ಬ್ರೇಕಿಂಗ್ ನ್ಯೂಸ್
25-10-22 08:49 pm Source: Vijayakarnataka ಡಿಜಿಟಲ್ ಟೆಕ್
ದೇಶದ ಮೊಬೈಲ್ ಮಾರುಕಟ್ಟೆಯಲ್ಲಿ ಇದೀಗ Samsung Galaxy A53 5G ಸ್ಮಾರ್ಟ್ಫೋನಿನದ್ದೇ ಸುದ್ದಿ. Galaxy A53 5G ಫೋನಿನಲ್ಲಿರುವ ‘No Shake Cam’ ವೈಶಿಷ್ಟ್ಯವು ಎಲ್ಲರ ಗಮನಸೆಳೆಯುತ್ತಿದ್ದು, ಫೋಟೊ ಚಿತ್ರಿಸುವಾಗ ಕೈಗಳು ಎಷ್ಟೇ ಅಲುಗಾಡಿದರೂ ಕೂಡ ಸ್ಪಷ್ಟತೆಯಿಂದ ಫೋಟೊಗಳನ್ನು ಸೆರೆಹಿಡಿಯಲು ನಿರ್ಮಿಸಲಾಗಿರುವ ಈ ವೈಶಿಷ್ಟ್ಯವು ಮೊಬೈಲ್ ಕ್ಯಾಮೆರಾ ವಿಭಾಗದಲ್ಲಿ ಕ್ರಾಂತಿಯನ್ನೇ ಮಾಡುತ್ತಿದೆ. ಹಾಗಾಗಿ, Samsung ತನ್ನ ಈ ‘No Shake Cam’ ಸಾಮರ್ಥ್ಯವನ್ನು ಪರೀಕ್ಷಿಸಲು ಜನಪ್ರಿಯ ಕಂಟೆಟ್ ಕ್ರಿಯೇಟರ್ಗಳಿಗೆ ಸವಾಲು ಒಡ್ಡುವ ಮೂಲಕ ರೋಮಾಂಚನಕಾರಿ ಅನುಭವವನ್ನು ಸಹ ತಂದಿದೆ. ಈಗಾಗಲೇ ರಾಘವ್ ಜುಯಲ್, ಪ್ರಿಯಾಂಕಾ ಕೊಚ್ಚರ್ ಮತ್ತು ಕುಶಾ ಕಪಿಲಾ ಅವರು ‘No Shake Cam’ ವೈಶಿಷ್ಟ್ಯವನ್ನು ಬಳಸಿ ಆನಂದಿಸಿದ್ದಾರೆ. ಇದೀಗ ನಮ್ಮ ಜನಪ್ರಿಯ ಸೆಲೆಬ್ರಿಟಿ ಕಂಟೆಂಟ್ ಕ್ರಿಯೇಟರ್ ನಭಾ ನಟೇಶ್ ಅವರು ‘No Shake Cam’ ವೈಶಿಷ್ಟ್ಯವನ್ನು ಪರೀಕ್ಷಿಸಿ ನೋಡುತ್ತಿದ್ದು, ನಭಾ ಅವರ ಈ ಪರೀಕ್ಷೆಯಲ್ಲಿ ‘No Shake Cam’ ವೈಶಿಷ್ಟ್ಯವು ವಿಜಯ ಸಾಧಿಸಲಿದೆಯೇ? ನೋಡೋಣ ಬನ್ನಿ.
GenZ ಯುವಜನತೆಯ ಸಾಲಿಗೆ ಸೇರಿರುವ ಜನಪ್ರಿಯ ಸೆಲೆಬ್ರಿಟಿ ನಭಾ ನಟೇಶ್ ಅವರು ನಮ್ಮಲ್ಲಿ ಅನೇಕರಿಗೆ ಐಕಾನ್ ಆಗಿದ್ದಾರೆ. ಬೆರಗುಗೊಳಿಸುವ ಚಿತ್ರಗಳನ್ನು ಕ್ಲಿಕ್ ಮಾಡಲು ಹೆಸರುವಾಸಿಯಾಗಿರುವ ನಭಾ ನಟೇಶ್ ಅವರು ಈ ಸಮಯದಲ್ಲಿ ತಮ್ಮ ಸ್ನೇಹಿತೆಯೊಂದಿಗೆ ಸಮುದ್ರತೀರದಲ್ಲಿ ಸಮಯ ಕಳೆಯುತ್ತಿದ್ದು, ಸಮುದ್ರದ ಗಾಳಿ, ತೂಗಾಡುವ ದೋಣಿ ಸವಾರಿ ಮತ್ತು ಧುಮುಕುವ ಅಲೆಗಳನ್ನು ಆನಂದಿಸುತ್ತಿರುವಾಗ ‘No Shake Cam’ ವೈಶಿಷ್ಟ್ಯದ ಸಹಾಯದಿಂದ ಶೇಕ್-ಫ್ರೀ ಚಿತ್ರಗಳನ್ನು ಸೆರೆಹಿಡಿಯಲು ಸಿದ್ಧವಾಗಿದ್ದಾರೆ. Samsung Galaxy A53 5G ಸ್ಮಾರ್ಟ್ಫೋನಿನಲ್ಲಿ ಚಿತ್ರಿಸಿದ ಫೋಟೋಗಳು ಅವರು ನಿರೀಕ್ಷಿಸಿದಂತೆ ಇವೆಯಾ ಎಂದು ತಿಳಿಯಲು ನೀವು ಬಯಸುತ್ತಿದೀರಾ? ಹಾಗಾದರೆ ಒಮ್ಮೆ ಇಲ್ಲಿ ನೋಡಿ.!
ವಾವ್! ನಭಾ ನಟೇಶ್ ಅವರು ಕಡಲತೀರದಲ್ಲಿ ಕಳೆದ ತಮ್ಮ ಎಲ್ಲಾ ಕ್ಷಣಗಳ ತೀಕ್ಷ್ಣವಾದ, ಬ್ಲರ್ ಆಗದ ಫೋಟೋಗಳು ಮತ್ತು ವೀಡಿಯೊಗಳನ್ನು ಚಿತ್ರಿಸಲು ಯಶಸ್ವಿಯಾಗಿದ್ದಾರೆ. ಇದಕ್ಕಾಗಿ Galaxy A53 5G ಸ್ಮಾರ್ಟ್ಫೋನಿನಲ್ಲಿರುವ ‘No Shake Cam’ ವೈಶಿಷ್ಟ್ಯಕ್ಕೆ ನಣಾವು ಧನ್ಯವಾದವನ್ನು ಸಲ್ಲಿಸಬೇಕು. ಹಾಗಾದರೆ, ‘No Shake Cam’ ವೈಶಿಷ್ಟ್ಯದ ಸಹಾಯದಿಂದ ಸ್ಥಿರವಾಗಿರುವ ಮತ್ತು ಸಮ್ಮೋಹನಗೊಳಿಸುವ ಚಿತ್ರಗಳನ್ನು ಚಿತ್ರಿಸಲು ಸಾಧ್ಯವಾಗಿದ್ದು ಹೇಗೆ? ಈಗ ಅರ್ಥಮಾಡಿಕೊಳ್ಳೋಣ!
‘No Shake Cam’ ವೈಶಿಷ್ಟ್ಯವು ನಭಾ ಅವರಿಗೆ ಅದ್ಭುತ ಚಿತ್ರಗಳನ್ನು ಚಿತ್ರಿಸಲು ಸಹಾಯ ಮಾಡಿದ್ದು ಹೇಗೆ?
Samsung ಪರಿಚಯಿಸಿರುವ ಈ No Shake Cam ವೈಶಿಷ್ಟ್ಯದ ಹಿಂದೆ Optical Image Stabilization (OIS) ಎಂಬ ರಹಸ್ಯ ಅಡಗಿದೆ. ಇದು ಕೈ ಚಲನೆಯನ್ನು ಸಮತೋಲನಗೊಳಿಸುವ ವೈಶಿಷ್ಟ್ಯವಾಗಿದ್ದು, ಚಿತ್ರ ತೆಗೆಯುವಾಗ ನಮ್ಮ ಕೈಗಳು ಅಲುಗಾಡಿದಾಗ, OIS ಕಾರ್ಯವಿಧಾನದಲ್ಲಿನ ಸಂವೇದಕಗಳು ದಿಕ್ಕನ್ನು ತ್ವರಿತವಾಗಿ ಗ್ರಹಿಸುತ್ತವೆ ಮತ್ತು ಮಸೂರವನ್ನು ವಿರುದ್ಧ ದಿಕ್ಕಿನಲ್ಲಿ ಚಲಿಸುತ್ತವೆ. ಇದರಿಂದ ದೋಷರಹಿತ, ಸ್ಥಿರ ಮತ್ತು ಬ್ಲರ್ ಆಗದಂತಹ ಫೋಟೋ ಮತ್ತು ವಿಡಿಯೋಗಳನ್ನು ಚಿತ್ರಿಸಲು ಸಾಧ್ಯವಾಗುತ್ತದೆ. ಇದರಿಂದಾಗಿಯೇ ನಭಾ ಅವರ ಅಲುಗಾಡುವ ದೋಣಿ ಸವಾರಿಯಲ್ಲಿಯೂ ಕೆಲವು ಆಕರ್ಷಕವಾದ ಶೇಕ್-ಫ್ರೀ ವೀಡಿಯೊಗಳನ್ನು ಸೆರೆಹಿಡಿಯಲು ಸಾಧ್ಯವಾಯಿತು. ಹಾಗಾಗಿ, ನಿಜವಾಗಿಯೂ ಇದೊಂದು ಅತ್ಯದ್ಬುತ ವೈಶಿಷ್ಟ್ಯ.
ವಾಟರ್ ಅಂಡ್ ಡಸ್ಟ್ ವಾರಿಯರ್
ನಭಾ ಅವರು ತನ್ನ Samsung Galaxy A53 5G ಸ್ಮಾರ್ಟ್ಫೋನಿನಲ್ಲಿ ಸುಂದರವಾದ ಸಮುದ್ರದ ಅಲೆಗಳ ದೃಶ್ಯಗಳನ್ನು ಸೆರೆಹಿಡಿಯಲು ಮುಂದಾಗಿದ್ದನ್ನು ನೀವು ನೋಡಿದಿರಿ. ನಭಾ ಅವರು ಫೋನಿನಲ್ಲಿ ಸುಂದರವಾದ ಸಮುದ್ರದ ಅಲೆಗಳನ್ನು ಕ್ಲಿಕ್ಕಿಸುವ ವೆಳೆ ಆಕಸ್ಮಿಕವಾಗಿ ಮರಳಿನ ಮೇಲೆ ತನ್ನ ಫೋನನ್ನು ಬೀಳಿಸಿದ ದೇಶ್ಯವನ್ನು ನೀವು ಗಮನಿಸಿರಬಹುದು. ಈ ವೆಳೆ ನಭಾ ಅವರ ಗೆಳತಿಗೆ ಚಿಂತೆಯಾಯಿತು. ಆದರೆ ಅದೃಷ್ಟವಶಾತ್ ಯಾವುದೇ ಹಾನಿಯಾಗಲಿಲ್ಲ. ಇದು ಹೇಗೆ ಎಂದು ನೀವು ಏಕೆ ಆಶ್ಚರ್ಯಪಡಬಹುದು? ಏಕೆಂದರೆ Samsung Galaxy A53 5G IP67 ರೇಟಿಂಗ್ ಅನ್ನು ಹೊಂದಿದೆ (ಸ್ಪಿಲ್ ಮತ್ತು ಸ್ಪ್ಲಾಶ್ ರೆಸಿಸ್ಟೆಂಟ್). ಇದರಿಂದಾಗಿಯೇ, ನಭಾ ಅವರು ತಮ್ಮ ಫೋನನ್ನು ಮರಳಿನ ಮೇಲೆ ಬಿದ್ದ ನಂತರ ಆತ್ಮವಿಶ್ವಾಸದಿಂದ ಫೋನನ್ನು ಸ್ವಚ್ಛಗೊಳಿಸಲು ಸಾಧ್ಯವಾದದ್ದು. ಈ ವೈಶಿಷ್ಟ್ಯವು ಸಂಭವಿಸಬಹುದಾದ ಈ ರೀತಿಯ ಯಾವುದೇ ಆಕಸ್ಮಿಕ ಹಾನಿಯಿಂದ ಸ್ಮಾರ್ಟ್ಫೋನಿಗೆ ರಕ್ಷಣೆಯನ್ನು ಒದಗಿಸುತ್ತದೆ.
ನಂಬಲಾಗದ ಕ್ಯಾಮೆರಾ ಸೆಟಪ್
Samsung Galaxy A53 5G ಸ್ಮಾರ್ಟ್ಫೋನಿನಲ್ಲಿ ಗರಿಗರಿಯಾದ ಮತ್ತು ಸ್ಪಷ್ಟವಾದ ಚಿತ್ರಗಳನ್ನು ಚಿತ್ರಿಸಲು 64MP OIS ಪ್ರಾಥಮಿಕ ಕ್ಯಾಮರಾ, 12MP ಅಲ್ಟ್ರಾ-ವೈಡ್ ಕ್ಯಾಮೆರಾ, 5MP ಡೆಪ್ತ್ ಕ್ಯಾಮೆರಾ ಸೆಟಪ್ ಇದೆ ಮತ್ತು ಸೆಲ್ಫಿಗಳು ಮತ್ತು ವಿಡಿಯೋ ಕರೆಗಳಿಗಾಗಿ ಮುಂಭಾಗದ 32MP ಕ್ಯಾಮರಾವನ್ನು ಒದಗಿಸಲಾಗಿದೆ. ಫೋಟೊಗಳ ಗುಣಮಟ್ಟವನ್ನು ಒಂದು ದರ್ಜೆಯ ಎತ್ತರಕ್ಕೆ ಕೊಂಡೊಯ್ಯುವ ನಂಬಲಾಗದ ವೈಶಿಷ್ಟ್ಯಗಳೊಂದಿಗೆ Galaxy A53 5G ಫೋನಿನ ಕ್ಯಾಮೆರಾಗಳು ಶಕ್ತವಾಗಿವೆ. ಪ್ರತಿ ಫ್ರೇಮ್ನಲ್ಲಿಯೂ ಅತ್ಯುತ್ತಮ ಚಿತ್ರಗಳನ್ನು ಚಿತ್ರಿಸುವಂತೆ ವಿನ್ಯಾಸಗೊಳಿಸಲಾಗಿರುವ ಕ್ಯಾಮೆರಾ ವೈಶಿಷ್ಟ್ಯಗಳಲ್ಲಿ Object Eraser ಕೂಡ ಒಂದು. ನೀವು ಚಿತ್ರಿಸಿದ ಫೋಟೋ ಫ್ರೇಮ್ ಒಳಗೆ ಇರುವ ಅನಗತ್ಯ ಅಂಶಗಳನ್ನು ತೆಗೆದುಹಾಕುವ ಈ ವೈಶಿಷ್ಟ್ಯವು ಸಹಾಯ ಮಾಡುತ್ತದೆ. ಇದರ ಜೊತೆಗೆ AI image enhancer ವೈಶಿಷ್ಟ್ಯವು ಚಿತ್ರದ ಪ್ರತಿ ಗುಣಲಕ್ಷಣವನ್ನು ಉನ್ನತ ರೂಪದಲ್ಲಿ ಸೆರೆಹಿಡಿಯುತ್ತದೆ. ಇದರಿಂದ ನಿಮ್ಮ ಕ್ಯಾಮೆರಾ ಅನುಭವವು ಅಸಾಧಾರಣವಾಗಲಿದೆ.
Samsung Galaxy A53 5G ಸ್ಮಾರ್ಟ್ಫೋನಿನಲ್ಲಿರುವ ಹೆಚ್ಚುವರಿ ವೈಶಿಷ್ಟ್ಯಗಳು
Samsung Galaxy A53 5G ಸ್ಮಾರ್ಟ್ಫೋನ್ 120Hz sAMOLED ಡಿಸ್ಪ್ಲೇಯನ್ನು ಹೊಂದಿದೆ. ಈ ಡಿಸ್ಪ್ಲೇಯು ಕಂಟೆಂಟ್ ಸ್ಟ್ರೀಮಿಂಗ್ ನೋಡುವ ವೇಳೆ ಮೃದುವಾದ ಸ್ಕ್ರೋಲಿಂಗ್ ಅನುಭವವನ್ನು ಒದಗಿಸುತ್ತದೆ. ಜೊತೆಗೆ ಬೃಹತ್ 5000mAh ಬ್ಯಾಟರಿಯು ನಿಮ್ಮ Galaxy A53 5G ಸ್ಮಾರ್ಟ್ಫೋನಿನಲ್ಲಿ ತಡೆರಹಿತ ಬಿಂಜ್ (ಸಿನಿಮಾ, ಸೀರಿಸ್ಗಳು ಸೇರಿದಂತೆ ಮಲ್ಟಿಮೀಡಿಯಾ) ವೀಕ್ಷಣೆಗೆ ಸಹಾಯ ಮಾಡಲಿದೆ.
ನಿಮ್ಮ ಬಹುಕಾರ್ಯಗಳನ್ನು ಮತ್ತು ಗೇಮಿಂಗ್ ಎಲ್ಲವನ್ನೂ 5nm ಆಕ್ಟಾ-ಕೋರ್ ಪ್ರೊಸೆಸರ್ ನೋಡಿಕೊಳ್ಳಲಿದ್ದರೆ, ಫೋನಿನಲ್ಲಿರುವ RAM Plus ವೈಶಿಷ್ಟ್ಯವು 16GB RAM ವರೆಗೆ RAM ಅನ್ನು ಹೆಚ್ಚಿಸಿಕೊಳ್ಳುವುದರಿಂದ ಮಲ್ಟಿ-ಟಾಸ್ಕಿಂಗ್ ಕಾರ್ಯವು ಸರಾಗವಾಗಿರುತ್ತದೆ. ಮೆಮೊರಿಯನ್ನು ಬುದ್ಧಿವಂತಿಕೆಯಿಂದ ವಿಸ್ತರಿಸಿಕೊಳ್ಳುವ Galaxy A53 5G ಸ್ಮಾರ್ಟ್ಫೋನಿನಲ್ಲಿನಲ್ಲಿ ತಡೆರಹಿತವಾಗಿ ಬಹುಕಾರ್ಯಗಳನ್ನು ನಿರ್ವಹಿಸಬಹುದು.
ಈ ವೈಶಿಷ್ಟ್ಯಗಳು ಮತ್ತು ಇನ್ನೂ ಹೆಚ್ಚಿನ ವೈಶಿಷ್ಟ್ಯಗಳಿಂದ, Galaxy A53 5G ಸ್ಮಾರ್ಟ್ಫೋನ್ ಮಧ್ಯಮ ಶ್ರೇಣಿಯ ಒಂದು ಅತ್ಯದ್ಬುತ ಸ್ಮಾರ್ಟ್ಫೋನ್ ಆಗಿ ಹೊರಹೊಮ್ಮಿದೆ. ನಭಾ ಅವರು ಕೂಡ Samsung Galaxy A53 5G ಸ್ಮಾರ್ಟ್ಫೋನಿನಲ್ಲಿರುವ ಅದ್ಭುತ ‘No Shake Cam’ ವೈಶಿಷ್ಟ್ಯದ ಕುರಿತು ಹಾಗೂ ಫೋನಿನ ಇನ್ನಿತರ ವೈಶಿಷ್ಟ್ಯಗಳ ಕುರಿತು ಆಶ್ಚರ್ಯವ್ಯಕ್ತಿಪಡಿಸಿದ್ದಾರೆ. ಇದು ಖಂಡಿತವಾಗಿ #AmpYourAwesome!.
ನಭಾ ಅವರು ‘No Shake Cam’ ವೈಶಿಷ್ಟ್ಯದ ಆನಂದದಾಯಕ ಅನುಭವವನ್ನು ಪಡೆಸಿದ್ದಾರೆ, ನೀವು ಕೂಡ ಈ ಅನುಭವವವನ್ನು ಪಡೆಯಿರಿ. Samsung Galaxy A53 5G ಸ್ಮಾರ್ಟ್ಫೋನನ್ನು ಇಲ್ಲಿ ಖರೀದಿಸಿ.
The Charming Nabha Natesh Puts Samsung Galaxy A53 5gs ‘No Shake Cam To The Test Know The Results
29-04-25 10:45 pm
Bangalore Correspondent
CM Siddaramaiah, Belagavi, BJP Suresh Kumar:...
29-04-25 09:51 pm
Protest Kalaburagi, islamabad Locality: ಕಲಬುರ...
29-04-25 09:20 pm
Kudupu Murder, Mob attack, Parameshwar: ಕುಡುಪ...
29-04-25 04:28 pm
Praveen Nettaru, Mohsin Shukur, Karwar Police...
29-04-25 01:04 pm
29-04-25 03:45 pm
HK News Desk
'ನನಗೆ ಪಾಕಿಸ್ತಾನದಲ್ಲಿ ಯಾರೂ ಇಲ್ಲ, ದಯವಿಟ್ಟು ಉಳಿಸ...
28-04-25 06:52 pm
ಪಾಕಿಸ್ತಾನದ ಶಾಂತಿ ಸಮಿತಿ ಕಚೇರಿ ಎದುರೇ ಬಾಂಬ್ ಸ್ಫೋ...
28-04-25 05:53 pm
ಪಾಕ್ ವಿರುದ್ಧ ಯುದ್ದಕ್ಕೆ ಕರೆ ನೀಡಿದ ಕಾಶ್ಮೀರ್ ಸಿಎ...
27-04-25 08:42 pm
Pak, Website Hacked, Indian Army : ಅಲ್ಲಾ ನಮ್ಮ...
27-04-25 07:38 pm
29-04-25 11:00 pm
Mangalore Correspondent
Mangalore, Ullal Nethravathi Bridge: ಉಳ್ಳಾಲ ನ...
29-04-25 05:45 pm
Mangalore, Dr Kalladka Bhat: ಹೆಣ್ಣು ಮಕ್ಕಳು ವ್...
29-04-25 12:40 pm
Vadiraj, Mangalore, B R Ambedkar: ಕಾಂಗ್ರೆಸ್ ಸ...
29-04-25 11:53 am
Highland Hospital Mangalore, FIR, Anti Nation...
29-04-25 11:38 am
29-04-25 09:59 pm
Mangalore Correspondent
Kudupu Murder, Mangalore Crime, Police: ಕುಡುಪ...
29-04-25 02:53 pm
Belthagady, Blackmail, Mangalore crime: ಬೆಳ್ತ...
28-04-25 11:39 am
Shootout Bakrebail, Mangalore Crime: ಬಾಕ್ರಬೈಲ...
28-04-25 11:24 am
Mangalore crime, Murder, Kudupu: ಕುಡುಪು ಬಳಿಯಲ...
27-04-25 10:59 pm