ಬ್ರೇಕಿಂಗ್ ನ್ಯೂಸ್
18-11-22 08:10 pm Source: Vijayakarnataka ಡಿಜಿಟಲ್ ಟೆಕ್
ಭಾರತದಲ್ಲಿ OnePlus ಕಂಪೆನಿಯ ಬಹುಬೇಡಿಕೆಯ OnePlus TV Y1S Pro ಸ್ಮಾರ್ಟ್ಟಿವಿ ಸರಣಿಯಲ್ಲಿ ಹೊಸದಾಗಿ 55 -ಇಂಚಿನ ಸ್ಮಾರ್ಟ್ಟಿವಿ ಬಿಡುಗಡೆಯಾಗುವ ನಿರೀಕ್ಷೆಯಿದೆ. ಮುಂದಿನ ಕೆಲ ವಾರಗಳಲ್ಲಿ OnePlus ತನ್ನ 55 -ಇಂಚಿನ OnePlus TV Y1S Pro ಸ್ಮಾರ್ಟ್ಟಿವಿ ಬಿಡುಗಡೆಗೆ ಯೋಜಿಸಿದ್ದು, ಈ ಸ್ಮಾರ್ಟ್ಟಿವಿ ದೇಶದಲ್ಲಿ 40,000 ರೂ. ಬೆಲೆಯಲ್ಲಿ ಬಿಡುಗಡೆಯಾಗಬಹುದು ಎಂದು ಉದ್ಯಮ ಮೂಲಗಳನ್ನು ಉಲ್ಲೇಖಿಸಿ ಪ್ರಮುಖ ಟೆಕ್ ಮಾಧ್ಯಮ ವರದಿ ಮಾಡಿವೆ.
OnePlus ಕಂಪೆನಿಯು ದೇಶದಲ್ಲಿ ತನ್ನ 43-ಇಂಚಿನ OnePlus TV Y1S Pro ಸ್ಮಾರ್ಟ್ಟಿವಿಯನ್ನು ಕೆಲ ತಿಂಗಳುಗಳ ಹಿಂದೆಯಷ್ಟೇ ಪರಿಚಯಿಸಿತ್ತು. ಭಾರತೀಯರನ್ನು ಹೆಚ್ಚು ಆಕರ್ಷಿಸಿದ್ದ ಈ ಸ್ಮಾರ್ಟ್ಟಿವಿ ಯಶಸ್ಸಿನಿಂದಾಗಿ, ಇದೀಗ ಇದೇ ಮಾದರಿಯಲ್ಲಿ 55 -ಇಂಚಿನಲ್ಲಿ ಪರಿಚಯಿಸಲು ಕಂಪೆನಿ ಮುಂದಾಗಿದೆ ಎಂದು ಹೇಳಲಾಗಿದೆ. ಹಾಗಾದರೆ, ಹೊಸ 55 -ಇಂಚಿನ OnePlus TV Y1S Pro ಸ್ಮಾರ್ಟ್ಟಿವಿ ಹೇಗಿರಲಿದೆ ಎಂಬುದನ್ನು ನೋಡೋಣ ಬನ್ನಿ.
ಪ್ರಸ್ತುತ 27,499 ರೂ.ಗಳ ಬೆಲೆಯಲ್ಲಿ ಖರೀದಿಗೆ ಲಭ್ಯವಿರುವ 43-ಇಂಚಿನ OnePlus TV Y1S Pro ವೈಶಿಷ್ಟ್ಯಗಳಿಯೇ 55 -ಇಂಚಿನ ಸ್ಮಾರ್ಟ್ಟಿವಿ ಕೂಡ ಬಿಡುಗಡೆಯಾಗುವ ನಿರೀಕ್ಷೆ ಇದೆ. ಈ ಸ್ಮಾರ್ಟ್ಟಿವಿ 3840 x 2160 ಪಿಕ್ಸೆಲ್ಗಳ ರೆಸಲ್ಯೂಶನ್ 4K ಬೆಂಬಲ ಮತ್ತು HDR10+ ಬೆಂಬಲದೊಂದಿಗೆ, ಇದು ಹೆಚ್ಚು ಸ್ಪಷ್ಟತೆ, ಉತ್ತಮ ಬಣ್ಣಗಳು, ಡೈನಾಮಿಕ್ ಕಾಂಟ್ರಾಸ್ಟ್ ಮತ್ತು ಕಂಟೆಂಟ್ ಆಪ್ಟಿಮೈಸೇಶನ್ ಸೇರಿದಂತೆ AI- ಚಾಲಿತ ದೃಶ್ಯಗಳನ್ನು ನೀಡಲಿದೆ.
OnePlus TV Y1S Pro ಸ್ಮಾರ್ಟ್ಟಿವಿ ಮೀಡಿಯಾ ಟೆಕ್ MT9216 ಪ್ರೊಸೆಸರ್ ಜೊತೆಗೆ 2GB RAM ಮತ್ತು 8GB ಸಂಗ್ರಹಣೆಯೊಂದಿಗೆ ಆಂಡ್ರಾಯ್ಡ್ 11 ಟಿವಿ OS ಸಾಫ್ಟ್ವೇರ್ನಲ್ಲಿ ಸ್ಮಾರ್ಟ್ಟಿವಿ ಕೆಲಸ ಮಾಡಲಿದೆ. ಬ್ಲೂಟೂತ್ 5.0 ಬೆಂಬಲ, ಅಂತರ್ನಿರ್ಮಿತ Google ಅಸಿಸ್ಟೆಂಡ್, Google Chromecast ಬೆಂಬಲ ಮತ್ತು Amazon Prime ವೀಡಿಯೊ, ಡಿಸ್ನಿ+ ಹಾಟ್ಸ್ಟಾರ್ ಮತ್ತು ನೆಟ್ಫ್ಲಿಕ್ಸ್ನಂತಹ ಪೂರ್ವ-ಲೋಡ್ ಮಾಡಿದ ಅಪ್ಲಿಕೇಶನ್ಗಳನ್ನು ಒಳಗೊಂಡಿದೆ.
OnePlus TV Y1S Pro ಸ್ಮಾರ್ಟ್ಟಿವಿ ಸಂಪರ್ಕ ಆಯ್ಕೆಗಳಲ್ಲಿ 1 ಎತರ್ನೆಟ್ ಪೋರ್ಟ್, 2 HDMI 2.0 ಪೋರ್ಟ್ಗಳು, 2 USB 2.0 ಪೋರ್ಟ್ಗಳನ್ನು ಹೊಂದಿದೆ. ಈ ಸ್ಮಾರ್ಟ್ಟಿವಯಲ್ಲಿ ಡ್ಯುಯಲ್-ಬ್ಯಾಂಡ್ Wi-Fi ಬೆಂಬಲ ಸೇರಿದಂತೆ ಒಂದು ಮಧ್ಯಮ ಶ್ರೇಣಿಯ ಸ್ಮಾರ್ಟ್ ಟಿವಿ ನೀಡಬೇಕಾದ ಎಲ್ಲಾ ಅಗತ್ಯ ವೈಶಿಷ್ಟ್ಯಗಳನ್ನು ಗ್ರಾಹಕರಿಗೆ ಪರಿಚಯಿಸಲಾಗಿದೆ. ಇತರ OnePlus ಸಾಧನಗಳೊಂದಿಗೆ ಸಂಪರ್ಕಕ್ಕಾಗಿ ಇದು ಕನೆಕ್ಟ್ 2.0 ಬೆಂಬಲ ಹೊಂದಿದೆ.
Oneplus Tv 55 Y1s Pro Launch In India Tipped.
12-09-25 08:26 pm
HK News Desk
Yatnal, Maddur: ರಾಜ್ಯದಲ್ಲಿ ಹೊಸ ಹಿಂದು ಪಾರ್ಟಿ ಕ...
12-09-25 03:04 pm
ಸಾಹಸಸಿಂಹ ವಿಷ್ಣುವರ್ಧನ್, ಹಿರಿಯ ನಟಿ ಬಿ.ಸರೋಜಾದೇವಿ...
11-09-25 10:11 pm
ಈದ್ ಮೆರವಣಿಗೆ : ಶಿವಮೊಗ್ಗದಲ್ಲಿ ಪಾಕಿಸ್ತಾನ್ ಜಿಂದಾ...
09-09-25 10:52 pm
U T Khader: ಯುಟಿ ಖಾದರ್ ಏಕಪಕ್ಷೀಯ ತೀರ್ಮಾನ ತೆಗೆದ...
09-09-25 09:14 pm
12-09-25 11:33 am
HK News Desk
ನೇಪಾಳದಲ್ಲಿ ಕಮ್ಯುನಿಸ್ಟ್ ಸರಕಾರ ಪತನ ; ಹೊಸ ನಾಯಕ ಯ...
10-09-25 04:22 pm
ನೇಪಾಳದಲ್ಲಿ ಹಿಂಸಾಚಾರ ತೀವ್ರ ; ದೇಶ ಬಿಟ್ಟು ಓಡಿದ ಪ...
09-09-25 11:09 pm
ನೂತನ ಉಪ ರಾಷ್ಟ್ರಪತಿಯಾಗಿ ಎನ್.ಡಿ.ಎ ಮೈತ್ರಿಕೂಟದ ಸಿ...
09-09-25 09:38 pm
ಕಾಸರಗೋಡು ; ರಾಷ್ಟ್ರೀಯ ಹೆದ್ದಾರಿ ದಾಟಲೆತ್ನಿಸಿದ ಮಹ...
08-09-25 11:06 pm
12-09-25 07:43 pm
Mangalore Correspondent
Mangalore Road Accident, Pothole, Survery: ರಸ...
12-09-25 05:34 pm
Mangalore Police, Sudheer Reddy: ಶಾಂತಿ ಕಾಪಾಡಲ...
12-09-25 12:58 pm
ಗುಂಡಿ ಬಿದ್ದ ಹೆದ್ದಾರಿ ತಕ್ಷಣ ದುರಸ್ತಿ ; ಸುರತ್ಕಲ್...
12-09-25 11:32 am
ಬಂಗ್ಲೆಗುಡ್ಡೆ ಕಾಡಿನಲ್ಲಿ ರಾಶಿ ರಾಶಿ ಹೆಣಗಳ ಅವಶೇಷ,...
11-09-25 10:42 pm
12-09-25 05:31 pm
Udupi Correspondent
Mangalore Police, Arrest: ಉರ್ವಾದಲ್ಲಿ ಪೊಲೀಸ್ ಕ...
11-09-25 09:13 pm
Mangalore Fake Documents, Crime, Arrest: ಸರ್ಕ...
11-09-25 08:52 pm
ಅಮೆರಿಕ ಅಧ್ಯಕ್ಷರ ಆಪ್ತ, ಬಲಪಂಥೀಯ ಕಾರ್ಯಕರ್ತ ಚಾರ್ಲ...
11-09-25 02:25 pm
Mangalore Police, Communial Case, Arrest, Cri...
08-09-25 10:34 pm