ಬ್ರೇಕಿಂಗ್ ನ್ಯೂಸ್
07-11-22 07:14 pm Source: Vijayakarnataka ಡಿಜಿಟಲ್ ಟೆಕ್
ಮೊಟೊರೊಲಾ ಕಂಪೆನಿಯ ಇತ್ತೀಚಿನ ಮಧ್ಯಮ ಬೆಲೆಯ ಪ್ರೀಮಿಯಂ ಸ್ಮಾರ್ಟ್ಫೋನ್ Motorola Edge 30 Ultra ಸಾಧನವು ಇದೀಗ 5,000 ರೂಪಾಯಿಗಳ ರಿಯಾಯಿತಿ ಬೆಲೆಯಲ್ಲಿ ಖರೀದಿಗೆ ಲಭ್ಯವಿದೆ. ದೇಶದ ಜನಪ್ರಿಯ ಇ-ಕಾಮರ್ಸ್ ಜಾಲತಾಣ ಫ್ಲಿಪ್ಕಾರ್ಟ್ ನಲ್ಲಿ 'ಮೋಟೋ ಡೇಸ್' ಮಾರಾಟ ಮೇಳವನ್ನು ಆಯೋಜಿಸಲಾಗಿದ್ದು, ಈ ಸೇಲ್ನಲ್ಲಿ ಹಲವು ಮೊಟೊರೊಲಾ ಸ್ಮಾರ್ಟ್ಫೋನ್ಗಳ ಮೇಲೆ ಭಾರೀ ಡಿಸ್ಕೌಂಟ್ ಒದಗಿಸಲಾಗಿದೆ. ಇದರಲ್ಲಿ 59,999 ರೂ. ಬೆಲೆ ಹೊತ್ತು ಇತ್ತೀಚಿಗಷ್ಟೇ ಬಿಡುಗಡೆಗೊಂಡಿರುವ Motorola Edge 30 Ultra ಸ್ಮಾರ್ಟ್ಫೋನನ್ನು ಇದೀಗ ಕೇವಲ 54,999 ರೂ.ರಿಯಾಯಿತಿ ಬೆಲೆಯಲ್ಲಿ ಮಾರಾಟ ಮಾಡಲಾಗುತ್ತಿದೆ. ಇನ್ನು ಈ ಆಫರ್ ಕೇವಲ ಇಂದು (ನವೆಂಬರ್.7) ಮಾತ್ರ ಲಭ್ಯವಿರಲಿದೆ ಎಂದು ಫ್ಲಿಪ್ಕಾರ್ಟ್ ತಿಳಿಸಿದೆ
ನೂತನ Motorola Edge 30 Ultra ಸ್ಮಾರ್ಟ್ಫೋನ್ ಅತ್ಯುತ್ತಮ ಕಾರ್ಯಕ್ಷಮತೆ ಮತ್ತು ಛಾಯಾಗ್ರಹಣದ ಭರವಸೆಯನ್ನು ಹೊತ್ತು ಕಳೆದ ಸೆಪ್ಟೆಂಬರ್ ತಿಂಗಳಿನಲ್ಲಷ್ಟೇ ದೇಶದಲ್ಲಿ ಬಿಡುಗಡೆಗೊಂಡಿತ್ತು. Qualcomm Snapdragon 8+ Gen 1 ಪ್ರೊಸೆಸರ್, 125W ಸಾಮರ್ಥ್ಯದ ಫಾಸ್ಟ್ಚಾರ್ಜರ್, 144Hz ರಿಫ್ರೆಶ್ ರೇಟ್ ಮತ್ತು IP52 ರೇಟಿಂಗ್ ನಂತಹ ಪ್ರಮುಖ ವೈಶಿಷ್ಟ್ಯಗಳನ್ನು ಹೊತ್ತು ಬಂದಿರುವ ಈ ಸ್ಮಾರ್ಟ್ಫೋನ್ ಬಹುತೇಕ ಎಲ್ಲಾ ಪ್ರೀಮಿಯಂ ವೈಶಿಷ್ಟ್ಯಗಳನ್ನು ಒಳಗೊಂಡಿದೆ. ಹಾಗಾಗಿ, Motorola Edge 30 Ultra ಸ್ಮಾರ್ಟ್ಫೋನನ್ನು ಖರೀದಿಸಲು ಇದು ಬೆಸ್ಟ್ ಟೈಮ್ ಎನ್ನಬಹುದು. ಹಾಗಾದರೆ, ನೂತನ Motorola Edge 30 Ultra ಸ್ಮಾರ್ಟ್ಫೋನ್ ಹೇಗಿದೆ ಮತ್ತು ಸಂಪೂರ್ಣ ವೈಶಿಷ್ಟ್ಯಗಳು ಯಾವುವು ಎಂಬ ಮಾಹಿತಿಯನ್ನು ಮುಂದೆ ಓದಿ ತಿಳಿಯಿರಿ.
Motorola Edge 30 Ultra ಸ್ಮಾರ್ಟ್ಫೋನಿನ ವೈಶಿಷ್ಟ್ಯಗಳು
ನೂತನ Motorola Edge 30 Ultra ಸ್ಮಾರ್ಟ್ಫೋನಿನಲ್ಲಿ 144Hz ರಿಫ್ರೆಶ್ ರೇಟ್ ಸಾಮರ್ಥ್ಯದ 6.67-ಇಂಚಿನ ಫುಲ್ HD+ (1,080x2,400 ಪಿಕ್ಸೆಲ್ಗಳು) ಪೋಲ್ಡ್ ಕರ್ವ್ ಡಿಸ್ಪ್ಲೇ ಅಳವಡಿಸಲಾಗಿದೆ. ಈ ಡಿಸ್ಪ್ಲೇಯು HDR10+, DCI-P3 ಕಲರ್ ಗ್ಯಾಮೆಟ್ ಮತ್ತು 1250nits ಬ್ರೈಟ್ನೆಸ್ ವೈಶಿಷ್ಟ್ಯಗಳನ್ನು ಹೊಂದಿದೆ. ಇದರ ಪೋಲ್ಡ್ ಕರ್ವ್ ಡಿಸ್ಪ್ಲೇಯು ಎಡ್ಜ್ ಲೈಟಿಂಗ್ ಹೊಂದಿದ್ದು, ಇದು ವಿಶೇಷವಾಗಿ ವಿನ್ಯಾಸಗೊಳಿಸಲಾದ ಅಂಚುಗಳ ಮೂಲಕ ನೋಟಿಫಿಕೇಷನ್ ಮತ್ತು ಕರೆಗಳು ಬಂದಾಗ ಲೈಟ್ ಬ್ಲಿಂಕ್ ಮಾಡುತ್ತದೆ. ಹುಡ್ ಅಡಿಯಲ್ಲಿ, Motorola Edge 30 Ultra ಸ್ಮಾರ್ಟ್ಫೋನ್ 8GB LPDDR5 RAM ಮತ್ತು 128GB UFS 3.1 ಮೆಮೊರಿ ಜೊತೆಗೆ Qualcomm Snapdragon 8+ Gen 1 SoC ಪ್ರೊಸೆಸರ್ ಹೊಂದಿದೆ.
Motorola Edge 30 Ultra ಸ್ಮಾರ್ಟ್ಫೋನಿನಲ್ಲಿ 200-ಮೆಗಾಪಿಕ್ಸೆಲ್ ಸ್ಯಾಮ್ಸಂಗ್ ಸಂವೇದಕ ಇರುವ ಟ್ರಿಪಲ್ ಕ್ಯಾಮೆರಾ ಸೆಟಪ್ ನೀಡಲಾಗಿದೆ. ಇದು ಅಲ್ಟ್ರಾ-ವೈಡ್ ಆಂಗಲ್ 50-ಮೆಗಾಪಿಕ್ಸೆಲ್ ಸ್ಯಾಮ್ಸಂಗ್ ಸಂವೇದಕ ಮತ್ತು ಟೆಲಿಫೋಟೋ 12-ಮೆಗಾಪಿಕ್ಸೆಲ್ ಸೋನಿ ಸಂವೇದಕಗಳೊಂದಿಗೆ ಜೋಡಿಯಾಗಿದೆ. 16 ಪಿಕ್ಸೆಲ್ಗಳನ್ನು ಒಂದು 2.56μm ಅಲ್ಟ್ರಾ ಪಿಕ್ಸೆಲ್ಗೆ ಸಂಯೋಜನೆ ಮೂಲಕ ಅತ್ಯುತ್ತಮ ಗುಣಮಟ್ಟದ ಚಿತ್ರಗಳನ್ನು ಸೆರೆಹಿಡಿಯುವ ಈ ಕ್ಯಾಮೆರಾವು, ಆಪ್ಟಿಕಲ್ ಇಮೇಜ್ ಸ್ಟೆಬಿಲೈಸೇಶನ್ (OIS), 114 ಡಿಗ್ರಿ ಫೀಲ್ಡ್-ಆಫ್-ವ್ಯೂ ಮತ್ತು ಮ್ಯಾಕ್ರೋ ವಿಷನ್, 2x ಜೂಮ್ ಮತ್ತು ಪೋರ್ಟ್ರೇಟ್ ಶಾಟ್ ವೈಶಿಷ್ಟ್ಯಗಳನ್ನು ಹೊಂದಿದೆ. ಇನ್ನು ಮುಂಭಾಗದಲ್ಲಿ, 60-ಮೆಗಾಪಿಕ್ಸೆಲ್ ಸಾಮರ್ಥ್ಯದ ಸೆಲ್ಫಿ ಕ್ಯಾಮೆರಾವನ್ನು ಅಳವಡಿಸಲಾಗಿದೆ.
Motorola Edge 30 Ultra ಸ್ಮಾರ್ಟ್ಫೋನಿನ ಸಂಪರ್ಕ ಆಯ್ಕೆಗಳಲ್ಲಿ 5G (13 ಬ್ಯಾಂಡ್ಗಳು), 4G LTE, Wi-Fi 6E, ಬ್ಲೂಟೂತ್ v5.2, GPS/AGPS, NFC, ಡಿಸ್ಪ್ಲೇಪೋರ್ಟ್ 1.4, ಮತ್ತು USB ಟೈಪ್-ಸಿ ಪೋರ್ಟ್ ವೈಶಿಷ್ಟ್ಯಗಳಿವೆ. ಅಂಡರ್-ಡಿಸ್ಪ್ಲೇ ಫಿಂಗರ್ಪ್ರಿಂಟ್ ಸೆನ್ಸರ ಮತ್ತು ಫೇಸ್ ಅನ್ಲಾಕ್ ಎರಡೂ ಭದ್ರತಾ ವೈಶಿಷ್ಟ್ಯಗಳನ್ನು ತರಲಾಗಿದೆ. 4,610mAh ಬ್ಯಾಟರಿಯನ್ನು ಹೊಂದಿರುವ ಈ ಸ್ಮಾರ್ಟ್ಫೋನ್ 125W ಟರ್ಬೋಪವರ್ ವೈರ್ಡ್ ಚಾರ್ಜಿಂಗ್ ಮತ್ತು 50W ವೈರ್ಲೆಸ್ ಚಾರ್ಜಿಂಗ್ಗೆ ಬೆಂಬಲ ಹೊಂದಿದೆ. ಇನ್ನುಳಿದಂತೆ, ಡ್ಯುಯಲ್ ಸ್ಟಿರಿಯೊ ಸ್ಪೀಕರ್ಗಳು, ಲೀನಿಯರ್ x-ಆಕ್ಸಿಸ್ ವೈಬ್ರೇಶನ್, ಧೂಳು ಮತ್ತು ನೀರಿನ ಪ್ರತಿರೋಧಕ್ಕಾಗಿ IP52 ರೇಟಿಂಗ್ ಮತ್ತು ಮೊಬೈಲ್ಗಾಗಿ ಥಿಂಕ್ಶೀಲ್ಡ್ ನಂತಹ ವೈಶಿಷ್ಟ್ಯಗಳನ್ನು ನಾವು ನೋಡಬಹುದು.
Motorola Edge 30 Ultra Gets Flat Rs 5,000 Discount On Flipkart.
15-03-25 09:18 pm
HK News Desk
Mangalore, Tamil actor Prabhu Deva, Kukke Sub...
15-03-25 03:55 pm
Elephant attack, Belur, Hassan: ಕಾಡಾನೆ ದಾಳಿ ;...
15-03-25 12:33 pm
DySP Kanakalakshmi arrested, suicide: ಬೋವಿ ನಿ...
14-03-25 11:11 pm
Swamiji, Bagalkot, Police Video: ದುಡ್ಡು ಪಡೆದು...
14-03-25 08:30 pm
13-03-25 03:49 pm
HK News Desk
Shiradi Ghat, Mangalore Bengalore, Mp Brijesh...
13-03-25 01:30 pm
ಪಾಕಿಸ್ತಾನದಲ್ಲಿ 500ಕ್ಕು ಹೆಚ್ಚು ಪ್ರಯಾಣಿಕರಿದ್ದ ರ...
12-03-25 11:41 am
ಅಮೆರಿಕದಲ್ಲಿ 20 ವರ್ಷದ ಭಾರತೀಯ ಮೂಲದ ಮೆಡಿಕಲ್ ವಿದ್...
10-03-25 10:17 pm
ಎಸ್ಸೆಸ್ಸೆಲ್ಸಿ ವಿದ್ಯಾರ್ಥಿನಿ ಜೊತೆಗೆ ಆಟೋ ಚಾಲಕನ ಸ...
10-03-25 11:45 am
15-03-25 10:00 pm
Mangalore Correspondent
Mangalore court, Moral Police, Acquit: ಹಿಂದು...
15-03-25 08:32 pm
Mangalore Mary Hill, Boy Death; ಮೇರಿಹಿಲ್ ; ಏಳ...
15-03-25 04:11 pm
Dr Vamana Nandavar, Mangalore Death: ತುಳು, ಕನ...
15-03-25 01:47 pm
Mangalore Student Missing, ,Kidnap, Hitein Bh...
15-03-25 12:35 pm
14-03-25 05:02 pm
HK News Desk
Ccb Police, Firearms, Mangalore crime: ವಾಮಂಜೂ...
13-03-25 06:44 pm
Kothanur Police, Bangalore crime, Murder: ನಾಲ...
11-03-25 07:34 pm
Tanishq showroom, Bihar Robbery: ಬಿಹಾರದಲ್ಲಿ ಹ...
10-03-25 10:48 pm
Actress Ranya Rao, CBI, Gold case; ನಟಿ ರನ್ಯಾ...
09-03-25 05:06 pm