ಬ್ರೇಕಿಂಗ್ ನ್ಯೂಸ್
02-12-22 06:38 pm Source: Vijayakarnataka ಡಿಜಿಟಲ್ ಟೆಕ್
ವಿಶ್ವ ಮೊಬೈಲ್ ಮಾರುಕಟ್ಟೆಯ ಬಹುನಿರೀಕ್ಷೆಯಿಂದ ಎದುರುನೋಡುತ್ತಿರುವ iQoo 11 ಸರಣಿಯಲ್ಲಿ ಮುಂಬರುವ iQoo 11 Pro ಸ್ಮಾರ್ಟ್ಫೋನ್ 200W ಚಾರ್ಜಿಂಗ್ ಬೆಂಬಲಿಸುವ 4,700mAh ಬ್ಯಾಟರಿ ಹೊಂದಿರಲಿದೆ ಎಂಬುದನ್ನು iQoo ಕಂಪೆನಿ ಖಚಿತಪಡಿಸಿದೆ. ಇದೇ ಡಿಸೆಂಬರ್ 2 ರಂದು, ಅಂದರೆ ಇಂದು iQoo 11 ಸರಣಿ ಸ್ಮಾರ್ಟ್ಫೋನ್ಗಳನ್ನು ಬಿಡುಗಡೆ ಮಾಡುವುದಾಗಿ iQoo ಕಂಪೆನಿ ಪ್ರಕಟಿಸಿತ್ತು. ಆದರೆ, ಕಾರಣಾಂತರದಿಂದ iQoo 11 ಸರಣಿ ಸ್ಮಾರ್ಟ್ಫೋನ್ಗಳ ಬಿಡುಗಡೆ ದಿನಾಂಕವನ್ನು ಮುಂದಿನ ಶುಕ್ರವಾರಕ್ಕೆ ಮುಂದೂಡಲಾಗಿದೆ. ಹಾಗೂ iQoo 11 ಸರಣಿಯಲ್ಲಿನ ಪ್ರೀಮಿಯಂ iQoo 11 Pro ಸ್ಮಾರ್ಟ್ಫೋನ್ 200W ಚಾರ್ಜಿಂಗ್ ಬೆಂಬಲಿಸುವ 4,700mAh ಬ್ಯಾಟರಿ ಹೊಂದಿರಲಿದೆ ಎಂಬುದನ್ನು iQoo ಕಂಪೆನಿ ಖಚಿತಪಡಿಸಿದೆ.
ಬಿಡುಗಡೆಗೂ ಮುನ್ನವೇ ಭಾರೀ ಕುತೂಹಲ ಮೂಡಿಸಿರುವ iQoo 11 ಸರಣಿ ಸ್ಮಾರ್ಟ್ಫೋನ್ಗಳು Snapdragon 8 Gen 2 ಪ್ರೊಸೆಸರ್ ಮತ್ತು 144Hz ವರೆಗಿನ ರಿಫ್ರೆಶ್ ರೇಟ್ ಸಾಮರ್ಥ್ಯದ E6 AMOLED ಡಿಸ್ಪ್ಲೇ ಹೊಂದಿರುವುದು ಈಗಾಗಲೇ ಖಚಿತವಾಗಿದೆ. ಈ E6 AMOLED ಡಿಸ್ಪ್ಲೇಯು 1440Hz ಹೈ-ಫ್ರೀಕ್ವೆನ್ಸಿ PWM ಡಿಮ್ಮಿಂಗ್ ಮತ್ತು LTPO ತಂತ್ರಜ್ಞಾನವನ್ನು ಬೆಂಬಲಿಸುತ್ತದೆ ಎಂದು ಕಂಪೆನಿ ತಿಳಿಸುವ ಮೂಲಕ, iQoo 11 ಸರಣಿಯು ಹೈ ಎಂಡ್ ಪ್ರೀಮಿಯಂ ವೈಶಿಷ್ಟ್ಯಗಳನ್ನು ಹೊಂದಿರುವುದನ್ನು ಕಂಪೆನಿ ದೃಢಪಡಿಸಿತ್ತು. ಇದೀಗ iQoo 11 Pro ಸ್ಮಾರ್ಟ್ಫೋನ್ 200W ಚಾರ್ಜಿಂಗ್ ಬೆಂಬಲಿಸುವ 4,700mAh ಬ್ಯಾಟರಿ ಹೊಂದಿರಲಿದೆ ಎಂಬುದನ್ನು ತಿಳಿದು ಸ್ಮಾರ್ಟ್ಫೋನ್ ಪ್ರಿಯರು ಸಂತಸಗೊಂಡಿದ್ದಾರೆ.
ಸ್ಮಾರ್ಟ್ಫೋನ್ ಪ್ರಿಯರು ಬಹುನಿರೀಕ್ಷೆಯಿಂದ ಎದುರುನೋಡುತ್ತಿರುವ iQoo 11 ಸರಣಿಯಲ್ಲಿ iQoo 11, iQoo 11 Pro ಮತ್ತು iQoo 11 ಲೆಜೆಂಡ್ ಮೂರು ಸ್ಮಾರ್ಟ್ಫೋನ್ಗಳು ಬಿಡುಗಡೆಯಾಗುತ್ತಿವೆ. iQoo 11 ಸರಣಿಯ ಸ್ಮಾರ್ಟ್ಫೋನ್ಗಳು ಟ್ರಿಪಲ್ ಹಿಂಬದಿಯ ಕ್ಯಾಮೆರಾ ಸೆಟಪ್ ಹೊಂದಿರುವ ಅಧಿಕೃತ ಚಿತ್ರಗಳು ಸಹ ಈಗಾಗಲೇ ಬಿಡುಗಡೆಯಾಗಿದೆ. iQoo ಕಂಪೆನಿ ವೈಬೊದಲ್ಲಿ iQoo 11 ಸರಣಿಯ ಮೊದಲ ಚಿತ್ರವನ್ನು ಹಂಚಿಕೊಂಡಿದೆ. ಇದರಲ್ಲಿ iQoo 11 ಸರಣಿ ಸ್ಮಾರ್ಟ್ಫೋನ್ಗಳು BMW ಮೋಟಾರ್ ಸ್ಪೋರ್ಟ್ ಮಾದರಿಯಲ್ಲಿ ಪ್ರೀಮಿಯಂ ಲುಕ್ನಲ್ಲಿ ಕಾಣಿಸಿಕೊಂಡಿವೆ. ಇಷ್ಟೇ ಸಲ್ಲದೇ, iQOO 11 ಸರಣಿ ಫೋನ್ಗಳು ಹೊಂದಿರಬಹುದಾದ ಮತ್ತಷ್ಟು ಫೀಚರ್ಸ್ ಕೂಡ ಆನ್ಲೈನಿನಲ್ಲಿ ಲೀಕ್ ಆಗಿವೆ.
ಇದೀಗ ವದಂತಿಯ ಮಾಹಿತಿಯಂತೆ, iQOO 11 ಸರಣಿ ಸ್ಮಾರ್ಟ್ಫೋನ್ಗಳು 12 GB RAM + 256 GB ಸಂಗ್ರಹಣೆ ಮತ್ತು 16 GB RAM + 256 GB ಸಂಗ್ರಹಣೆ ಹಾಗೂ 16GB RAM + 256 GB ಸಂಗ್ರಹಣೆ ಮಾದರಿಗಳಲ್ಲಿ ಮಾದರಿಗಳಲ್ಲಿ ಬಿಡುಗಡೆಯಾಗಲಿವೆ ಎಂದು ವರದಿಗಳು ತಿಳಿಸಿವೆ. 16GB RAM + 256 GB ಸಂಗ್ರಹಣೆ ಮಾದರಿಯು iQOO 11 ಪ್ರೊ ನಲ್ಲಿ ಮಾತ್ರ ಬರಬಹುದು ಎಂದು ಹೇಳಲಾಗಿದೆ. ಹಾಗೆಯೇ iQOO 11 ಸರಣಿಯಲ್ಲಿನ ಎರಡೂ ಸ್ಮಾರ್ಟ್ಫೋನ್ಗಳು 50-ಮೆಗಾಪಿಕ್ಸೆಲ್ (ಮುಖ್ಯ) + 13-ಮೆಗಾಪಿಕ್ಸೆಲ್ (ಅಲ್ಟ್ರಾ-ವೈಡ್) + 12-ಮೆಗಾಪಿಕ್ಸೆಲ್ (ಟೆಲಿಫೋಟೋ) ಟ್ರಿಪಲ್ ರಿಯರ್ ಕ್ಯಾಮೆರಾ ಸೆಟ್ಅಪ್ ಹಾಗೂ 16 ಮೆಗಾಪಿಕ್ಸೆಲ್ ಸೆನ್ಸಾರ್ ಸಾಮರ್ಥ್ಯದ ಸೆಲ್ಫಿ ಕ್ಯಾಮೆರಾ ಹೊಂದಿರಬಹುದು ಎಂದು ಹೇಳಲಾಗಿದೆ.
Iqoo 11 Pro Confirmed To Feature 4,700mah Battery With 200w Charging Support.
29-04-25 10:45 pm
Bangalore Correspondent
CM Siddaramaiah, Belagavi, BJP Suresh Kumar:...
29-04-25 09:51 pm
Protest Kalaburagi, islamabad Locality: ಕಲಬುರ...
29-04-25 09:20 pm
Kudupu Murder, Mob attack, Parameshwar: ಕುಡುಪ...
29-04-25 04:28 pm
Praveen Nettaru, Mohsin Shukur, Karwar Police...
29-04-25 01:04 pm
29-04-25 03:45 pm
HK News Desk
'ನನಗೆ ಪಾಕಿಸ್ತಾನದಲ್ಲಿ ಯಾರೂ ಇಲ್ಲ, ದಯವಿಟ್ಟು ಉಳಿಸ...
28-04-25 06:52 pm
ಪಾಕಿಸ್ತಾನದ ಶಾಂತಿ ಸಮಿತಿ ಕಚೇರಿ ಎದುರೇ ಬಾಂಬ್ ಸ್ಫೋ...
28-04-25 05:53 pm
ಪಾಕ್ ವಿರುದ್ಧ ಯುದ್ದಕ್ಕೆ ಕರೆ ನೀಡಿದ ಕಾಶ್ಮೀರ್ ಸಿಎ...
27-04-25 08:42 pm
Pak, Website Hacked, Indian Army : ಅಲ್ಲಾ ನಮ್ಮ...
27-04-25 07:38 pm
29-04-25 11:00 pm
Mangalore Correspondent
Mangalore, Ullal Nethravathi Bridge: ಉಳ್ಳಾಲ ನ...
29-04-25 05:45 pm
Mangalore, Dr Kalladka Bhat: ಹೆಣ್ಣು ಮಕ್ಕಳು ವ್...
29-04-25 12:40 pm
Vadiraj, Mangalore, B R Ambedkar: ಕಾಂಗ್ರೆಸ್ ಸ...
29-04-25 11:53 am
Highland Hospital Mangalore, FIR, Anti Nation...
29-04-25 11:38 am
29-04-25 09:59 pm
Mangalore Correspondent
Kudupu Murder, Mangalore Crime, Police: ಕುಡುಪ...
29-04-25 02:53 pm
Belthagady, Blackmail, Mangalore crime: ಬೆಳ್ತ...
28-04-25 11:39 am
Shootout Bakrebail, Mangalore Crime: ಬಾಕ್ರಬೈಲ...
28-04-25 11:24 am
Mangalore crime, Murder, Kudupu: ಕುಡುಪು ಬಳಿಯಲ...
27-04-25 10:59 pm