ಬ್ರೇಕಿಂಗ್ ನ್ಯೂಸ್
26-11-22 06:42 pm Source: Vijayakarnataka ಡಿಜಿಟಲ್ ಟೆಕ್
ಭಾರತದ ಮೊಬೈಲ್ ಮಾರುಕಟ್ಟೆಗೆ ನೆನ್ನೆಯಷ್ಟೇ ಪರಿಚಯಗೊಂಡಿರುವ ನೂತನ Lava Blaze NXT ಸ್ಮಾರ್ಟ್ಫೋನ್ ಮಾರಾಟದ ದಿನಾಂಕ ಪ್ರಕಟವಾಗಿದೆ. ದೇಶದಲ್ಲಿ Lava Blaze NXT ಸ್ಮಾರ್ಟ್ಫೋನನ್ನು ಏಕೈಕ 4GB RAM + 64GB ಸ್ಟೋರೇಜ್ ಮಾದರಿಯ ಸ್ಮಾರ್ಟ್ಫೋನನ್ನು 9,299 ರೂ. ಬೆಲೆಯಲ್ಲಿ ಬಿಡುಗಡೆ ಮಾಡಲಾಗಿದ್ದು, ಜನಪ್ರಿಯ ಇ-ಕಾಮರ್ಸ್ ಜಾಲತಾಣ ಅಮೆಜಾನ್ನಲ್ಲಿ ಪಟ್ಟಿ ಮಾಡಲಾಗಿತ್ತು. ಆದರೆ. ಸ್ಮಾರ್ಟ್ಫೋನಿನ ಮಾರಾಟದ ದಿನಾಂಕ ಲಭ್ಯವಾಗಿರಲಿಲ್ಲ. ಇದೀಗ Lava Blaze NXT ಸ್ಮಾರ್ಟ್ಫೋನ್ ಡಿಸೆಂಬರ್ 2 ರಂದು Amazon.in ಮತ್ತು ʻLavaʼ ಕಂಪೆನಿಯ ಇ-ಸ್ಟೋರ್ನಲ್ಲಿ ಖರೀದಿಗೆ ಲಭ್ಯವಾಗಲಿದೆ ಎಂದು ಕಂಪೆನಿ ತಿಳಿಸಿದೆ.
ಭಾರತೀಯ ಸ್ಮಾರ್ಟ್ಫೋನ್ ಬ್ರ್ಯಾಂಡ್ Lava ದೇಶದಲ್ಲಿ ತನ್ನ ವಿನೂತನ Lava Blaze NXT ಸ್ಮಾರ್ಟ್ಫೋನನ್ನು ನೆನ್ನೆಯಷ್ಟೇ ಬಿಡುಗಡೆಗೊಳಿಸಿದೆ. ಈ ವರ್ಷದ ಆರಂಭದಲ್ಲಿ Lava ಪರಿಚಯಿಸಿದ್ದ Lava Blaze ಸ್ಮಾರ್ಟ್ಫೋನಿನ ನವೀಕರಿಸಿದ ಆವೃತ್ತಿಯ ಹೊಸ ಸ್ಮಾರ್ಟ್ಫೋನ್ ಇದಾಗಿದ್ದು, ಇದು ವಾಟರ್ಡ್ರಾಪ್-ಶೈಲಿಯ ನಾಚ್ ಇರುವ 6.5-ಇಂಚಿನ IPS ಡಿಸ್ಪ್ಲೇ, MediaTek Helio G37 SoC ಪ್ರೊಸೆಸರ್ ಹಾಗೂ ಟ್ರಿಪಲ್ ರಿಯರ್ ಕ್ಯಾಮೆರಾ ಸೆಟಪ್ ನಂತಹ ವೈಶಿಷ್ಟ್ಯಗಳನ್ನು ಹೊತ್ತು ಅತ್ಯಂತ ಕಡಿಮೆ ಬೆಲೆಯಲ್ಲಿ ದೇಶದಲ್ಲಿ ಮಾರಾಟಕ್ಕೆ ಬರುತ್ತಿದೆ. ಹಾಗಾದರೆ, Lava ಕಂಪೆನಿಯ ನೂತನ Lava Blaze NXT ಸ್ಮಾರ್ಟ್ಫೋನ್ ಹೇಗಿದೆ ಎಂಬುದನ್ನು ನೋಡೋಣ ಬನ್ನಿ.
Lava Blaze NXT ಸ್ಮಾರ್ಟ್ಫೋನಿನ ವೈಶಿಷ್ಟ್ಯಗಳು
ಮೊದಲೇ ಹೇಳಿದಂತೆ, ನೂತನ Lava Blaze NXT ಸ್ಮಾರ್ಟ್ಫೋನಿನಲ್ಲಿ ವಾಟರ್ಡ್ರಾಪ್-ಶೈಲಿಯ ನಾಚ್ ಇರುವ 6.5-ಇಂಚಿನ IPS ಡಿಸ್ಪ್ಲೇಯನ್ನು ನೀಡಲಾಗಿದೆ. ಆದರೆ, ಈ ಡಿಸ್ಪ್ಲೇ ಹೊಂದಿರುವ ವೈಶಿಷ್ಟ್ಯಗಳು ಯಾವುವು ಎಂಬ ಬಗ್ಗೆ ಮಾಹಿತಿ ನೀಡಿಲ್ಲ. ಹುಡ್ ಅಡಿಯಲ್ಲಿ, Lava Blaze NXT ಸ್ಮಾರ್ಟ್ಫೋನ್ 4GB RAM ಮತ್ತು 64GB ಆಂತರಿಕ ಮೆಮೊರಿಯೊಂದಿಗೆ ಜೋಡಿಸಲಾಗಿರುವ MediaTek Helio G37 SoC ಪ್ರೊಸೆಸರ್ ಹೊಂದಿದೆ. ಈ Lava Blaze NXT ಸ್ಮಾರ್ಟ್ಫೋನಿನಲ್ಲಿ ವರ್ಚುವಲ್ RAM ಆಯ್ಕೆ ಕೂಡ ಇದ್ದು, ಸ್ಮಾರ್ಟ್ಫೋನಿನ RAM 3GB ವರೆಗೂ ಸ್ವಯಂಚಾಲಿತವಾಗಿ ಹೆಚ್ಚಾಗುತ್ತದೆ ಎಂದು Lava ಕಂಪೆನಿ ತಿಳಿಸಿದೆ.
ಕ್ಯಾಮೆರಾ ವಿಬಾಗದಲ್ಲಿ, Lava Blaze NXT ಸ್ಮಾರ್ಟ್ಫೋನಿನಲ್ಲಿ 13-ಮೆಗಾಪಿಕ್ಸೆಲ್ ಸಾಮರ್ಥ್ಯವಿರುವ AI ಟ್ರಿಪಲ್ ರಿಯರ್ ಕ್ಯಾಮೆರಾ ಸೆಟಪ್ ನೀಡಲಾಗಿದೆ. ಸೆಲ್ಫಿಗಳಿಗಾಗಿ, ಮುಂಭಾಗದಲ್ಲಿ 8-ಮೆಗಾಪಿಕ್ಸೆಲ್ ಸೆಲ್ಫಿ ಕ್ಯಾಮೆರಾ ಇದೆ. ಬ್ಯಾಟರಿ ವಿಭಾಗದಲ್ಲಿ 5,000mAh ಬ್ಯಾಟರಿಯನ್ನು ಹೊಂದಿರುವ ಈ Lava Blaze NXT ಸ್ಮಾರ್ಟ್ಫೋನ್ ಇಡೀ ದಿನದ ಬ್ಯಾಟರಿ ಅವಧಿಯನ್ನು ಒದಗಿಸುತ್ತದೆ ಎಂದು ಕಂಪೆನಿ ಹೇಳಿಕೊಂಡಿದೆ. ಇನ್ನುಳಿದಂತೆ ಪ್ರೀಮಿಯಂ ಗ್ಲಾಸ್ ಬ್ಯಾಕ್ ವಿನ್ಯಾಸದ ಪ್ಯಾನೆಲ್ ಹಿಂಭಾಗದಲ್ಲಿ ಫಿಂಗರ್ಪ್ರಿಂಟ್ ಸೆನ್ಸಾರ್, ಯುಎಸ್ಬಿ ಟೈಪ್-ಸಿ ಪೋರ್ಟ್ ಮತ್ತು 3.5 ಎಂಎಂ ಹೆಡ್ಫೋನ್ ಜ್ಯಾಕ್ಗಳು ಇರುವುದನ್ನು ನಾವು ನೋಡಬಹುದು.
ಇನ್ನು Lava Blaze NXT ಸ್ಮಾರ್ಟ್ಫೋನಿನ ಮಾರಾಟ-ನಂತರದ ಉತ್ಕೃಷ್ಟ ಗ್ರಾಹಕರ ಅನುಭವಕ್ಕಾಗಿ, ಗ್ರಾಹಕರಿಗೆ 'ಮನೆಯಲ್ಲೇ ಉಚಿತ ಸೇವೆ'ಯನ್ನು ಸಹ ಒದಗಿಸಲಾಗುವುದು, ಇದರಲ್ಲಿ ಗ್ರಾಹಕರು ವಾರಂಟಿ ಅವಧಿಯಲ್ಲಿ ತಮ್ಮ ಮನೆ ಬಾಗಿಲಲ್ಲೇ ಸೇವೆಯನ್ನು ಪಡೆಯಬಹುದು ಎಂದು ಲಾವಾ ಕಂಪೆನಿ ಹೇಳಿದೆ. ಹಾಗೂ, ದೇಶದಲ್ಲಿ Lava Blaze NXT ಸ್ಮಾರ್ಟ್ಫೋನ್ ಗ್ಲಾಸ್ ಬ್ಲ್ಯೂ, ಗ್ಲಾಸ್ ರೆಡ್ ಮತ್ತು ಗ್ಲಾಸ್ ಜಿರೀನ್ ಮೂರು ಬಣ್ಣಗಳಲ್ಲಿ ಖರೀದಿಗೆ ಲಭ್ಯವಿರಲಿರುವ ಬಗ್ಗೆ ಮಾಹಿತಿ ನೀಡಿದೆ.
Lava Blaze Nxt Sale Date Revealed And It Is Sooner Than Expected.
12-09-25 08:26 pm
HK News Desk
Yatnal, Maddur: ರಾಜ್ಯದಲ್ಲಿ ಹೊಸ ಹಿಂದು ಪಾರ್ಟಿ ಕ...
12-09-25 03:04 pm
ಸಾಹಸಸಿಂಹ ವಿಷ್ಣುವರ್ಧನ್, ಹಿರಿಯ ನಟಿ ಬಿ.ಸರೋಜಾದೇವಿ...
11-09-25 10:11 pm
ಈದ್ ಮೆರವಣಿಗೆ : ಶಿವಮೊಗ್ಗದಲ್ಲಿ ಪಾಕಿಸ್ತಾನ್ ಜಿಂದಾ...
09-09-25 10:52 pm
U T Khader: ಯುಟಿ ಖಾದರ್ ಏಕಪಕ್ಷೀಯ ತೀರ್ಮಾನ ತೆಗೆದ...
09-09-25 09:14 pm
12-09-25 11:33 am
HK News Desk
ನೇಪಾಳದಲ್ಲಿ ಕಮ್ಯುನಿಸ್ಟ್ ಸರಕಾರ ಪತನ ; ಹೊಸ ನಾಯಕ ಯ...
10-09-25 04:22 pm
ನೇಪಾಳದಲ್ಲಿ ಹಿಂಸಾಚಾರ ತೀವ್ರ ; ದೇಶ ಬಿಟ್ಟು ಓಡಿದ ಪ...
09-09-25 11:09 pm
ನೂತನ ಉಪ ರಾಷ್ಟ್ರಪತಿಯಾಗಿ ಎನ್.ಡಿ.ಎ ಮೈತ್ರಿಕೂಟದ ಸಿ...
09-09-25 09:38 pm
ಕಾಸರಗೋಡು ; ರಾಷ್ಟ್ರೀಯ ಹೆದ್ದಾರಿ ದಾಟಲೆತ್ನಿಸಿದ ಮಹ...
08-09-25 11:06 pm
12-09-25 07:43 pm
Mangalore Correspondent
Mangalore Road Accident, Pothole, Survery: ರಸ...
12-09-25 05:34 pm
Mangalore Police, Sudheer Reddy: ಶಾಂತಿ ಕಾಪಾಡಲ...
12-09-25 12:58 pm
ಗುಂಡಿ ಬಿದ್ದ ಹೆದ್ದಾರಿ ತಕ್ಷಣ ದುರಸ್ತಿ ; ಸುರತ್ಕಲ್...
12-09-25 11:32 am
ಬಂಗ್ಲೆಗುಡ್ಡೆ ಕಾಡಿನಲ್ಲಿ ರಾಶಿ ರಾಶಿ ಹೆಣಗಳ ಅವಶೇಷ,...
11-09-25 10:42 pm
12-09-25 05:31 pm
Udupi Correspondent
Mangalore Police, Arrest: ಉರ್ವಾದಲ್ಲಿ ಪೊಲೀಸ್ ಕ...
11-09-25 09:13 pm
Mangalore Fake Documents, Crime, Arrest: ಸರ್ಕ...
11-09-25 08:52 pm
ಅಮೆರಿಕ ಅಧ್ಯಕ್ಷರ ಆಪ್ತ, ಬಲಪಂಥೀಯ ಕಾರ್ಯಕರ್ತ ಚಾರ್ಲ...
11-09-25 02:25 pm
Mangalore Police, Communial Case, Arrest, Cri...
08-09-25 10:34 pm