ಬ್ರೇಕಿಂಗ್ ನ್ಯೂಸ್
24-04-21 05:20 pm Source: Gizbot Bureau ಡಿಜಿಟಲ್ ಟೆಕ್
ಭಾರತದಲ್ಲಿ ಕೊರೊನಾ ಎರಡನೇ ಅಲೆ ವ್ಯಾಪಕವಾಗಿ ಹೆಚ್ಚಾಗುತ್ತಿದೆ. ಇದರ ನಡುವೆ ಕೋವಿಡ್ ವ್ಯಾಕ್ಸಿನೇಶನ್ ಅಭಿಯಾನವೂ ಕೂಡ ಸಾಗುತ್ತಿದೆ. ಇಷ್ಟು ದಿನ 45 ವರ್ಷ ಮೇಲ್ಪಟ್ಟ ನಾಗರಿಕರಿಗೆ ಕೊರೊನಾ ಲಸಿಕೆ ಅಭಿಯಾನ ನಡೆಸಿದ ಸರ್ಕಾರ ಇದೀಗ 18 ವರ್ಷಕ್ಕಿಂತ ಮೇಲ್ಪಟ್ಟ ಎಲ್ಲರಿಗೂ ಕೋವಿಡ್ ಲಸಿಕೆ ಅಭಿಯಾನಕ್ಕೆ ಮುಂದಾಗಿದೆ. ಈ ಅಭಿಯಾನವೂ ಇದೇ ಏಪ್ರಿಲ್ 28, ಬುಧವಾರದಿಂದ ಪ್ರಾರಂಭವಾಗಲಿದೆ ಎಂದು ಕೇಂದ್ರ ಸರ್ಕಾರ ಪ್ರಕಟಿಸಿದೆ.
ಹೌದು, ಕೋವಿಡ್ ವ್ಯಾಕ್ಸಿನೇಶನ್ ಅಭಿಯಾನದಲ್ಲಿ ಇದೀಗ 18 ವರ್ಷ ಮೇಲ್ಪಟ್ಟ ಎಲ್ಲರೂ ಲಸಿಕೆ ಪಡೆದುಕೊಳ್ಳಬಹುದು. ಇದಕ್ಕಾಗಿ ಕೋವಿನ್ ಅಪ್ಲಿಕೇಶನ್ ಮತ್ತು ಕೋವಿಡ್ ಪೋರ್ಟಲ್ ಮೂಲಕ ಲಸಿಕೆಗಾಗಿ ನೊಂದಣಿ ಮಾಡಿಸಿಕೊಳ್ಳಬೇಕಿದೆ. ಅಲ್ಲದೆ ಲಸಿಕೆ ಪಡೆದ ನಂತರ ಇದೇ ಪೋರ್ಟಲ್ಗಳ ಮೂಲಕ ಫಲಾನುಭವಿಗಳು ಕೋವಿಡ್ 19 ಲಸಿಕೆ ಪ್ರಮಾಣವನ್ನು ನೋಂದಾಯಿಸಲು ಸಾಧ್ಯವಾಗುತ್ತದೆ. ಆರೋಗ್ಯಾ ಸೇತು ಆಪ್ ಮೂಲಕ ನೋಂದಣಿ ಮಾಡಲು ಏಪ್ರಿಲ್ 28 ರಿಂದ ಪ್ರಾರಂಭವಾಗಲಿದೆ. ಹಾಗಾದ್ರೆ 18 ವರ್ಷ ಮೇಲ್ಪಟ್ಟ ಯುವ ಜನತೆ ಕೋವಿನ್ ವ್ಯಾಕ್ಸಿನ್ ಲಸಿಕೆ ತೆಗೆದುಕೊಳ್ಳಲು ಹೇಗೆ ನೊಂದಾಯಿಸಿಕೊಳ್ಳುವುದು ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.
18 ವರ್ಷ ಮೇಲ್ಪಟ್ಟವರಿಗೆ ಕೊವೀಡ್ ವ್ಯಾಕ್ಸಿನೇಶನ್ ತೆಗೆದುಕೊಳ್ಳಲು ಸರ್ಕಾರ ಅವಕಾಶ ನೀಡಿದೆ. ಈ ಅಭಿಯಾನವೂ ಇದೇ ಏಪ್ರಿಲ್ 28 ಪ್ರಾರಂಭವಾಗಲಿದೆ. ಆದರೆ ವ್ಯಾಕ್ಸಿನೇಷನ್ನ ಮೊದಲ ಮತ್ತು ಎರಡನೆಯ ಹಂತದಂತಲ್ಲದೆ, ಈ ವಯಸ್ಸಿನವರಿಗೆ ಯಾವುದೇ ವಾಕ್-ಇನ್ ನೋಂದಣಿ ಇರುವುದಿಲ್ಲ. ಇದು ಕೇವಲ ಪ್ರೀ ಬುಕಿಂಗ್ ಆಗಿರಲಿದೆ. ಕೋವಿಡ್ 19 ವ್ಯಾಕ್ಸಿನೇಷನ್ ಮೂರನೇ ಹಂತವನ್ನು ಮೇ 1 ರಿಂದ ನಿಗದಿಪಡಿಸಲಾಗಿದೆ. ನಂತರ 18 ವರ್ಷಕ್ಕಿಂತ ಮೇಲ್ಪಟ್ಟವರು, ರಾಜ್ಯಗಳು ಮತ್ತು ಖಾಸಗಿ ಸಂಸ್ಥೆಗಳು ಚುಚ್ಚುಮದ್ದಿನ ತಯಾರಕರಿಗೆ ನೇರವಾಗಿ ಲಸಿಕೆಗಳನ್ನು ಖರೀದಿಸಬಹುದು.
ಕೋವಿಡ್ ನೋಂದಣಿ: ಲಸಿಕೆಗಾಗಿ ನೋಂದಾಯಿಸುವುದು ಹೇಗೆ? ಕೋವಿನ್ ಅಪ್ಲಿಕೇಶನ್ ಮೂಲಕ ಕೋವಿಡ್ 19 ಲಸಿಕೆಗಾಗಿ ನೋಂದಣಿ ಮಾಡಲು ಈ ಕೆಳಗಿನ ಹಂತಗಳನ್ನು ಅನುಸರಿಸಿ.
ಹಂತ:1 ಕೋವಿನ್ ಪೋರ್ಟಲ್ಗೆ ಭೇಟಿ ನೀಡಿ: https://www.cowin.gov.in/home. ಇದು ಅಲ್ಲಿರುವ ಎಲ್ಲ ಬ್ರೌಸರ್ಗಳೊಂದಿಗೆ ಹೊಂದಿಕೊಳ್ಳುತ್ತದೆ. ಫಲಾನುಭವಿಗಳು ತಮ್ಮ ಆಂಡ್ರಾಯ್ಡ್ ಮೊಬೈಲ್ ಫೋನ್ಗಳಲ್ಲಿ ಗೂಗಲ್ ಪ್ಲೇ ಸ್ಟೋರ್ನಿಂದ ಕೋವಿನ್ 2.0 ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಬಹುದು. ಐಫೋನ್ ಬಳಕೆದಾರರಿಗೆ ಈ ಸೌಲಭ್ಯ ಇನ್ನೂ ಲಭ್ಯವಿಲ್ಲ
ಹಂತ:2 ಕೋವಿನ್ 2.0 ಪೋರ್ಟಲ್ನ ಹೋಮ್ಪೇಜ್ನಿಂದ, ‘ನಿಮ್ಮ ಹತ್ತಿರದ ವ್ಯಾಕ್ಸಿನೇಷನ್ ಕೇಂದ್ರವನ್ನು ಹುಡುಕಿ' ವಿಭಾಗಕ್ಕೆ ಕೆಳಗೆ ಸ್ಕ್ರಾಲ್ ಮಾಡಿ
ಹಂತ:3 ನೀವು ವಾಸಿಸುವ ಸ್ಥಳ ಮತ್ತು ವಿಳಾಸವನ್ನು ನಮೂದಿಸಿ ಅಥವಾ ಹತ್ತಿರದ ವ್ಯಾಕ್ಸಿನೇಷನ್ ಕೇಂದ್ರದ ವಿವರಗಳನ್ನು ಪಡೆಯಲು ‘ಪ್ರಸ್ತುತ ಸ್ಥಳ' ಆಯ್ಕೆಯ ಮೇಲೆ ಕ್ಲಿಕ್ ಮಾಡಿ
ಹಂತ:4 ಈಗ, ಮುಂದುವರಿಯಲು ‘ರಿಜಿಸ್ಟರ್ ಯುವರ್ ಸೆಲ್ಫ್' ಬಟನ್ ಕ್ಲಿಕ್ ಮಾಡಿ ಮತ್ತು ನಿಮ್ಮ ಮೊಬೈಲ್ ಸಂಖ್ಯೆಯನ್ನು ನಮೂದಿಸಿ
ಹಂತ:5 ನಿಮ್ಮ ಖಾತೆಯನ್ನು ರಚಿಸುವ OTP ಅನ್ನು ನೀವು ಪಡೆಯುತ್ತೀರಿ ಹಂತ:6 ವಿವರಗಳನ್ನು ಭರ್ತಿ ಮಾಡಿ ಮತ್ತು ಗುರುತಿನ ದಾಖಲೆಗಳನ್ನು ಅಪ್ಲೋಡ್ ಮಾಡಿ ಹಂತ:7 ಲಸಿಕೆಗಾಗಿ ಅಪಾಯಿಂಟ್ಮೆಂಟ್ ಅನ್ನು ಸರ್ಕಾರಿ ಮತ್ತು ಖಾಸಗಿ ಸೌಲಭ್ಯಗಳಲ್ಲಿ ಕಾಯ್ದಿರಿಸಲು ಫಲಾನುಭವಿಗಳಿಗೆ ಅವಕಾಶ ಸಿಗುತ್ತದೆ.
ಒಂದು ವೇಳೆ, ಕೋವಿನ್ 2.0 ಮೂಲಕ COVID-19 ಲಸಿಕೆಗಾಗಿ ನೋಂದಾಯಿಸಲು ನಿಮಗೆ ಸಾಧ್ಯವಾಗದಿದ್ದರೆ, ಆರೋಗ್ಯಾ ಸೇತು ಅಪ್ಲಿಕೇಶನ್ ಬಳಸಿ. ಸರ್ಕಾರದ ಆರೋಗ್ಯ ಸೇವಾ ಅಪ್ಲಿಕೇಶನ್ ಫಲಾನುಭವಿಗಳಿಗೆ ಒಟಿಪಿ ಮೂಲಕ ದಾಖಲೆ ಪರಿಶೀಲಿಸುವ ಮೂಲಕ ತಮ್ಮನ್ನು ನೋಂದಾಯಿಸಿಕೊಳ್ಳಲು ಅನುವು ಮಾಡಿಕೊಡುತ್ತದೆ.
ಆರೋಗ್ಯ ಸೇತು ಅಪ್ಲಿಕೇಶನ್ ಮೂಲಕ ಕೋವಿಡ್ ಲಸಿಕೆಗಾಗಿ ನೋಂದಾಯಿಸುವುದು ಹೇಗೆ?
ಹಂತ:1 ಆರೋಗ್ಯ ಸೇತು ಅಪ್ಲಿಕೇಶನ್ ಮೇನ್ ಮೆನುವಿನಿಂದ COVID ಅಪ್ಡೇಟ್ ಪಕ್ಕದಲ್ಲಿರುವ ‘CoWIN' ಆಯ್ಕೆಯನ್ನು ಟ್ಯಾಪ್ ಮಾಡಿ
ಹಂತ:2 ಇದರಲ್ಲಿ ಎರಡನೆಯ ‘ವ್ಯಾಕ್ಸಿನೇಷನ್' ಟ್ಯಾಪ್ ಮಾಡಿ ಮತ್ತು ‘ಈಗ ನೋಂದಾಯಿಸಿ' ಆಯ್ಕೆಮಾಡಿ. ನೀವು ಈಗಾಗಲೇ ನೋಂದಾಯಿಸಿದ್ದರೆ, ‘ಲಾಗಿನ್' ಆಯ್ಕೆಮಾಡಿ
ಹಂತ:3 ನಿಮ್ಮ ಮೊಬೈಲ್ ಸಂಖ್ಯೆಯನ್ನು ನಮೂದಿಸಿ ಮತ್ತು ‘ಪರಿಶೀಲಿಸಲು ಮುಂದುವರಿಯಿರಿ'
ಹಂತ:4 ಒಟಿಪಿಯನ್ನು ಸಂಖ್ಯೆಗೆ ಕಳುಹಿಸಲಾಗುತ್ತದೆ
ಹಂತ:5 ನಿಮ್ಮ ವಿವರಗಳು, ಇನಾಕ್ಯುಲೇಷನ್ ಸೆಂಟರ್ ಮತ್ತು ಹೆಚ್ಚಿನದನ್ನು ನಮೂದಿಸಲು ಒಟಿಪಿ ಬಳಸಿ
This News Article Is A Copy Of GIZBOT BUREAU
15-03-25 03:55 pm
HK News Desk
Elephant attack, Belur, Hassan: ಕಾಡಾನೆ ದಾಳಿ ;...
15-03-25 12:33 pm
DySP Kanakalakshmi arrested, suicide: ಬೋವಿ ನಿ...
14-03-25 11:11 pm
Swamiji, Bagalkot, Police Video: ದುಡ್ಡು ಪಡೆದು...
14-03-25 08:30 pm
Shivarama Hebbar, S.T. Somashekar, Lingaraj P...
14-03-25 03:39 pm
13-03-25 03:49 pm
HK News Desk
Shiradi Ghat, Mangalore Bengalore, Mp Brijesh...
13-03-25 01:30 pm
ಪಾಕಿಸ್ತಾನದಲ್ಲಿ 500ಕ್ಕು ಹೆಚ್ಚು ಪ್ರಯಾಣಿಕರಿದ್ದ ರ...
12-03-25 11:41 am
ಅಮೆರಿಕದಲ್ಲಿ 20 ವರ್ಷದ ಭಾರತೀಯ ಮೂಲದ ಮೆಡಿಕಲ್ ವಿದ್...
10-03-25 10:17 pm
ಎಸ್ಸೆಸ್ಸೆಲ್ಸಿ ವಿದ್ಯಾರ್ಥಿನಿ ಜೊತೆಗೆ ಆಟೋ ಚಾಲಕನ ಸ...
10-03-25 11:45 am
15-03-25 04:11 pm
Mangalore Correspondent
Dr Vamana Nandavar, Mangalore Death: ತುಳು, ಕನ...
15-03-25 01:47 pm
Mangalore Student Missing, ,Kidnap, Hitein Bh...
15-03-25 12:35 pm
Mangalore, VHP, NIA, Illegal Arms: ಕರಾವಳಿಯಲ್ಲ...
14-03-25 10:35 pm
Mohan Gowda, Mangalore: ಬಿ.ಸಿ.ರೋಡಿನಲ್ಲಿ ಮಾ.16...
14-03-25 09:39 pm
14-03-25 05:02 pm
HK News Desk
Ccb Police, Firearms, Mangalore crime: ವಾಮಂಜೂ...
13-03-25 06:44 pm
Kothanur Police, Bangalore crime, Murder: ನಾಲ...
11-03-25 07:34 pm
Tanishq showroom, Bihar Robbery: ಬಿಹಾರದಲ್ಲಿ ಹ...
10-03-25 10:48 pm
Actress Ranya Rao, CBI, Gold case; ನಟಿ ರನ್ಯಾ...
09-03-25 05:06 pm