ಬ್ರೇಕಿಂಗ್ ನ್ಯೂಸ್
18-10-22 06:29 pm Source: Vijayakarnataka ಡಿಜಿಟಲ್ ಟೆಕ್
ಚೀನಾ ಮೂಲದ ಭಾರತದ ನಂ.1 ಮೊಬೈಲ್ ಬ್ರ್ಯಾಂಡ್ ಶಿಯೋಮಿ ಶೀಘ್ರದಲ್ಲೇ ತನ್ನ ಹೊಸ Redmi Note 12 ಸರಣಿ ಸ್ಮಾರ್ಟ್ಫೋನ್ಗಳನ್ನು ಬಿಡುಗಡೆ ಮಾಡುವ ಸಾಧ್ಯತೆ ಇದೆ. ಶಿಯೋಮಿ ತನ್ನ ಹೊಸ Redmi Note 12 ಸರಣಿಯಲ್ಲಿ Redmi Note 12, Redmi Note 12 Pro ಮತ್ತು Redmi Note 12 Pro+ ಎಂಬ ಮೂರು ಸ್ಮಾರ್ಟ್ಫೋನ್ಗಳನ್ನು ಪರಿಚಯಿಸಲಿದ್ದು, ಈ ಸರಣಿಯು 200MP ಮುಖ್ಯ ಕ್ಯಾಮೆರಾ ಮತ್ತು 210W ಫಾಸ್ಟ್ ಚಾರ್ಜಿಂಗ್ ಬೆಂಬಲವನ್ನು ಹೊಂದಿರಲಿದೆ ಎಂದು ಹೇಳಲಾಗಿದೆ.
ಹೌದು, Redmi Note 12 ಸರಣಿಯ ಸ್ಮಾರ್ಟ್ಫೋನ್ಗಳು ಚೀನಾದ ಕಡ್ಡಾಯ ಪ್ರಮಾಣೀಕರಣ (3C) ಡೇಟಾಬೇಸ್ನಲ್ಲಿ ಈಗಾಗಲೇ ಕಾಣಿಸಿಕೊಂಡಿದೆ. Redmi Note 12, Redmi Note 12 Pro ಮತ್ತು Redmi Note 12 Pro+ ಸ್ಮಾರ್ಟ್ಫೋನ್ಗಳು ಕ್ರಮವಾಗಿ 22101316C, 22101316UCP ಮತ್ತು 22101316UC ಮಾದರಿ ಸಂಖ್ಯೆಗಳನ್ನು ಹೊಂದಿವೆ. ಇಷ್ಟೇ ಅಲ್ಲದೇ, ಚೀನಾದ ಜನಪ್ರಿಯ ಇ-ಕಾಮರ್ಸ್ ತಾಣ JD.COM ವೆಬ್ಸೈಟ್ನಲ್ಲಿಯೂ ಸಹ ಈ ಮೂರು ಸ್ಮಾರ್ಟ್ಫೋನ್ಗಳನ್ನು ಗುರುತಿಲಾಗಿದೆ.
ಪ್ರಮುಖ ಟೆಕ್ ಮಾಧ್ಯಮ ವರದಿಗಳ ಪ್ರಕಾರ, ಶಿಯೋಮಿಯ Redmi Note 12 ಸರಣಿ ಸ್ಮಾರ್ಟ್ಫೋನ್ಗಳು ಈ ವರ್ಷದ ಕೊನೆಯಲ್ಲಿ ಚೀನಾದಲ್ಲಿ ಬಿಡುಗಡೆಯಾಗುವ ನಿರೀಕ್ಷೆಯಿದೆ ಮತ್ತು Q1 2023 ರಲ್ಲಿ ಜಾಗತಿಕ ಮಾರುಕಟ್ಟೆಗೆ ಆಗಮಿಸಲಿದೆ ಎಂದು ಹೇಳಲಾಗಿದೆ. ಇದೀಗ ಈ ಮೂರು ಸ್ಮಾರ್ಟ್ಫೋನ್ಗಳು ಹೊಂದಿರುವ ಕೆಲ ವೈಶಿಷ್ಟ್ಯಗಳ ಮಾಹಿತಿ ದೊರೆತಿದ್ದು, ಶಕ್ತಿಯುತ ಪ್ರೊಸೆಸರ್, 200MP ಮುಖ್ಯ ಕ್ಯಾಮೆರಾ ಮತ್ತು 210W ಫಾಸ್ಟ್ ಚಾರ್ಜಿಂಗ್ ಬೆಂಬಲವನ್ನು ಹೊಂದಿರುವ ವೈಶಿಷ್ಟ್ಯಗಳನ್ನು ಗುರುತಿಸಲಾಗಿದೆ.
Redmi Note 12 ಸರಣಿಯು ಹೊಸದಾಗಿ ಪ್ರಾರಂಭಿಸಲಾದ MediaTek ಡೈಮೆನ್ಸಿಟಿ 1080 SoC ಪ್ರೊಸೆಸರ್ನಿಂದ ಚಾಲಿತವಾಗಬಹುದು. ಈ ಚಿಪ್ಸೆಟ್ ARM Mali-G68 GPU ಹೊಂದಿದೆ ಮತ್ತು 200MP ಮುಖ್ಯ ಕ್ಯಾಮೆರಾ ಸಂವೇದಕವನ್ನು ಬೆಂಬಲಿಸಬಹುದು ಎಂದು ಹೇಳಲಾಗಿದೆ. ಈ Redmi Note 12 ಸರಣಿಯಲ್ಲಿನ ಟಾಪ್-ಆಫ್-ಲೈನ್ Redmi Note 12 Pro+ ಸ್ಮಾರ್ಟ್ಫೋನ್ 210W ಫಾಸ್ಟ್ ಚಾರ್ಜಿಂಗ್ ಬೆಂಬಲ ನೀಡಬಹುದು ಎಂದು 3C ಪಟ್ಟಿಯಲ್ಲಿ ಸೂಚಿಸಿರುವುದು ಸಹ ವರದಿಯಾಗಿದೆ.
ಇದೀಗ ತಿಳಿದುಬಂದಿರುವ ಮಾಹಿತಿಯಂತೆ, Redmi Note 12 Pro+ ಸ್ಮಾರ್ಟ್ಫೋನ್ 210W ಫಾಸ್ಟ್ ಚಾರ್ಜಿಂಗ್ ಬೆಂಬಲವನನ್ನು ಹೊಂದಿದ್ದರೆ, Redmi Note 12 Pro ಸ್ಮಾರ್ಟ್ಫೋನ್ 120W ಫಾಸ್ಟ್ ಚಾರ್ಜಿಂಗ್ಗೆ ಬೆಂಬಲವನ್ನು ಹೊಂದಿರಲಿದೆ ಮತ್ತು ಬೇಸಿಕ್ Redmi Note 12 ಸ್ಮಾರ್ಟ್ಫೋನ್ 67W ಫಾಸ್ಟ್ ಚಾರ್ಜಿಂಗ್ಗೆ ಬೆಂಬಲವನ್ನು ಹೊಂದಿರಬಹುದು ಎನ್ನಲಾಗಿದೆ. ಇನ್ನು ಈ ಮೂರು ಸ್ಮಾರ್ಟ್ಫೋನ್ಗಳು ಟ್ರಿಪಲ್ ಹಿಂಬದಿಯ ಕ್ಯಾಮೆರಾ ಸೆಟಪ್ ಒಳಗೊಂಡಿರಲಿವೆ ಎಂದು ಹೇಳಲಾಗಿದೆ.
Redmi Note 12 Series Listing Spotted Online Ahead Of Launch All Details.
12-09-25 08:26 pm
HK News Desk
Yatnal, Maddur: ರಾಜ್ಯದಲ್ಲಿ ಹೊಸ ಹಿಂದು ಪಾರ್ಟಿ ಕ...
12-09-25 03:04 pm
ಸಾಹಸಸಿಂಹ ವಿಷ್ಣುವರ್ಧನ್, ಹಿರಿಯ ನಟಿ ಬಿ.ಸರೋಜಾದೇವಿ...
11-09-25 10:11 pm
ಈದ್ ಮೆರವಣಿಗೆ : ಶಿವಮೊಗ್ಗದಲ್ಲಿ ಪಾಕಿಸ್ತಾನ್ ಜಿಂದಾ...
09-09-25 10:52 pm
U T Khader: ಯುಟಿ ಖಾದರ್ ಏಕಪಕ್ಷೀಯ ತೀರ್ಮಾನ ತೆಗೆದ...
09-09-25 09:14 pm
12-09-25 11:33 am
HK News Desk
ನೇಪಾಳದಲ್ಲಿ ಕಮ್ಯುನಿಸ್ಟ್ ಸರಕಾರ ಪತನ ; ಹೊಸ ನಾಯಕ ಯ...
10-09-25 04:22 pm
ನೇಪಾಳದಲ್ಲಿ ಹಿಂಸಾಚಾರ ತೀವ್ರ ; ದೇಶ ಬಿಟ್ಟು ಓಡಿದ ಪ...
09-09-25 11:09 pm
ನೂತನ ಉಪ ರಾಷ್ಟ್ರಪತಿಯಾಗಿ ಎನ್.ಡಿ.ಎ ಮೈತ್ರಿಕೂಟದ ಸಿ...
09-09-25 09:38 pm
ಕಾಸರಗೋಡು ; ರಾಷ್ಟ್ರೀಯ ಹೆದ್ದಾರಿ ದಾಟಲೆತ್ನಿಸಿದ ಮಹ...
08-09-25 11:06 pm
12-09-25 10:58 pm
Mangalore Correspondent
Mahesh Vikram Hegde Arrested, Post Card Kanna...
12-09-25 09:25 pm
Sameer Md, Dharmasthala: ವಿದೇಶದಿಂದ ಫಂಡ್ ಬಂದಿ...
12-09-25 08:53 pm
RTI Dharmasthala Hostels, Mahesh Thimarodi: ಧ...
12-09-25 07:43 pm
Mangalore Road Accident, Pothole, Survery: ರಸ...
12-09-25 05:34 pm
12-09-25 11:07 pm
Mangalore Correspondent
Ullal Police, Mangalore, Gold Robbery: ತೊಕ್ಕೊ...
12-09-25 10:48 pm
Udupi, Brahmavar Stabbing, Crime: ಬ್ರಹ್ಮಾವರ ;...
12-09-25 05:31 pm
Mangalore Police, Arrest: ಉರ್ವಾದಲ್ಲಿ ಪೊಲೀಸ್ ಕ...
11-09-25 09:13 pm
Mangalore Fake Documents, Crime, Arrest: ಸರ್ಕ...
11-09-25 08:52 pm