ಬ್ರೇಕಿಂಗ್ ನ್ಯೂಸ್
01-10-22 08:15 pm Source: Vijayakarnataka ಡಿಜಿಟಲ್ ಟೆಕ್
ಭಾರತದಲ್ಲಿ ಬಹುನಿರೀಕ್ಷಿತ 5G ತಂತ್ರಜ್ಞಾನವು ಇಂದು (ಶನಿವಾರ, ಅಕ್ಟೋಬರ್ 1 2022) ಅಧಿಕೃತವಾಗಿ ಬಿಡುಗಡೆಯಾಗಿದೆ. ಪ್ರಧಾನಿ ನರೇಂದ್ರ ಮೋದಿಯವರು 5G ದೂರ ಸಂಪರ್ಕ ಸೇವೆಗಳಿಗೆ ಚಾಲನೆ ನೀಡಿ, ಬೆಂಗಳೂರು ಸೇರಿದಂತೆ ದೇಶದ 13 ಪ್ರಮುಖ ನಗರಗಳು ಇನ್ನೇನು ಕೆಲವೇ ದಿನಗಳಲ್ಲಿ(ದೀಪಾವಳಿ ಹಬ್ಬದ ವೇಳೆಗೆ 5G ಸೇವೆಗಳು ಗ್ರಾಹಕರಿಗೆ ಲಭ್ಯವಾಗುವ ನಿರೀಕ್ಷೆ ಇದೆ) 5G ಸೇವೆಗೆ ತೆರೆದುಕೊಳ್ಳುತ್ತಿವೆ ಎಂದು ತಿಳಿಸಿದ್ದಾರೆ. ನೀವು ಈಗಾಗಲೇ 5G ಸಪೋರ್ಟ್ ಮಾಡುವ ಸ್ಮಾರ್ಟ್ಫೋನ್ ಹೊಂದಿದ್ದರೆ, ನೀವು ಕೂಡ 5G ವೇಗದಲ್ಲಿ ಡೇಟಾವನ್ನು ಪಡೆಯಬಹುದು. ಹಾಗಾದರೆ, ದೇಶದಲ್ಲಿ 5G ಸೇವೆ ಲಭ್ಯವಾದ ನಂತರ ನಿಮ್ಮ ಸ್ಮಾರ್ಟ್ಫೋನ್ನಲ್ಲಿ 5G ಡೇಟಾವನ್ನು ಬಳಸಲು ಏನು ಮಾಡಬೇಕೆಂದು ತಿಳಿಯೋಣ ಬನ್ನಿ.
ನೀವು 5G ಬೆಂಬಲಿಸುವ ಸ್ಮಾರ್ಟ್ಪೋನ್ ಹೊಂದಿದ್ದರೆ, ಭಾರತದಲ್ಲಿ 5G ಸೇವೆ ಆರಂಭವಾದ ತಕ್ಷಣವೇ ಟೆಲಿಕಾ ಕಂಪೆನಿಗಳು ಸೆಟ್ಟಿಂಗ್ಸ್ ಅನ್ನು ನಿಮ್ಮ ಸ್ಮಾರ್ಟ್ಫೋನಿಗೆ ಕಳುಹಿಸಿಕೊಡುತ್ತವೆ. ಇದರ ಮೂಲಕ ನೀವು 5G ಸೇವೆಯನ್ನು ಪಡೆದುಕೊಳ್ಳಬಹುದು. ಇದಲ್ಲದೇ, ನೀವು ನೇರವಾಗಿ ನಿಮ್ಮ ಸ್ಮಾರ್ಟ್ಫೋನಿನ ಸೆಟ್ಟಿಂಗ್ಸ್ ತೆರೆದು -> ಮೊಬೈಲ್ ನೆಟ್ವರ್ಕ್ -> ನೆಟ್ವರ್ಕ್ (“Settings -> Mobile network -> select the carrier“) ಆಯ್ಕೆಯ ಮೂಲಕ 5G ಸೇವೆಗೆ ಕನೆಕ್ಟ್ ಆಗಬಹುದು. ಆದ್ಯತೆಯ ನೆಟ್ವರ್ಕ್ ಪ್ರಕಾರವನ್ನು "5G/4G/3G/2G" ಆಯ್ಕೆಯಾಗಿ ಕ್ಲಿಕ್ ಮಾಡಿದರೆ ನಿಮ್ಮ ಫೋನ್ನಲ್ಲಿ 4G ಸಿಮ್ನೊಂದಿಗೆ 5G ಸೇವೆಗಳನ್ನು ಬಳಸಲು ಸಾಧ್ಯವಾಗಲಿದೆ.
5G ಸೇವೆಯನ್ನು ಬಳಸಲು ಸಿಮ್ ಕಾರ್ಡ್ ಬದಲಿಸಬೇಕೆ?
ನೀವು 5G ಸೇವೆಯನ್ನು ಬಳಸಲು ಸಿಮ್ ಕಾರ್ಡ್ ಬದಲಿಸಬೇಕಾದ ಅಗತ್ಯ ಇಲ್ಲ. ಪ್ರಸ್ತುತ 4G ಸಿಮ್ನೊಂದಿಗೆ 5G ಸೇವೆಯನ್ನು ಪಡೆಯಲು ಸಾಧ್ಯವಾಗಲಿದೆ. ನಿಮ್ಮ ಸ್ಮಾರ್ಟ್ಪೋನ್ 5G ಸಫೊರ್ಟ್ ಅನ್ನು ಹೊಂದಿದ್ದರೆ, ನಿಮ್ಮ 4G ಸಿಮ್ ಮೂಲಕವೇ 5G ಡೇಟಾ ಸ್ಪೀಡ್ ದೊರೆಯಲಿದೆ. ಟೆಲಿಕಾಂ ಕಂಪೆನಿಗಳು ಎಲ್ಲಿಯವರೆಗೆ NSA 5G ತಂತ್ರಜ್ಞಾನವನ್ನು ಬಳಸುವುದೋ ಅಲ್ಲಿಯವರೆಗೆ ನಿಮಗೆ 5G ಸಿಮ್ ಅಗತ್ಯವಿಲ್ಲ. ಏಕೆಂದರೆ, ಈ ಟೆಕ್ನಾಲಜಿಯು ಈಗಾಗಲೇ ಅಸ್ತಿತ್ವದಲ್ಲಿರುವ 4G ಸಿಮ್ಗಳನ್ನು 5G ಯೊಂದಿಗೆ ಫಾರ್ವರ್ಡ್ ಆಗುವಂತೆ ಮಾಡಲಿದೆ. ಹಾಗಾಗಿ, 5G ಸೇವೆ ಬಳಸಲು ನಿಮ್ಮ 4G ಸಿಮ್ ಅನ್ನು ಬದಲಿಸುವ ಅವಶ್ಯಕತೆ ಎದುರಾಗುವುದಿಲ್ಲ.
NSA 5G (NSA-ನಾನ್-ಸ್ಟ್ಯಾಂಡಲೋನ್ ಆರ್ಕಿಟೆಕ್ಚರ್) ತಂತ್ರಜ್ಞಾನವು ರೇಡಿಯೋ ನೆಟ್ವರ್ಕ್ಗಳ ನಿಯಂತ್ರಣ ಸಿಗ್ನಲಿಂಗ್ ಅನ್ನು 4G ಕೋರ್ಗೆ ಕನೆಕ್ಟ್ ಮಾಡುತ್ತದೆ. ಈ NSA 5G ತಂತ್ರಜ್ಞಾನವನ್ನು ಬಳಸುವುದರಿಂದ ಟೆಲಿಕಾಂ ಕಂಪೆನಿಗಳು ಅಸ್ತಿತ್ವದಲ್ಲಿರುವ 4G ನೆಟ್ವರ್ಕ್ ಮೂಲಕವೇ 5G ಅನ್ನು ಹೆಚ್ಚು ವ್ಯಾಪಕವಾಗಿ ನಿಯೋಜಿಸಲು ಸಾಧ್ಯವಾಗಲಿದೆ. ಒಂದು ವೇಳೆ NSA ಬದಲಿಗೆ ಮತ್ತೊಂದು ಪ್ರಮುಖ SA (ಸ್ಟ್ಯಾಂಡಲೋನ್ ಆರ್ಕಿಟೆಕ್ಚರ್) ತಂತ್ರಜ್ಞಾನವನ್ನು ಬಳಸಿದರೆ 5G ಗಾಗಿ ಹೊಸ ಸಿಮ್ ಖರೀದಿಸಿವುದು ಅಗತ್ಯವಾಗುತ್ತದೆ. ಆದರೆ, ದೇಶದ ಎಲ್ಲಾ ಟೆಲಿಕಾಂ ಕಂಪೆನಗಳು ಪ್ರಸ್ತುತ NSA 5G (NSA-ನಾನ್-ಸ್ಟ್ಯಾಂಡಲೋನ್ ಆರ್ಕಿಟೆಕ್ಚರ್) ತಂತ್ರಜ್ಞಾನವನ್ನು ಬಳಸಿಕೊಂಡು 5G ಸೇವೆಯನ್ನು ಒದಗಿಸಲು ಮುಂದಾಗಿವೆ.
How To Enable And Use 5g On Your Smartphone.
15-03-25 09:18 pm
HK News Desk
Mangalore, Tamil actor Prabhu Deva, Kukke Sub...
15-03-25 03:55 pm
Elephant attack, Belur, Hassan: ಕಾಡಾನೆ ದಾಳಿ ;...
15-03-25 12:33 pm
DySP Kanakalakshmi arrested, suicide: ಬೋವಿ ನಿ...
14-03-25 11:11 pm
Swamiji, Bagalkot, Police Video: ದುಡ್ಡು ಪಡೆದು...
14-03-25 08:30 pm
13-03-25 03:49 pm
HK News Desk
Shiradi Ghat, Mangalore Bengalore, Mp Brijesh...
13-03-25 01:30 pm
ಪಾಕಿಸ್ತಾನದಲ್ಲಿ 500ಕ್ಕು ಹೆಚ್ಚು ಪ್ರಯಾಣಿಕರಿದ್ದ ರ...
12-03-25 11:41 am
ಅಮೆರಿಕದಲ್ಲಿ 20 ವರ್ಷದ ಭಾರತೀಯ ಮೂಲದ ಮೆಡಿಕಲ್ ವಿದ್...
10-03-25 10:17 pm
ಎಸ್ಸೆಸ್ಸೆಲ್ಸಿ ವಿದ್ಯಾರ್ಥಿನಿ ಜೊತೆಗೆ ಆಟೋ ಚಾಲಕನ ಸ...
10-03-25 11:45 am
15-03-25 10:00 pm
Mangalore Correspondent
Mangalore court, Moral Police, Acquit: ಹಿಂದು...
15-03-25 08:32 pm
Mangalore Mary Hill, Boy Death; ಮೇರಿಹಿಲ್ ; ಏಳ...
15-03-25 04:11 pm
Dr Vamana Nandavar, Mangalore Death: ತುಳು, ಕನ...
15-03-25 01:47 pm
Mangalore Student Missing, ,Kidnap, Hitein Bh...
15-03-25 12:35 pm
14-03-25 05:02 pm
HK News Desk
Ccb Police, Firearms, Mangalore crime: ವಾಮಂಜೂ...
13-03-25 06:44 pm
Kothanur Police, Bangalore crime, Murder: ನಾಲ...
11-03-25 07:34 pm
Tanishq showroom, Bihar Robbery: ಬಿಹಾರದಲ್ಲಿ ಹ...
10-03-25 10:48 pm
Actress Ranya Rao, CBI, Gold case; ನಟಿ ರನ್ಯಾ...
09-03-25 05:06 pm