ಬ್ರೇಕಿಂಗ್ ನ್ಯೂಸ್
21-11-22 07:05 pm Source: Vijayakarnataka ಡಿಜಿಟಲ್ ಟೆಕ್
120W ಫಾಸ್ಟ್ ಚಾರ್ಜಿಂಗ್, Samsung E6 ಡಿಸ್ಪ್ಲೇ ಮತ್ತು ಟ್ರಿಪಲ್ ರಿಯರ್ ಕ್ಯಾಮೆರಾ ಸೆಟಪ್ ಜೊತೆಗೆ ಆಕರ್ಷಕ ವಿನ್ಯಾಸದಲ್ಲಿ ಬರುತ್ತಿರುವ Vivo X90 ಸ್ಮಾರ್ಟ್ಫೋನ್ ನವೆಂಬರ್ 22 ರಂದು ಬಿಡುಗಡೆಯಾಗುತ್ತಿದೆ. ಕಳೆದ ಹಲವು ತಿಂಗಳುಗಳಿಂದ ವಿಶ್ವ ಮೊಬೈಲ್ ಮಾರುಕಟ್ಟೆಯಲ್ಲಿ ಬಾರೀ ನಿರೀಕ್ಷೆ ಮೂಡಿಸಿರುವ ಸ್ಮಾರ್ಟ್ಫೋನ್ ಇದಾಗಿದ್ದು, ಅಧಿಕೃತ ಬಿಡುಗಡೆಗೆ ಮುನ್ನವೇ ತಿಳಿದುಬಂದಿರುವ Vivo X90 ಸ್ಮಾರ್ಟ್ಫೋನಿನ ವೈಶಿಷ್ಟ್ಯಗಳು ಸ್ಮಾರ್ಟ್ಫೋನ್ ಪ್ರಿಯರನ್ನು ಆಕರ್ಷಿಸುತ್ತಿವೆ.
ಈಗಾಗಲೇ ಹೊರಬಿದ್ದಿರುವ ಅಧಿಕೃತ ಸುದ್ದಿಗಳಿಂದ, ಹೊಸ Vivo X90 ಸ್ಮಾರ್ಟ್ಫೋನ್ 120W ಫಾಸ್ಟ್ ಚಾರ್ಜಿಂಗ್ ಬೆಂಬಲವಿರುವ 4,800mAh ಸಾಮರ್ಥ್ಯದ ಡ್ಯುಯಲ್-ಸೆಲ್ ಬ್ಯಾಟರಿಯನ್ನು ಹೊಂದಿರುವುದು ಖಚಿತವಾಗಿದೆ. BOE Q9 ಮತ್ತು Samsung E6 ಎರಡು ಮಾದರಿ ಡಿಸ್ಪ್ಲೇ ಆಯ್ಕೆಗಳಲ್ಲಿ Vivo X90 ಸ್ಮಾರ್ಟ್ಫೋನ್ ಲಭ್ಯವಿರಲಿದೆ. ಇದಲ್ಲಿರುವ Samsung E6 ಡಿಸ್ಪ್ಲೇಯು 2,160Hz PWM (ಮಬ್ಬಾಗಿಸುವಿಕೆಗೆ) ಬೆಂಬಲವನ್ನು ಹೊಂದಿವೆ ಎಂದು ವಿವೊ. ಕಂಪೆನಿ ತಿಳಿಸಿದೆ.
ಹೊಸ Vivo X90 ಸ್ಮಾರ್ಟ್ಫೋನಿನ ವೈಶಿಷ್ಟ್ಯಗಳಲ್ಲೇ ಅತಿಹೆಚ್ಚು ಗಮನಸೆಳೆಯುತ್ತಿರುವುದು ಟ್ರಿಪಲ್ ರಿಯರ್ ಕ್ಯಾಮೆರಾ ಸೆಟಪ್ ಆಕರ್ಷಕ ವಿನ್ಯಾಸ. Vivo X90 ಸ್ಮಾರ್ಟ್ಫೋನ್ ವಿಶೇಷ ಕ್ಯಾಮೆರಾ ವಿನ್ಯಾಸವು 50-ಮೆಗಾಪಿಕ್ಸೆಲ್ ಮುಖ್ಯ ಕ್ಯಾಮೆರಾ, 12-ಮೆಗಾಪಿಕ್ಸೆಲ್ ಸೆಕೆಂಡರಿ ಮತ್ತು 12-ಮೆಗಾಪಿಕ್ಸೆಲ್ ಡೆಪ್ತ್ ಕ್ಯಾಮೆರಾಗಳ ಜೊತೆಗೆ AI ಲೆನ್ಸ್ ಹೊಂದಿರಲಿದೆ. ಇನ್ನು ಸೆಲ್ಫಿಗಳಿಗಾಗಿ ಸ್ಮಾರ್ಟ್ಫೋನಿನ ಮುಂಭಾಗದಲ್ಲಿ 32 ಮೆಗಾಪಿಕ್ಸೆಲ್ ಕ್ಯಾಮೆರಾ ಇರಬಹುದು ಎಂದು ಹೇಳಲಾಗಿದೆ.
ಈ ಎಲ್ಲವೂ ಇದೀಗ ಅಧಿಕೃತ ಮಾಹಿತಿಗಳಾದರೆ, Vivo X90 ಸ್ಮಾರ್ಟ್ಫೋನ್ 1,260x2,800 ಪಿಕ್ಸೆಲ್ಗಳ ರೆಸಲ್ಯೂಶನ್ನೊಂದಿಗೆ 6.78-ಇಂಚಿನ AMOLED ಡಿಸ್ಪಲೇ ಹೊಂದಿದೆ ಮತ್ತು ಅಂಡರ್ ಡಿಸ್ಪ್ಲೇ ಫಿಂಗರ್ಪ್ರಿಂಟ್ ಸೆನ್ಸರ್ ವೈಶಿಷ್ಟ್ಯವಿದೆ ಎಂದು ಇತ್ತೀಚಿನ ಮಾಧ್ಯಮ ವರದಗಳು ಹೇಳಿವೆ. ಡೈಮೆನ್ಸಿಟಿ 9200 SoC ಪ್ರೊಸೆಸರ್ ನೊಂದಿಗೆ 8GB, 12GB, ಅಥವಾ 16GB RAM ಮತ್ತು 128GB, 256GB, ಅಥವಾ 512GB ಸಂಗ್ರಹಣೆ ಮಾದರಿಗಳಲ್ಲಿ ಈ ಸ್ಮಾರ್ಟ್ಫೋನ್ ಬರುವ ಸಾಧ್ಯತೆ ಇದೆ.
ನವೆಂಬರ್ 22 ರಂದು, ಅಂದರೆ ನಾಳೆ ಚೀನಾದಲ್ಲಿ ಮಾತ್ರ Vivo X90 ಸ್ಮಾರ್ಟ್ಫೋನ್ ಬಿಡುಗಡೆಯಾಗಲಿದೆ. ಭಾರತ ಸೇರಿದಂತೆ ವಿಶ್ವದ ಇತರೆ ಮಾರುಕಟ್ಟೆಗಳಲ್ಲಿ ಶೀಘ್ರವೇ Vivo X90 ಸ್ಮಾರ್ಟ್ಫೋನ್ ಪರಿಚಯಿಸುವ ಬಗ್ಗೆ ವಿವೋ ಕಂಪೆನಿ ವಿಶೇಷ ಒಲವನ್ನು ಹೊಂದಿದೆ ಎಂದು ಉದ್ಯಮ ಮೂಲಗಳಿಂದ ತಿಳಿದುಬಂದಿದೆ ಎಂದು ಪ್ರಮುಖ ಮಾಧ್ಯಮ ವರದಿಗಳು ತಿಳಿಸಿವೆ. 2023ರ ಆರಂಭದ ಮುಂದಿನ ಜನವರಿ ತಿಂಗಳಿನಲ್ಲಿ ನಾವು Vivo X90 ಸ್ಮಾರ್ಟ್ಫೋನನ್ನು ಎದುರು ನೋಡಬಹುದು.
Vivo X90 Smartphone Launch Set For November 22.
15-03-25 09:18 pm
HK News Desk
Mangalore, Tamil actor Prabhu Deva, Kukke Sub...
15-03-25 03:55 pm
Elephant attack, Belur, Hassan: ಕಾಡಾನೆ ದಾಳಿ ;...
15-03-25 12:33 pm
DySP Kanakalakshmi arrested, suicide: ಬೋವಿ ನಿ...
14-03-25 11:11 pm
Swamiji, Bagalkot, Police Video: ದುಡ್ಡು ಪಡೆದು...
14-03-25 08:30 pm
13-03-25 03:49 pm
HK News Desk
Shiradi Ghat, Mangalore Bengalore, Mp Brijesh...
13-03-25 01:30 pm
ಪಾಕಿಸ್ತಾನದಲ್ಲಿ 500ಕ್ಕು ಹೆಚ್ಚು ಪ್ರಯಾಣಿಕರಿದ್ದ ರ...
12-03-25 11:41 am
ಅಮೆರಿಕದಲ್ಲಿ 20 ವರ್ಷದ ಭಾರತೀಯ ಮೂಲದ ಮೆಡಿಕಲ್ ವಿದ್...
10-03-25 10:17 pm
ಎಸ್ಸೆಸ್ಸೆಲ್ಸಿ ವಿದ್ಯಾರ್ಥಿನಿ ಜೊತೆಗೆ ಆಟೋ ಚಾಲಕನ ಸ...
10-03-25 11:45 am
15-03-25 10:00 pm
Mangalore Correspondent
Mangalore court, Moral Police, Acquit: ಹಿಂದು...
15-03-25 08:32 pm
Mangalore Mary Hill, Boy Death; ಮೇರಿಹಿಲ್ ; ಏಳ...
15-03-25 04:11 pm
Dr Vamana Nandavar, Mangalore Death: ತುಳು, ಕನ...
15-03-25 01:47 pm
Mangalore Student Missing, ,Kidnap, Hitein Bh...
15-03-25 12:35 pm
14-03-25 05:02 pm
HK News Desk
Ccb Police, Firearms, Mangalore crime: ವಾಮಂಜೂ...
13-03-25 06:44 pm
Kothanur Police, Bangalore crime, Murder: ನಾಲ...
11-03-25 07:34 pm
Tanishq showroom, Bihar Robbery: ಬಿಹಾರದಲ್ಲಿ ಹ...
10-03-25 10:48 pm
Actress Ranya Rao, CBI, Gold case; ನಟಿ ರನ್ಯಾ...
09-03-25 05:06 pm