ಬ್ರೇಕಿಂಗ್ ನ್ಯೂಸ್
08-10-22 09:32 pm Source: Vijayakarnataka ಡಿಜಿಟಲ್ ಟೆಕ್
ಭಾರತದಲ್ಲಿ ಇಂದು ಮೊಟೊರೊಲಾ ಕಂಪೆನಿಯ ಮತ್ತೊಂದು ಬಹುನಿರೀಕ್ಷಿತ ಬಜೆಟ್ ಸ್ಮಾರ್ಟ್ಫೋನ್ Moto E32 ಅದ್ದೂರಿಯಾಗಿ ಬಿಡುಗಡೆಯಾಗಿದೆ. ದೇಶದ ಮೊಬೈಲ್ ಮಾರುಕಟ್ಟೆಯ ನಿರೀಕ್ಷೆಯಂತೆಯೇ ಮೊಟೊರೊಲಾ ತನ್ನ Moto E32 ಸ್ಮಾರ್ಟ್ಫೋನನ್ನು ಬಜೆಟ್ ಬೆಲೆಯಲ್ಲಿ ಮಾರುಕಟ್ಟೆಗೆ ಪರಿಚಯಿಸಿದ್ದು, 90Hz ರಿಫ್ರೇಟ್ ರೇಟ್ ಸಾಮರ್ಥ್ಯದ 6.5-ಇಂಚಿನ IPS LCD ಡಿಸ್ಪ್ಲೇ, ಕ್ವಾಡ್ ಪಿಕ್ಸೆಲ್ ತಂತ್ರಜ್ಞಾನದೊಂದಿಗೆ 50-ಮೆಗಾಪಿಕ್ಸೆಲ್ ರಿಯರ್ ಕ್ಯಾಮೆರಾ ಸೆಟಪ್, 5,000mAh ಬ್ಯಾಟರಿ ಮತ್ತು ಸೈಡ್-ಮೌಂಟೆಡ್ ಫಿಂಗರ್ಪ್ರಿಂಟ್ ಸ್ಕ್ಯಾನರ್ನೊಂದಿಗೆ Moto E32 ಸ್ಮಾರ್ಟ್ಫೋನ್ ಎಂಟ್ರಿ ನೀಡಿದೆ. ಹಾಗಾದರೆ, ನೂತನ Moto E32 ಸ್ಮಾರ್ಟ್ಫೋನ್ ಹೇಗಿದೆ ಮತ್ತು ಬೆಲೆ ಎಷ್ಟು ಎಂಬ ಸಂಪೂರ್ಣ ಮಾಹಿತಿಯನ್ನು ತಿಳಿಯೋಣ ಬನ್ನಿ.
Moto E32 ಸ್ಮಾರ್ಟ್ಪೋನಿನ ವಿಶೇಷಣಗಳು ಮತ್ತು ವೈಶಿಷ್ಟ್ಯಗಳು
ನೂತನ Moto E32 ಸ್ಮಾರ್ಟ್ಫೋನಿನಲ್ಲಿ ಫುಲ್ HD+ (720x1,600 ಪಿಕ್ಸೆಲ್ಗಳು) ರೆಸಲ್ಯೂಶನ್, 90Hz ರಿಫ್ರೆಶ್ ರೇಟ್ ಮತ್ತು 20:9 ಆಕಾರ ಅನುಪಾತವನ್ನು ಹೊಂದಿರುವ 6.5-ಇಂಚಿನ IPS LCD ಡಿಸ್ಪ್ಲೇಯನ್ನು ಅಳವಡಿಸಲಾಗಿದೆ. ಹುಡ್ ಅಡಿಯಲ್ಲಿ, ಆಕ್ಟಾ-ಕೋರ್ MediaTek Helio G37 SoC ಪ್ರೊಸೆಸರ್ ಮತ್ತು PowerVR GE8320 GPU ನಿಂದ ಕಾರ್ಯನಿರ್ವಹಿಸುವ ಈ ಸಾಧನವನ್ನು GB RAM ಜೊತೆಗೆ 64GB ಆಂತರಿಕ ಮೆಮೊರಿಯೊಂದಿಗೆ ಜೋಡಿಸಲಾಗಿದೆ.
Moto E32 ಸ್ಮಾರ್ಟ್ಫೋನ್ ಡ್ಯುಯಲ್ ರಿಯರ್ ಕ್ಯಾಮೆರಾ ಸೆಟಪ್ ಹೊಂದಿದೆ. ಇದು 50-ಮೆಗಾಪಿಕ್ಸೆಲ್ ಮುಖ್ಯ ಕ್ಯಾಮೆರಾ ಮತ್ತು 2-ಮೆಗಾಪಿಕ್ಸೆಲ್ ಡೆಪ್ತ್ ಸೆನ್ಸಾರ್ ಕ್ಯಾಮೆರಾಗಳನ್ನು ಒಳಗೊಂಡಿದ್ದು, ಈ ಕ್ಯಾಮೆರಾವು 30 fps ನಲ್ಲಿ ಫುಲ್ HD ವೀಡಿಯೊಗಳನ್ನು ರೆಕಾರ್ಡ್ ಮಾಡುವ ಸಾಮರ್ಥ್ಯದ ಜೊತೆಗೆ ನೈಟ್ ವಿಷನ್, ಪ್ರೊ ಮೋಡ್ ಮತ್ತು ಡ್ಯುಯಲ್ ಕ್ಯಾಪ್ಚರ್ ವೈಶಿಷ್ಟ್ಯಗಳನ್ನು ಹೊಂದಿದೆ. ಇನ್ನು ಮುಂಭಾಗದಲ್ಲಿ ಸೆಲ್ಫಿಗಳಿಗಾಗಿ 8 ಮೆಗಾಪಿಕ್ಸೆಲ್ ಕ್ಯಾಮೆರಾವನ್ನು ನೀಡಲಾಗಿದೆ.
Moto E32 ಸ್ಮಾರ್ಟ್ಫೋನಿನ ಕನೆಕ್ಟಿವಿಟಿ ಆಯ್ಕೆಗಳಲ್ಲಿ, 4G, ಬ್ಲೂಟೂತ್ v5.0, 2.4GHz ಮತ್ತು 5GHz ಡ್ಯುಯಲ್-ಬ್ಯಾಂಡ್ Wi-Fi ಬೆಂಬಲ, ಯುಎಸ್ಬಿ ಟೈಪ್-ಸಿ ಪೋರ್ಟ್ ಮತ್ತು 3.5 ಎಂಎಂ ಹೆಡ್ಫೋನ್ ಜ್ಯಾಕ್ ವೈಶಿಷ್ಟ್ಯಗಳಿವೆ. ಜೊತೆಗೆ 5,000mAh ಬ್ಯಾಟರಿ, ಸೈಡ್-ಮೌಂಟೆಡ್ ಫಿಂಗರ್ಪ್ರಿಂಟ್ ಸೆನ್ಸಾರ್ ಮತ್ತು ಫೇಸ್ ಅನ್ಲಾಕ್ ತಂತ್ರಜ್ಞಾನ, 1TB ವರೆಗೆ ಮೆಮೊರಿ ಹೆಚ್ಚಿಸಬಹುದಾದ ಮೈಕ್ರೊ ಎಸ್ಡಿ ಕಾರ್ಡ್ ಸ್ಲಾಟ್ ಮತ್ತು 2 ವರ್ಷಗಳ OS ವೈಶಿಷ್ಟ್ಯಗಳನ್ನು ನಾವು ನೋಡಬಹುದು.
ಭಾರತದಲ್ಲಿ Moto E32 ಸ್ಮಾರ್ಟ್ಫೋನ್ ಬೆಲೆ ಮತ್ತು ಲಭ್ಯತೆ
ದೇಶದಲ್ಲಿ Moto E32 ಸ್ಮಾರ್ಟ್ಫೋನ್ ಒಂದೇ 4GB RAM + 64GB ಸ್ಟೋರೇಜ್ ಮಾದರಿಯಲ್ಲಿ 10,499 ಬೆಲೆ ಹೊತ್ತು ಬಿಡುಗಡೆಗೊಂಡಿದೆ. ಈ ಸ್ಮಾರ್ಟ್ಫೋನ್ ಬಿಡುಗಡೆ ಕೊಡುಗೆಯಾಗಿ ಎಚ್ಡಿಎಫ್ಸಿ ಬ್ಯಾಂಕ್ ಗ್ರಾಹಕರಿಗೆ 1,000 ರೂ. ಕ್ಯಾಶ್ಬ್ಯಾಕ್ ಅನ್ನು ಒದಗಿಸಲಾಗಿದ್ದು, ಕಾಸ್ಮಿಕ್ ಬ್ಲ್ಯಾಕ್ ಮತ್ತು ಐಸ್ಬರ್ಗ್ ಬ್ಲೂ ಎರಡು ಬಣ್ಣಗಳಲ್ಲಿ ಇಂದಿನಿಂದಲೇ ತನ್ನ ಅಧಿಕೃತ ವೆಬ್ಸೈಟ್ನಲ್ಲಿ ಮಾರಾಟಕ್ಕೆ ಬರುತ್ತಿದೆ ಎಂದು ಮೊಟೊರೊಲಾ ಕಂಪೆನಿ ತಿಳಿಸಿದೆ.
Moto E32 With 5,000mah Battery Launched In India.
15-03-25 09:18 pm
HK News Desk
Mangalore, Tamil actor Prabhu Deva, Kukke Sub...
15-03-25 03:55 pm
Elephant attack, Belur, Hassan: ಕಾಡಾನೆ ದಾಳಿ ;...
15-03-25 12:33 pm
DySP Kanakalakshmi arrested, suicide: ಬೋವಿ ನಿ...
14-03-25 11:11 pm
Swamiji, Bagalkot, Police Video: ದುಡ್ಡು ಪಡೆದು...
14-03-25 08:30 pm
13-03-25 03:49 pm
HK News Desk
Shiradi Ghat, Mangalore Bengalore, Mp Brijesh...
13-03-25 01:30 pm
ಪಾಕಿಸ್ತಾನದಲ್ಲಿ 500ಕ್ಕು ಹೆಚ್ಚು ಪ್ರಯಾಣಿಕರಿದ್ದ ರ...
12-03-25 11:41 am
ಅಮೆರಿಕದಲ್ಲಿ 20 ವರ್ಷದ ಭಾರತೀಯ ಮೂಲದ ಮೆಡಿಕಲ್ ವಿದ್...
10-03-25 10:17 pm
ಎಸ್ಸೆಸ್ಸೆಲ್ಸಿ ವಿದ್ಯಾರ್ಥಿನಿ ಜೊತೆಗೆ ಆಟೋ ಚಾಲಕನ ಸ...
10-03-25 11:45 am
15-03-25 10:00 pm
Mangalore Correspondent
Mangalore court, Moral Police, Acquit: ಹಿಂದು...
15-03-25 08:32 pm
Mangalore Mary Hill, Boy Death; ಮೇರಿಹಿಲ್ ; ಏಳ...
15-03-25 04:11 pm
Dr Vamana Nandavar, Mangalore Death: ತುಳು, ಕನ...
15-03-25 01:47 pm
Mangalore Student Missing, ,Kidnap, Hitein Bh...
15-03-25 12:35 pm
14-03-25 05:02 pm
HK News Desk
Ccb Police, Firearms, Mangalore crime: ವಾಮಂಜೂ...
13-03-25 06:44 pm
Kothanur Police, Bangalore crime, Murder: ನಾಲ...
11-03-25 07:34 pm
Tanishq showroom, Bihar Robbery: ಬಿಹಾರದಲ್ಲಿ ಹ...
10-03-25 10:48 pm
Actress Ranya Rao, CBI, Gold case; ನಟಿ ರನ್ಯಾ...
09-03-25 05:06 pm