ಬ್ರೇಕಿಂಗ್ ನ್ಯೂಸ್
27-09-22 07:46 pm Source: Vijayakarnataka ಡಿಜಿಟಲ್ ಟೆಕ್
ಜನಪ್ರಿಯ ಮೊಬೈಲ್ ಬ್ರ್ಯಾಂಡ್ Realme ಇತ್ತೀಚಿಗಷ್ಟೆ ಬಿಡುಗಡೆಗೊಳಿಸಿರುವ ಕಡಿಮೆ ಬೆಲೆಯ ಬಜೆಟ್ ಸ್ಮಾರ್ಟ್ಫೋನ್ 'Realme C33' ಇದೀಗ ಎಲ್ಲರ ಗಮನಸೆಳೆಯುತ್ತಿದೆ. ಫ್ಲಿಪ್ಕಾರ್ಟ್ ಆಯೋಜಿಸಿರುವ ಬಿಗ್ಬಿಲಿಯನ್ ಡೇಸ್ ಮಾರಾಟ ಮೇಳದಲ್ಲಿ ಹೊಸ Realme C33 ಸ್ಮಾರ್ಟ್ಫೋನನ್ನು ಕೇವಲ 8,249 ರೂ.ಗಳ ಆರಂಭಿಕ ಬೆಲೆಯಲ್ಲಿ ಮಾರಾಟಕ್ಕಿಡಲಾಗಿದ್ದು, ಜೊತೆಗೆ ಆಕ್ಸಿಸ್ ಬ್ಯಾಂಕ್ ಮತ್ತು ಐಸಿಐಸಿಐ ಕ್ರೆಡಿಟ್ ಕಾರ್ಡ್ಗಳ ಮೇಲೆ 1500 ರಿಯಾಯಿತಿಯನ್ನು ಸಹ ನೀಡಲಾಗಿದೆ. ಇದರಿಂದ ಗ್ರಾಹಕರು ಕೇವಲ 6,750 ರೂ. ಬೆಲೆಯಲ್ಲಿ Realme C33 ಸ್ಮಾರ್ಟ್ಫೋನ್ ಖರೀದಿಸಲು ಅವಕಾಶ ಒದಗಿಬಂದಿದೆ.
ಇದೇ ಸೆಪ್ಟೆಂಬರ್ ತಿಂಗಳ ಆರಂಭದಲ್ಲಷ್ಟೇ ದೇಶದಲ್ಲಿ Realme C33 ಸ್ಮಾರ್ಟ್ಫೋನನ್ನು ಬಿಡುಗಡೆ ಮಾಡಲಾಗಿದ್ದು, 3GB RAM + 32GB ಮತ್ತು 4GB + 64GB ಸ್ಟೋರೇಜ್ ಎರಡು ಮಾದರಿ ಫೋನ್ಗಳನ್ನು ಕ್ರಮವಾಗಿ 8,999 ರೂ.ಮತ್ತು 9,999 ರೂ. ಬೆಲೆಗಳಲ್ಲಿ ಪರಿಚಯಿಸಲಾಗಿತ್ತು. ಇದೀಗ ಈ ಎರಡೂ ಮಾದರಿ ಫೋನ್ಗಳು ಕ್ರಮವಾಗಿ 8,249 ರೂ. ಮತ್ತು 8,999 ರೂ.ಗಳ ಡಿಸ್ಕೌಂಟ್ ಬೆಲೆಗಳಲ್ಲಿ ಮಾರಾಟಕ್ಕಿವೆ. ಈ ಬೆಲೆಗಳಲ್ಲಿ 50-ಮೆಗಾಪಿಕ್ಸೆಲ್ ಕ್ಯಾಮೆರಾ, Unisoc T612 ಪ್ರೊಸೆಸರ್, 5,000mAh ಬ್ಯಾಟರಿ ಮತ್ತು 1TB ವರೆಗೆ ಮೆಮೊರಿ ವಿಸ್ತರಣೆಯಂತಹ ವೈಶಿಷ್ಟ್ಯಗಳನ್ನು Realme C33 ಸ್ಮಾರ್ಟ್ಫೋನ್ ಹೊಂದಿದೆ.
Realme C33 ಸ್ಮಾರ್ಟ್ಫೋನಿನ ವಿಶೇಷಣಗಳು
ಬಜೆಟ್ ಬೆಲೆಯ ನೂತನ Realme C33 ಸ್ಮಾರ್ಟ್ಫೋನ್ 6.5-ಇಂಚಿನ HD+ (720x1,600 ಪಿಕ್ಸೆಲ್) LCD ಡಿಸ್ಪ್ಲೇಯನ್ನು ಹೊಂದಿದೆ ಎಂದು ಕಂಪೆನಿ ತಿಳಿಸಿದೆ. ಆದರೆ, ಈ ಡಿಸ್ಪ್ಲೆಯು ಹೊಂದಿರುವ ಸಾಮರ್ಥ್ಯದ ಬಗ್ಗೆ ಮಾಹಿತಿಯನ್ನು ಒದಗಿಸಿಲ್ಲ. ಇನ್ನು ಹುಡ್ ಅಡಿಯಲ್ಲಿ, Realme C33 ಸ್ಮಾರ್ಟ್ಫೋನ್ 4GB RAM ಮತ್ತು 64GB ಆಂತರಿಕ ಸಂಗ್ರಹಣೆಯೊಂದಿಗೆ ನೊಂದಿಗೆ ಜೋಡಿಸಲಾಗಿರುವ ಆಕ್ಟಾ-ಕೋರ್ Unisoc T612 SoC ಪ್ರೊಸೆಸನಲ್ಲಿ ಕಾರ್ಯನಿರ್ವಹಿಸಲಿದೆ. ಈ ಸ್ಮಾರ್ಟ್ಫೋನಿನ ಆಂತರಿಕ ಮೆಮೊರಿಯನ್ನು ಮೈಕ್ರೋ SD ಕಾರ್ಡ್ ಮೂಲಕ 1TB ವರೆಗೆ ವಿಸ್ತರಿಸಬಹುದಾದ ಆಯ್ಕೆ ಇದೆ ಎಂದು ಕಂಪೆನಿ ತಿಳಿಸಿದೆ.
ಫೋಟೋಗಳು ಮತ್ತು ವೀಡಿಯೊಗಳಿಗಾಗಿ, Realme C33 ಡ್ಯುಯಲ್ ರಿಯರ್ ಕ್ಯಾಮೆರಾ ಸೆಟಪ್ ಅನ್ನು ಹೊಂದಿದೆ. 50-ಮೆಗಾಪಿಕ್ಸೆಲ್ ಮುಖ್ಯ ಕ್ಯಾಮೆರಾ ಸಂವೇದಕವು ಹೊಸ CHDR ಅಲ್ಗಾರಿದಮ್ ಮೂಲಕ ಸ್ಪಷ್ಟವಾದ ಬ್ಯಾಕ್ಲಿಟ್ ಫೋಟೋಗಳನ್ನು ಚಿತ್ರಿಸಲಿದೆ ಎಂದು ಕಂಪೆನಿ ಹೇಳಿಕೊಂಡಿದೆ. ಮುಂಭಾಗದಲ್ಲಿ ಸೆಲ್ಫಿಗಳು ಮತ್ತು ವೀಡಿಯೊ ಕರೆಗಳಿಗಾಗಿ 5-ಮೆಗಾಪಿಕ್ಸೆಲ್ ಕ್ಯಾಮೆರಾವನ್ನು ಅಳವಡಿಸಲಾಗಿದೆ. ಇನ್ನುಳಿದಂತೆ 5,000mAh ಬ್ಯಾಟರಿ, ಸೈಡ್-ಮೌಂಟೆಡ್ ಫಿಂಗರ್ಪ್ರಿಂಟ್, ಪ್ರೀಮಿಯಂ ಸೌಂಡ್ ಔಟ್ಪುಟ್ಗಾಗಿ ಡೈರೆಕ್ 3.0 ತಂತ್ರಜ್ಞಾನ ಮತ್ತು ಆಂಡ್ರಾಯ್ಡ್ 12-ಆಧಾರಿತ Realme UI S ಆವೃತ್ತಿಯ ವೈಶಿಷ್ಟ್ಯಗಳ ಬಗ್ಗೆ ತಿಳಿಸಲಾಗಿದೆ.
Flipkart Big Billion Days Sale Realme C33 Available For Rs 8,249.
12-09-25 08:26 pm
HK News Desk
Yatnal, Maddur: ರಾಜ್ಯದಲ್ಲಿ ಹೊಸ ಹಿಂದು ಪಾರ್ಟಿ ಕ...
12-09-25 03:04 pm
ಸಾಹಸಸಿಂಹ ವಿಷ್ಣುವರ್ಧನ್, ಹಿರಿಯ ನಟಿ ಬಿ.ಸರೋಜಾದೇವಿ...
11-09-25 10:11 pm
ಈದ್ ಮೆರವಣಿಗೆ : ಶಿವಮೊಗ್ಗದಲ್ಲಿ ಪಾಕಿಸ್ತಾನ್ ಜಿಂದಾ...
09-09-25 10:52 pm
U T Khader: ಯುಟಿ ಖಾದರ್ ಏಕಪಕ್ಷೀಯ ತೀರ್ಮಾನ ತೆಗೆದ...
09-09-25 09:14 pm
12-09-25 11:33 am
HK News Desk
ನೇಪಾಳದಲ್ಲಿ ಕಮ್ಯುನಿಸ್ಟ್ ಸರಕಾರ ಪತನ ; ಹೊಸ ನಾಯಕ ಯ...
10-09-25 04:22 pm
ನೇಪಾಳದಲ್ಲಿ ಹಿಂಸಾಚಾರ ತೀವ್ರ ; ದೇಶ ಬಿಟ್ಟು ಓಡಿದ ಪ...
09-09-25 11:09 pm
ನೂತನ ಉಪ ರಾಷ್ಟ್ರಪತಿಯಾಗಿ ಎನ್.ಡಿ.ಎ ಮೈತ್ರಿಕೂಟದ ಸಿ...
09-09-25 09:38 pm
ಕಾಸರಗೋಡು ; ರಾಷ್ಟ್ರೀಯ ಹೆದ್ದಾರಿ ದಾಟಲೆತ್ನಿಸಿದ ಮಹ...
08-09-25 11:06 pm
12-09-25 10:58 pm
Mangalore Correspondent
Mahesh Vikram Hegde Arrested, Post Card Kanna...
12-09-25 09:25 pm
Sameer Md, Dharmasthala: ವಿದೇಶದಿಂದ ಫಂಡ್ ಬಂದಿ...
12-09-25 08:53 pm
RTI Dharmasthala Hostels, Mahesh Thimarodi: ಧ...
12-09-25 07:43 pm
Mangalore Road Accident, Pothole, Survery: ರಸ...
12-09-25 05:34 pm
12-09-25 11:07 pm
Mangalore Correspondent
Ullal Police, Mangalore, Gold Robbery: ತೊಕ್ಕೊ...
12-09-25 10:48 pm
Udupi, Brahmavar Stabbing, Crime: ಬ್ರಹ್ಮಾವರ ;...
12-09-25 05:31 pm
Mangalore Police, Arrest: ಉರ್ವಾದಲ್ಲಿ ಪೊಲೀಸ್ ಕ...
11-09-25 09:13 pm
Mangalore Fake Documents, Crime, Arrest: ಸರ್ಕ...
11-09-25 08:52 pm