ಬ್ರೇಕಿಂಗ್ ನ್ಯೂಸ್
20-04-21 08:12 pm Source: Gizbot Bureau ಡಿಜಿಟಲ್ ಟೆಕ್
ರಿಲಯನ್ಸ್ ಜಿಯೋ ಭಾರತೀಯ ಟೆಲಿಕಾಂ ವಲಯದಲ್ಲಿ ಮುಂಚೂಣಿಯಲ್ಲಿ ಕಾಣಿಸಿಕೊಂಡಿದೆ. ಸಂಸ್ಥೆಯು ಆಕರ್ಷಕ ಯೋಜನೆಗಳ ಮೂಲಕ ಕಡಿಮೆ ಸಮಯದಲ್ಲಿಯೇ ದೊಡ್ಡ ಸಂಖ್ಯೆಯ ಚಂದಾದಾರರನ್ನು ಹೊಂದಿದೆ. ಜಿಯೋ ಟೆಲಿಕಾಂ ಪ್ರೀಪೇಯ್ಡ್ ಜೊತೆಗೆ ಪೋಸ್ಟ್ಪೇಯ್ಡ್ ಯೋಜನೆಗಳ ಆಯ್ಕೆಯನ್ನು ಹೊಂದಿದ್ದು, ಅವುಗಳ ಆಕರ್ಷಕ ಡೇಟಾ ಹಾಗೂ ವ್ಯಾಲಿಡಿಟಿ ಪ್ರಯೋಜನವನ್ನು ಪಡೆದಿವೆ. ಕೆಲವು ಬಳಕೆದಾರರು ಪ್ರೀಪೇಯ್ಡ್ನಿಂದ ಪೋಸ್ಟ್ಪೇಯ್ಡ್ಗೆ ಬದಲಾಗಬಯಸುತ್ತಾರೆ.
ಹೌದು, ಜಿಯೋ ಟೆಲಿಕಾಂ ಪ್ರೀಪೇಯ್ಡ್ನಂತೆ ಆಕರ್ಷಕ ಪೋಸ್ಟ್ಪೇಯ್ಡ್ ಯೋಜನೆಗಳನ್ನು ತನ್ನ ಗ್ರಾಹಕರಿಗೆ ನೀಡಿದ್ದು, ಅವುಗಳು ದೈನಂದಿನ ಡೇಟಾ, ಅನಿಯಮಿತ ವಾಯಿಸ್ ಕರೆ ಹಾಗೂ ಇತರೆ ಆಪ್ಸ್ ಸೇವೆ ಸೌಲಭ್ಯ ಪಡೆದಿವೆ. ಹಾಗೆಯೇ ಕಂಪನಿಯ ಪೋಸ್ಟ್ಪೇಯ್ಡ್ ಯೋಜನೆಗಳು ಭಿನ್ನ ಪ್ರೈಸ್ ಟ್ಯಾಗ್ನ ಆಯ್ಕೆಗಳನ್ನು ಹೊಂದಿದೆ. ಅವುಗಳಲ್ಲಿ ಕೆಲವು ಯೋಜನೆಗಳು ಡೇಟಾ ರೋಲ್ಓವರ್ ಸೌಲಭ್ಯವನ್ನು ಹೊಂದಿವೆ. ಇನ್ನು ಕೆಲವು ಯೋಜನೆಗಳು ಡಿಸ್ನಿ + ಹಾಟ್ಸ್ಟಾರ್ ವಿಐಪಿ, ನೆಟ್ಫ್ಲಿಕ್ಸ್, ಅಮೆಜಾನ್ ಪ್ರೈಮ್ನ ಪೂರಕ ಚಂದಾದಾರಿಕೆ ಸೌಲಭ್ಯ ಸಹ ಪಡೆದಿವೆ. ಹಾಗಾದರೇ ಪ್ರೀಪೇಯ್ಡ್ ಜೊತೆಗೆ ಪೋಸ್ಟ್ಪೇಯ್ಡ್ ಬದಲಾಗುವುದು ಹೇಗೆ ಎಂಬುದನ್ನು ಮುಂದೆ ತಿಳಿಯೋಣ ಬನ್ನಿರಿ.
ಜಿಯೋ ಪ್ರಿಪೇಯ್ಡ್ನಿಂದ ಪೋಸ್ಟ್ಪೇಯ್ಡ್ಗೆ ಬದಲಾಯಿಸುವುದು ಹೇಗೆ
ಪೋಸ್ಟ್ಪೇಯ್ಡ್ಗೆ ಬದಲಾಯಿಸುವ ಪ್ರಕ್ರಿಯೆಯನ್ನು ಪ್ರಾರಂಭಿಸುವ ಮೊದಲು, ರಿಲಯನ್ಸ್ ಜಿಯೋದಿಂದ ಲಭ್ಯವಿರುವ ಎಲ್ಲಾ ಯೋಜನೆಗಳ ಕುರಿತು ನಿಮ್ಮ ಪೋಸ್ಟ್ಪೇಯ್ಡ್ ಪೋರ್ಟ್ಫೋಲಿಯೊದಲ್ಲಿ ನಿಮ್ಮ ಸಂಶೋಧನೆ ಮಾಡುವುದು ಮುಖ್ಯ. ಜಿಯೋ ಪೋಸ್ಟ್ಪೇಯ್ಡ್ ಪ್ಲಸ್ ಯೋಜನೆಗಳು ತಿಂಗಳಿಗೆ 199ರೂ ನಿಂದ 1,499ರೂ. ಆಗಿವೆ. ಪ್ರಿಪೇಯ್ಡ್ ಬಳಕೆದಾರರು ಮೊದಲೇ ರೀಚಾರ್ಜ್ ಮಾಡಬೇಕಾದರೆ, ಪೋಸ್ಟ್ಪೇಯ್ಡ್ ಬಳಕೆದಾರರು ಪ್ರತಿ ತಿಂಗಳ ಅಂತ್ಯದ ನಂತರ ಬಿಲ್ ಪಡೆಯುತ್ತಾರೆ. ಜಿಯೋ ಪೋಸ್ಟ್ಪೇಯ್ಡ್ ಪ್ಲಸ್ಗೆ ಬದಲಾಯಿಸಲು ಕೆಳಗಿನ ಹಂತಗಳನ್ನು ಅನುಸರಿಸಿ.

ಜಿಯೋ ಪ್ರಿಪೇಯ್ಡ್ನಿಂದ ಪೋಸ್ಟ್ಪೇಯ್ಡ್ಗೆ ಬದಲಾಯಿಸಲು ಈ ಕ್ರಮ ಅನುಸರಿಸಿ:
* ಜಿಯೋ ಪೋಸ್ಟ್ಪೇಯ್ಡ್ ಪ್ಲಸ್ ವೆಬ್ಸೈಟ್ಗೆ ಹೋಗಿ. ನಿಮ್ಮ ಹೆಸರು ಮತ್ತು ನೋಂದಾಯಿತ ಜಿಯೋ ಪ್ರಿಪೇಯ್ಡ್ ಸಂಖ್ಯೆಯನ್ನು ನಮೂದಿಸಿ.
* ಜನರೇಟ್ ಒಟಿಪಿ ಕ್ಲಿಕ್ ಮಾಡಿ. ನಿಮ್ಮ ಫೋನ್ನಲ್ಲಿ ನಿಮಗೆ ಕಳುಹಿಸಲಾದ ಒಟಿಪಿ ನಮೂದಿಸಿ.
* ನಿಮ್ಮ ಹೊಸ ಜಿಯೋ ಪೋಸ್ಟ್ಪೇಯ್ಡ್ ಪ್ಲಸ್ ಸಿಮ್ ವಿತರಣಾ ವಿಳಾಸವನ್ನು ನಮೂದಿಸಿ. Submit New Jio SIM Request ಕ್ಲಿಕ್ ಮಾಡಿ.

* ಜಿಯೋ ಕಸ್ಟಮರ್ ಕೇರ್ ಎಕ್ಸಿಕ್ಯೂಟಿವ್ 3-4 ದಿನಗಳಲ್ಲಿ ವಿತರಿಸುತ್ತಾನೆ. ಪ್ರೂಫ್ ಆಫ್ ಐಡೆಂಟಿಟಿ (POI) ಮತ್ತು ಪ್ರೂಫ್ ಆಫ್ ಅಡ್ರೆಸ್ (POA) ನಂತಹ ದಾಖಲೆಗಳನ್ನು ಪರಿಶೀಲಿಸುವ ಮೂಲಕ ಅವರು ಮನೆಯಲ್ಲಿಯೇ ಕೆವೈಸಿಯಲ್ಲಿ ನಡೆಸಲಿದ್ದಾರೆ. ಸ್ವೀಕಾರಾರ್ಹ ದಾಖಲೆಗಳಲ್ಲಿ ಆಧಾರ್ ಕಾರ್ಡ್, ಮತದಾರರ ಗುರುತಿನ ಚೀಟಿ, ಪಾಸ್ಪೋರ್ಟ್ ಮತ್ತು ಚಾಲನಾ ಪರವಾನಗಿ ಸೇರಿವೆ.
* ಜಿಯೋ ಎಕ್ಸಿಕ್ಯೂಟಿವ್ ನಿಮ್ಮ ಹೊಸ ಜಿಯೋ ಪೋಸ್ಟ್ಪೇಯ್ಡ್ ಪ್ಲಸ್ ಸಿಮ್ ಅನ್ನು ತಲುಪಿಸುತ್ತಾನೆ. ಅದನ್ನು ಸುಮಾರು 24 ಗಂಟೆಗಳಲ್ಲಿ ಸಕ್ರಿಯಗೊಳಿಸಬೇಕು. ಜಿಯೋ ಭದ್ರತಾ ಠೇವಣಿ 250ರೂ. ಮತ್ತು ಜಿಯೋಪ್ರೈಮ್ಗೆ 99ರೂ. ಆಗಿದೆ.
* ಬಳಕೆದಾರರು ಪರ್ಯಾಯವಾಗಿ ಹತ್ತಿರದ ಜಿಯೋ ಅಂಗಡಿಗೆ ಭೇಟಿ ನೀಡಬಹುದು, migration ಫಾರ್ಮ್ ಅನ್ನು ಭರ್ತಿ ಮಾಡಬಹುದು ಮತ್ತು ಹೊಸ ಪೋಸ್ಟ್ಪೇಯ್ಡ್ ಸಿಮ್ ಪಡೆಯಲು ಕೆವೈಸಿ ದಾಖಲೆಗಳನ್ನು ಸಲ್ಲಿಸಬಹುದು.
This News ARticle Is A Copy Of GIZBOT BUREAU
27-10-25 10:52 pm
Bangalore Correspondent
ಕಾಂಗ್ರೆಸಿನಲ್ಲಿ ಮತ್ತೊಬ್ಬ ಏಕನಾಥ್ ಶಿಂಧೆ, ಪವಾರ್ ಹ...
27-10-25 10:42 pm
ಡಿಕೆಶಿ ದಿಢೀರ್ ದೆಹಲಿಗೆ ದೌಡು ; ವಿಶೇಷ ಏನೂ ಇಲ್ಲ,...
26-10-25 07:33 pm
ಪ್ರೀತಿ ನೆಪದಲ್ಲಿ ಹಿಂದು ಯುವತಿಗೆ ಮೋಸ ; ಮದುವೆಯಾಗಲ...
25-10-25 09:33 pm
ಸಾರ್ವಜನಿಕರೊಂದಿಗೆ ಮಾತನಾಡುವಾಗ ಒರಟು ಭಾಷೆ ಬೇಡ, ಯಾ...
25-10-25 09:04 pm
26-10-25 11:01 pm
HK News Desk
ಅಂಗೈಯಲ್ಲಿ ಡೆತ್ ನೋಟ್ ಬರೆದಿಟ್ಟು ಸರ್ಕಾರಿ ವೈದ್ಯೆ...
26-10-25 05:38 pm
ಮುಂದಿನ ವಾರದಿಂದಲೇ ತಮಿಳುನಾಡಿನಲ್ಲಿ ಮತದಾರ ಪಟ್ಟಿಯ...
25-10-25 09:36 pm
Vemuri Kaveri Travels Bus Accident, Fire, Ill...
25-10-25 02:28 pm
Kurnool Bus Fire, Accident, Latest News: ಹೈದರ...
24-10-25 05:43 pm
27-10-25 11:01 pm
Mangalore Correspondent
ತಾಯಿ- ಮಗಳು ತೆರಳುತ್ತಿದ್ದ ಸ್ಕೂಟರಿಗೆ ಕಾರು ಡಿಕ್ಕಿ...
27-10-25 10:25 pm
ಆಟವಾಡುತ್ತಲೇ ತೆರೆದ ಬಾವಿಗೆ ಬಿದ್ದ ಎರಡು ವರ್ಷದ ಹೆಣ...
27-10-25 10:03 pm
RSS Leader Kalladka Prabhakar Bhat: ಕಲ್ಲಡ್ಕ ಪ...
27-10-25 07:24 pm
ಹೈಕಮಾಂಡ್ ತೀರ್ಮಾನ ಮಾಡಿದ್ರೆ ಐದು ವರ್ಷ ಸಿಎಂ ಆಗಿರು...
27-10-25 05:56 pm
27-10-25 05:29 pm
HK News Desk
ದುಬೈನಲ್ಲಿ ಕುಳಿತು ಬೆಂಗಳೂರಿನ ಫೈನಾನ್ಸ್ ಕಂಪನಿಗೆ ಕ...
27-10-25 04:04 pm
ಶಬರಿಮಲೆಯಲ್ಲಿ ಕದ್ದ ಚಿನ್ನ ಬಳ್ಳಾರಿ ಜುವೆಲ್ಲರಿಗೆ ಮ...
25-10-25 10:00 pm
SP Arun, Puttur: ಗೋಸಾಗಾಟ ತಡೆದ ಪ್ರಕರಣ ; ಯಾವುದೇ...
25-10-25 02:14 pm
Surathkal Murder Attempt, Arrest, Crime; ಸುರತ...
24-10-25 08:20 pm