ಬ್ರೇಕಿಂಗ್ ನ್ಯೂಸ್
20-04-21 01:15 pm Source: GIZBOT Manthesh ಡಿಜಿಟಲ್ ಟೆಕ್
ಜನಪ್ರಿಯ ವಿವೋ ಮೊಬೈಲ್ ಕಂಪೆನಿಯು ಅಗ್ಗದ ಬೆಲೆಯಿಂದ ಹೈ ಎಂಡ್ ದರದ ವರೆಗೂ ಹಲವು ಸ್ಮಾರ್ಟ್ಫೋನ್ ಮಾಡೆಲ್ಗಳನ್ನು ಲಾಂಚ್ ಮಾಡಿ ಗ್ರಾಹಕರನ್ನು ಸೆಳೆದಿದೆ. ಆ ಪೈಕಿ ಇತ್ತೀಚಿಗಷ್ಟೆ ಕಂಪನಿಯು ವಿವೋ V20 ಸ್ಮಾರ್ಟ್ಫೋನ್ ಸರಣಿಯನ್ನು ಬಿಡುಗಡೆ ಮಾಡಿದ್ದು, ಈ ಸರಣಿಯು ವಿವೊ V20, ವಿವೋ V20 SE ಮತ್ತು ವಿವೋ V20 ಪ್ರೊ ಸ್ಮಾರ್ಟ್ಫೋನ್ ಮಾಡೆಲ್ಗಳನ್ನು ಒಳಗೊಂಡಿತ್ತು. ಅದರ ಬೆನ್ನಲ್ಲೇ ಈಗ ಕಂಪನಿಯು ವಿವೋ V21 5G ಸ್ಮಾರ್ಟ್ಫೋನ್ ಅನ್ನು ದೇಶಿಯ ಮಾರುಕಟ್ಟೆಗೆ ಅನಾವರಣ ಮಾಡಲು ಸಜ್ಜಾಗಿದೆ.
ಹೌದು, ವಿವೋ ಸಂಸ್ಥೆಯು ತನ್ನ ನೂತನ ವಿವೋ V21 5G ಸ್ಮಾರ್ಟ್ಫೋನ್ ಅನ್ನು ಭಾರತದಲ್ಲಿ ಬಿಡುಗಡೆ ಮಾಡಲು ತಯಾರಿ ನಡೆಸಿದೆ. ಈ ಸ್ಮಾರ್ಟ್ಫೋನ್ ಸ್ನ್ಯಾಪ್ಡ್ರಾಗನ್ 732 ಪ್ರೊಸೆಸರ್ ಸಾಮರ್ಥ್ಯವನ್ನು ಪಡೆದಿರಲಿದ್ದು, ಇದಕ್ಕೆ ಪೂರಕವಾಗಿ ಆಂಡ್ರಾಯ್ಡ್ 11 ಓಎಸ್ ಬೆಂಬಲ ಇರಲಿದೆ ಎನ್ನಲಾಗಿದೆ. ಹಾಗೆಯೇ ಈ ಫೋನ್ ಸೆಲ್ಫಿ ಕ್ಯಾಮೆರಾವು 44 ಮೆಗಾ ಪಿಕ್ಸಲ್ ಸೆನ್ಸಾರ್ನಲ್ಲಿ ಇರಲಿದೆ ಎಂದು ಲೀಕ್ ಮಾಹಿತಿಯಿಂದ ತಿಳಿದುಬಂದಿದೆ.
ವಿವೋ V21 5G ಡಿಸ್ಪ್ಲೇ
ವಿವೊ V21 5G ಸ್ಮಾರ್ಟ್ಫೋನ್ 6.44-ಇಂಚಿನ ಪೂರ್ಣ ಹೆಚ್ಡಿ + ಅಮೋಲೆಡ್ ಡಿಸ್ಪ್ಲೇಯನ್ನು ಹೊಂದಿರಲಿದೆ. ಡಿಸ್ಪ್ಲೇಯು 1,080x2,400 ಪಿಕ್ಸೆಲ್ ರೆಸಲ್ಯೂಶನ್ ಹೊಂದಿರಲಿದೆ. ಹಾಗೆಯೇ ಡಿಸ್ಪ್ಲೇಯ ಅನುಪಾತ 20:9 ಆಗಿರಲಿದೆ.
ವಿವೋ V21 5G ಪ್ರೊಸೆಸರ್
ವಿವೊ V21 5G ಸ್ಮಾರ್ಟ್ಫೋನ್ ಆಕ್ಟಾ-ಕೋರ್ ಕ್ವಾಲ್ಕಾಮ್ ಸ್ನ್ಯಾಪ್ಡ್ರಾಗನ್ 732 ನಿಂದ ನಿಯಂತ್ರಿಸಲ್ಪಡಲಿದ್ದು, ಇದಕ್ಕೆ ಬೆಂಬಲವಾಗಿ ಆಂಡ್ರಾಯ್ಡ್ 11 ಓಎಸ್ ಇರಲಿದೆ ಎನ್ನಲಾಗಿದೆ. ಇನ್ನು ಈ ಫೋನ್ 8GB RAM ಮತ್ತು 128GB ಸ್ಟೋರೇಜ್ ಆಯ್ಕೆ ಪಡೆದಿರಲಿದೆ. ಎಸ್ಡಿ ಕಾರ್ಡ್ ಮೂಲಕ ಮೆಮೊರಿ ಹೆಚ್ಚಿಸುವ ಅವಕಾಶ ಇರಲಿದೆ.
ವಿವೋ V21 5G ಕ್ಯಾಮೆರಾ
ವಿವೋ V21 5G ಫೋನ್ ಕ್ವಾಡ್ ರಿಯರ್ ಕ್ಯಾಮೆರಾ ಸೆಟಅಪ್ ಅನ್ನು ಒಳಗೊಂಡಿರಲಿದೆ ಎಂದು ಹೇಳಲಾಗಿದೆ. ಮುಖ್ಯ ಕ್ಯಾಮೆರಾವು 64 ಮೆಗಾ ಪಿಕ್ಸೆಲ್ ಸೆನ್ಸಾರ್ನಲ್ಲಿ ಇರಲಿದ್ದು, ಸೆಕೆಂಡರಿ ಕ್ಯಾಮೆರಾವು 8ಎಂಪಿ ಸೆನ್ಸಾರ್ನಲ್ಲಿ ಇರಲಿದೆ. ಮತ್ತು ತೃತೀಯ ಹಾಗೂ ನಾಲ್ಕನೇ ಕ್ಯಾಮೆರಾಗಳು ಕ್ರಮವಾಗಿ 2ಎಂಪಿ ಸೆನ್ಸಾರ್ನಲ್ಲಿರಲಿವೆ. ಇನ್ನು ಸೆಲ್ಫಿ ಕ್ಯಾಮೆರಾವು 44ಎಂಪಿ ಸೆನ್ಸಾರ್ ಸಾಮರ್ಥ್ಯದಲ್ಲಿ ಇರಲಿದೆ.
ವಿವೋ V21 5G ಬ್ಯಾಟರಿ
ವಿವೋ V21 5G ಸ್ಮಾರ್ಟ್ಫೋನ್ 4,500mAh ಬ್ಯಾಟರಿ ಬ್ಯಾಕ್ಅಪ್ ಅನ್ನು ಒಳಗೊಂಡಿರುವ ಸಾಧ್ಯತೆಗಳಿ ಇವೆ ಎನ್ನಲಾಗಿದೆ. ಇದರೊಂದಿಗೆ 33W ಸಾಮರ್ಥ್ಯದ ಫ್ಲ್ಯಾಶ್ಚಾರ್ಜ್ ಫಾಸ್ಟ್ ಚಾರ್ಜಿಂಗ್ ಅನ್ನು ಒದಗಿಸಬಹುದು. ಇನ್ನುಳಿದಂತೆ ಜಿಪಿಎಸ್, ವೈಫೈ ಹಾಗೂ ಇತರೆ ಸೌಲಭ್ಯಗಳು ಇರಲಿವೆ.
This News Article Is A Copy Of GIZBOT BUREAU
15-03-25 03:55 pm
HK News Desk
Elephant attack, Belur, Hassan: ಕಾಡಾನೆ ದಾಳಿ ;...
15-03-25 12:33 pm
DySP Kanakalakshmi arrested, suicide: ಬೋವಿ ನಿ...
14-03-25 11:11 pm
Swamiji, Bagalkot, Police Video: ದುಡ್ಡು ಪಡೆದು...
14-03-25 08:30 pm
Shivarama Hebbar, S.T. Somashekar, Lingaraj P...
14-03-25 03:39 pm
13-03-25 03:49 pm
HK News Desk
Shiradi Ghat, Mangalore Bengalore, Mp Brijesh...
13-03-25 01:30 pm
ಪಾಕಿಸ್ತಾನದಲ್ಲಿ 500ಕ್ಕು ಹೆಚ್ಚು ಪ್ರಯಾಣಿಕರಿದ್ದ ರ...
12-03-25 11:41 am
ಅಮೆರಿಕದಲ್ಲಿ 20 ವರ್ಷದ ಭಾರತೀಯ ಮೂಲದ ಮೆಡಿಕಲ್ ವಿದ್...
10-03-25 10:17 pm
ಎಸ್ಸೆಸ್ಸೆಲ್ಸಿ ವಿದ್ಯಾರ್ಥಿನಿ ಜೊತೆಗೆ ಆಟೋ ಚಾಲಕನ ಸ...
10-03-25 11:45 am
15-03-25 08:32 pm
Mangalore Correspondent
Mangalore Mary Hill, Boy Death; ಮೇರಿಹಿಲ್ ; ಏಳ...
15-03-25 04:11 pm
Dr Vamana Nandavar, Mangalore Death: ತುಳು, ಕನ...
15-03-25 01:47 pm
Mangalore Student Missing, ,Kidnap, Hitein Bh...
15-03-25 12:35 pm
Mangalore, VHP, NIA, Illegal Arms: ಕರಾವಳಿಯಲ್ಲ...
14-03-25 10:35 pm
14-03-25 05:02 pm
HK News Desk
Ccb Police, Firearms, Mangalore crime: ವಾಮಂಜೂ...
13-03-25 06:44 pm
Kothanur Police, Bangalore crime, Murder: ನಾಲ...
11-03-25 07:34 pm
Tanishq showroom, Bihar Robbery: ಬಿಹಾರದಲ್ಲಿ ಹ...
10-03-25 10:48 pm
Actress Ranya Rao, CBI, Gold case; ನಟಿ ರನ್ಯಾ...
09-03-25 05:06 pm