ಬ್ರೇಕಿಂಗ್ ನ್ಯೂಸ್
05-10-22 07:07 pm Source: Vijayakarnataka ಡಿಜಿಟಲ್ ಟೆಕ್
ಭಾರತದ ಟೆಲಿಕಾಂ ಲೋಕದಲ್ಲಿ ದಿಗ್ಗಜನಾಗಿ ಬೆಳೆದುನಿಂತಿರುವ ರಿಲಯನ್ಸ್ ಜಿಯೋ ಇದೀಗ ಲ್ಯಾಪ್ಟಾಪ್ ಕ್ಷೇತ್ರದಲ್ಲಿಯೂ ಮೋಡಿ ಮಾಡಲು ಬರುತ್ತಿದೆ. ರಿಲಯನ್ಸ್ ಜಿಯೋದಿಂದ ದೇಶದಲ್ಲೇ ಕ್ರಾಂತಿ ಮಾಡಬಹುದಾದಂತಹ 4ಜಿ ಸಿಮ್ಕಾರ್ಡ್ ಸಂಪರ್ಕವಿರುವ ಲ್ಯಾಪ್ಟಾಪ್ ಒಂದನ್ನು ಇದೇ ದೀಪಾವಳಿ ಹಬ್ಬದ ವೇಳೆಗೆ ಕೇವಲ 15,000 ರೂ.ಗಳಿಗೆ ಪರಿಚಯಿಸಲಾಗುತ್ತಿದ್ದು, ಮುಂದಿನ 3 ತಿಂಗಳಲ್ಲಿ ಇದು ದೇಶದ ಎಲ್ಲ ಗ್ರಾಹಕರಿಗೂ ಲಭ್ಯವಾಗಲಿದೆ. ಜಾಗತಿಕ ಕಂಪನಿಗಳಾದ ಕ್ವಾಲ್ಕಮ್ (Qualcomm) ಹಾಗೂ ಮೈಕ್ರೋಸಾಫ್ಟ್ (Microsoft) ಜತೆಗೆ ಕೈಜೋಡಿಸಿರುವ ಜಿಯೋ 4ಜಿ ಸಿಮ್ಕಾರ್ಡ್ (4G SIM card) ಇರುವ ಜಿಯೋಬುಕ್ ಸಾಧನವನ್ನು ಅಭಿವೃದ್ಧಿಪಡಿಸಿದೆ ಎಂದು ಪ್ರಮುಖ ಮಾಧ್ಯಮಗಳ ವರದಿಗಳಲ್ಲಿ ಹೇಳಲಾಗಿದೆ.
ಹೌದು, 2018ರಲ್ಲಿಯೇ ‘ಜಿಯೋ ಬುಕ್’ ಹೆಸರಿನ ಲಾಪ್ ಟಾಪ್ ಸಿದ್ಧಪಡಿಸಲು ಯೋಜನೆ ರೂಪಿಸಲಾಗಿತ್ತು. ಈ ವಿನೂತನ ಪ್ರಯೋಗಕ್ಕೆ 2019ರಲ್ಲಿ ಚಾಲನೆ ನೀಡಲಾಗಿತ್ತು. ಇದೀಗ NB1118QMW, NB1148QMW, ಮತ್ತು NB1112MM ಎಂಬ ಮೂರು ಮಾದರಿಗಳಲ್ಲಿ ಜಿಯೋ ಲ್ಯಾಪ್ಟಾಪ್ಗಳ ಬಿಡುಗಡೆಗೆ ರಿಲಯನ್ಸ್ ಜಿಯೋ ಕಂಪೆನಿ ಸಿದ್ದವಾಗಿದೆ ಎಂದು ಹೇಳಲಾಗಿದೆ. ವಿಶೇಷವೆಂದರೆ, ಈ ಲ್ಯಾಪ್ಟಾಪ್ ಬೆಲೆ ಕೂಡ ಕಡಿಮೆಯಾಗಿದ್ದು, ಪ್ರಸ್ತುತ ಮಾರುಕಟ್ಟೆಯಲ್ಲಿರುವ ಲಾಪ್ಟಾಪ್ ಗಳಿಗಿಂತ ಇದು ಭಿನ್ನವಾಗಿರಲಿದೆ. ಮೊಬೈಲ್ ನಂತೆಯೇ ಸಿಮ್ ಕಾರ್ಡ್ ಸಪೋರ್ಟ್ ‘ಜಿಯೋಬುಕ್’ ಹೊಂದಿರಲಿದೆ. ಅದರಲ್ಲೂ ವಿಶೇಷವಾಗಿ 4G ವೋಲ್ಟ್ ಹಾಗೂ ಎಲ್ಟಿಇ ಫೀಚರ್ ಸೌಲಭ್ಯ ಪಡೆಯಬಹುದು ಎಂದು ಹೇಳಲಾಗಿದೆ.
ಇನ್ನು ಈ ಹಿಂದೆ ಸೋರಿಕೆಯಾದ ಮಾಹಿತಿಗಳ ಪ್ರಕಾರ, ಜಿಯೋಬುಕ್ ಲ್ಯಾಪ್ಟಾಪ್ HD (1,366x768 ಪಿಕ್ಸೆಲ್ಗಳು) ಡಿಸ್ಪ್ಲೇಯನ್ನು ಹೊಂದಿರಬಹುದು ಎಂದು ಸೂಚಿಸುತ್ತದೆ. ಇದು ಸ್ನಾಪ್ಡ್ರಾಗನ್ 665 ಪ್ರೊಸೆಸರ್ ಅನ್ನು ಹೊಂದಿರಲಿದೆ. ಇದು ಸ್ನಾಪ್ಡ್ರಾಗನ್ X12 4G ಮೋಡೆಮ್ಗೆ ಸಂಪರ್ಕಗೊಳ್ಳುತ್ತದೆ. ಇದು 4GB RAM ಮತ್ತು 64GB ವರೆಗಿನ eMMC ಸಂಗ್ರಹಣೆಯನ್ನು ಹೊಂದಿರುವ ಸಾಧ್ಯತೆ ಇದೆ ಎನ್ನಲಾಗಿದೆ. ಕನೆಕ್ಟಿವಿಟಿ ವೈಶಿಷ್ಟ್ಯಗಳಲ್ಲಿ ಮಿನಿ HDMI ಕನೆಕ್ಟರ್, ಡ್ಯುಯಲ್-ಬ್ಯಾಂಡ್ ವೈಫೈ ಮತ್ತು ಬ್ಲೂಟೂತ್ ಸೇರಿವೆ. ಇದು 3-ಅಕ್ಷದ ವೇಗವರ್ಧಕ ಮತ್ತು ಕ್ವಾಲ್ಕಾಮ್ ಆಡಿಯೊ ಚಿಪ್ನೊಂದಿಗೆ ಬಿಡುಗಡೆಯಾಗುವ ಸಾಧ್ಯತೆ ಇದೆ ಎನ್ನಲಾಗಿದೆ.
ಜಿಯೋ 4G ಲ್ಯಾಪ್ಟಾಪ್ನಲ್ಲಿ 13.3 ಇಂಚಿನ Full HD ಡಿಸ್ಪ್ಲೇ 16:9 ಮಾದರಿಯಲ್ಲಿ 1920 x 1080 p ರೆಸಲ್ಯೂಷನ್ ಗುಣಮಟ್ಟವನ್ನು ಹೊಂದಿದೆ. ವಿಡಿಯೋ ಕಾಲಿಂಗ್ ಮಾಡುವ ಸಲುವಾಗಿ HD ಕ್ಯಾಮೆರಾವನ್ನು ಈ ಲಾಪ್ಟಾಪ್ನಲ್ಲಿ ಅಳವಡಿಸಲಾಗಿದೆಯಂತೆ. ಅಂತೆಯೆ ವೇಗದ ಕಾರ್ಯಚರಣೆಗೆ 4GB RAM ಅಳವಡಿಸಲಾಗಿದೆ. ಇನ್ಟೆಲ್ ಪೆನ್ಟಿಮ್ ಕ್ವಾಡ್ ಕೋರ್ ಪ್ರೋಸೆಸರ್ ಇದೆ. 64 GB ಇಂಟರ್ನಲ್ ಮೆಮೊರಿ ಹೊಂದಿದ್ದು, ಮೆಮೊರಿಯನ್ನು ವಿಸ್ತರಿಸಿಕೊಳ್ಳುವ ಅವಕಾಶವನ್ನು ನೀಡಲಾಗಿದೆ.ಈಗಾಗಲೇ ಮಾರುಕಟ್ಟೆಯಲ್ಲಿರುವ ಲಾಪ್ಟಾಪ್ಗಳು ವಿಂಡೋಸ್ ಬಳಸುತ್ತವೆ. ಆದರೆ, ಇದರ ಬದಲಾಗಿ ಗೂಗಲ್ ಆಂಡ್ರಾಯ್ಡ್ ಆಪರೇಟಿಂಗ್ ಸಿಸ್ಟಂ ಸಿದ್ಧಪಡಿಸಲಾಗಿದೆ ಎಂದು ಸಹ ಹೇಳಲಾಗಿದೆ
ಇವುಗಳ ಜೊತೆಯಲ್ಲಿ ಜಿಯೋಬುಕ್ ಡಿವೈಸ್ ಬ್ಲೂಟೂಟ್ 4.0, ಎರಡು USB 3.0 ಪೋರ್ಟ್ಗಳು, ಮೈಕ್ರೋ HDMI ಪೋರ್ಟ್ಗಳು, ಹಾಗೂ ಮೈಕ್ರೋ SD ಕಾರ್ಡ್ ಹಾಕುವ ಸ್ಲಾಟ್ ಗಳನ್ನು ಹೊಂದಿರಲಿದೆ. ಆಂಡ್ರಾಯ್ಡ್ ಆಪ್ಗಳನ್ನು ಇನ್ಸ್ಟಾಲ್ ಮಾಡಿಕೊಳ್ಳಬಹುದಾದ ಫೀಚರ್ ಅನ್ನು ತರಲಾಗುತ್ತಿದೆ ಎನ್ನಲಾಗಿದೆ. ಸಾಮಾನ್ಯರಿಗೆ ಲ್ಯಾಪ್ಟಾಪ್ನಲ್ಲಿ ಆಪರೇಟಿಂಗ್ ಸಿಸ್ಟಮ್ ಬಳಕೆಯನ್ನು ಸಾಕಷ್ಟು ಸುಲಭಗೊಳಿಸಲು ಇದು ಸಹಾಯಕವಾಗಲಿದೆ ಎಂದು ಹೇಳಲಾಗಿದೆ. ಈ ಲ್ಯಾಪ್ಟಾಪ್ ಈ ವರ್ಷದ ಕೊನೆಯಲ್ಲಿ ಅಂದರೆ ಡಿಸೆಂಬರ್ ವೇಳೆ ಅಥವಾ ಮುಂದಿನ ವರ್ಷಾರಂಭದಲ್ಲಿ ಈ ಲ್ಯಾಪ್ ಗ್ರಾಹಕರ ಕೈ ಸೇರಬಹುದು ಎಂದು ಹೇಳಲಾಗಿದೆ.
Reliance Jio To Launch 4g Enabled Low Cost Laptop.
29-04-25 10:45 pm
Bangalore Correspondent
CM Siddaramaiah, Belagavi, BJP Suresh Kumar:...
29-04-25 09:51 pm
Protest Kalaburagi, islamabad Locality: ಕಲಬುರ...
29-04-25 09:20 pm
Kudupu Murder, Mob attack, Parameshwar: ಕುಡುಪ...
29-04-25 04:28 pm
Praveen Nettaru, Mohsin Shukur, Karwar Police...
29-04-25 01:04 pm
29-04-25 03:45 pm
HK News Desk
'ನನಗೆ ಪಾಕಿಸ್ತಾನದಲ್ಲಿ ಯಾರೂ ಇಲ್ಲ, ದಯವಿಟ್ಟು ಉಳಿಸ...
28-04-25 06:52 pm
ಪಾಕಿಸ್ತಾನದ ಶಾಂತಿ ಸಮಿತಿ ಕಚೇರಿ ಎದುರೇ ಬಾಂಬ್ ಸ್ಫೋ...
28-04-25 05:53 pm
ಪಾಕ್ ವಿರುದ್ಧ ಯುದ್ದಕ್ಕೆ ಕರೆ ನೀಡಿದ ಕಾಶ್ಮೀರ್ ಸಿಎ...
27-04-25 08:42 pm
Pak, Website Hacked, Indian Army : ಅಲ್ಲಾ ನಮ್ಮ...
27-04-25 07:38 pm
30-04-25 11:26 am
Mangalore Correspondent
Puttur Elephant Attack: ಕಾಡಾನೆ ತಿವಿತಕ್ಕೆ ಪುತ್...
29-04-25 11:00 pm
Mangalore, Ullal Nethravathi Bridge: ಉಳ್ಳಾಲ ನ...
29-04-25 05:45 pm
Mangalore, Dr Kalladka Bhat: ಹೆಣ್ಣು ಮಕ್ಕಳು ವ್...
29-04-25 12:40 pm
Vadiraj, Mangalore, B R Ambedkar: ಕಾಂಗ್ರೆಸ್ ಸ...
29-04-25 11:53 am
29-04-25 09:59 pm
Mangalore Correspondent
Kudupu Murder, Mangalore Crime, Police: ಕುಡುಪ...
29-04-25 02:53 pm
Belthagady, Blackmail, Mangalore crime: ಬೆಳ್ತ...
28-04-25 11:39 am
Shootout Bakrebail, Mangalore Crime: ಬಾಕ್ರಬೈಲ...
28-04-25 11:24 am
Mangalore crime, Murder, Kudupu: ಕುಡುಪು ಬಳಿಯಲ...
27-04-25 10:59 pm