಮಾಡಬಹುದು ಮತ್ತು ಹೊಸ ಪ್ರಿಪೇಯ್ಡ್ ಸಂಪರ್ಕವನ್ನು ಪಡೆಯಲು ಕೆವೈಸಿ ದಾಖಲೆಗಳನ್ನು ಸಲ್ಲಿಸಬಹುದು.
This News Article Is A Copy Of GIZBOT BUREAU
29-01-26 01:16 pm
HK News Desk
ಮೈಸೂರಿನಲ್ಲಿ ಮತ್ತೆ ಡ್ರಗ್ಸ್ ಫ್ಯಾಕ್ಟರಿ ಶಂಕೆಯಲ್ಲಿ...
28-01-26 09:54 pm
ಅಕ್ರಮ ಮರಳು ಗಣಿಗಾರಿಕೆ, ಮಟ್ಕಾ, ಜೂಜು, ಇಸ್ಪೀಟು ದಂ...
27-01-26 09:57 pm
ಮದುವೆಯಾದ ಎರಡೂವರೆ ತಿಂಗಳಿಗೆ ಬೇರೆ ಯುವಕನ ಹಿಂದೋಡಿದ...
27-01-26 09:34 pm
400 ಕೋಟಿ ದರೋಡೆ ; ನೋಟುಗಳ ಕಂತೆ ಗುಜರಾತ್ ರಾಜಕಾರಣಿ...
27-01-26 06:31 pm
28-01-26 11:16 pm
HK News Desk
ಬೌದ್ಧ ಧರ್ಮಕ್ಕೆ ಮತಾಂತರಗೊಂಡು ಅಲ್ಪಸಂಖ್ಯಾತ ಮೀಸಲಾತ...
28-01-26 11:14 pm
ಶಿಮ್ಲಾದಲ್ಲಿ ಹಿಮಪಾತ ; ರೀಲ್ಸ್ ಮಾಡಲು ಹೋಗಿದ್ದ ಹುಡ...
28-01-26 02:35 pm
ತಮ್ಮ ಕರ್ಮಭೂಮಿಯಲ್ಲೇ ಅಜಿತ್ ಪವಾರ್ ಕೊನೆಯುಸಿರು ; ವ...
28-01-26 01:28 pm
ಟ್ರಂಪ್ ಸುಂಕಾಸ್ತ್ರಕ್ಕೆ ಭಾರತದ ಬ್ರಹ್ಮಾಸ್ತ್ರ ; ಐರ...
28-01-26 11:22 am
29-01-26 03:54 pm
Udupi Correspondent
ನಿರ್ಲಕ್ಷ್ಯದಿಂದಲೇ ಅಪಘಾತ ಹೆಚ್ಚಳ, ಕುಡಿದು ವಾಹನ ಚಲ...
27-01-26 10:50 pm
ಫೆ.1ರಂದು "ನಮ್ಮ ನಡಿಗೆ ತಲಪಾಡಿ ದೇವಿಪುರದ ಕಡೆಗೆ" ಬ...
27-01-26 08:58 pm
ದೇಶಕ್ಕಾಗಿ ತನ್ನ ಕಾಲುಗಳನ್ನೇ ಕಳೆದುಕೊಂಡ ಯೋಧನಿಗೆ ಸ...
27-01-26 06:46 am
ಪ್ರವಾಸಿಗರನ್ನು ವಿಹಾರಕ್ಕೆ ಒಯ್ಯುತ್ತಿದ್ದ ದೋಣಿ ಸಮು...
26-01-26 05:05 pm
27-01-26 10:18 pm
Bangalore Correspondent
ಬೆಂಗಳೂರಿನಲ್ಲಿ ಮತ್ತೊಂದು ದರೋಡೆ ; 1.37 ಕೋಟಿ ರೂ....
27-01-26 05:56 pm
ಕೆನರಾ ಲೈಟಿಂಗ್ ಇಂಡಸ್ಟ್ರೀಸ್ ಸಂಸ್ಥೆಯಿಂದ ಕೊಲ್ಕತ್ತ...
27-01-26 05:15 pm
ನಿಮ್ಮ ಕ್ರೆಡಿಟ್ ಕಾರ್ಡ್ ಮೇಲೆ ಬೋನಸ್ ಬಂದಿದೆ ! ಬಣ್...
27-01-26 03:21 pm
JAKEA Michael Rego, Rajeev Gowda Arrest: ಧಮ್ಕ...
27-01-26 12:22 pm