ಬ್ರೇಕಿಂಗ್ ನ್ಯೂಸ್
21-09-22 07:32 pm Source: Vijayakarnataka ಡಿಜಿಟಲ್ ಟೆಕ್
ಭಾರತೀಯರ ಅಚ್ಚುಮೆಚ್ಚಿನ ಸ್ಮಾರ್ಟ್ಫೋನ್ ಬ್ರ್ಯಾಂಡ್ ಶಿಯೋಮಿಯ ಜನಪ್ರಿಯ Xiaomi 11T Pro 5G ಸ್ಮಾರ್ಟ್ಫೋನ್ ಮೇಲೆ ಭಾರೀ ಡಿಸ್ಕೌಂಟ್ ಪ್ರಕಟಿಸಲಾಗಿದೆ. ಶಿಯೋಮಿ ಈ ವರ್ಷದ ಆರಂಭದಲ್ಲಿ ಪರಿಚಯಿಸಿದ್ದ ಈ ಮಧ್ಯಮ ಬಜೆಟ್ ಬೆಲೆಯ ಸ್ಮಾರ್ಟ್ಫೋನ್ ಮೇಲೆ ಬರೋಬ್ಬರಿ 10,000 ರೂ. ಡಿಸ್ಕೌಂಟ್ ನೀಡಲಾಗಿದ್ದು, ಈ ಮೊದಲು 39,999 ರೂ. ಬೆಲೆಯಲ್ಲಿ ಬಿಡುಗಡೆಯಾಗಿದ್ದ ಈ ಸ್ಮಾರ್ಟ್ಫೋನ್ ಇದೀಗ ಕೇವಲ 28,999 ರೂ. ಬೆಲೆಯಲ್ಲಿ ಖರೀದಿಗೆ ಲಭ್ಯವಿದೆ. ಇದೇ ಸೆಪ್ಟೆಂಬರ್ 23 ರಿಂದ ಪ್ರಾರಂಭವಾಗುತ್ತಿರುವ ಅಮೆಜಾನ್ ಗ್ರೇಟ್ ಇಂಡಿಯನ್ ಫೆಸ್ಟಿವಲ್ ಸೇಲ್ನಲ್ಲಿ ಗ್ರಾಹಕರು 28,999 ರೂ. ಬೆಲೆಯಲ್ಲಿ Xiaomi 11T Pro 5G ಸ್ಮಾರ್ಟ್ಫೋನನ್ನು ಖರೀದಿಸಬಹುದು. ಈ ಕೊಡುಗೆಯು ಬ್ಯಾಂಕ್ ಆಫರ್ಗಳನ್ನು ಸಹ ಒಳಗೊಂಡಿದೆ ಎಂದು ಶಿಯೋಮಿ ಸಂಸ್ಥೆಯು ತಿಳಿಸಿದೆ. ಹಾಗಾದರೆ, Xiaomi 11T Pro 5G ಸ್ಮಾರ್ಟ್ಫೋನ್ ಹೇಗಿದೆ?, ಈ ಸ್ಮಾರ್ಟ್ಫೋನ್ ಹೊಂದಿರುವ ವೈಶಿಷ್ಟ್ಯಗಳು ಯಾವುವು ನೋಡೋಣ ಬನ್ನಿ.
Xiaomi 11T Pro 5G ಸ್ಮಾರ್ಟ್ಫೋನಿನ ವೈಶಿಷ್ಟ್ಯಗಳನ್ನು ನೋಡುವುದಾದರೆ, ಈ Xiaomi 11T Pro 5G ಸ್ಮಾರ್ಟ್ಫೋನ್ 6.67-ಇಂಚಿನ ಫುಲ್-HD+ AMOLED ಡಿಸ್ಪ್ಲೇಯೊಂದಿಗೆ 120Hz ಡೈನಾಮಿಕ್ ರಿಫ್ರೆಶ್ ರೇಟ್ ಬೆಂಬಲಿಸುತ್ತದೆ. ಇದರ ಪ್ರದರ್ಶನವು ಡಾಲ್ಬಿ ವಿಷನ್ಗೆ ಬೆಂಬಲದೊಂದಿಗೆ ಬರುತ್ತದೆ ಮತ್ತು 1000ನಿಟ್ಸ್ ಬ್ರೈಟ್ನೆಸ್ ಮತ್ತು 480Hz ಟಚ್ ಸ್ಲಾಪಿಂಗ್ ವೈಶಿಷ್ಟ್ಯಗಳನ್ನು ಹೊಂದಿದೆ. ಹೆಚ್ಚುವರಿ ರಕ್ಷಣೆಗಾಗಿ ಮೇಲ್ಭಾಗದಲ್ಲಿ ಗೊರಿಲ್ಲಾ ಗ್ಲಾಸ್ ವಿಕ್ಟಸ್ ಕೂಡ ಇರುವುದನ್ನು ನಾವು ನೋಡಬಹುದು. ಹಾಗೆಯೇ, ಈ ಸ್ಮಾರ್ಟ್ಫೋನ್ ಕ್ವಾಲ್ಕಾಮ್ ಸ್ನಾಪ್ಡ್ರಾಗನ್ 888 ನಿಂದ ಚಾಲಿತವಾಗಿದ್ದು, 12GB ಯ LPDDR5 RAM ಮತ್ತು 256GB ಯ ಆಂತರಿಕ ಸಂಗ್ರಹಣೆಯನ್ನು ಹೊಂದಿದೆ. ಬಳಕೆದಾರರು ಸ್ಮಾರ್ಟ್ಫೋನ್ ಬೆಂಬಲಿಸುವ 3GB ಹೆಚ್ಚುವರಿ ವರ್ಚುವಲ್ RAM ನ ಲಾಭವನ್ನು ಸಹ ಪಡೆಯಬಹುದು ಎಂದು ಕಂಪೆನಿಯು ತಿಳಿಸಿದೆ.
Xiaomi 11T Pro 5G ಸ್ಮಾರ್ಟ್ಫೋನಿನ ಹಿಂಭಾಗದಲ್ಲಿ ಟ್ರಿಪಲ್-ಕ್ಯಾಮೆರಾ ಸೆಟಪ್ ಇದೆ, ಅಲ್ಲಿ ಪ್ರಾಥಮಿಕ ಸಂವೇದಕವು ಅಲ್ಟ್ರಾ-ವೈಡ್-ಆಂಗಲ್ ಸಂವೇದಕದೊಂದಿಗೆ ಜೋಡಿಯಾಗಿರುವ 108MP ಲೆನ್ಸ್ ಮತ್ತು ಆಟೋಫೋಕಸ್ ಬೆಂಬಲದೊಂದಿಗೆ 5MP ಟೆಲಿಮ್ಯಾಕ್ರೋ ಶೂಟರ್ ಆಗಿದೆ. Xiaomi 11T Pro 5G ಸಿನಿಮ್ಯಾಟಿಕ್ ಫಿಲ್ಟರ್ಗಳು, ಪ್ರೊ-ಟೈಮ್ ಲ್ಯಾಪ್ಸ್, 30fps ನಲ್ಲಿ 8k ವೀಡಿಯೊ ರೆಕಾರ್ಡಿಂಗ್ ಮತ್ತು 960fps ವರೆಗಿನ ಫ್ರೇಮ್ ದರದೊಂದಿಗೆ ನಿಧಾನ ಚಲನೆಯ ವೀಡಿಯೊ ಬೆಂಬಲವನ್ನು ಬೆಂಬಲಿಸುತ್ತದೆ. ಸೆಲ್ಫಿಗಳು ಮತ್ತು ವೀಡಿಯೊ ಕರೆಗಾಗಿ, ಮುಂಭಾಗದಲ್ಲಿ 16MP ಸಂವೇದಕವಿದೆ. ಸ್ಮಾರ್ಟ್ಫೋನ್ನ ಮತ್ತೊಂದು ಪ್ರಮುಖ ವೈಶಿಷ್ಟ್ಯವೆಂದರೆ 120W ಹೈಪರ್ಚಾರ್ಜ್ ಬೆಂಬಲ.ಈ ಸಾಧನವು 5000mAh ಬ್ಯಾಟರಿಯನ್ನು ಹೊಂದಿದೆ. ಕೇವಲ 17 ನಿಮಿಷಗಳಲ್ಲಿ ಫೋನ್ 0% ರಿಂದ 100% ವರೆಗೆ ಚಾರ್ಜ್ ಆಗುತ್ತದೆ ಎಂದು ಕಂಪನಿ ಹೇಳಿಕೊಂಡಿದೆ
ಭಾರತದಲ್ಲಿ Xiaomi 11T Pro 5G ಸ್ಮಾರ್ಟ್ಫೋನ್ ಮೂರು ವಿಭಿನ್ನ ರೂಪಾಂತರಗಳಲ್ಲಿ ದೇಶದಲ್ಲಿ ಖರೀದಿಗೆ ಲಭ್ಯವಿದೆ. 8GB+128GB ಹೊಂದಿರುವ ಇದರ ಮೂಲ ಮಾದರಿಯು 39,999 ರೂ. ಆರಂಭಿಕ ಬೆಲೆಯಲ್ಲಿ ಬಿಡುಗಡೆಯಾಗಿತ್ತು. ಇದೀಗ ಅಮೆಜಾನ್ ಗ್ರೇಟ್ ಇಂಡಿಯನ್ ಫೆಸ್ಟಿವಲ್ ಸೇಲ್ನಲ್ಲಿ ಇದು ಕೇವಲ 28,999 ರೂ. ಬೆಲೆಯಲ್ಲಿ ಖರೀದಿಸಬಹುದು. ಹಾಗೆಯೇ, 8GB+256GB ರೂಪಾಂತರ ಸಾಮರ್ಥ್ಯದ ಫೋನ್ ಬೆಲೆ 41,999 ರೂ.ಗಳು ಮತ್ತು ಮತ್ತು 12GB+256GB ರೂಪಾಂತರದ ಪೋನ್ ಬೆಲೆ ರೂ.43,999 ರೂ. ಬೆಲೆಗಳನ್ನು ಹೊಂದಿವೆ. ಆದರೆ. ಈ ಎರಡೂ ಸ್ಮಾರ್ಟ್ಫೋನ್ಗಳ ಮೇಲೆ 10,000 ರೂ. ಕ್ಕಿಂತ ಹೆಚ್ಚು ಡಿಸ್ಕೌಂಟ್ಸ್ ದೊರೆಯುತ್ತದೆ ಎಂದು ಕಂಪೆನಿ ತಿಳಿಸಿದೆ. ಮೂನ್ಲೈಟ್ ವೈಟ್ ಮತ್ತು ಸೆಲೆಸ್ಟಿಯಲ್ ಮ್ಯಾಜಿಕ್ ಸೇರಿದಂತೆ ಮೂರು ವಿಭಿನ್ನ ಬಣ್ಣಗಳಲ್ಲಿ ಲಭ್ಯವಿರುವ ಈ ಸ್ಮಾರ್ಟ್ಫೋನ್ ಪ್ರಸ್ತುತ ಅತ್ಯತ್ತಮ ಸ್ಮಾರ್ಟ್ಫೋನ್ಗಳಲ್ಲೊಂದು ಎಂದು ಹೇಳಬಹುದು.
Xiaomi 11t Pro Gets Huge Discount At Amazon Great Indian Festival.
12-09-25 08:26 pm
HK News Desk
Yatnal, Maddur: ರಾಜ್ಯದಲ್ಲಿ ಹೊಸ ಹಿಂದು ಪಾರ್ಟಿ ಕ...
12-09-25 03:04 pm
ಸಾಹಸಸಿಂಹ ವಿಷ್ಣುವರ್ಧನ್, ಹಿರಿಯ ನಟಿ ಬಿ.ಸರೋಜಾದೇವಿ...
11-09-25 10:11 pm
ಈದ್ ಮೆರವಣಿಗೆ : ಶಿವಮೊಗ್ಗದಲ್ಲಿ ಪಾಕಿಸ್ತಾನ್ ಜಿಂದಾ...
09-09-25 10:52 pm
U T Khader: ಯುಟಿ ಖಾದರ್ ಏಕಪಕ್ಷೀಯ ತೀರ್ಮಾನ ತೆಗೆದ...
09-09-25 09:14 pm
12-09-25 11:33 am
HK News Desk
ನೇಪಾಳದಲ್ಲಿ ಕಮ್ಯುನಿಸ್ಟ್ ಸರಕಾರ ಪತನ ; ಹೊಸ ನಾಯಕ ಯ...
10-09-25 04:22 pm
ನೇಪಾಳದಲ್ಲಿ ಹಿಂಸಾಚಾರ ತೀವ್ರ ; ದೇಶ ಬಿಟ್ಟು ಓಡಿದ ಪ...
09-09-25 11:09 pm
ನೂತನ ಉಪ ರಾಷ್ಟ್ರಪತಿಯಾಗಿ ಎನ್.ಡಿ.ಎ ಮೈತ್ರಿಕೂಟದ ಸಿ...
09-09-25 09:38 pm
ಕಾಸರಗೋಡು ; ರಾಷ್ಟ್ರೀಯ ಹೆದ್ದಾರಿ ದಾಟಲೆತ್ನಿಸಿದ ಮಹ...
08-09-25 11:06 pm
12-09-25 10:58 pm
Mangalore Correspondent
Mahesh Vikram Hegde Arrested, Post Card Kanna...
12-09-25 09:25 pm
Sameer Md, Dharmasthala: ವಿದೇಶದಿಂದ ಫಂಡ್ ಬಂದಿ...
12-09-25 08:53 pm
RTI Dharmasthala Hostels, Mahesh Thimarodi: ಧ...
12-09-25 07:43 pm
Mangalore Road Accident, Pothole, Survery: ರಸ...
12-09-25 05:34 pm
12-09-25 11:07 pm
Mangalore Correspondent
Ullal Police, Mangalore, Gold Robbery: ತೊಕ್ಕೊ...
12-09-25 10:48 pm
Udupi, Brahmavar Stabbing, Crime: ಬ್ರಹ್ಮಾವರ ;...
12-09-25 05:31 pm
Mangalore Police, Arrest: ಉರ್ವಾದಲ್ಲಿ ಪೊಲೀಸ್ ಕ...
11-09-25 09:13 pm
Mangalore Fake Documents, Crime, Arrest: ಸರ್ಕ...
11-09-25 08:52 pm