ಬ್ರೇಕಿಂಗ್ ನ್ಯೂಸ್
02-11-22 08:32 pm Source: Vijayakarnataka ಡಿಜಿಟಲ್ ಟೆಕ್
ಭಾರತದಲ್ಲೇ ಅತ್ಯಂತ ಕೈಗೆಟುಕುವ 5G ಸ್ಮಾರ್ಟ್ಫೋನ್ ಎಂದು Lava ಕಂಪೆನಿ ಹೇಳಿಕೊಂಡಿರುವ Lava Blaze 5G ಸ್ಮಾರ್ಟ್ಫೋನ್ ನಾಳೆಯಿಂದ ಮಾರಾಟಕ್ಕೆ ಬರುತ್ತಿದೆ.! ಕಳೆದ ಅಕ್ಟೋಬರ್ನಲ್ಲಿ ಇಂಡಿಯಾ ಮೊಬೈಲ್ ಕಾಂಗ್ರೆಸ್ 2022 (IMC) ಸಮಯದಲ್ಲಿ Lava ಕಂಪೆನಿ ತನ್ನ ನೂತನ Lava Blaze 5G ಸ್ಮಾರ್ಟ್ಫೋನನ್ನು ಘೋಷಿಸಿತ್ತು. ಈ ವೇಳೆ ಇದು ದೇಶದಲ್ಲೇ ಅತ್ಯಂತ ಕಡಿಮೆ ಬೆಲೆಯ 5G ಸ್ಮಾರ್ಟ್ಫೋನ್ ಎಂದು ಕಂಪೆನಿ ಹೇಳಿಕೊಂಡಿತ್ತು. ಇದೀಗ ನವೆಂಬರ್ 3 ರಿಂದ ದೇಶದಲ್ಲಿ ಈ ಹೊಸ ಸ್ಮಾರ್ಟ್ಫೋನನನ್ನು ಮಾರಾಟಕ್ಕೆ ತರಲಾಗುತ್ತಿದೆ. ಅಮೆಜಾನ್ ತಾಣದಲ್ಲಿ ಗ್ರಾಹಕರು Lava Blaze 5G ಸ್ಮಾರ್ಟ್ಫೋನನ್ನು ಖರೀದಿಸಬಹುದು ಎಂದು Lava ಕಂಪೆನಿ ಟೀಸರ್ ಬಿಡುಗಡೆ ಮಾಡಿದೆ.
Lava Blaze 5G ಸ್ಮಾರ್ಟ್ಫೋನಿನ ವಿಶೇಷಣಗಳು
ನೂತನ Lava Blaze 5G ಸ್ಮಾರ್ಟ್ಫೋನ್ 90Hz ರಿಫ್ರೆಶ್ ರೇಟ್ ಸಾಮರ್ಥ್ಯದ 6.51-ಇಂಚಿನ HD+ (720x1,600 ಪಿಕ್ಸೆಲ್ಗಳು) LCD IPS 2.5D ಕರ್ವ್ಡ್ ಡಿಸ್ಪ್ಲೇಯನ್ನು ಹೊಂದಿದೆ. ಮೀಡಿಯಾ ಟೆಕ್ ಡೈಮೆನ್ಸಿಟಿ ಪ್ರೊಸೆಸರ್ ನಲ್ಲಿ ಚಾಲಿತವಾಗಿರುವ Lava Blaze 5G ಸ್ಮಾರ್ಟ್ಫೋನ್ ಸ್ಮಾರ್ಟ್ಫೋನ್ Android 12 ನಲ್ಲಿ ಕಾರ್ಯನಿರ್ವಹಿಸಲಿದೆ ಮತ್ತು 4GB ಆನ್ಬೋರ್ಡ್ RAM ಮತ್ತು 128GB ಆಂತರಿಕ ಮೆಮೊರಿ ಹೊಂದಿದ್ದು, 3GB ವರೆಗೆ ವರ್ಚುವಲ್ RAM ಹೆಚ್ಚಿಸಿಕೊಳ್ಳುವ 'RAM ಪ್ಲಸ್' ವೈಶಿಷ್ಟ್ಯವಿದೆ

Lava Blaze 5G ಸ್ಮಾರ್ಟ್ಫೋನ್ ಟ್ರಿಪಲ್ ರಿಯರ್ ಸೆಟಪ್ ಹೊಂದಿರುವ 50-ಮೆಗಾಪಿಕ್ಸೆಲ್ AI ಪ್ರಾಥಮಿಕ ಕ್ಯಾಮೆರಾ ಮತ್ತು ಮುಂಭಾಗದಲ್ಲಿ 8-ಮೆಗಾಪಿಕ್ಸೆಲ್ ಸೆಲ್ಫಿ ಕ್ಯಾಮೆರಾಗಳನ್ನು ಹೊಂದಿರುವ ಬಗ್ಗೆ ಮಾಹಿತಿ ನೀಡಲಾಗಿದೆ 5G ಬಹು 5G ಬ್ಯಾಂಡ್ಗಳು, 4G VoLTE, ಡ್ಯುಯಲ್-ಬ್ಯಾಂಡ್ ವೈ-ಫೈ ಮತ್ತು ಬ್ಲೂಟೂತ್ v5.1 ವೈರ್ಲೆಸ್ ಸಂಪರ್ಕ ವೈಶಿಷ್ಟ್ಯಗಳನ್ನು ಬೆಂಬಲಿಸುವ ಈ ಸ್ಮಾರ್ಟ್ಫೋನ್ . 5,000mAh ಬ್ಯಾಟರಿ, ಯುಎಸ್ಬಿ ಟೈಪ್-ಸಿ ಪೋರ್ಟ್ ಮತ್ತು ಸೈಡ್-ಮೌಂಟೆಡ್ ಫಿಂಗರ್ಪ್ರಿಂಟ್ ಸೆನ್ಸಾರ್ ಸಹ ಹೊಂದಿದೆ.

Lava Blaze 5G ಸ್ಮಾರ್ಟ್ಫೋನಿನ ಬೆಲೆ ಎಷ್ಟು?
ದೇಶದಲ್ಲಿ ನವೆಂಬರ್ 3 ರಿಂದ ಮಾರಾಟಕ್ಕೆ ಬರುತ್ತಿರುವ Lava Blaze 5G ಸ್ಮಾರ್ಟ್ಫೋನಿನ ಅಧಿಕೃತ ಬೆಲೆ ಈ ವರೆಗೂ ಬಹಿರಂಗವಾಗಿಲ್ಲ. ಆದರೆ, ಈ Lava Blaze 5G ಸ್ಮಾರ್ಟ್ಫೋನ್ 10,000 ರೂ. ಬೆಲೆ ಹೊತ್ತು ಬಜೆಟ್ ಬೆಲೆಯಲ್ಲಿ ಮಾರುಕಟ್ಟೆಗೆ ಬರಬಹುದು ಎಂದು ಹೇಳಲಾಗಿದೆ. ಅಮೆಜಾನ್ ತಾಣದಲ್ಲಿ ನಾಳೆ ಅಧಿಕೃತವಾಗಿ ಮಾರಾಟಕ್ಕೆ ಬಂದ ನಂತರ Lava Blaze 5G ಸ್ಮಾರ್ಟ್ಫೋನಿನ ಬೆಲೆ ಪ್ರಕಟವಾಗಲಿದೆ.
Lava Blaze 5g To Go On Sale Starting November 3 Check Price.
18-12-25 11:05 pm
HK News Desk
Byrathi Suresh, Mangalore, Karavali: 'ಕರಾವಳಿಗ...
18-12-25 08:40 pm
ಪರಮೇಶ್ವರ್ ಸಿಎಂ ಆಗಲೆಂದು ಒಕ್ಕಲಿಗ, ಲಿಂಗಾಯತ, ದಲಿತ...
18-12-25 04:31 pm
Shivamogga, Gold Chain Robbery, Police: ಕಾಂಗ್...
18-12-25 02:26 pm
ಹೃದಯಾಘಾತ ; ರಸ್ತೆ ಮೇಲೆ ಬಿದ್ದುಕೊಂಡ ಪತಿಯನ್ನು ರಕ್...
18-12-25 02:09 pm
18-12-25 04:34 pm
HK News Desk
ಸಮವಸ್ತ್ರ ಕಳಪೆಯೆಂದು ಸಹಪಾಠಿಗಳ ಅಣಕ ; ನೊಂದ ನಾಲ್ಕನ...
17-12-25 10:27 pm
ಆಸ್ಟ್ರೇಲಿಯಾ ಬೋಂಡಿ ಬೀಚ್ ದಾಳಿ ; ಹೈದ್ರಾಬಾದ್ ಮೂಲದ...
17-12-25 01:38 pm
ಯುಕೆಯ ಮಿಡ್ಲಾಂಡ್ಸ್ ನಲ್ಲಿ ಕನ್ನಡ ರಾಜ್ಯೋತ್ಸವ ; ಬರ...
16-12-25 06:33 pm
ಭಟ್ಕಳ ತಹಸೀಲ್ದಾರ್ ಕಚೇರಿಗೂ ಸ್ಫೋಟದ ಬೆದರಿಕೆ ; ತಮಿ...
16-12-25 01:56 pm
18-12-25 10:51 pm
Udupi Correspondent
ಬಜ್ಪೆ ಪೊಲೀಸರ ಬಗ್ಗೆ ಅವಹೇಳನ, ಆರೋಪಿಗಳಿಗೆ ರಾಜಾತಿಥ...
18-12-25 10:24 pm
ಮಹೇಶ್ ಶೆಟ್ಟಿ ತಿಮರೋಡಿ ಮತ್ತೆ ರಾಯಚೂರಿಗೆ ಗಡೀಪಾರು...
18-12-25 10:52 am
Dharmasthala case, Chinnayya: ಜಾಮೀನು ಸಿಕ್ಕರೂ...
17-12-25 08:54 pm
New year 2026, Mangalore Rules: ಹೊಸ ವರ್ಷಾಚರಣೆ...
17-12-25 08:19 pm
18-12-25 04:53 pm
Mangaluru Correspondent
ಫ್ಲಾಟ್, ಜಾಗವನ್ನು ಮಾರಾಟ ಮಾಡಿ ಸೈಬರ್ ವಂಚಕರಿಗೆ 2...
17-12-25 11:14 am
ಕದ್ರಿಯಲ್ಲಿ ಬೈಕ್ ಕದ್ದು ಭಟ್ಕಳದಲ್ಲಿ ಮಹಿಳೆಯ ಸರ ಕಸ...
16-12-25 10:35 pm
Mangalore Crime, Robbery, Mukka: 'ಬಂಗಾರ್ ಒಲ್ಪ...
15-12-25 10:26 pm
Udupi Murder, Brahmavar, Update: ಕುಡಿದ ಮತ್ತಿನ...
15-12-25 05:37 pm