ಬ್ರೇಕಿಂಗ್ ನ್ಯೂಸ್
21-10-22 08:04 pm Source: Vijayakarnataka ಡಿಜಿಟಲ್ ಟೆಕ್
ಭಾರತದ ಲ್ಯಾಪ್ಟಾಪ್ ಮಾರುಕಟ್ಟೆಯಲ್ಲಿ ಧೂಳೆಬ್ಬಿಸಲು ಕಾತುರವಾಗಿರುವ ಜಿಯೋವಿನ ಮೊಟ್ಟ ಮೊದಲ ಲ್ಯಾಪ್ಟಾಪ್ 'ಜಿಯೋಬುಕ್' (JioBook) ದೇಶದಲ್ಲಿ ಇಂದಿನಿಂದ ಮಾರಾಟಕ್ಕೆ ಬಂದಿದೆ. ದೇಶದ ಜನಪ್ರಿಯ ಇ-ಕಾಮರ್ಸ್ ಮಾರುಕಟ್ಟೆಗಳಲ್ಲಿ ಒಂದಾದ ರಿಲಯನ್ಸ್ ಡಿಜಿಟಲ್ ವೆಬ್ಸೈಟ್ನಲ್ಲಿ ಜಿಯೋಬುಕ್ ಲ್ಯಾಪ್ಟಾಪನ್ನು ಮಾರಾಟಕ್ಕಿಡಲಾಗಿದ್ದು, 15,000 ರೂ. ಬೆಲೆಯಲ್ಲಿ ಜಿಯೋಬುಕ್ ಸಾಧನವನ್ನು ಖರೀದಿಸಬಹುದು ಎಂದು ರಿಲಯನ್ಸ್ ಜಿಯೋ ಸಂಸ್ಥೆ ತಿಳಿಸಿದೆ.
ಇದೇ ತಿಂಗಳ ಆರಂಭದಲ್ಲಿ ಇಂಡಿಯಾ ಮೊಬೈಲ್ ಕಾಂಗ್ರೆಸ್ನಲ್ಲಿ ಜಿಯೋ ತನ್ನ ಮೊಟ್ಟ ಮೊದಲ ಲ್ಯಾಪ್ಟಾಪ್ ಜಿಯೋಬುಕ್ ಸಾಧನವನ್ನು ಬಿಡುಗಡೆಗೊಳಿಸಿತ್ತು. ಇದೀಗ ರಿಲಯನ್ಸ್ ಡಿಜಿಟಲ್ನ ವೆಬ್ಸೈಟ್ ಮೂಲಕ ಭಾರತೀಯ ಗ್ರಾಹಕರಿಗೆ ಲಭ್ಯವಾಗುವಂತೆ ಜಿಯೋಬುಕ್ ಸಾಧನವನ್ನು ಲೈವ್ನಲ್ಲಿ ಇಡಲಾಗಿದ್ದು, 19,500 ರೂ. ಗಳ ಆರಂಭಿಕ ಬೆಲೆಯಲ್ಲಿ ಬಿಡುಗಡೆ ಮಾಡಲಾಗಿದ್ದ ಈ ಲ್ಯಾಪ್ಟಾಪ್ ಅನ್ನು ಗ್ರಾಹಕರು ಇದೀಗ 15,799 ರೂ. ಗಳ ಬೆಲೆಯಲ್ಲಿ ಖರೀದಿಸಬಹುದಾಗಿದೆ.

ಜಿಯೋಬುಕ್ ಲ್ಯಾಪ್ಟಾಪ್ ವಿದ್ಯಾರ್ಥಿಗಳಿಗೆ ಹೆಚ್ಚು ಉಪಯುಕ್ತ ಎನಿಸುವ ಬಜೆಟ್ ಪ್ರೈಸ್ನ ಒಂದು ಲ್ಯಾಪ್ಟಾಪ್ ಆಗಿದ್ದು, ಜಾಗತಿಕ ಟೆಕ್ ದೈತ್ಯ ಕಂಪೆನಿಗಳಾದ Qualcomm ಮತ್ತು Microsoft ಸಹಭಾಗಿತ್ವದಲ್ಲಿ ಮುಖೇಶ್ ಅಂಬಾನಿ ನೇತೃತ್ವದ ರಿಲಯನ್ಸ್ ಸಂಸ್ಥೆಯು ಈ ಜಿಯೋ ಲ್ಯಾಪ್ಟಾಪ್ ಅನ್ನು ಅಭಿವೃದ್ಧಿಪಡಿಸಿದೆ. ಹಾಗಾದರೆ ನೂತನ ಜಿಯೋ ಲ್ಯಾಪ್ಟಾಪ್ ಹೇಗಿದೆ?, ಈ ಲ್ಯಾಪ್ಟಾಪ್ ಮೇಲೆ ಏನೆಲ್ಲಾ ಕೊಡುಗೆಗಳನ್ನು ನೀಡಲಾಗಿದೆ ಎಂಬುದನ್ನು ನೋಡೋಣ ಬನ್ನಿ.

ಜಿಯೋಬುಕ್ ಲ್ಯಾಪ್ಟಾಪ್ನ ವೈಶಿಷ್ಟ್ಯಗಳು
ಭಾರತದಲ್ಲಿ ಜಿಯೋಬುಕ್ ಸಾಧನದ ಬೆಲೆ ಮತ್ತು ಲಭ್ಯತೆ
ಮೊದಲೇ ಹೇಳಿದಂತೆ, ದೇಶದಲ್ಲಿ ಜಿಯೋಬುಕ್ ಲ್ಯಾಪ್ಟಾಪ್ ಅನ್ನು ಇದೀಗ 15,799 ರೂ. ಗಳ ಬೆಲೆಯಲ್ಲಿ ಮಾರಾಟಕ್ಕಿಡಲಾಗಿದೆ. ಈ ಸಾಧನದ ಮೇಲೆ Axis, Kotak, ICICI, HDFC, AU, INDUSIND, DB ಮತ್ತು ಇತರ ಪ್ರಮುಖ ಬ್ಯಾಂಕ್ ಕ್ರೆಡಿಟ್ ಕಾರ್ಡ್ಗಳೊಂದಿಗೆ 10 ಪ್ರತಿಶತ ತ್ವರಿತ ರಿಯಾಯಿತಿಯನ್ನು ಸಹ ಒದಗಿಸಲಾಗಿದೆ. ಗ್ರಾಹಕರು ರಿಲಯನ್ಸ್ ಡಿಜಿಟಲ್ ಸ್ಟೋರ್ ಆನ್ಲೈನ್ ಮತ್ತು ಆಫ್ಲೈನ್ ಮೂಲಕ ಜಿಯೋಬುಕ್ ಲ್ಯಾಪ್ಟಾಪ್ ಅನ್ನು ಖರೀದಿಸಬಹುದು. ನಂತರ ಹತ್ತಿರದ Jio ಸ್ಟೋರ್ಗೆ ಭೇಟಿ ನೀಡಿ, ಜಿಯೋಬುಕ್ ಲ್ಯಾಪ್ಟಾಪ್ನಲ್ಲಿ ಇರುವ ಅಂತರ್ಗತ SIM ಕಾರ್ಡ್ ಅನ್ನು ಸಕ್ರಿಯಗೊಳಿಸಿಕೊಳ್ಳಬೇಕು ಎಂದು ಜಿಯೋ ಸಂಸ್ಥೆ ತಿಳಿಸಿದೆ.
Jiobook Laptop Now Available For Sale In India All Details Here.
28-10-25 07:18 pm
Bangalore Correspondent
ಆರೆಸ್ಸೆಸ್ ಚಟುವಟಿಕೆ ನಿರ್ಬಂಧಿಸುವ ಸರ್ಕಾರಿ ಸ್ಥಳದ...
28-10-25 03:40 pm
ನವೆಂಬರ್ ಕುತೂಹಲ, ದೆಹಲಿ ಭೇಟಿಗೆ ತೆರಳಿದ ಡಿಕೆಶಿಗೆ...
27-10-25 10:52 pm
ಕಾಂಗ್ರೆಸಿನಲ್ಲಿ ಮತ್ತೊಬ್ಬ ಏಕನಾಥ್ ಶಿಂಧೆ, ಪವಾರ್ ಹ...
27-10-25 10:42 pm
ಡಿಕೆಶಿ ದಿಢೀರ್ ದೆಹಲಿಗೆ ದೌಡು ; ವಿಶೇಷ ಏನೂ ಇಲ್ಲ,...
26-10-25 07:33 pm
26-10-25 11:01 pm
HK News Desk
ಅಂಗೈಯಲ್ಲಿ ಡೆತ್ ನೋಟ್ ಬರೆದಿಟ್ಟು ಸರ್ಕಾರಿ ವೈದ್ಯೆ...
26-10-25 05:38 pm
ಮುಂದಿನ ವಾರದಿಂದಲೇ ತಮಿಳುನಾಡಿನಲ್ಲಿ ಮತದಾರ ಪಟ್ಟಿಯ...
25-10-25 09:36 pm
Vemuri Kaveri Travels Bus Accident, Fire, Ill...
25-10-25 02:28 pm
Kurnool Bus Fire, Accident, Latest News: ಹೈದರ...
24-10-25 05:43 pm
28-10-25 08:36 pm
Mangalore Correspondent
ಸ್ಪೀಕರ್ ಕೊಠಡಿ- ಶಾಸಕರ ಭವನ ನವೀಕರಣ ನೆಪದಲ್ಲಿ ಭಾರೀ...
28-10-25 03:36 pm
ಲಾರಿ ಧಾವಂತಕ್ಕೆ ಹೆದ್ದಾರಿ ದಾಟುತ್ತಿದ್ದ ಪಾದಚಾರಿ ಬ...
27-10-25 11:01 pm
ತಾಯಿ- ಮಗಳು ತೆರಳುತ್ತಿದ್ದ ಸ್ಕೂಟರಿಗೆ ಕಾರು ಡಿಕ್ಕಿ...
27-10-25 10:25 pm
ಆಟವಾಡುತ್ತಲೇ ತೆರೆದ ಬಾವಿಗೆ ಬಿದ್ದ ಎರಡು ವರ್ಷದ ಹೆಣ...
27-10-25 10:03 pm
27-10-25 05:29 pm
HK News Desk
ದುಬೈನಲ್ಲಿ ಕುಳಿತು ಬೆಂಗಳೂರಿನ ಫೈನಾನ್ಸ್ ಕಂಪನಿಗೆ ಕ...
27-10-25 04:04 pm
ಶಬರಿಮಲೆಯಲ್ಲಿ ಕದ್ದ ಚಿನ್ನ ಬಳ್ಳಾರಿ ಜುವೆಲ್ಲರಿಗೆ ಮ...
25-10-25 10:00 pm
SP Arun, Puttur: ಗೋಸಾಗಾಟ ತಡೆದ ಪ್ರಕರಣ ; ಯಾವುದೇ...
25-10-25 02:14 pm
Surathkal Murder Attempt, Arrest, Crime; ಸುರತ...
24-10-25 08:20 pm