ಬ್ರೇಕಿಂಗ್ ನ್ಯೂಸ್
09-09-22 09:19 pm Source: Vijayakarnataka ಡಿಜಿಟಲ್ ಟೆಕ್
ದೇಶದಲ್ಲಿ ಇತ್ತೀಚಿಗಷ್ಟೆ ಬಿಡುಗಡೆಗೊಂಡಿರುವ Redmi ಕಂಪೆನಿಯ ಅತ್ಯಂತ ಕಡಿಮೆ ಬೆಲೆಯ ಸ್ಮಾರ್ಟ್ಫೋನ್ Redmi A1 ಇಂದು ಮಾರಾಟಕ್ಕೆ ಬರುತ್ತಿದೆ. ಇಂದು ಸಂಜೆ 4:00 PM ಗಂಟೆಯಿಂದ 6,499 ರೂ.ಬೆಲೆಯಲ್ಲಿ Redmi A1 ಸ್ಮಾರ್ಟ್ಫೋನನ್ನು ಮಾರಾಟಕ್ಕೆ ಇಡಲಾಗುತ್ತಿದ್ದು, ಒಂದೇ 2GB + 32GB ಮೆಮೊರಿ ಆವೃತ್ತಿಯಲ್ಲಿ ಹಾಗೂ ತಿಳಿ ನೀಲಿ, ಕ್ಲಾಸಿಕ್ ಬ್ಲಾಕ್ ಅಥವಾ ತಿಳಿ ಹಸಿರು ಬಣ್ಣಗಳಲ್ಲಿ Redmi A1 ಸ್ಮಾರ್ಟ್ಫೋನನ್ನು ಖರೀದಿಸಲು ಅವಕಾಶವಿದೆ. Mi ಹೋಮ್ ಸ್ಟೋರ್ಗಳು, Amazon India, Mi.com ಮತ್ತು ಆಯ್ದ ರಿಟೇಲ್ ಔಟ್ಲೆಟ್ಗಳಲ್ಲಿ Redmi A1 ಸ್ಮಾರ್ಟ್ಫೋನನ್ನು ಖರೀದಿಸಬಹುದು ಎಂದು ಕಂಪೆನಿ ತಿಳಿಸಿದೆ.
ದೇಶದ ಜನಪ್ರಿಯ ಸ್ಮಾರ್ಟ್ಫೋನ್ ಬ್ರ್ಯಾಂಡ್ Redmi ದೇಶದಲ್ಲಿ ತನ್ನ ವಿನೂತನ Redmi A1 ಸ್ಮಾರ್ಟ್ಫೋನನ್ನು ಬಿಡುಗಡೆಗೊಳಿಸಿದೆ. ಕಡಿಮೆ ಬೆಲೆಯಲ್ಲಿ ಸ್ಮಾರ್ಟ್ಫೋನ್ ಹುಡುಕುತ್ತಿರುವ ಗ್ರಾಹಕರನ್ನು ಗುರಿಯಾಗಿಸಿಕೊಂಡು, ಕೇವಲ 6,499 ರೂ. ಬೆಲೆಯಲ್ಲಿ ಈ ಹೊಸ ಸ್ಮಾರ್ಟ್ಫೋನನ್ನು ಪರಿಚಯಿಸಲಾಗಿದ್ದು, ಈ ಬೆಲೆಯಲ್ಲಿ 6.52-ಇಂಚಿನ LCD ಡಿಸ್ಪ್ಲೇ, ಡ್ಯುಯಲ್-ಕ್ಯಾಮೆರಾ ಸೆಟಪ್ ಮತ್ತು 10W ಚಾರ್ಜಿಂಗ್ ಅನ್ನು ಬೆಂಬಲಿಸುವ 5,000mAh ಬ್ಯಾಟರಿಯಂತಹ ಗುರುತಿಸಬಹುದಾದ ವೈಶಿಷ್ಟ್ಯಗಳನ್ನು ಹೊತ್ತು ದೇಶದ ಮಾರುಕಟ್ಟೆಗೆ ಬಂದಿದೆ. ಹಾಗಾದರೆ, ನೂತನ Redmi A1 ಸ್ಮಾರ್ಟ್ಫೋನ್ ಹೇಗಿದೆ ಮತ್ತು ಏನೆಲ್ಲಾ ವೈಶಿಷ್ಟ್ಯಗಳನ್ನು ಹೊಂದಿದೆ ಎಂಬುದನ್ನು ತಿಳಿಯೋಣ ಬನ್ನಿ.
Redmi A1 ಸ್ಮಾರ್ಟ್ಫೋನಿನ ವಿಶೇಷಣಗಳು
ನೂತನ Redmi A1 ಸ್ಮಾರ್ಟ್ಪೋನಿನಲ್ಲಿ 6.52-ಇಂಚಿನ LCD ಡಿಸ್ಪ್ಲೇ ಅಳವಡಿಸಲಾಗಿದೆ. 'ಡ್ಯೂ ಡ್ರಾಪ್' ನಾಚ್ ವಿನ್ಯಾಸದಲ್ಲಿರುವ ಈ ಡಿಸ್ಪ್ಲೇಯು 1600 x 720 ಪಿಕ್ಸೆಲ್ಗಳ (HD+) ರೆಸಲ್ಯೂಶನ್ ಹೊಂದಿದೆ ಎಂದು ಕಂಪೆನಿ ತಿಳಿಸಿದೆ. ಹುಡ್ ಅಡಿಯಲ್ಲಿ, ಈ ಹಿಂದಿನ Xiaomi ಪ್ರವೇಶ ಮಟ್ಟದ ಸ್ಮಾರ್ಟ್ಫೋನ್ಗಳಿಗಿಂತ ಉತ್ತಮ ಅನುಭವವನ್ನು ಒದಗಿಸುವಂತಹ ನಿಟ್ಟಿನಲ್ಲಿ, Redmi A1 ಸ್ಮಾರ್ಟ್ಪೋನಿನಲ್ಲಿ ಮೀಡಿಯಾ ಟೆಕ್ ಹೆಲಿಯೊ A22 ಪ್ರೊಸೆಸರ್ ಮತ್ತು 2G LPDDR4x RAM ಚಿಪ್ಸೆಟ್ ಹಾಗೂ eMMC 5.1 ಸ್ಟೋರೇಜ್ ಸಿಸ್ಟಮ್ ಅನ್ನು ತರಲಾಗಿದೆ. ಈ ಸಾಧನವು ಕಡಿಮೆ ಮಟ್ಟದ ಹಾರ್ಡ್ವೇರ್ ಅನ್ನು ಹೊಂದಿದ್ದರೂ ಸಹ ಆಂಡ್ರಾಯ್ಡ್ 12 ನಲ್ಲಿ ಕಾರ್ಯನಿರ್ವಹಿಸುತ್ತದೆ ಎಂದು ಕಂಪೆನಿ ಹೇಳಿದೆ.
Redmi A1 ಸ್ಮಾರ್ಟ್ಪೋನಿನಲ್ಲಿ ಡ್ಯುಯಲ್ ಕ್ಯಾಮೆರಾ ಸೆಟಪ್ ತರಲಾಗಿದ್ದು, ಇದು ಹಿಂಭಾಗದಲ್ಲಿ 8MP ಪ್ರಾಥಮಿಕ ಸಂವೇದಕ ಮತ್ತು 2MP ಸೆಕೆಂಡರಿ ಸಂವೇದಕಗಳನ್ನು ಹೊಂದಿದೆ. ಸೆಲ್ಫಿಗಳು ಮತ್ತು ವೀಡಿಯೊ ಕರೆಗಳಿಗಾಗಿ ಮುಂಭಾಗದಲ್ಲಿ 5MP ಸಾಮರ್ಥ್ಯದ ಕ್ಯಾಮೆರಾವನ್ನು ನೀಡಲಾಗಿದೆ. ಇತರ ವೈಶಿಷ್ಟ್ಯಗಳಲ್ಲಿ ಮೀಸಲಾದ ಮೈಕ್ರೊ SD ಕಾರ್ಡ್ ಸ್ಲಾಟ್, 3.5mm ಹೆಡ್ಫೋನ್ ಜ್ಯಾಕ್, ಡ್ಯುಯಲ್-ಸಿಮ್ 4G ಹೊಂದಾಣಿಕೆ, ಸಿಂಗಲ್-ಬ್ಯಾಂಡ್ ವೈಫೈ, ಬ್ಲೂಟೂತ್ 5.0, GNSS ಮತ್ತು ಸಿಂಗಲ್-ಬ್ಯಾಂಡ್ ವೈಫೈ ವೈಶಿಷ್ಟ್ಯಗಳಿವೆ. ಜೊತೆಗೆ 10W ಚಾರ್ಜಿಂಗ್ ಅನ್ನು ಬೆಂಬಲಿಸುವ 5,000mAh ಬ್ಯಾಟರಿ ಇದ್ದು, ಬಾಕ್ಸ್ನ ಒಳಗೆ ಚಾರ್ಜರ್ ಅನ್ನು ಸಹ ನೀಡಲಾಗಿದೆ ಎಂಬುದನ್ನು ನಾವಿಲ್ಲಿ ಗಮನಿಸಬಹುದು.
Redmi A1 Goes For First Sale Today At 4 Pm.
15-03-25 09:18 pm
HK News Desk
Mangalore, Tamil actor Prabhu Deva, Kukke Sub...
15-03-25 03:55 pm
Elephant attack, Belur, Hassan: ಕಾಡಾನೆ ದಾಳಿ ;...
15-03-25 12:33 pm
DySP Kanakalakshmi arrested, suicide: ಬೋವಿ ನಿ...
14-03-25 11:11 pm
Swamiji, Bagalkot, Police Video: ದುಡ್ಡು ಪಡೆದು...
14-03-25 08:30 pm
13-03-25 03:49 pm
HK News Desk
Shiradi Ghat, Mangalore Bengalore, Mp Brijesh...
13-03-25 01:30 pm
ಪಾಕಿಸ್ತಾನದಲ್ಲಿ 500ಕ್ಕು ಹೆಚ್ಚು ಪ್ರಯಾಣಿಕರಿದ್ದ ರ...
12-03-25 11:41 am
ಅಮೆರಿಕದಲ್ಲಿ 20 ವರ್ಷದ ಭಾರತೀಯ ಮೂಲದ ಮೆಡಿಕಲ್ ವಿದ್...
10-03-25 10:17 pm
ಎಸ್ಸೆಸ್ಸೆಲ್ಸಿ ವಿದ್ಯಾರ್ಥಿನಿ ಜೊತೆಗೆ ಆಟೋ ಚಾಲಕನ ಸ...
10-03-25 11:45 am
15-03-25 10:00 pm
Mangalore Correspondent
Mangalore court, Moral Police, Acquit: ಹಿಂದು...
15-03-25 08:32 pm
Mangalore Mary Hill, Boy Death; ಮೇರಿಹಿಲ್ ; ಏಳ...
15-03-25 04:11 pm
Dr Vamana Nandavar, Mangalore Death: ತುಳು, ಕನ...
15-03-25 01:47 pm
Mangalore Student Missing, ,Kidnap, Hitein Bh...
15-03-25 12:35 pm
14-03-25 05:02 pm
HK News Desk
Ccb Police, Firearms, Mangalore crime: ವಾಮಂಜೂ...
13-03-25 06:44 pm
Kothanur Police, Bangalore crime, Murder: ನಾಲ...
11-03-25 07:34 pm
Tanishq showroom, Bihar Robbery: ಬಿಹಾರದಲ್ಲಿ ಹ...
10-03-25 10:48 pm
Actress Ranya Rao, CBI, Gold case; ನಟಿ ರನ್ಯಾ...
09-03-25 05:06 pm