ಬ್ರೇಕಿಂಗ್ ನ್ಯೂಸ್
27-04-21 05:00 pm Source: GIZBOT Mutthuraju H M ಡಿಜಿಟಲ್ ಟೆಕ್
ಸರ್ಚ್ ಇಂಜಿನ್ ದೈತ್ಯ ಗೂಗಲ್ ಬಳಕೆದಾರರಿಗೆ ಹಲವು ಮಾದರಿಯ ಫೀಚರ್ಸ್ಗಳನ್ನು ಪರಿಚಯಿಸಿದೆ. ಬಳಕೆದಾರರ ಅನುಕೂಲಕ್ಕೆ ತಕ್ಕಂತೆ ಹೊಸ ಮಾದರಿಯ ಫೀಚರ್ಸ್ಗಳನ್ನು ಪರಿಚಯಿಸುತ್ತಾ ಬಂದಿದೆ. ಸದ್ಯ ಇದೀಗ "Question & Answers" ಫೀಚರ್ಸ್ ಮುಂದಿನ ಎರಡು ತಿಂಗಳ ನಂತರ ಇದನ್ನು ತೆಗೆದು ಹಾಕುವುದಾಗಿ ಗೂಗಲ್ ಹೇಳಿಕೊಂಡಿದೆ. ಈ ಫೀಚರ್ಸ್ ಇದೇ ಜೂನ್ 30 ರೊಳಗೆ ಗೂಗಲ್ ಸ್ಥಗಿತಗೊಳಿಸುತ್ತದೆ.
ಹೌದು, ಗೂಗಲ್ ತನ್ನ Question & Answers ಫೀಚರ್ಸ್ ಅನ್ನು ಜೂನ್ 30ರ ಒಳಗೆ ಸ್ಥಗಿತಗೊಳಿಸುವುದಾಗಿ ಪ್ರಕಟಿಸಿದೆ. ಇನ್ನು ಈ ಫೀಚರ್ಸ್ ಬಳಕೆದಾರರಿ ಪ್ರಶ್ನೆಗಳಿಗೆ ಉತ್ತರಿಸುವ ವಿಶೇಷತೆಯನ್ನು ಹೊಂದಿತ್ತು. ಹಾಗಂತ ಇದು ತುಂಬಾ ಹಳೆಯ ಫೀಚರ್ಸ್ ಏನಲ್ಲಾ, ಒಂದೆರಡು ವರ್ಷಗಳ ಹಿಂದೆ ಪರಿಚಯಿಸಲ್ಪ ಫೀಚರ್ಸ್ ಆಗಿದೆ. ಪ್ರಶ್ನೆಗಳು ಮತ್ತು ರಿಸಲ್ಟ್ಗಳಲ್ಲಿ ಒಂದನ್ನು ಟ್ಯಾಪ್ ಮಾಡುವುದು ಅಥವಾ ಕ್ಲಿಕ್ ಮಾಡುವುದು ಕೆಲವು "ಸಂಬಂಧಿತ ಪ್ರಶ್ನೆಗಳು" ಮತ್ತು ಅವುಗಳ ಕೆಳಗಿನ ಉತ್ತರಗಳೊಂದಿಗೆ ಈ ಫೀಚರ್ಸ್ ಗಮನ ಸೆಳೆದಿತ್ತು.
ಗೂಗಲ್ ಏಪ್ರಿಲ್ 30 ರಂದು ತನ್ನ ಸರ್ಚಿಂಗ್ನಲ್ಲಿ "ask and answer" ಫೀಚರ್ಸ್ ಅನ್ನು ಸ್ಥಗಿತಗೊಳಿಸುವುದಾಗಿ ಗೂಗಲ್ ಪ್ರಕಟಣೆ ಇಮೇಲ್ ಮೂಲಕ ತಿಳಿಸಿದೆ. ಇದರರ್ಥ ಕಂಪನಿಯು ಪದೇ ಪದೇ ಕೇಳಲಾಗುವ ಪ್ರಶ್ನೆಗಳು ಮತ್ತು ಉತ್ತರಗಳನ್ನು ಸಾಮಾನ್ಯವಾಗಿ ಸರ್ಚ್ ರಿಸಲ್ಟ್ಗಳ ಮೇಲೆ ತೋರಿಸುವುದನ್ನು ನಿಲ್ಲಿಸುತ್ತದೆ. ಇದಲ್ಲದೆ, ಜೂನ್ 30 ರಂದು ಎಲ್ಲಾ ಬಳಕೆದಾರರಿಂದ "your contributions" ಪುಟದಿಂದ ಎಲ್ಲಾ Question & Answers ಅನ್ನು ಸಹ ತೆಗೆದು ಹಾಕುವುದಾಗಿ ಹೇಳಿದೆ. ಬಳಕೆದಾರರ ಪ್ರಶ್ನೆಗಳಿಗೆ ಹೆಚ್ಚಿನ ಉತ್ತರಗಳು ಪ್ರಕಾಶಕರ ಉತ್ತರಗಳಿಂದ ತುಂಬಿವೆ. ಆದಾಗ್ಯೂ, ಬಳಕೆದಾರರು ತಮ್ಮ ಉತ್ತರಗಳನ್ನು ಇದಕ್ಕಾಗಿ ಅಪ್ಲೋಡ್ ಮಾಡಬಹುದು, ಅದರ ಹುಡುಕಾಟ ಫಲಿತಾಂಶಗಳಲ್ಲಿ ಸೂಕ್ತವಾದ ಉತ್ತರವನ್ನು ತೋರಿಸಲು ಗೂಗಲ್ ನಿರ್ಧರಿಸಿದೆ.
ಗೂಗಲ್ ಪ್ರಸ್ತುತ ಬಳಕೆದಾರರಿಗೆ ಗೂಗಲ್.ಕಾಮ್ ವೆಬ್ಪುಟ ಮತ್ತು ಸ್ಮಾರ್ಟ್ಫೋನ್ಗಳಲ್ಲಿನ ಗೂಗಲ್ ಅಪ್ಲಿಕೇಶನ್ನಿಂದ ಪ್ರಶ್ನೆಗಳನ್ನು ಕೇಳಲು ಮತ್ತು ಪ್ರಶ್ನೆಗಳಿಗೆ ಉತ್ತರಿಸಲು ಅನುಮತಿಸುತ್ತದೆ. ಕಳೆದ ಎರಡು ವರ್ಷಗಳಿಂದ ನೀವು ಯಾವುದೇ ಪ್ರಶ್ನೆಗಳು ಮತ್ತು ಉತ್ತರಗಳಿಗೆ ಕೊಡುಗೆ ನೀಡಿದ್ದರೆ, ಜೂನ್ ಅಂತ್ಯದಲ್ಲಿ ಸೈಟ್ನಿಂದ ಕಣ್ಮರೆಯಾಗುವ ಮೊದಲು ನಿಮ್ಮ ಹುಡುಕಾಟ ಕೊಡುಗೆಗಳನ್ನು ವರ್ಗಾವಣೆ ಮಾಡಿಕೊಳ್ಳು ನೀವು Google ಟೇಕ್ ಔಟ್ಗೆ ಹೋಗಬಹುದು ಎಂದು ಗೂಗಲ್ ಹೇಳಿದೆ.
ನಿಮ್ಮ ಎಲ್ಲಾ ಪ್ರಶ್ನೆಗಳು ಮತ್ತು ಉತ್ತರಗಳನ್ನು ಡೌನ್ಲೋಡ್ ಮಾಡುವುದು ಹೇಗೆ?
ಗೂಗಲ್ ತನ್ನ ಎಲ್ಲ ಬಳಕೆದಾರರಿಗೆ ಅವರು ಕೇಳಿದ ಎಲ್ಲಾ ಪ್ರಶ್ನೆಗಳು ಮತ್ತು ಉತ್ತರಗಳನ್ನು ಜೂನ್ 30 ರವರೆಗೆ ಡೌನ್ಲೋಡ್ ಮಾಡಲು ಅನುಮತಿಸುತ್ತದೆ. ನೀವು ನಿಮ್ಮ ಉತ್ತರಗಳನ್ನು ಡೌನ್ಲೋಡ್ ಮಾಡಲು ಗೂಗಲ್ ಟೇಕ್ ಔಟ್ ಸೇವೆಯನ್ನು ಬಳಸಬೇಕಾಗುತ್ತದೆ. ಇದನ್ನು ಇಲ್ಲಿ ಕ್ಲಿಕ್ ಮಾಡುವುದರ ಮೂಲಕ ಬಳಕೆದಾರರು ತಮ್ಮ ಖಾತೆಗೆ ಸೈನ್ ಇನ್ ಮಾಡಬೇಕಾಗುತ್ತದೆ. ನಂತರ "Search contributions" ಆಯ್ಕೆಯನ್ನು ಆರಿಸಿ. ಇದು ನಿಮ್ಮ ಎಲ್ಲಾ ಕೊಡುಗೆಗಳ ದಾಖಲೆಯನ್ನು ರಚಿಸುತ್ತದೆ, ಇದರಲ್ಲಿ ಪ್ರಶ್ನೆಗಳು ಮತ್ತು ಉತ್ತರಗಳು ಸೇರಿವೆ. ದಾಖಲೆಯನ್ನು ರಚಿಸಿದ ನಂತರ, ಬಳಕೆದಾರರಿಗೆ ಇ-ಮೇಲ್ ಮೂಲಕ ತಿಳಿಸಲಾಗುವುದು, ಅದು ಅವರಿಗೆ ಡೌನ್ಲೋಡ್ ಲಿಂಕ್ ಅನ್ನು ಒದಗಿಸುತ್ತದೆ.
This News Article Is A Copy Of GIZBOT BUREAU
15-03-25 03:55 pm
HK News Desk
Elephant attack, Belur, Hassan: ಕಾಡಾನೆ ದಾಳಿ ;...
15-03-25 12:33 pm
DySP Kanakalakshmi arrested, suicide: ಬೋವಿ ನಿ...
14-03-25 11:11 pm
Swamiji, Bagalkot, Police Video: ದುಡ್ಡು ಪಡೆದು...
14-03-25 08:30 pm
Shivarama Hebbar, S.T. Somashekar, Lingaraj P...
14-03-25 03:39 pm
13-03-25 03:49 pm
HK News Desk
Shiradi Ghat, Mangalore Bengalore, Mp Brijesh...
13-03-25 01:30 pm
ಪಾಕಿಸ್ತಾನದಲ್ಲಿ 500ಕ್ಕು ಹೆಚ್ಚು ಪ್ರಯಾಣಿಕರಿದ್ದ ರ...
12-03-25 11:41 am
ಅಮೆರಿಕದಲ್ಲಿ 20 ವರ್ಷದ ಭಾರತೀಯ ಮೂಲದ ಮೆಡಿಕಲ್ ವಿದ್...
10-03-25 10:17 pm
ಎಸ್ಸೆಸ್ಸೆಲ್ಸಿ ವಿದ್ಯಾರ್ಥಿನಿ ಜೊತೆಗೆ ಆಟೋ ಚಾಲಕನ ಸ...
10-03-25 11:45 am
15-03-25 04:11 pm
Mangalore Correspondent
Dr Vamana Nandavar, Mangalore Death: ತುಳು, ಕನ...
15-03-25 01:47 pm
Mangalore Student Missing, ,Kidnap, Hitein Bh...
15-03-25 12:35 pm
Mangalore, VHP, NIA, Illegal Arms: ಕರಾವಳಿಯಲ್ಲ...
14-03-25 10:35 pm
Mohan Gowda, Mangalore: ಬಿ.ಸಿ.ರೋಡಿನಲ್ಲಿ ಮಾ.16...
14-03-25 09:39 pm
14-03-25 05:02 pm
HK News Desk
Ccb Police, Firearms, Mangalore crime: ವಾಮಂಜೂ...
13-03-25 06:44 pm
Kothanur Police, Bangalore crime, Murder: ನಾಲ...
11-03-25 07:34 pm
Tanishq showroom, Bihar Robbery: ಬಿಹಾರದಲ್ಲಿ ಹ...
10-03-25 10:48 pm
Actress Ranya Rao, CBI, Gold case; ನಟಿ ರನ್ಯಾ...
09-03-25 05:06 pm