ಬ್ರೇಕಿಂಗ್ ನ್ಯೂಸ್
17-04-21 06:04 pm Source: Gizbot Bureau ಡಿಜಿಟಲ್ ಟೆಕ್
ವಾಟ್ಸಾಪ್ ಜನಪ್ರಿಯ ಇನ್ಸಟಂಟ್ ಮೆಸೇಜಿಂಗ್ ಅಪ್ಲಿಕೇಶನ್ ಆಗಿದೆ. ಈಗಾಗಲೇ ಹಲವು ಮಾದರಿಯ ಅನುಕೂಲಕರ ಫೀಚರ್ಸ್ ಪರಿಚಯಿಸಿದೆ. ಜೊತೆಗೆ ಕಾಲಕಾಲಕ್ಕೆ ಅನುಗುಣವಾಗಿ ಹೊಸ ಫೀಚರ್ಸ್ಗಳನ್ನು ಪರಿಚಯಿಸುತ್ತಲೇ ಬಂದಿದೆ. ಸದ್ಯ ಇದೀಗ ಐಒಎಸ್ ಬಳಕೆದಾರರಿಗಾಗಿ ವಾಟ್ಸಾಪ್ ಎರಡು ಪ್ರಮುಖ ಫೀಚರ್ಸ್ಗಳನ್ನು ಪರಿಚಯಿಸಿದೆ. ಈ ಫೀಚರ್ಸ್ಗಳ ಮೂಲಕ ಬಳಕೆದಾರರು ಈಗ ದೊಡ್ಡ ಚಿತ್ರ ಮತ್ತು ವೀಡಿಯೊ ಪ್ರೀವ್ಯೂ ಅನ್ನು ನೋಡಲು ಸಾಧ್ಯವಾಗುತ್ತದೆ.
ಹೌದು, ವಾಟ್ಸಾಪ್ ಐಒಎಸ್ ಮಾದರಿಯಲ್ಲಿ ಎರಡು ಮೇಜರ್ ಫೀಚರ್ಸ್ಗಳನ್ನು ಲಾಂಚ್ ಮಾಡಿದೆ. ಈ ಹೊಸ ಅಪ್ಡೇಟ್ ಮೂಲಕ ಡಿಸ್ಅಪಿಯರಿಂಗ್ ಮೆಸೇಜ್ ಫೀಚರ್ಸ್ ಅನ್ನು ಸಹ ಸುಧಾರಿಸಿದೆ. ಈ ಫೀಚರ್ಸ್ಗಳನ್ನು ನೀವು ವಾಟ್ಸಾಪ್ನ ಇತ್ತೀಚಿನ 2.21.71 ಸ್ಥಿರ ಐಒಎಸ್ ಆವೃತ್ತಿಯಲ್ಲಿ ಕಾಣಬಹುದು. ಹೊಸ ಅಪ್ಡೇಟ್ ಈಗಾಗಲೇ ಆಪಲ್ನ ಆಪ್ ಸ್ಟೋರ್ನಲ್ಲಿ ಲಭ್ಯವಿದೆ. ಇನ್ನು ಈ ಹೊಸ ಫೀಚರ್ಸ್ ವಿಶೇಷತೆ ಏನು ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.
ವಾಟ್ಸಾಪ್ ಹೊಸ ಫೀಚರ್ಸ್ ಮೂಲಕ ಐಒಎಎಸ್ ನಲ್ಲಿ ನೀವು ಹಂಚಿಕೊಳ್ಳುವ ಫೋಟೋಗಳು ಅಥವಾ ವೀಡಿಯೊಗಳನ್ನು ವೀಕ್ಷಿಸುವುದನ್ನು ಸುಲಭಗೊಳಿಸಿದೆ. ಜೊತೆಗೆ ಈ ಫೋಟೋ ಅಥವಾ ವೀಡಿಯೊಗಳ ಮೇಲೆ ಕ್ಲಿಕ್ ಮಾಡದೆ ಫುಲ್ ಫೋಟೋ ಮತ್ತು ವೀಡಿಯೊವನ್ನು ಪರಿಶೀಲಿಸಲು ಸಾಧ್ಯವಾಗುತ್ತದೆ. ಒಮ್ಮೆ ನೀವು ಯಾವುದೆ ಫೋಟೋ ಅಥವಾ ವೀಡಿಯೊವನ್ನು ಹಂಚಿಕೊಂಡರೆ, ನೀವು ಪ್ರಸ್ತುತ ನೋಡುವ ಸಣ್ಣ ಚದರ ಪೂರ್ವವೀಕ್ಷಣೆಗಿಂತ ವಾಟ್ಸಾಪ್ ದೊಡ್ಡದಾಗಿರಲಿದೆ. ಈ ಫೀಚರ್ಸ್ ವಾಟ್ಸಾಪ್ನ ಆಂಡ್ರಾಯ್ಡ್ ಆವೃತ್ತಿಯಲ್ಲಿ ಇನ್ನೂ ಲಭ್ಯವಿಲ್ಲ. ಆದರೆ ಶೀಘ್ರದಲ್ಲೇ ಇದನ್ನು ಆಂಡ್ರಾಯ್ಡ್ ಬಳಕೆದಾರರಿಗೂ ಬಿಡುಗಡೆ ಮಾಡುವ ನಿರೀಕ್ಷೆಯಿದೆ.
ಇನ್ನು ಈ ಹೊಸ ಅಪ್ಡೇಟ್ ಮೂಲಕ ಗ್ರೂಪಿನಲ್ಲಿ ಭಾಗವಹಿಸುವ ಎಲ್ಲರೂ ಕೂಡ ಡಿಸ್ಅಪಿಯರಿಂಗ್ ಮೆಸೇಜ್ಗಳ ಸೆಟ್ಟಿಂಗ್ ಅನ್ನು ಬದಲಾಯಿಸಲು ಸಹ ಅನುಮತಿಸುತ್ತದೆ. ಈ ಹಿಂದೆ ಡಿಸ್ಅಪಿಯರಿಂಗ್ ಮೆಸೇಜ್ಗಳನ್ನು ನಿಯಂತ್ರಿಸಲು ಗ್ರೂಪ್ ಅಡ್ಮಿನ್ಗೆ ಮಾತ್ರ ಅವಕಾಶ ನೀಡಲಾಗಿತ್ತು. ಆದಾಗ್ಯೂ, ಕಣ್ಮರೆಯಾಗುತ್ತಿರುವ ಸಂದೇಶಗಳನ್ನು ಆನ್ ಅಥವಾ ಆಫ್ ಮಾಡಲು ನಿರ್ವಾಹಕರಿಗೆ ಮಾತ್ರ ಅನುಮತಿಸಲು ಗ್ರೂಪ್ ಅಡ್ಮಿನ್ ಇನ್ನೂ ಗ್ರೂಪ್ ಸೆಟ್ಟಿಂಗ್ಗಳನ್ನು ಬದಲಾಯಿಸಬಹುದು.

ಸದ್ಯ ಮೆಸೇಜಿಂಗ್ ಅಪ್ಲಿಕೇಶನ್ನ ಆಂಡ್ರಾಯ್ಡ್ ಆವೃತ್ತಿಯಲ್ಲಿ ಹೊಸ ಡಿಸ್ಅಪಿಯರಿಂಗ್ ಮೆಸೇಜ್ ಫೀಚರ್ಸ್ ಈಗಾಗಲೇ ಲಭ್ಯವಿದೆ. ನಿಮಗೆ ತಿಳಿದಿರುವಂತೆ , ಡಿಸ್ಅಪಿಯರಿಂಗ್ ಮೆಸೇಜ್ಗಳ ಫೀಚರ್ಸ್ ಏಳು ದಿನಗಳ ನಂತರ ಒಬ್ಬ ವ್ಯಕ್ತಿ ಅಥವಾ ಗ್ರೂಪ್ ಚಾಟ್ನಲ್ಲಿ ಸಂದೇಶಗಳನ್ನು ಅಳಿಸುತ್ತದೆ. ಆದರೆ, ನೀವು ಮೊದಲು ಈ ಫೀಚರ್ಸ್ ಅನ್ನು ಬಳಸಲು ಮೊದಲು ಸಕ್ರಿಯಗೊಳಿಸಬೇಕಾಗುತ್ತದೆ. ಈ ಆಯ್ಕೆಯನ್ನು ಸಕ್ರಿಯಗೊಳಿಸುವುದರಿಂದ ನೀವು ಈ ಹಿಂದೆ ಯಾವುದೇ ಚಾಟ್ಗೆ ಕಳುಹಿಸಿದ ಸಂದೇಶಗಳ ಮೇಲೆ ಪರಿಣಾಮ ಬೀರುವುದಿಲ್ಲ ಎಂಬುದನ್ನು ಸಹ ಗಮನಿಸಬಹುದಾಗಿದೆ.
This News Article Is A Copy Of GIZBOT BUREAU
28-07-26 08:12 pm
HK News Staffer
ಶಿಕ್ಷಕರ ಕೊರತೆ ಇರುವ ಸರ್ಕಾರಿ ಶಾಲೆಗಳನ್ನು ಖಾಸಗಿ ಶ...
25-07-26 03:06 pm
ಧಾರವಾಡ ; ಮಗ ರೈಲು ಹಳಿಗೆ ಬಿದ್ದು ಆತ್ಮಹತ್ಯೆ, ಸಾವಿ...
23-07-26 08:05 pm
Soujanya case: ಸೌಜನ್ಯ ಪ್ರಕರಣದಲ್ಲಿ ಸಿಬಿಐಗೆ ತರಾ...
22-07-26 06:00 pm
ಸಚಿವ ಸಂಪುಟಕ್ಕೆ ಖರ್ಗೆ, ಡಿಕೆ, ಸಿದ್ದರಾಮಯ್ಯ ಪ್ರತ್...
19-07-26 08:34 pm
28-07-26 11:56 am
HK News Staffer
NEET ಬಿರುಗಾಳಿಯ ಬಳಿಕ ಕೇಂದ್ರ ಸಚಿವ ಸಂಪುಟದಲ್ಲಿ ಮಹ...
26-07-26 01:32 pm
ವಿದ್ಯಾರ್ಥಿಗಳ ಪ್ರತಿಭಟನೆ ಕಿಚ್ಚು ; ರಾಷ್ಟ್ರೀಯ ಪರೀ...
25-07-26 07:34 pm
ಅಂತೂ ವಿದ್ಯಾರ್ಥಿಗಳ ಪ್ರತಿಭಟನೆಗೆ ಮಣಿದ ಕೇಂದ್ರ ಸರ್...
25-07-26 03:07 pm
NEET ಪ್ರತಿಭಟನೆ ಹಿಂಸಾಚಾರ ; 117 ಶಂಕಿತರ ಫೋಟೋ ಬಿಡ...
24-07-26 03:25 pm
28-07-26 10:28 pm
HK News Desk
ಶಾಸಕ ಅಶೋಕ ರೈ ಹೆಸರೇಳಿ ಮಹಿಳೆಗೆ ಕರೆ ಮಾಡಿ ವಂಚನೆ ;...
28-07-26 10:23 pm
ಜಾಲತಾಣದಲ್ಲಿ ಜೆನ್ ಜೀಗಳ ಅಬ್ಬರ ; ಕಾಕ್ರೋಚ್ ಬೆನ್ನಲ...
27-07-26 09:48 pm
ಕ್ಯಾನ್ಸರ್ ವಿರುದ್ಧ ಹೋರಾಟದ ನಡುವೆಯೇ ಸೇವಾ ಕೈಂಕರ್ಯ...
27-07-26 08:24 pm
ಚಿನ್ನದ ರಿಂಗ್, ಡಾಲರ್ ಸಹಿತ ಬೆಲೆಬಾಳುವ ವಸ್ತುಗಳಿದ್...
26-07-26 09:57 pm
28-07-26 08:11 pm
HK News Staffer
Lavanya Murder Case, News: ಲಾವಣ್ಯ ಹತ್ಯೆ ಪ್ರಕರ...
28-07-26 07:07 pm
ವಿಚ್ಛೇದಿತ ಮಹಿಳೆಗೆ ಫೇಸ್ಬುಕ್ನಲ್ಲಿ ಪ್ರೀತಿಯ ನಾಟ...
28-07-26 12:28 pm
12 ವರ್ಷಗಳ ಹಿಂದಿನ ಗಂಗಾಧರ ಪಾಂಗಾಳ ಕೊಲೆ ಪ್ರಕರಣ ;...
27-07-26 11:07 pm
ಕಾಪುವಿನಲ್ಲಿ ಎಕ್ಸ್ಪ್ರೆಸ್ ಬಸ್ಗಳ ದರ್ಪ! ಟೈಮಿಂಗ್...
27-07-26 10:21 pm