ಬ್ರೇಕಿಂಗ್ ನ್ಯೂಸ್
26-10-22 07:03 pm Source: Vijayakarnataka ಡಿಜಿಟಲ್ ಟೆಕ್
ಇಲ್ಲಿಯವರೆಗೂ ವದಂತಿಗಳಿಂದಲೇ ಸುದ್ದಿಯಾಗಿದ್ದ ಮೊಟೊರೊಲಾ ಕಂಪೆನಿಯ ಬಹುನಿರೀಕ್ಷಿತ ಫೋಲ್ಡೆಬಲ್ ಸ್ಮಾರ್ಟ್ಫೋನ್ 'Motorola Razr 22' ಅಂತಿಮವಾಗಿ ಮೊಬೈಲ್ ಮಾರುಕಟ್ಟೆಗೆ ಕಾಲಿಟ್ಟಿದೆ. ಈಗಾಗಲೇ ಹೊರಬಿದ್ದಿದ್ದ ಮಾಹಿತಿಗಳಂತೆಯೇ ಈ ಹೊಸ ಫೋಲ್ಡ್ ಸ್ಮಾರ್ಟ್ಫೋನ್ ಪ್ರೀಮಿಯಂ ವೈಶಿಷ್ಟ್ಯಗಳನ್ನು ಹೊತ್ತು ಬಂದಿದ್ದು, 144Hz ರಿಫ್ರೆಶ್ ರೇಟ್ ಹೊಂದಿರುವ 6.7 ಇಂಚಿನ ಮೇನ್ ಡಿಸ್ಪ್ಲೇ, ಪ್ಯಾನಲ್ನಲ್ಲಿ 2.7 ಇಂಚಿನ ಒಎಲ್ಇಡಿ ಡಿಸ್ಪ್ಲೇ ಮತ್ತು ಸ್ನಾಪ್ಡ್ರಾಗನ್ 8 ಪ್ಲಸ್ Gen 1 ಪ್ರೊಸೆಸರ್ ನಂತಹ ಪ್ರಮುಖ ವೈಶಿಷ್ಟ್ಯಗಳಲ್ಲಿ ಮಾರುಕಟ್ಟೆಗೆ ಬಿಡುಗಡೆಯಾಗಿದೆ. ಹಾಗಾದರೆ, ನೂತನ 'Motorola Razr 22' ಸ್ಮಾರ್ಟ್ಫೋನ್ ಹೇಗಿದೆ ಮತ್ತು ಬೆಲೆ ಎಷ್ಟು ಎಂಬುದನ್ನು ನೋಡೋಣ ಬನ್ನಿ.
'Motorola Razr 22' ಸ್ಮಾರ್ಟ್ಫೋನಿನ ವೈಶಿಷ್ಟ್ಯಗಳು
ನೂತನ Motorola Razr 22 ಸ್ಮಾರ್ಟ್ಫೋನಿನಲ್ಲಿ 6.7 ಇಂಚಿನ POLED ಫೋಲ್ಡ್ ಮೇನ್ ಡಿಸ್ಪ್ಲೇ ಅಳವಡಿಸಲಾಗಿದೆ. ಈ ಡಿಸ್ಪ್ಲೇಯು 144Hz ರಿಫ್ರೆಶ್ ರೇಟ್, HDR10+ ಮತ್ತು 100% DCI-P3 ಕಲರ್ ಗ್ಯಾಮಟ್ ಸಾಮರ್ಥ್ಯಗಳನ್ನು ಹೊಂದಿದೆ. ಇದಲ್ಲದೆ ಸ್ಮಾರ್ಟ್ಫೋನಿನ ಹಿಂಭಾಗದ ಪ್ಯಾನಲ್ನಲ್ಲಿ 2.7 ಇಂಚಿನ OLED ಇನ್ಸ್ಟಂಟ್ ವ್ಯೂ ಡಿಸ್ಪ್ಲೇಯನ್ನು ನೀಡಲಾಗಿದೆ. ಇದು ಫ್ಲೆಕ್ಸ್ ವ್ಯೂ ವೀಕ್ಷಣೆಯನ್ನು ಬೆಂಬಲಿಸುತ್ತದೆ ಎಂದು ಮೊಟೊರೊಲಾ ಕಂಪೆನಿ ತಿಳಿಸಿದೆ.
ಈ ಹೊಸ Motorola Razr 22 ಸ್ಮಾರ್ಟ್ಫೋನ್ 8GB RAM ಮತ್ತು 256GB ಆಂತರಿಕ ಸ್ಟೋರೇಜ್ ಸಾಮರ್ಥ್ಯವನ್ನು ಬೆಂಬಲವನ್ನು ಹೊಂದಿರುವ ಶಕ್ತಿಯುತ ಕ್ವಾಲ್ಕಾಮ್ ಸ್ನಾಪ್ಡ್ರಾಗನ್ 8 ಪ್ಲಸ್ Gen 1 ಪ್ರೊಸೆಸರ್ನಿಂದ ಚಾಲಿತವಾಗಿದೆ ಮತ್ತು ಆಂಡ್ರಾಯ್ 12 ಒಎಸ್ನಲ್ಲಿ ಕಾರ್ಯನಿರ್ವಹಿಸಲಿದೆ. ಈ ಸ್ಮಾರ್ಟ್ಫೋನಿನಲ್ಲಿ ಎಸ್ಡಿ ಕಾರ್ಡ್ ಸಹಾಯದಿಂದ ಮೆಮೊರಿಯನ್ನು ಹೆಚ್ಚಿಸಿಕೊಳ್ಳುವ ಆಯ್ಕೆಯನ್ನು ಒದಗಿಸಲಾಗಿಲ್ಲ ಎಂಬುದನ್ನು ಗಮನಿಸಲಾಗಿದೆ.
Motorola Razr 22 ಸ್ಮಾರ್ಟ್ಫೋನ್ ಡ್ಯುಯಲ್ ರಿಯರ್ ಕ್ಯಾಮೆರಾ ಸೆಟ್ಅಪ್ ಹೊಂದಿದೆ. ಇದು 50 ಮೆಗಾಪಿಕ್ಸೆಲ್ ಪ್ರಾಥಮಿಕ ಕ್ಯಾಮೆರಾ ಮತ್ತು 13 ಮೆಗಾಪಿಕ್ಸೆಲ್ ಅಲ್ಟ್ರಾ-ವೈಡ್ ಲೆನ್ಸ್ಗಳನ್ನು ಒಳಗೊಂಡಿದೆ. ಸೆಲ್ಫಿ ಮತ್ತು ವಿಡಿಯೋ ಕರೆಗಳನ್ನು ಮಾಡಲು ಮುಂಭಾಗದಲ್ಲಿ 32 ಮೆಗಾಪಿಕ್ಸೆಲ್ ಕ್ಯಾಮೆರಾವಿದೆ. ಈ ಸ್ಮಾರ್ಟ್ಫೋನಿನ ಮುಖ್ಯ ಕ್ಯಾಮೆರಾವು ಮೊಟೊರೊಲಾದ ಅಲ್ಟ್ರಾ ಪಿಕ್ಸೆಲ್ ತಂತ್ರಜ್ಞಾನವನ್ನು ಬೆಂಬಲಿಸುತ್ತದೆ ಎಂದು ಮೊಟೊರೊಲಾ ಕಂಪೆನಿ ತಿಳಿಸಿದೆ.
Motorola Razr 22 ಸ್ಮಾರ್ಟ್ಫೋನಿನ ಕನೆಕ್ಟಿವಿಟಿ ಆಯ್ಕೆಗಳಲ್ಲಿ Wi-Fi 6, ಬ್ಲೂಟೂತ್ 5.2, GPS ಮತ್ತು NFC ವೈಶಿಷ್ಟ್ಯಗಳನ್ನು ಗುರುತಿಸಲಾಗಿದೆ. ಈ ಸ್ಮಾರ್ಟ್ಫೋನ್ ಡಾಲ್ಬಿ ಅಟ್ಮೋಸ್ ಬೆಂಬಲವನ್ನು ಹೊಂದಿದ್ದು, ಸೈಡ್-ಫೇಸಿಂಗ್ ಫಿಂಗರ್ಪ್ರಿಂಟ್ ಸ್ಕ್ಯಾನರ್ ಸಹ ನೀಡಲಾಗಿದೆ. Motorola Razr 22 ಸ್ಮಾರ್ಟ್ಫೋನ್ 30W ಟರ್ಬೋಪವರ್ ಚಾರ್ಜಿಂಗ್ ಬೆಂಬಲಿಸುವ 3,500mAh ಸಾಮರ್ಥ್ಯದ ಬ್ಯಾಟರಿಯ ಮೂಲಕ ಶಕ್ತಿಯನ್ನು ಒದಗಿಸಲಿದೆ
'Motorola Razr 22' ಸ್ಮಾರ್ಟ್ಫೋನಿನ ಬೆಲೆ ಮತ್ತು ಲಭ್ಯತೆ.
ನೂತನ Motorola Razr 22 ಸ್ಮಾರ್ಟ್ಫೋನ್ ಪ್ರಸ್ತುತ ಯುರೋಪ್ ಮಾರುಕಟ್ಟೆಯಲ್ಲಿ ಮಾತ್ರ ಬಿಡುಗಡೆಯಾಗಿದ್ದು, ಏಕೈಕ 8GB RAM + 256GB ಸ್ಟೋರೇಜ್ ಆಯ್ಕೆಯ ಈ ಸ್ಮಾರ್ಟ್ಫೋನ್ 1,199 ಯುರೋ(ಅಂದಾಜು 97,893ರೂ) ಬೆಲೆಯಲ್ಲಿ ಮಾರಾಟಕ್ಕೆ ಬಂದಿದೆ. ಇನ್ನು ಈ Motorola Razr 22 ಸ್ಮಾರ್ಟ್ಫೋನ್ ಭಾರತದಲ್ಲಿ ಯಾವಾಗ ಬಿಡುಗಡೆಯಾಗಲಿದೆ ಎಂಬ ಬಗ್ಗೆ ಸದ್ಯಕ್ಕೆ ಯಾವುದೇ ಮಾಹಿತಿ ಲಭ್ಯವಿಲ್ಲ. ಆದರೆ, ಶೀಘ್ರದಲ್ಲೇ ಭಾರತದ ಮಾರುಕಟ್ಟೆಯಲ್ಲಿ ಬಿಡುಗಡೆಯಾಗುವ ಸಾಧ್ಯತೆ ಇದೆ ಎಂದು ಪ್ರಮುಖ ಮಾಧ್ಯಮ ವರದಿಗಳು ಹೇಳಿವೆ.
Motorola Razr 2022 Foldable Smartphone (Global Version) Launched.
12-09-25 08:26 pm
HK News Desk
Yatnal, Maddur: ರಾಜ್ಯದಲ್ಲಿ ಹೊಸ ಹಿಂದು ಪಾರ್ಟಿ ಕ...
12-09-25 03:04 pm
ಸಾಹಸಸಿಂಹ ವಿಷ್ಣುವರ್ಧನ್, ಹಿರಿಯ ನಟಿ ಬಿ.ಸರೋಜಾದೇವಿ...
11-09-25 10:11 pm
ಈದ್ ಮೆರವಣಿಗೆ : ಶಿವಮೊಗ್ಗದಲ್ಲಿ ಪಾಕಿಸ್ತಾನ್ ಜಿಂದಾ...
09-09-25 10:52 pm
U T Khader: ಯುಟಿ ಖಾದರ್ ಏಕಪಕ್ಷೀಯ ತೀರ್ಮಾನ ತೆಗೆದ...
09-09-25 09:14 pm
12-09-25 11:33 am
HK News Desk
ನೇಪಾಳದಲ್ಲಿ ಕಮ್ಯುನಿಸ್ಟ್ ಸರಕಾರ ಪತನ ; ಹೊಸ ನಾಯಕ ಯ...
10-09-25 04:22 pm
ನೇಪಾಳದಲ್ಲಿ ಹಿಂಸಾಚಾರ ತೀವ್ರ ; ದೇಶ ಬಿಟ್ಟು ಓಡಿದ ಪ...
09-09-25 11:09 pm
ನೂತನ ಉಪ ರಾಷ್ಟ್ರಪತಿಯಾಗಿ ಎನ್.ಡಿ.ಎ ಮೈತ್ರಿಕೂಟದ ಸಿ...
09-09-25 09:38 pm
ಕಾಸರಗೋಡು ; ರಾಷ್ಟ್ರೀಯ ಹೆದ್ದಾರಿ ದಾಟಲೆತ್ನಿಸಿದ ಮಹ...
08-09-25 11:06 pm
12-09-25 10:58 pm
Mangalore Correspondent
Mahesh Vikram Hegde Arrested, Post Card Kanna...
12-09-25 09:25 pm
Sameer Md, Dharmasthala: ವಿದೇಶದಿಂದ ಫಂಡ್ ಬಂದಿ...
12-09-25 08:53 pm
RTI Dharmasthala Hostels, Mahesh Thimarodi: ಧ...
12-09-25 07:43 pm
Mangalore Road Accident, Pothole, Survery: ರಸ...
12-09-25 05:34 pm
12-09-25 11:07 pm
Mangalore Correspondent
Ullal Police, Mangalore, Gold Robbery: ತೊಕ್ಕೊ...
12-09-25 10:48 pm
Udupi, Brahmavar Stabbing, Crime: ಬ್ರಹ್ಮಾವರ ;...
12-09-25 05:31 pm
Mangalore Police, Arrest: ಉರ್ವಾದಲ್ಲಿ ಪೊಲೀಸ್ ಕ...
11-09-25 09:13 pm
Mangalore Fake Documents, Crime, Arrest: ಸರ್ಕ...
11-09-25 08:52 pm