ಬ್ರೇಕಿಂಗ್ ನ್ಯೂಸ್
30-11-22 06:55 pm Source: Vijayakarnataka ಡಿಜಿಟಲ್ ಟೆಕ್
ಸ್ಟೈಲಿಶ್ ಲುಕ್ ಹಾಗೂ ಆಕರ್ಷಕ ಫೀಚರ್ಸ್ ಹೊತ್ತು ದೇಶದ ಸ್ಮಾರ್ಟ್ವಾಚ್ ಮಾರುಕಟ್ಟೆಗೆ ಇತ್ತೀಚಿಗಷ್ಟೇ ಬಿಡುಗಡೆಗೊಂಡಿರುವ ನೂತನ Dizo Watch R Talk Go ಸ್ಮಾರ್ಟ್ವಾಚ್ ಇಂದಿನಿಂದ ಮೊದಲ ಮಾರಾಟಕ್ಕೆ ಬಂದಿದೆ. ದೇಶದ ಜನಪ್ರಿಯ ಇ-ಕಾಮರ್ಸ್ ಜಾಲತಾಣ ಫ್ಲಿಪ್ಕಾರ್ಟ್ನಲ್ಲಿ ಇಂದಿನಿಂದ (ನವೆಂಬರ್ 30) Dizo Watch R Talk Go ಸ್ಮಾರ್ಟ್ವಾಚ್ ಸಾಧನವನ್ನು ಖರೀದಿಸಲು ಅವಕಾಶವಿದ್ದು, 3,999 ರೂ.ಗಳ ಅತ್ಯುತ್ತಮ ಬೆಲೆಯಲ್ಲಿ ಪರಿಚಯಿಸಲಾಗಿರುವ ಹೊಸ Dizo Watch R Talk Go ಸ್ಮಾರ್ಟ್ವಾಚ್ ಸಾಧನದ ಮೇಲೆ 'ಫ್ಲಿಪ್ಕಾರ್ಟ್ ಆಕ್ಸಿಸ್ ಬ್ಯಾಂಕ್' ಕ್ರೆಡಿಟ್ ಕಾರ್ಡ್ ಗ್ರಾಹಕರು ಶೇ.5% ಕ್ಯಾಶ್ಬ್ಯಾಕ್ ಪಡೆಯಬಹುದು ಎಂದು Dizo ಕಂಪೆನಿ ತಿಳಿಸಿದೆ. ಹಾಗಾದರೆ, ಈ ಹೊಸ Dizo Watch R Talk Go ಸ್ಮಾರ್ಟ್ವಾಚ್ ಹೇಗಿದೆ ನೋಡೋಣ ಬನ್ನಿ.
Dizo Watch R Talk Go ವಿಶೇಷತೆಗಳು ಮತ್ತು ವೈಶಿಷ್ಟ್ಯಗಳು
ಹೊಸ Dizo Watch R Talk Go ಸ್ಮಾರ್ಟ್ವಾಚ್ ಸ್ಯಾಮ್ಸಂಗ್ ಗ್ಯಾಲಕ್ಸಿ ವಾಚ್ನಂತೆ ವಿನ್ಯಾಸಗೊಳಿಸಲಾಗಿರುವ ಅಲ್ಯೂಮಿನಿಯಂ ರಿಮ್ನೊಂದಿಗೆ ರೌಂಡ್ ಡಯಲ್ ಸ್ಟೈಲಿಶ್ ಲುಕ್ನಲ್ಲಿ ಬಿಡುಗಡೆಯಾಗಿದೆ. ಹೋಮ್ ಬಟನ್ ಮತ್ತು ಸ್ಪೋರ್ಟ್ಸ್ ಮೋಡ್ ಎರಡು ಬಟನ್ಗಳನ್ನು ಹೊಂದಿರುವ ಈ ಸ್ಮಾರ್ಟ್ವಾಚ್ ಟಚ್ ಕಂಟ್ರೋಲ್ ವೈಶಿಷ್ಟ್ಯವನ್ನು ಹೊಂದಿದೆ. ಈ ಸ್ಮಾರ್ಟ್ವಾಚ್ನಲ್ಲಿ 1.39 ಇಂಚಿನ ಡಿಸ್ಪ್ಲೇ ಅಳವಡಿಸಲಾಗಿದ್ದು, ಇದು 360 × 360 ಪಿಕ್ಸೆಲ್ ಸ್ಕ್ರೀನ್ ರೆಸಲ್ಯೂಶನ್ ಹಾಗೂ 550 ನಿಟ್ಸ್ ಬ್ರೈಟ್ನೆಸ್ ಸಾಮರ್ಥ್ಯದಲ್ಲಿದೆ. ಹಾಗೂ ಡಿಸ್ಪ್ಲೇಯು 7H ಟೆಂಪರ್ಡ್ ಗ್ಲಾಸ್ ರಕ್ಷಣೆಯನ್ನು ಹೊಂದಿದೆ ಎಂದು ಕಂಪೆನಿ ತಿಳಿಸಿದೆ.
Dizo Watch R Talk Go ಸ್ಮಾರ್ಟ್ವಾಚ್ 150+ ಕ್ಕೂ ಹೆಚ್ಚು ವಾಚ್ ಫೇಸ್ಗಳಿಗೆ ಹಾಗೂ 110+ ಕ್ಕೂ ಹೆಚ್ಚು ಸ್ಪೋರ್ಟ್ಸ್ ಮೋಡ್ಗಳಿಗೆ ಬೆಂಬಲವನ್ನು ನೀಡಲಿದೆ. ಸ್ಥಿರ ಸಂಪರ್ಕ ಮತ್ತು ಕಡಿಮೆ ವಿದ್ಯುತ್ ಬಳಕೆಗಾಗಿ ಸಿಂಗಲ್-ಚಿಪ್ ಬ್ಲೂಟೂತ್ ಕಾಲ್ಗೆ ಬೆಂಬಲವನ್ನು ಹೊಂದಿರುವ ಈ Dizo Watch R Talk Go ಸ್ಮಾರ್ಟ್ವಾಚ್ನಲ್ಲಿ ಬ್ಲೂಟೂತ್ 5.2 ಸಂಪರ್ಕ, ನಾಯ್ಸ್ ಕ್ಯಾನ್ಸಲೇಶನ್, ಡ್ಯುಯಲ್ ಹೆಲ್ತ್ ಸೆನ್ಸರ್, SpO2 ಸೆನ್ಸಾರ್, ಹಾರ್ಟ್ ರೇಟ್ ಮಾನಿಟರಿಂಗ್ ಮತ್ತು GPS ಟ್ರ್ಯಾಂಕಿಂಗ್ ವೈಶಿಷ್ಟ್ಯಗಳಿವೆ. ಹಾಗೂ ಕರೆಗಳನ್ನು ಮ್ಯೂಟ್ ಮಾಡಲು ಮತ್ತು ತಿರಸ್ಕರಿಸಲು ಸಾಧ್ಯವಾಗುವ ವೈಶಿಷ್ಟ್ಯವಿದೆ ಎಂದು ಕಂಪೆನಿ ಹೇಳಿದೆ.
ಇಷ್ಟೇ ಅಲ್ಲದೇ, Dizo Watch R Talk Go ಸ್ಮಾರ್ಟ್ವಾಚ್ ಬಳಕೆದಾರರು ತಮ್ಮ ದೈಹಿಕ ಚಟುವಟಿಕೆಗಳನ್ನು ಟ್ರ್ಯಾಕ್ ಮಾಡಬಹುದು. ಇದು ಅವಧಿ ಟ್ರ್ಯಾಕಿಂಗ್ ಅನ್ನು ಕೂಡ ಹೊಂದಿದ್ದು, ನೀರು ಕುಡಿಯುವುದು ಮತ್ತು ಕುಳಿತುಕೊಳ್ಳುವ ರಿಮೈಂಡರ್ಗಳನ್ನು ಕೂಡ ನೀಡಲಿದೆ. ಜೊತೆಗೆ ಇದು ಉಸಿರಾಟದ ವ್ಯಾಯಾಮವನ್ನು ಸಹ ಬೆಂಬಲಿಸುತ್ತದೆ. ಅಲ್ಲದೆ ರೂಟ್ ಟ್ರ್ಯಾಕಿಂಗ್, ಅಲಾರಾಂ, ಮ್ಯೂಸಿಕ್/ಕ್ಯಾಮೆರಾ ಕಂಟ್ರೋಲ್, ಫೈಂಡ್ ಫೋನ್ , ವೆದರ್ ಅಪ್ಡೇಟ್ ಮತ್ತು GPS ನಂತಹ ಫೀಚರ್ಸ್ ಹೊಂದಿದೆ.ಕಂಪನಿಯ ಪ್ರಕಾರ, ಈ ಸ್ಮಾರ್ಟ್ವಾಚ್ ಸಾಧನವು ಸಾಮಾನ್ಯ ಬಳಕೆಯೊಂದಿಗೆ 10 ದಿನಗಳವರೆಗೆ ಕಾರ್ಯನಿರ್ವಹಿಸಲಿದೆ.
Dizo Watch R Talk Go With Bt Calling Goes On Sale Today In India.
15-03-25 09:18 pm
HK News Desk
Mangalore, Tamil actor Prabhu Deva, Kukke Sub...
15-03-25 03:55 pm
Elephant attack, Belur, Hassan: ಕಾಡಾನೆ ದಾಳಿ ;...
15-03-25 12:33 pm
DySP Kanakalakshmi arrested, suicide: ಬೋವಿ ನಿ...
14-03-25 11:11 pm
Swamiji, Bagalkot, Police Video: ದುಡ್ಡು ಪಡೆದು...
14-03-25 08:30 pm
13-03-25 03:49 pm
HK News Desk
Shiradi Ghat, Mangalore Bengalore, Mp Brijesh...
13-03-25 01:30 pm
ಪಾಕಿಸ್ತಾನದಲ್ಲಿ 500ಕ್ಕು ಹೆಚ್ಚು ಪ್ರಯಾಣಿಕರಿದ್ದ ರ...
12-03-25 11:41 am
ಅಮೆರಿಕದಲ್ಲಿ 20 ವರ್ಷದ ಭಾರತೀಯ ಮೂಲದ ಮೆಡಿಕಲ್ ವಿದ್...
10-03-25 10:17 pm
ಎಸ್ಸೆಸ್ಸೆಲ್ಸಿ ವಿದ್ಯಾರ್ಥಿನಿ ಜೊತೆಗೆ ಆಟೋ ಚಾಲಕನ ಸ...
10-03-25 11:45 am
15-03-25 10:00 pm
Mangalore Correspondent
Mangalore court, Moral Police, Acquit: ಹಿಂದು...
15-03-25 08:32 pm
Mangalore Mary Hill, Boy Death; ಮೇರಿಹಿಲ್ ; ಏಳ...
15-03-25 04:11 pm
Dr Vamana Nandavar, Mangalore Death: ತುಳು, ಕನ...
15-03-25 01:47 pm
Mangalore Student Missing, ,Kidnap, Hitein Bh...
15-03-25 12:35 pm
14-03-25 05:02 pm
HK News Desk
Ccb Police, Firearms, Mangalore crime: ವಾಮಂಜೂ...
13-03-25 06:44 pm
Kothanur Police, Bangalore crime, Murder: ನಾಲ...
11-03-25 07:34 pm
Tanishq showroom, Bihar Robbery: ಬಿಹಾರದಲ್ಲಿ ಹ...
10-03-25 10:48 pm
Actress Ranya Rao, CBI, Gold case; ನಟಿ ರನ್ಯಾ...
09-03-25 05:06 pm