ಬ್ರೇಕಿಂಗ್ ನ್ಯೂಸ್
09-11-22 07:45 pm Source: Vijayakarnataka ಡಿಜಿಟಲ್ ಟೆಕ್
ಭಾರತದ ಸ್ಮಾರ್ಟ್ವಾಚ್ ಮಾರುಕಟ್ಟೆಯಲ್ಲಿ ತನ್ನದೇ ಆದ ಛಾಪು ಮೂಡಿಸುತ್ತಿರುವ ದೇಶೀಯ ಬ್ರ್ಯಾಂಡ್ boAt ದೇಶದಲ್ಲಿ ತನ್ನ ವಿನೂತನ ಬ್ಲೂಟೂತ್ ಕಾಲಿಂಗ್ (BT) ಸ್ಮಾರ್ಟ್ವಾಚ್ ಒಂದನ್ನು ಪರಿಚಯಿಸಿದೆ. ಸ್ಪೋರ್ಟಿ ವಿನ್ಯಾಸ, 500-ನಿಟ್ ಸೂಪರ್-ಬ್ರೈಟ್ ಡಿಸ್ಪ್ಲೇ ಮತ್ತು 100 ಕ್ಕೂ ಹೆಚ್ಚು ಸ್ಪೋರ್ಟ್ಸ್ ಮೂಡ್ ಹೊಂದಿರುವ ಈ ಹೊಸ ಸ್ಮಾರ್ಟ್ವಾಚ್ ಸಾಧನವನ್ನು boAt Wave Ultima ಎಂದು ಹೆಸರಿಸಲಾಗಿದ್ದು, ಇದು ಕೈ ಸಹಾಯದಿಂದ ಕಾಲ್ ರಿಸೀವ್ ಮಾಡಬಹುದಾದ ಆಯ್ಕೆ ಸೇರಿದಂತೆ ಹಲವು ವೈಶಿಷ್ಟ್ಯಗಳನ್ನು ಹೊಂದಿದೆ.
boAt Wave Ultima ಸ್ಮಾರ್ಟ್ವಾಚ್ ವಿಶೇಷಣಗಳು ಮತ್ತು ವೈಶಿಷ್ಟ್ಯಗಳು
ಹೊಸ boAt Wave Ultima ಸ್ಮಾರ್ಟ್ವಾಚ್ನಲ್ಲಿ 500-ನಿಟ್ ಸೂಪರ್-ಬ್ರೈಟ್ನೆಸ್ ಹೊಂದಿರುವ 1.8-ಇಂಚಿನ ಕರ್ವ್ಡ್ ಡಿಸ್ಪ್ಲೇಯನ್ನು ಅಳವಡಿಸಲಾಗಿದೆ. ಈ ಡಿಸ್ಪ್ಲೇಯು ಯಾವಾಗಲೂ ಆನ್ ಫಂಕ್ಷನ್ನೊಂದಿಗೆ ಬಂದಿರುವ ಎಡ್ಜ್-ಟು-ಎಡ್ಜ್ ವೈಶಿಷ್ಟ್ಯವನ್ನು ಹೊಂದಿದೆ. ಈ ಸಾಧನದಲ್ಲಿ ಇನ್ ಬ್ಯುಲ್ಟ್ HD ಸ್ಪೀಕರ್ ಮತ್ತು ಹೈ-ಸೆನ್ಸಿವಿಟಿ ಮೈಕ್ರೋಫೋನ್ಗಳನ್ನು ಅಳವಡಿಸಲಾಗಿದ್ದು, ಉತ್ತಮ ಸಂವಹನದ ಬ್ಲೂಟೂತ್ v5.3 ಚಿಪ್ ನೊಂದಿಗೆ ತಡೆರಹಿತವಾಗಿ ಬ್ಲೂಟೂತ್ ಕಾಲಿಂಗ್ (BT) ಸೇವೆ ಒದಗಿಸಲಿದೆ ಎಂದು ಕಂಪೆನಿ ಹೇಳಿಕೊಂಡಿದೆ.
ಈ boAt Wave Ultima ಸ್ಮಾರ್ಟ್ವಾಚ್ ವ್ಯಾಯಾಮ, ಈಜು, ಜಾಗಿಂಗ್, ಯೋಗ ಮತ್ತು ಹೆಚ್ಚಿನ ಸಕ್ರಿಯ ಕ್ರೀಡೆಗಳನ್ನು ಒಳಗೊಂಡಂತೆ 100 ಕ್ಕೂ ಹೆಚ್ಚು ಕ್ರೀಡಾ ವಿಧಾನಗಳನ್ನು ಬೆಂಬಲಿಸಲಿದೆ. ಹಾರ್ಟ್ರೇಟ್ ಮಾನಿಟರ್, ರಕ್ತದ ಆಮ್ಲಜನಕದ ಮಟ್ಟವನ್ನು ಟ್ರ್ಯಾಕ್ (SpO2) ಮಾಡಲು ಶಕ್ತವಾಗಿರುವ ಈ ಸಾಧನದಲ್ಲಿ ಬಳಕೆದಾರರು ತಮ್ಮ ಒತ್ತಡದ ಮಟ್ಟವನ್ನು ಟ್ರ್ಯಾಕ್ ಮಾಡಬಹುದು ಎಂದು ಕಂಪೆನಿ ತಿಳಿಸಿದೆ. ಇನ್ನು ಈ ಸ್ಮಾರ್ಟ್ವಾಚ್ ಒಂದೇ ಚಾರ್ಜ್ನಲ್ಲಿ 10 ದಿನಗಳವರೆಗೆ ಕಾರ್ಯನಿರ್ವಹಿಸಲಿದೆ ಎಂದು ಕಂಪೆನಿ ಹೇಳಿಕೊಂಡಿದೆ.
boAt Wave Ultima ಸ್ಮಾರ್ಟ್ವಾಚ್ನ ಬೆಲೆ ಮತ್ತು ಲಭ್ಯತೆ
ದೇಶದಲ್ಲಿ boAt Wave Ultima ಸ್ಮಾರ್ಟ್ವಾಚ್ ಸಾಧನವನ್ನು 2,999 ರೂ. ಬೆಲೆಯಲ್ಲಿ ಪರಿಚಯಿಸಲಾಗಿದೆ. ಬ್ರೈಟ್ ರೆಡ್, ಆಕ್ಟೀವ್ ಬ್ಲಾಕ್ ಮತ್ತು ಟೀಲ್ ಗ್ರೀನ್ ಮೂರು ಬಣ್ಣಗಳಲ್ಲಿ ಮೃದುವಾದ ಸಿಲಿಕೋನ್ ಬ್ಯಾಂಡ್ ಹಾಗೂ IP68 ರೇಟಿಂಗ್ ಸಾಮರ್ಥ್ಯದಲ್ಲಿ ಬಿಡುಗಡೆಯಾಗಿರುವ ಈ ಸಾಧನವನ್ನು ಇ-ಕಾಮರ್ಸ್ ತಾಣ Flipkart ಮತ್ತು boAt ಕಂಪೆನಿಯ ಅಧಿಕೃತ ವೆಬ್ಸೈಟ್ಗಳ ಮೂಲಕ ಖರೀದಿಸಬಹುದು. ಈ ಸ್ಮಾರ್ಟ್ವಾಚ್ ಖರೀದಿಗಾಗಿ ಕಂಪೆನಿಯಿಂದ ಯಾವುದೇ ಬಿಡುಗಡೆ ಕೊಡುಗೆ ನೀಡಲಾಗಿಲ್ಲ.
Boat Wave Ultima, A New Smartwatch Comes To India.
15-03-25 09:18 pm
HK News Desk
Mangalore, Tamil actor Prabhu Deva, Kukke Sub...
15-03-25 03:55 pm
Elephant attack, Belur, Hassan: ಕಾಡಾನೆ ದಾಳಿ ;...
15-03-25 12:33 pm
DySP Kanakalakshmi arrested, suicide: ಬೋವಿ ನಿ...
14-03-25 11:11 pm
Swamiji, Bagalkot, Police Video: ದುಡ್ಡು ಪಡೆದು...
14-03-25 08:30 pm
13-03-25 03:49 pm
HK News Desk
Shiradi Ghat, Mangalore Bengalore, Mp Brijesh...
13-03-25 01:30 pm
ಪಾಕಿಸ್ತಾನದಲ್ಲಿ 500ಕ್ಕು ಹೆಚ್ಚು ಪ್ರಯಾಣಿಕರಿದ್ದ ರ...
12-03-25 11:41 am
ಅಮೆರಿಕದಲ್ಲಿ 20 ವರ್ಷದ ಭಾರತೀಯ ಮೂಲದ ಮೆಡಿಕಲ್ ವಿದ್...
10-03-25 10:17 pm
ಎಸ್ಸೆಸ್ಸೆಲ್ಸಿ ವಿದ್ಯಾರ್ಥಿನಿ ಜೊತೆಗೆ ಆಟೋ ಚಾಲಕನ ಸ...
10-03-25 11:45 am
15-03-25 10:00 pm
Mangalore Correspondent
Mangalore court, Moral Police, Acquit: ಹಿಂದು...
15-03-25 08:32 pm
Mangalore Mary Hill, Boy Death; ಮೇರಿಹಿಲ್ ; ಏಳ...
15-03-25 04:11 pm
Dr Vamana Nandavar, Mangalore Death: ತುಳು, ಕನ...
15-03-25 01:47 pm
Mangalore Student Missing, ,Kidnap, Hitein Bh...
15-03-25 12:35 pm
14-03-25 05:02 pm
HK News Desk
Ccb Police, Firearms, Mangalore crime: ವಾಮಂಜೂ...
13-03-25 06:44 pm
Kothanur Police, Bangalore crime, Murder: ನಾಲ...
11-03-25 07:34 pm
Tanishq showroom, Bihar Robbery: ಬಿಹಾರದಲ್ಲಿ ಹ...
10-03-25 10:48 pm
Actress Ranya Rao, CBI, Gold case; ನಟಿ ರನ್ಯಾ...
09-03-25 05:06 pm