ಬ್ರೇಕಿಂಗ್ ನ್ಯೂಸ್
06-10-22 08:16 pm Source: Vijayakarnataka ಡಿಜಿಟಲ್ ಟೆಕ್
ದೀಪಾವಳಿ ಹಬ್ಬದ ವಿಶೇಷ ವಿಶೇಷವಾಗಿ, ಜನಪ್ರಿಯ ಮೊಬೈಲ್ ಬ್ರ್ಯಾಂಡ್ Xiaomi ದೇಶದ ಜನತೆಗೆ ಭರ್ಜರಿ ಆಫರ್ ಒಂದನ್ನು ಘೋಷಿಸಿದೆ. Xiaomi ಆಯೋಜಿಸಿರುವ 'ದೀಪಾವಳಿ ವಿತ್ ಮಿ ಸೇಲ್' ನಲ್ಲಿ ಇತ್ತೀಚಿಗಷ್ಟೆ ಬಿಡುಗಡೆಗೊಂಡಿರುವ Redmi Note 11 SE ಸ್ಮಾರ್ಟ್ಫೋನ್ ಖರೀದಿಯ ಜೊತೆಗೆ 4,999 ಮೌಲ್ಯದ ಸ್ಮಾರ್ಟ್ ವಾಚ್ ಉಚಿತವಾಗಿ ನೀಡುವುದಾಗಿ ಕಂಪೆನಿ ತಿಳಿಸಿದೆ. Xiaomi ದೀಪಾವಳಿ ವಿತ್ ಮಿ ಸೇಲ್ ಸೇಲ್ನಲ್ಲಿ ಸ್ಮಾರ್ಟ್ಫೋನ್ಗಳ ಮೇಲೆ ಆಕರ್ಷಕ ಕೊಡುಗೆಗಳನ್ನು ಒದಗಿಸಲಾಗಿದ್ದು, ಇದೀಗ ಕೇವಲ 12,599 ಬೆಲೆಯಲ್ಲಿ Redmi Note 11 SE ಸ್ಮಾರ್ಟ್ಫೋನ್ ಮತ್ತು Redmi Watch 2 Lite ಸ್ಮಾರ್ಟ್ವಾಚ್ ಸಾಧನಗಳನ್ನು ಒಟ್ಟಿಗೆ ಖರೀದಿಸಬಹುದು ಎಂದು ತಿಳಿಸಲಾಗಿದೆ. ಹಾಗಾದರೆ, ಈ ಬಂಪರ್ ಆಫರ್ ಹೇಗಿದೆ ಎಂಬ ಮಾಹಿತಿಯನ್ನು ತಿಳಿಯೋಣ ಬನ್ನಿ.
ಭಾರತದಲ್ಲಿ 6GB RAM + 64GB ಸ್ಟೋರೇಜ್ ಸಾಮರ್ಥ್ಯದ ಒಂದೇ ಮಾದರಿಯ Redmi Note 11SE ಸ್ಮಾರ್ಟ್ಫೋನನ್ನು ಇದೇ ಆಗಸ್ಟ್ 31 ರಂದು ದೇಶದಲ್ಲಿ ಬಿಡುಗಡೆ ಮಾಡಲಾಗಿತ್ತು. 13,999 ರೂ.ಬೆಲೆಯಲ್ಲಿ ಬಿಡುಗಡೆಯಾಗಿದ್ದ ಈ ಸ್ಮಾರ್ಟ್ಫೋನನ್ನು ಇದೀಗ 12,499 ರೂ.ಗಳ ಕೊಡುಗೆಯ ಬೆಲೆಯಲ್ಲಿ ಮಾರಾಟಕ್ಕಿಡಲಾಗಿದೆ. ಜೊತೆಗೆ ಈ ಸ್ಮಾರ್ಟ್ಫೋನ್ ಮೇಲೆ ಬಂಡಲ್ ಕೊಡುಗೆಯನ್ನು ಪ್ರಕಟಿಸಲಾಗಿದ್ದು, Redmi Note 11 SE ಸ್ಮಾರ್ಟ್ಫೋನ್ ಮತ್ತು Redmi Watch 2 Lite ಸ್ಮಾರ್ಟ್ವಾಚ್ ಎರಡೂ ಸಾಧನಗಳನ್ನು ಒಟ್ಟಿಗೆ 12,599 ರೂ. ಬೆಲೆಯಲ್ಲಿ ಖರೀದಿಸಬಹುದು. ಈ ಹಬ್ಬದ ಮಾರಾಟದಲ್ಲಿ ಒದಗಿಲಾಗಿರುವ ಬ್ಯಾಂಕ್ ಕೊಡುಗೆಗಳು ಸೇರಿದರೆ ಕೇವಲ 12,599 ಬೆಲೆಯಲ್ಲಿ ಈ ಎರಡೂ ಸಾಧನಗಳನ್ನು ಪಡೆಯಬಹುದು ಎಂದು Xiaomi ಸಂಸ್ಥೆ ತಿಳಿಸಿದೆ.
Xiaomi ತನ್ನ ಅಧಿಕೃತ ವೆಬ್ಸೈಟ್ನಲ್ಲಿ ಆಯೋಜಿಸಿರುವ 'ದೀಪಾವಳಿ ವಿತ್ ಮಿ ಸೇಲ್' ನಲ್ಲಿ ಕಂಪೆನಿಯ ಎಲ್ಲಾ ಸ್ಮಾರ್ಟ್ಫೋನ್ಗಳು, ಸ್ಮಾರ್ಟ್ ಟಿವಿಗಳು, ಲ್ಯಾಪ್ಟಾಪ್ಗಳು, ಟ್ಯಾಬ್ಲೆಟ್ಗಳು, ಸ್ಮಾರ್ಟ್ ವಾಚ್ಗಳು, ಆಡಿಯೊ ಉತ್ಪನ್ನಗಳು, ಸ್ಮಾರ್ಟ್ ಉತ್ಪನ್ನಗಳ ಮೇಲೆ ಭಾರಿ ರಿಯಾಯಿತಿ ಕೊಡುಗೆಗಳನ್ನು ನೀಡಲಾಗಿದೆ. ಬ್ಯಾಂಕ್ ಆಫ್ ಬರೋಡಾ ಮತ್ತು ಸಿಟಿ ಬ್ಯಾಂಕ್ ಕಾರ್ಡ್ಗಳನ್ನು ಹೊಂದಿರುವ ಗ್ರಾಹಕರು Xiaomi ಉತ್ಪನ್ನಗಳ ಮೇಲೆ 5,000 ದಿಂದ 8,000 ವರೆಗೆ ರಿಯಾಯಿತಿ ಪಡೆಯಬಹುದು.
Redmi Note 11SE ಸ್ಮಾರ್ಟ್ಫೋನಿನ ವಿಶೇಷಣಗಳು
Redmi Note 11SE ಸ್ಮಾರ್ಟ್ಪೋನಿನಲ್ಲಿ 1,080 x 2,400 ಪಿಕ್ಸೆಲ್ಗಳ ರೆಸಲ್ಯೂಶನ್ ಸಾಮರ್ಥ್ಯದ 6.43-ಇಂಚಿನ AMOLED ಡಿಸ್ಪ್ಲೇಯನ್ನು ಅಳವಡಿಸಲಾಗಿದೆ. ರೌಂಡ್ ಪಂಚ್ ಹೋಲ್ ವಿನ್ಯಾಸದಲ್ಲಿರುವ ಇದರ ಡಿಸ್ಪ್ಲೇಯು, 1,100 ನಿಟ್ ಬ್ರೈಟ್ನೆಸ್, DCI-P3 ಕಲರ್ ಗ್ಯಾಮಟ್, ಡಾಟ್ ಡಿಸ್ಪ್ಲೇ SG, ರೀಡಿಂಗ್ ಮೋಡ್ 3.0, ಸನ್ಲೈಟ್ ಮೋಡ್ 2.0 ಮತ್ತು 409ppi ಪಿಕ್ಸೆಲ್ ಸಾಂದ್ರತೆಯಂತಹ ವೈಶಿಷ್ಟ್ಯಗಳನ್ನು ಹೊಂದಿದೆ. ಹುಡ್ ಅಡಿಯಲ್ಲಿ, MediaTek Helio G95 SoC ಪ್ರೊಸೆಸರ್ ನಿಂದ ಚಾಲಿತವಾಗಿರುವ Redmi Note 11SE ಸ್ಮಾರ್ಟ್ಪೋನ್ ಅನ್ನು 6GB LPDDR4X RAM ಮತ್ತು 64GB UFS 2.2 ಮೆಮೊರಿಯೊಂದಿಗೆ ಜೋಡಿಲಾಗಿದ್ದು, ಮೈಕ್ರೋ SD ಕಾರ್ಡ್ ಮೂಲಕ ಫೋನಿನ 512GB ವರೆಗೆ ಸಂಗ್ರಹಣೆಯನ್ನು ವಿಸ್ತರಿಸಬಹುದು.
ಕ್ಯಾಮೆರಾ ವಿಭಾಗದಲ್ಲಿ, Redmi Note 11SE ಸ್ಮಾರ್ಟ್ಪೋನ್ ಕ್ವಾಡ್ ರಿಯರ್ ಕ್ಯಾಮೆರಾ ಸೆಟಪ್ ಅನ್ನು ಹೊಂದಿದೆ. ಇದರಲ್ಲಿ 64-ಮೆಗಾಪಿಕ್ಸೆಲ್ ಪ್ರಾಥಮಿಕ ಕ್ಯಾಮೆರಾ, 2-ಮೆಗಾಪಿಕ್ಸೆಲ್ ಮ್ಯಾಕ್ರೋ ಲೆನ್ಸ್ ಮತ್ತು 2-ಮೆಗಾಪಿಕ್ಸೆಲ್ ಡೆಪ್ತ್ ಸೆನ್ಸರ್ ಹಾಗೂ AI ಬ್ಯೂಟಿಫೈ ನೀಡಲಾಗಿದೆ. 64-ಮೆಗಾಪಿಕ್ಸೆಲ್ ಪ್ರಾಥಮಿಕ ಕ್ಯಾಮೆರಾವು 30fps ನಲ್ಲಿ 4K ರೆಸಲ್ಯೂಶನ್ ವೀಡಿಯೊಗಳನ್ನು ಶೂಟ್ ಮಾಡಬಹುದು ಮತ್ತು ಬೊಕೆ ಚಿತ್ರಗಳನ್ನು ತೆಗೆಯಬಹುದಾದ ಸಾಮರ್ಥ್ಯವನ್ನು ಹೊಂದಿದೆ ಎಂದು ಕಂಪೆನಿ ತಿಳಿಸಿದೆ. ಸೆಲ್ಫಿ ಮತ್ತು ವಿಡಿಯೋ ಕರೆಗಳಿಗಾಗಿ, Redmi Note 11SE ಸ್ಮಾರ್ಟ್ಫೋನಿನ ಮುಂಭಾಗದಲ್ಲಿ 13-ಮೆಗಾಪಿಕ್ಸೆಲ್ ಸೆಲ್ಫಿ ಕ್ಯಾಮೆರಾವನ್ನು ಅಳವಡಿಸಲಾಗಿದ್ದು, ಇದು 30fps ನಲ್ಲಿ 1080p ರೆಸಲ್ಯೂಶನ್ ವೀಡಿಯೊವನ್ನು ರೆಕಾರ್ಡ್ ಮಾಡಬಹುದು.
ಕನೆಕ್ಟಿವಿಡಟಿ ಆಯ್ಕೆಗಳಲ್ಲಿ,'Redmi Note 11SE ಸ್ಮಾರ್ಟ್ಪೋನ್ ಕೇವಲ 4G LTE ಯನ್ನು ಮಾತ್ರ ಬೆಂಬಲಿಸಲಿದೆ. ಇದಲ್ಲದೇ ಡ್ಯುಯಲ್-ಬ್ಯಾಂಡ್ Wi-Fi, ಬ್ಲೂಟೂತ್ v5, ಮತ್ತು GPS/AGPS ಸಂಪರ್ಕ ಆಯ್ಕೆಗಳನ್ನು ಸಹ ನಾವು ನೋಡಬಹುದು. ಇನ್ನುಳಿದಂತೆ, ಡ್ಯುಯಲ್-ಸ್ಪೀಕರ್ ಸೆಟಪ್, 3.5mm ಹೆಡ್ಫೋನ್ ಜ್ಯಾಕ್, USB ಟೈಪ್-C ಪೋರ್ಟ್, ಐಆರ್ ಬ್ಲಾಸ್ಟರ್, IP53 ರೇಟಿಂಗ್, ಸೈಡ್-ಮೌಂಟರ್ ಫಿಂಗರ್ಪ್ರಿಂಟ್ ಸ್ಕ್ಯಾನರ್ ಮತ್ತು AI ಫೇಸ್ ಅನ್ಲಾಕ್ ಮತ್ತು 33W ವೇಗದ ಚಾರ್ಜಿಂಗ್ ಬೆಂಬಲದೊಂದಿಗೆ 5,000mAh ಬ್ಯಾಟರಿಯನ್ನು Redmi Note 11SE ಸ್ಮಾರ್ಟ್ಪೋನಿನಲ್ಲಿ ನಾವು ನೋಡಬಹುದು. ಇನ್ನು ಈ ಸ್ಮಾರ್ಟ್ಫೋನ್ 160.46 x 74.5 x 8.29mm ಅಳತೆಯಲ್ಲಿ ಸುಮಾರು 178.8g ನಷ್ಟು ತೂಕವನ್ನು ಹೊಂದಿದೆ.
Redmi Note 11 Se And Redmi Watch 2 Lite Combo At Rs 13,999 Check Details.
15-03-25 09:18 pm
HK News Desk
Mangalore, Tamil actor Prabhu Deva, Kukke Sub...
15-03-25 03:55 pm
Elephant attack, Belur, Hassan: ಕಾಡಾನೆ ದಾಳಿ ;...
15-03-25 12:33 pm
DySP Kanakalakshmi arrested, suicide: ಬೋವಿ ನಿ...
14-03-25 11:11 pm
Swamiji, Bagalkot, Police Video: ದುಡ್ಡು ಪಡೆದು...
14-03-25 08:30 pm
13-03-25 03:49 pm
HK News Desk
Shiradi Ghat, Mangalore Bengalore, Mp Brijesh...
13-03-25 01:30 pm
ಪಾಕಿಸ್ತಾನದಲ್ಲಿ 500ಕ್ಕು ಹೆಚ್ಚು ಪ್ರಯಾಣಿಕರಿದ್ದ ರ...
12-03-25 11:41 am
ಅಮೆರಿಕದಲ್ಲಿ 20 ವರ್ಷದ ಭಾರತೀಯ ಮೂಲದ ಮೆಡಿಕಲ್ ವಿದ್...
10-03-25 10:17 pm
ಎಸ್ಸೆಸ್ಸೆಲ್ಸಿ ವಿದ್ಯಾರ್ಥಿನಿ ಜೊತೆಗೆ ಆಟೋ ಚಾಲಕನ ಸ...
10-03-25 11:45 am
15-03-25 10:00 pm
Mangalore Correspondent
Mangalore court, Moral Police, Acquit: ಹಿಂದು...
15-03-25 08:32 pm
Mangalore Mary Hill, Boy Death; ಮೇರಿಹಿಲ್ ; ಏಳ...
15-03-25 04:11 pm
Dr Vamana Nandavar, Mangalore Death: ತುಳು, ಕನ...
15-03-25 01:47 pm
Mangalore Student Missing, ,Kidnap, Hitein Bh...
15-03-25 12:35 pm
14-03-25 05:02 pm
HK News Desk
Ccb Police, Firearms, Mangalore crime: ವಾಮಂಜೂ...
13-03-25 06:44 pm
Kothanur Police, Bangalore crime, Murder: ನಾಲ...
11-03-25 07:34 pm
Tanishq showroom, Bihar Robbery: ಬಿಹಾರದಲ್ಲಿ ಹ...
10-03-25 10:48 pm
Actress Ranya Rao, CBI, Gold case; ನಟಿ ರನ್ಯಾ...
09-03-25 05:06 pm