ಬ್ರೇಕಿಂಗ್ ನ್ಯೂಸ್
12-11-22 08:11 pm Source: Vijayakarnataka ಡಿಜಿಟಲ್ ಟೆಕ್
ನೀವು ಆಪಲ್ ಐಫೋನ್ ಬಳಸುತ್ತಿದ್ದೀರಾ ಹಾಗೂ ಎಲ್ಲರಿಗಿಂತ ಮೊದಲು 5G ಸೇವೆಗಳನ್ನು ಉಪಯೋಗಿಸಬೇಕೆ? ಹಾಗಾದರೆ, ನಿಮಗೀಗ ಇಂತಹದೊಂದು ಸದವಕಾಶ ದೊರೆತಿದೆ.! ಹೌದು, ಭಾರತೀಯ ಐಫೋನ್ ಬಳಕೆದಾರರಿಗೆ 5G ಸಪೋರ್ಟ್ ಹೊಂದಿರುವ Apple iOS 16 ಬೀಟಾ ಪ್ರೋಗ್ರಾಂ ಬಿಡುಗಡೆಯಾಗಿದ್ದು, ಮುಂದಿನ ತಿಂಗಳು ಡಿಸೆಂಬರ್ ನಲ್ಲಿ ಅಧಿಕೃತವಾಗಿ Apple iOS 16 ಅಪ್ಡೇಟ್ ದೊರೆಯುವ ಮುನ್ನವೇ ಇದೀಗ ನೀವು 5G ಸೇವೆಯನ್ನು ಬಳಸಲು ಸಾಧ್ಯವಾಗಲಿದೆ.
Apple iOS 16 ಬೀಟಾ ಪ್ರೊಗ್ರಾಂ ಅಪ್ಗ್ರೇಡ್ ಜೊತೆಗೆ 5ಜಿ ಸಾಫ್ಟ್ವೇರ್ ಸಪೋರ್ಟ್ ಸಹ ಸಿಗಲಿದೆ. ಬಳಕೆದಾರರು iOS 16.2 ಬೀಟಾ ನವೀಕರಣವನ್ನು ಡೌನ್ಲೋಡ್ ಮಾಡುವ ಮೂಲಕ ತಮ್ಮ ಸಾಧನಗಳಲ್ಲಿ 5G ಸೇವೆಗಳನ್ನು ಪ್ರಯತ್ನಿಸಬಹುದು. Airtel ಮತ್ತು Reliance Jio ಎರಡೂ ಟೆಲಿಕಾಂ ಕಂಪೆನಿಗಳ ಸಿಮ್ ಬಳಸುತ್ತಿರುವ ಐಫೋನ್ ಗ್ರಾಹಕರು Apple iOS 16 ಬೀಟಾ ಸಾಫ್ಟ್ವೇರ್ಗೆ ಅಪ್ಡೇಟ್ ಮಾಡುವ ಮೂಲಕ 5ಜಿ ಸೇವೆಯನ್ನು ಉಪಯೋಗಿಸಬಹುದು.
ಇದಕ್ಕಾಗಿ, ನಿಮ್ಮ ಐಫೋನಿನಲ್ಲಿ ಸೆಟ್ಟಿಂಗ್ಸ್ ತರೆಯಿರಿ. ನಂತರ Settings> General> Software Update ಆಯ್ಕೆಗೆ ತೆರಳಿ ಹೊಸ Apple iOS 16 ಬೀಟಾ ಅಪ್ಡೇಟ್ ಪರಿಶೀಲಿಸಲು 'ಸಾಫ್ಟ್ವೇರ್ ಅಪ್ಡೇಟ್' ಕ್ಲಿಕ್ ಮಾಡಿ. Apple iOS 16 ಬೀಟಾ ಸಾಫ್ಟ್ವೇರ್ ಡೌನ್ಲೋಡ್ ಮಾಡಿದ ನಂತರ ಸಾಫ್ಟ್ವೇರ್ ಅಪ್ಡೇಟ್ ನೀಡಿ. ಇದೀಗ ನಿಮ್ಮ ಐಫೋನಿನಲ್ಲಿ Settings> Mobile Data> Mobile Data Option> ತೆರೆದು 5G ಆಯ್ಕೆಯನ್ನು ಕ್ಲಿಕ್ ಮಾಡಿದರೆ 5G ಸೇವೆಗಳನ್ನು ಬಳಸಬಹುದು.
ಹೊಸದಾಗಿ ಬಿಡುಗಡೆಯಾಗಿರುವ ಈ Apple iOS 16.2 ಬೀಟಾ ಅಪ್ಡೇಟ್ ಎಲ್ಲಾ ಬಳಕೆದಾರರಿಗೆ ಲಭ್ಯವಾಗಿದೆ. Apple ID ಹೊಂದಿರುವ ಯಾರಾದರೂ ಆಪಲ್ ಬೀಟಾ ಸಾಫ್ಟ್ವೇರ್ 'ಬೀಟಾ ಪ್ರೋಗ್ರಾಂ' ವೈಶಿಷ್ಟ್ಯವನ್ನು ಬಳಸಬಹುದು. ಈ ಬೀಟಾ ಪೋಗ್ರಾಂ ಕಾರ್ಯಕ್ರಮವು ಸ್ವಯಂಪ್ರೇರಿತವಾಗಿದ್ದು, ಐಒಎಸ್ (iOS) 16 ಬೀಟಾ ಸಾಫ್ಟ್ವೇರ್ ಮತ್ತು 5ಜಿ ಸೇವೆಯ ಗುಣಮಟ್ಟ ಹಾಗೂ ಕಾರ್ಯಕ್ಷಮತೆ ಬಗ್ಗೆ ಪ್ರತಿಕ್ರಿಯೆ ನೀಡುವಂತೆ ಬೀಟಾ ಬಳಕೆದಾರರಿಗೆ ಆಪಲ್ ಮನವಿ ಮಾಡಿದೆ.
ದೇಶದ ಪ್ರತಿ ಐಫೋನ್ ಬಳಕೆದಾರರು iOS 16.2 ಬೀಟಾ ಸಾಫ್ಟ್ವೇರ್ ನವೀಕರಣವನ್ನು ಡೌನ್ಲೋಡ್ ಮಾಡಲು ಸಾಧ್ಯ. ಆದರೆ, ಎಲ್ಲ ಐಫೋನ್ ಬಳಕೆದಾರರು 5G ಸಪೋರ್ಟ್ ಪಡೆಯಲು ಸಾಧ್ಯವಿಲ್ಲ. ಐಒಎಸ್ (iOS) 16 ಬೀಟಾ ಸಾಫ್ಟ್ವೇರ್ ಅಪ್ಡೇಟ್ ಮಾಡಿಕೊಳ್ಳುವ iPhone 14, iPhone 13, iPhone 12 ಮತ್ತು iPhone SE (3 ನೇ ತಲೆಮಾರಿನ) ಮಾದರಿ ಸ್ಮಾರ್ಟ್ಫೋನ್ಗಳಲ್ಲಿ ಮಾತ್ರ ಗ್ರಾಹಕರು 5G ಸೇವೆಯನ್ನು ಪಡೆಯಲು ಸಾಧ್ಯವಾಗಲಿದೆ ಎಂದು ಆಪಲ್ ದೃಢಪಡಿಸಿದೆ.
How To Activate 5g On Iphone Models Check Details.
15-03-25 09:18 pm
HK News Desk
Mangalore, Tamil actor Prabhu Deva, Kukke Sub...
15-03-25 03:55 pm
Elephant attack, Belur, Hassan: ಕಾಡಾನೆ ದಾಳಿ ;...
15-03-25 12:33 pm
DySP Kanakalakshmi arrested, suicide: ಬೋವಿ ನಿ...
14-03-25 11:11 pm
Swamiji, Bagalkot, Police Video: ದುಡ್ಡು ಪಡೆದು...
14-03-25 08:30 pm
13-03-25 03:49 pm
HK News Desk
Shiradi Ghat, Mangalore Bengalore, Mp Brijesh...
13-03-25 01:30 pm
ಪಾಕಿಸ್ತಾನದಲ್ಲಿ 500ಕ್ಕು ಹೆಚ್ಚು ಪ್ರಯಾಣಿಕರಿದ್ದ ರ...
12-03-25 11:41 am
ಅಮೆರಿಕದಲ್ಲಿ 20 ವರ್ಷದ ಭಾರತೀಯ ಮೂಲದ ಮೆಡಿಕಲ್ ವಿದ್...
10-03-25 10:17 pm
ಎಸ್ಸೆಸ್ಸೆಲ್ಸಿ ವಿದ್ಯಾರ್ಥಿನಿ ಜೊತೆಗೆ ಆಟೋ ಚಾಲಕನ ಸ...
10-03-25 11:45 am
15-03-25 10:00 pm
Mangalore Correspondent
Mangalore court, Moral Police, Acquit: ಹಿಂದು...
15-03-25 08:32 pm
Mangalore Mary Hill, Boy Death; ಮೇರಿಹಿಲ್ ; ಏಳ...
15-03-25 04:11 pm
Dr Vamana Nandavar, Mangalore Death: ತುಳು, ಕನ...
15-03-25 01:47 pm
Mangalore Student Missing, ,Kidnap, Hitein Bh...
15-03-25 12:35 pm
14-03-25 05:02 pm
HK News Desk
Ccb Police, Firearms, Mangalore crime: ವಾಮಂಜೂ...
13-03-25 06:44 pm
Kothanur Police, Bangalore crime, Murder: ನಾಲ...
11-03-25 07:34 pm
Tanishq showroom, Bihar Robbery: ಬಿಹಾರದಲ್ಲಿ ಹ...
10-03-25 10:48 pm
Actress Ranya Rao, CBI, Gold case; ನಟಿ ರನ್ಯಾ...
09-03-25 05:06 pm