ಬ್ರೇಕಿಂಗ್ ನ್ಯೂಸ್
24-11-22 07:31 pm Source: Vijayakarnataka ಡಿಜಿಟಲ್ ಟೆಕ್
ಜಾಗತಿಕ ಮಾರುಕಟ್ಟೆಗೆ ಇತ್ತೀಚಿಗಷ್ಟೇ ಪರಿಚಯಗೊಂಡಿದ್ದ ಬಜೆಟ್ ಬೆಲೆಯ Infinix Hot 20 5G ಸರಣಿ ಸ್ಮಾರ್ಟ್ಫೋನ್ಗಳು ಭಾರತದಲ್ಲಿ ಬಿಡುಗಡೆಯಾಗುವ ದಿನಾಂಕ ಅಧಿಕೃತವಾಗಿ ಪ್ರಕಟವಾಗಿದೆ. ದೇಶದಲ್ಲಿ ಇದೇ ಡಿಸೆಂಬರ್ 01 ರಂದು Infinix Hot 20 5G ಸರಣಿಯಲ್ಲಿ ಎರಡು ಹೊಸ ಸ್ಮಾರ್ಟ್ಫೋನ್ಗಳನ್ನು ಬಿಡುಗಡೆ ಮಾಡುವ ಬಗ್ಗೆ Infinix ಕಂಪೆನಿ ಘೋಷಿಸಿದ್ದು, ಕಡಿಮೆ ಬೆಲೆಯಲ್ಲಿ 5G ಸಾಮರ್ಥ್ಯದ ಅತ್ಯುತ್ತಮ ಸ್ಮಾರ್ಟ್ಫೋನ್ ಒಂದನ್ನು ಹುಡುಕುತ್ತಿರುವ ಜನರಿಗೆ ಸಿಹಿಸುದ್ದಿ ದೊರೆತಿದೆ.
ಜಾಗತಿಕ ಮಾರುಕಟ್ಟೆಗೆ Infinix Hot 20 5G ಸರಣಿಯಲ್ಲಿ Infinix Hot 20 5G ಮತ್ತು Infinix Hot 20 ಪ್ರೊ 5G ಎರಡು ಸ್ಮಾರ್ಟ್ಫೋನ್ಗಳನ್ನು ಬಿಡುಗಡೆ ಮಾಡಲಾಗಿತ್ತು. ಆದರೆ, ದೇಶದಲ್ಲಿ Infinix Hot 20 5G ಸರಣಿಯಲ್ಲಿ ಕೇವಲ ಒಂದೇ ಒಂದು ಸ್ಮಾರ್ಟ್ಫೋನ್ ಹೊಂದಿರುವ ವೈಶಿಷ್ಟ್ಯಗಳ ಬಗ್ಗೆ ಮಾತ್ರ ಕಂಪೆನಿ ಮಾಹಿತಿ ನೀಡಿದೆ. ಹಾಗಾದರೆ, Infinix Hot 20 5G ಸ್ಮಾರ್ಟ್ಫೋನ್ಗಳು ಹೇಗಿವೆ ಮತ್ತು ಬೆಲೆಗಳು ಎಷ್ಟಿರಬಹುದು ಎಂಬ ಸಂಪೂರ್ಣ ಮಾಹಿತಿಯನ್ನು ತಿಳಿಯೋಣ ಬನ್ನಿ.
Infinix Hot 20 5G ಸರಣಿ ಸ್ಮಾರ್ಟ್ಫೋನ್ಗಳ ವೈಶಿಷ್ಟ್ಯಗಳು
Infinix Hot 20 5G ಸರಣಿ ಸ್ಮಾರ್ಟ್ಫೋನ್ಗಳು 6.92-ಇಂಚಿನ ಹೋಲ್ ಪಂಚ್ ವಿನ್ಯಾಸದ HD+ ಡಿಸ್ಪ್ಲೇಯನ್ನು (1080 x 2408 ಪಿಕ್ಸೆಲ್ಸ್) ಹೊಂದಿರಲಿವೆ. 20:9 ರಚನೆಯ ಅನುಪಾತ ಮತ್ತು 240hz ಟಚ್ ಸ್ಯಾಪ್ಲಿಂಗ್ ರೇಟ್ ಹೊಂದಿರುವ ಈ ಡಿಸ್ಪ್ಲೆಯು 60Hz, 90Hz, ಅಥವಾ 120Hz ರಿಫ್ರೆಶ್ ರೇಟ್ ಸಾಮರ್ಥ್ಯದಲ್ಲಿದೆ. ಇದನ್ನು ಆಟೋ-ಸ್ವಿಚ್ ಮೋಡ್ ಮೂಲಕ ಸೆಟ್ ಮಾಡಬಹುದಾದ ಆಯ್ಕೆ ಇದೆ. ಈ Infinix Hot 20 5G ಸರಣಿ ಸ್ಮಾರ್ಟ್ಫೋನ್ಗಳು ಮೀಡಿಯಾ ಟೆಕ್ ಡೈಮೆನ್ಸಿಟಿ 810 SoC ಪ್ರೊಸೆಸರ್ ಹೊಂದಿದ್ದು, ಆಂಡ್ರಾಯ್ಡ್ 12 ಆಧಾರಿತ XOS 10.6ನಿಂದ ರನ್ ಆಗಲಿವೆ. ( Infinix Hot 20 5G ಪ್ರೊ ಮಾದರಿಯು ಇದಕ್ಕಿಂತಲೂ ಶಕ್ತಿಶಾಲಿ ಪ್ರೊಸೆಸರ್ ಹೊಂದಿರವ ಸಾಧ್ಯತೆ ಇದೆ).
ಕ್ಯಾಮೆರಾ ವಿಭಾಗದಲ್ಲಿ, Infinix Hot 20 5G ಸರಣಿ ಸ್ಮಾರ್ಟ್ಫೋನ್ಗಳು ಎಲ್ಇಡಿ ಫ್ಲ್ಯಾಷ್ ಜೊತೆಗೆ ಡ್ಯುಯಲ್ ರಿಯರ್ ಕ್ಯಾಮೆರಾ ಸೆಟಪ್ ಹೊಂದಿವೆ. ಇದರ ಮುಖ್ಯ ಕ್ಯಾಮೆರಾ 50 ಮೆಗಾಪಿಕ್ಸೆಲ್ ಮತ್ತು ಎರಡನೇ ಕ್ಯಾಮೆರಾ 2 ಮೆಗಾಪಿಕ್ಸೆಲ್ ಸೆನ್ಸಾರ್ ಸಾಮರ್ಥ್ಯದಲ್ಲಿದೆ. ಸೆಲ್ಫಿಗಳಿಗಾಗಿ, ಮುಂಭಾಗದಲ್ಲಿ 8 ಮೆಗಾಪಿಕ್ಸೆಲ್ ಕ್ಯಾಮೆರಾ ಇರಲಿದೆ. Infinix Hot 20 5G ಸರಣಿ ಸ್ಮಾರ್ಟ್ಫೋನ್ಗಳು 12 5G ಬ್ಯಾಂಡ್ಗಳಿಗೆ ಬೆಂಬಲ ಹೊಂದಿರಲಿವೆ. ಇಷ್ಟೇ ಅಲ್ಲದೇ, 18W ವೇಗದ ಚಾರ್ಜಿಂಗ್ ಬೆಂಬಲಿಸಲಿಸುವ 5,000mAh ಸಾಮರ್ಥ್ಯದ ಬ್ಯಾಟರಿ ಮತ್ತು ಪೇಸ್ ಚೇಂಜ್ ಕೂಲಿಂಗ್ ಸಿಸ್ಟಮ್ನಂತಹ ಗೇಮಿಂಗ್-ಆಧಾರಿತ ಫೀಚರ್ಸ್ಗಳನ್ನು ಈ ಸ್ಮಾರ್ಟ್ಫೋನ್ಗಳು ಒಳಗೊಂಡಿರಲಿವೆ.
Infinix Hot 20 5G ಸರಣಿ ಸ್ಮಾರ್ಟ್ಫೋನ್ಗಳ ಬೆಲೆಗಳು
ಭಾರತದಲ್ಲಿ Infinix Hot 20 5G ಸರಣಿ ಸ್ಮಾರ್ಟ್ಫೋನ್ಗಳ ಬೆಲೆಗಳ ಮಾಹಿತಿ ಅಧಿಕೃತವಾಗಿ ಹೊರಬಿದ್ದಿಲ್ಲ. ಆದರೆ, 91Mobiles ವರದಿಯು ಭಾರತದಲ್ಲಿ ಸಾಮಾನ್ಯ Infinix Hot 20 5G ಸ್ಮಾರ್ಟ್ಫೋನ್ 12,000 ರೂ. ಬೆಲೆಯಲ್ಲಿ ಮಾರಾಟಕ್ಕೆ ಬರಲಿರುವ ಬಗ್ಗೆ ಸೂಚಿಸಿದೆ. ಜಾಗತಿಕ ಮಾರುಕಟ್ಟೆಗೆ Infinix Hot 20 5G ಸರಣಿ ಸ್ಮಾರ್ಟ್ಫೋನ್ಗಳ ಬೆಲೆಗಳನ್ನು ಹೋಲಿಸಿ ನೋಡುವುದಾದರೆ, ದೇಶದಲ್ಲಿ 10 ರಿಂದ 12 ಸಾವಿರ ರೂ. ಬೆಲೆಗಳಲ್ಲಿ ಈ ಎರಡೂ ಸ್ಮಾರ್ಟ್ಫೋನ್ಗಳು ಬಿಡುಗಡೆಯಾಗುವ ಸಾಧ್ಯತೆ ಇದೆ.
Infinix Hot 20 5g To Launch In India On December 1.
15-03-25 09:18 pm
HK News Desk
Mangalore, Tamil actor Prabhu Deva, Kukke Sub...
15-03-25 03:55 pm
Elephant attack, Belur, Hassan: ಕಾಡಾನೆ ದಾಳಿ ;...
15-03-25 12:33 pm
DySP Kanakalakshmi arrested, suicide: ಬೋವಿ ನಿ...
14-03-25 11:11 pm
Swamiji, Bagalkot, Police Video: ದುಡ್ಡು ಪಡೆದು...
14-03-25 08:30 pm
13-03-25 03:49 pm
HK News Desk
Shiradi Ghat, Mangalore Bengalore, Mp Brijesh...
13-03-25 01:30 pm
ಪಾಕಿಸ್ತಾನದಲ್ಲಿ 500ಕ್ಕು ಹೆಚ್ಚು ಪ್ರಯಾಣಿಕರಿದ್ದ ರ...
12-03-25 11:41 am
ಅಮೆರಿಕದಲ್ಲಿ 20 ವರ್ಷದ ಭಾರತೀಯ ಮೂಲದ ಮೆಡಿಕಲ್ ವಿದ್...
10-03-25 10:17 pm
ಎಸ್ಸೆಸ್ಸೆಲ್ಸಿ ವಿದ್ಯಾರ್ಥಿನಿ ಜೊತೆಗೆ ಆಟೋ ಚಾಲಕನ ಸ...
10-03-25 11:45 am
15-03-25 10:00 pm
Mangalore Correspondent
Mangalore court, Moral Police, Acquit: ಹಿಂದು...
15-03-25 08:32 pm
Mangalore Mary Hill, Boy Death; ಮೇರಿಹಿಲ್ ; ಏಳ...
15-03-25 04:11 pm
Dr Vamana Nandavar, Mangalore Death: ತುಳು, ಕನ...
15-03-25 01:47 pm
Mangalore Student Missing, ,Kidnap, Hitein Bh...
15-03-25 12:35 pm
14-03-25 05:02 pm
HK News Desk
Ccb Police, Firearms, Mangalore crime: ವಾಮಂಜೂ...
13-03-25 06:44 pm
Kothanur Police, Bangalore crime, Murder: ನಾಲ...
11-03-25 07:34 pm
Tanishq showroom, Bihar Robbery: ಬಿಹಾರದಲ್ಲಿ ಹ...
10-03-25 10:48 pm
Actress Ranya Rao, CBI, Gold case; ನಟಿ ರನ್ಯಾ...
09-03-25 05:06 pm