ಬ್ರೇಕಿಂಗ್ ನ್ಯೂಸ್
24-09-22 10:35 pm HK News Desk ಡಿಜಿಟಲ್ ಟೆಕ್
ಜನಪ್ರಿಯ ಸ್ಮಾರ್ಟ್ಫೋನ್ ಬ್ರ್ಯಾಂಡ್ Tecno ದೇಶದಲ್ಲಿ ತನ್ನ ಬಹುನಿರೀಕ್ಷಿತ Tecno Pova Neo 5G ಸ್ಮಾರ್ಟ್ಫೋನನ್ನು ಬಿಡುಗಡೆಗೊಳಿಸಿದೆ. ಕಡಿಮೆ ಬೆಲೆಯಲ್ಲಿ 5G ತಂತ್ರಜ್ಞಾನವನ್ನು ಹೊಂದಿರುವ ಈ ನೂತನ ಸ್ಮಾರ್ಟ್ಫೋನ್ 6,000mAh ಬ್ಯಾಟರಿ, 120Hz ರಿಫ್ರೆಶ್ ರೇಟ್ ಸಾಮರ್ಥ್ಯವನ್ನು ಹೊಂದಿರುವ 6.8-ಇಂಚಿನ ಫುಲ್ HD+ LTPS ಡಿಸ್ಪ್ಲೇ ಮತ್ತು 18W ವೇಗದ ಚಾರ್ಜಿಂಗ್ ಬೆಂಬಲಿಸುವ 6,000mAh ಬ್ಯಾಟರಿಯಂತಹ ವೈಶೀಷ್ಟ್ಯಗಳನ್ನು ಹೊತ್ತು ಬಂದಿದ್ದು, ಈ ಹೊಸ ಸ್ಮಾರ್ಟ್ಫೋನ್ ಹೊಂದಿರುವ ಸಂಪೂರ್ಣ ವೈಶಿಷ್ಟ್ಯಗಳು ಯಾವುವು ಮತ್ತು ಬೆಲೆ ಎಷ್ಟು ಎಂಬುದನ್ನು ತಿಳಿಯೋಣ ಬನ್ನಿ.
Tecno Pova Neo 5G ಫೋನಿನ ವೈಶಿಷ್ಟ್ಯಗಳು
ಮೊದಲೇ ಹೇಳಿದಂತೆ, ನೂತನ Tecno Pova Neo 5G ಸ್ಮಾರ್ಟ್ಫೋನಿನಲ್ಲಿ 6.8-ಇಂಚಿನ ಫುಲ್ HD+ (1,080x2,460 ಪಿಕ್ಸೆಲ್ಗಳು) LTPS ಡಿಸ್ಪ್ಲೆಯನ್ನು ನೀಡಲಾಗಿದೆ. ಈ ಡಿಸ್ಪ್ಲೇಯು 120Hz ರಿಫ್ರೆಶ್ ರೇಟ್ ಮತ್ತು 240Hz ಟಚ್ ಸ್ಯಾಂಪ್ಲಿಂಗ್ ರೇಟ್ ವೈಶಿಷ್ಟ್ಯಗಳನ್ನು ಹೊಂದಿದ್ದು, ಗೇಮಿಂಗ್ ಪ್ರಿಯರಿಗೆ ಸೂಕ್ತವಾಗಿದೆ ಎಂದು ಕಂಪೆನಿ ತಿಳಿಸಿದೆ. ಹುಡ್ ಅಡಿಯಲ್ಲಿ, ಮೀಡಿಯಾ ಟೆಕ್ ಡೈಮೆನ್ಸಿಟಿ 810 ಪ್ರೊಸೆಸರ್ ನಲ್ಲಿ ಕಾರ್ಯನಿರ್ವಹಿಸಲಿರುವ ಈ Tecno Pova Neo 5G ಸ್ಮಾರ್ಟ್ಫೋನನ್ನು 4GB RAM + 128GB ಸ್ಟೋರೇಜ್ ಮತ್ತು Mali-G57 GPU ನೊಂದಿಗೆ ಜೋಡಿಸಲಾಗಿದೆ. ಇನ್ನು ಈ ಸ್ಮಾರ್ಟ್ಫೋನ್ Android 12 ಆಧಾರಿತ Hi OS 8.6 ನಲ್ಲಿ ಕಾರ್ಯನಿರ್ವಹಿಸುತ್ತದೆ ಎಂದು ಕಂಪೆನಿ ಹೇಳಿದೆ.

ಕ್ಯಾಮೆರಾ ವಿಭಾಗದಲ್ಲಿ, Tecno Pova Neo 5G ಸ್ಮಾರ್ಟ್ಫೋನಿನಲ್ಲಿ ಕ್ವಾಡ್ ಫ್ಲ್ಯಾಷ್ನೊಂದಿಗೆ 50-ಮೆಗಾಪಿಕ್ಸೆಲ್ AI ಡ್ಯುಯಲ್ ರಿಯರ್ ಕ್ಯಾಮೆರಾ ಸೆಟಪ್ ತರಲಾಗಿದೆ. ಇದು 2K ರೆಸಲ್ಯೂಶನ್ನೊಂದಿಗೆ ವೀಡಿಯೊಗಳನ್ನು ಚಿತ್ರಿಸಲಿದೆ ಎಂದು ಕಂಪೆನಿ ತಿಳಿಸಿದೆ. ಸೆಲ್ಫಿ ಮತ್ತು ವಿಡಿಯೋ ಕರೆಗಳಿಗಾಗಿ ಮುಂಭಾಗದಲ್ಲಿ f/2.0 ಅಪಾರ್ಚರ್ನೊಂದಿಗೆ 8-ಮೆಗಾಪಿಕ್ಸೆಲ್ ಸೆಲ್ಫಿ ಕ್ಯಾಮೆರಾವನ್ನು ಅಳವಡಿಸಲಾಗಿದೆ.
ಕನೆಕ್ಟಿವಿಟಿ ಆಯ್ಕೆಗಳಲ್ಲಿ, Tecno Pova Neo 5G ಸ್ಮಾರ್ಟ್ಫೋನಿನಲ್ಲಿ 13-ಬ್ಯಾಂಡ್ಗಳಿಗೆ 5G ಬೆಂಬಲ, 2.4GHz ಮತ್ತು 5GHz ಡ್ಯುಯಲ್-ಬ್ಯಾಂಡ್ Wi-Fi ಮತ್ತು ಬ್ಲೂಟೂತ್ v5.0 ಸಂಪರ್ಕಗಳನ್ನು ನಾವು ನೋಡಬಹುದು. ಬ್ಯಾಟರಿ ವಿಬಾಗದಲ್ಲಿ, Tecno Pova Neo 5G ಸ್ಮಾರ್ಟ್ಫೋನ್ 18W ವೇಗದ ಚಾರ್ಜಿಂಗ್ ಅನ್ನು ಬೆಂಬಲಿಸುವ 6,000mAh Li-ion ಬ್ಯಾಟರಿಯನ್ನು ಹೊಂದಿದೆ. ಇಷ್ಟೇ ಅಲ್ಲದೇ, 3GB ವರೆಗೆ RAM ವಿಸ್ತರಿಸಬಹುದಾದ ಮೆಮೊರಿ ಫ್ಯೂಷನ್, 128GB ಆನ್ಬೋರ್ಡ್ ಮೆಮೊರಿ (1TB ವರೆಗೆ ವಿಸ್ತರಿಸಬಹುದು), DTS ಡ್ಯುಯಲ್ ಸ್ಟಿರಿಯೊ ಸ್ಪೀಕರ್ಗಳು ಮತ್ತು ಸೈಡ್-ಮೌಂಟೆಡ್ ಫಿಂಗರ್ಪ್ರಿಂಟ್ ಸಂವೇದಕದಂತಹ ವೈಶಿಷ್ಟ್ಯಗಳನ್ನು ನಾವು ನೋಡಬಹುದು

ಭಾರತದಲ್ಲಿ Tecno Pova Neo 5G ಬೆಲೆ, ಲಭ್ಯತೆ
ಭಾರತದಲ್ಲಿ Tecno Pova Neo 5G ಸ್ಮಾರ್ಟ್ಫೋನನ್ನು ಒಂದೇ 4GB RAM + 128GB ಸ್ಟೋರೇಜ್ ಮಾದರಿಯಲ್ಲಿ ಬಿಡುಗಡೆ ಮಾಡಲಾಗಿದ್ದು, ಈ ಸಾಧನವನ್ನು 15,499 ಬೆಲೆಯಲ್ಲಿ ಪರಿಚಯಿಸಲಾಗಿದೆ. ಇನ್ನು ಇದೇ ಸೆಪ್ಟೆಂಬರ್ 26 ರಿಂದ ದೇಶದಲ್ಲಿ ಮಾರಾಟಕ್ಕೆ ಬರುತ್ತಿರುವ ಈ ಸ್ಮಾರ್ಟ್ಫೋನನ್ನು Sapphire Black ಮತ್ತು Sprint Blue ಎರಡು ಬಣ್ಣಗಳಲ್ಲಿ ಖರೀದಿಸಬಹುದು.
Tecno Pova Neo 5g Launched In India Price And Features.
12-06-26 12:02 pm
HK News Staffer
ಪದತ್ಯಾಗದ ತರಾತುರಿಯಲ್ಲೇ ಸಿದ್ದರಾಮಯ್ಯ ಕುರುಬ ಸಮುದಾ...
11-06-26 08:31 pm
ಹಳಸಿತೇ ಜಮೀರ್ - ಸಿದ್ದು ಸ್ನೇಹ ಸಂಬಂಧ? ನಿಮ್ಮ ಆಪ್ತ...
11-06-26 07:36 pm
ಮಗು ಕರುಣಿಸಿದ ಪ್ರಕರಣ; ಕೊನೆಗೂ ರಾಜಿ ಸಂಧಾನಕ್ಕಿಳಿದ...
11-06-26 01:53 pm
ಬಿಟ್ಕಾಯಿನ್ ಹಗರಣ ; ಹ್ಯಾರಿಸ್ ನಲಪಾಡ್ ಹೆಸ್ರು ಚಾರ...
10-06-26 10:40 pm
13-06-26 03:01 pm
HK News Staffer
4,399 ದಿನಗಳ ಸುದೀರ್ಘ ಆಡಳಿತ, ಭಾರತದ ಇತಿಹಾಸದಲ್ಲೇ...
10-06-26 06:42 pm
ಮಧ್ಯಪ್ರಾಚ್ಯದಲ್ಲಿ ಮತ್ತೆ ಉದ್ವಿಗ್ನ ಸ್ಥಿತಿ; ಕೂಡಲೇ...
08-06-26 09:11 pm
ದೇಲಂಪಾಡಿ ; ಭಾರೀ ಮಳೆಗೆ ಕಲ್ಲಿನ ತಡೆಗೋಡೆ ಕುಸಿದು ಬ...
06-06-26 10:42 pm
ನೀಟ್ ಪ್ರಶ್ನೆಪತ್ರಿಕೆ ಸೋರಿಕೆ ; ಜಿರಳೆಗಳ ಮುಖವಾಡ ಧ...
06-06-26 05:48 pm
13-06-26 05:28 pm
HK News Staffer
ಮಧ್ಯರಾತ್ರಿ ಎದೆನೋವಿನಿಂದ ಮನೆಯಲ್ಲೇ ಕುಸಿದು ಬಿದ್ದ...
12-06-26 10:48 pm
ಎಂಬಿಎ ಲ್ಯಾಬ್ ಶುಲ್ಕ ಅಕ್ರಮ; ಮಂಗಳೂರು ವಿವಿಯ ಆಡಳಿತ...
12-06-26 08:44 pm
ಕೊಲ್ಲೂರು ಮೂಕಾಂಬಿಕೆ ದರ್ಶನ ಪಡೆದ ಸಿಎಂ ವಿಜಯ್ ಜೋಸೆ...
12-06-26 04:31 pm
ದ್ರಾವಿಡ ನಾಡಿನ ಸಿಎಂ ಜೋಸೆಫ್ ವಿಜಯ್ ದಿಢೀರ್ ಕೊಲ್ಲೂ...
12-06-26 02:56 pm
13-06-26 09:17 pm
HK News Staffer
ಬೆಂಗಳೂರಿನ ನ್ಯಾಯಮಿತ್ರ ಸಹಕಾರಿ ಬ್ಯಾಂಕ್ ನಲ್ಲಿ ಅನ್...
13-06-26 08:43 pm
ಕಾಲೇಜು ಫೀಸ್ಗೆ ಕೊಟ್ಟ 10 ಸಾವಿರವೇ ಜೀವ ತೆಗೆಯಿತು!...
13-06-26 06:14 pm
ಪತ್ನಿ ಹತ್ಯೆಗೆ ಜೈಲಿನಿಂದಲೇ ಸುಪಾರಿ ; ಬುರ್ಖಾ ಧರಿಸ...
12-06-26 11:58 am
Manoj Kodikere Arrest: ಕೋಕಾ ಕಾಯ್ದೆ- ಕಿಡ್ನಾಪ್...
11-06-26 08:44 pm