ಬ್ರೇಕಿಂಗ್ ನ್ಯೂಸ್
26-08-22 07:00 pm Source: Vijayakarnataka ಡಿಜಿಟಲ್ ಟೆಕ್
ಜನಪ್ರಿಯ ಮೊಬೈಲ್ ಬ್ರ್ಯಾಂಡ್ Oppo ದೇಶದಲ್ಲಿ ಬಜೆಟ್ ಸ್ನೇಹಿ ಬೆಲೆ ಮತ್ತು ವೈರ್ಲೆಸ್ ಸಿಸ್ಟಮ್ನೊಂದಿಗೆ ತನ್ನ ಹೊಚ್ಚ ಹೊಸ ಇಯರ್ಬಡ್ ಸಾಧನವನ್ನು ಇಂದು ಬಿಡುಗಡೆಗೊಳಿಸಿದೆ. Oppo Enco Buds2 (TWS) ಹೆಸರಿನಲ್ಲಿ AI-ಆಧಾರಿತ ಶಬ್ದ ರದ್ದತಿ ವೈಶಿಷ್ಟ್ಯಗಳೊಂದಿಗೆ ಮತ್ತು Dolby Atmos ಬೆಂಬಲದೊಂದಿಗೆ ನೂತನ ಇಯರ್ಬಡ್ ಸಾಧನವನ್ನು ಪರಿಚಯಿಸಲಾಗಿದ್ದು, ಈ ಸಾಧನವು ಒಂದೇ ಚಾರ್ಜ್ನಲ್ಲಿ 7 ಗಂಟೆಗಳವರೆಗೆ ಕಾರ್ಯನಿರ್ವಹಿಸಲಿದೆ ಎಂದು ಕಂಪೆನಿ ಹೇಳಿಕೊಂಡಿದೆ. ಹಾಗಾದರೆ, ನೂತನ Oppo Enco Buds2 (TWS) ವಯರ್ಲೆಸ್ ಇಯರ್ಬಡ್ ಸಾಧನ ಹೇಗಿದೆ? ಮತ್ತು ಇದರ ಬೆಲೆ ಎಷ್ಟು ಎಂಬ ಸಂಪೂರ್ಣ ವಿವರಗಳನ್ನು ನೋಡೋಣ ಬನ್ನಿ.
ಭಾರತದಲ್ಲಿ Oppo Enco Buds2 ಸಾಧನದ ಬೆಲೆ ಮತ್ತು ಲಭ್ಯತೆ
ದೇಶದಲ್ಲಿ ನೂತನ Oppo Enco Buds 2 ಇಯರ್ಬಡ್ ಸಾಧನವನ್ನು ಕೇವಲ 1,799 ರೂ. ಬೆಲೆಯಲ್ಲಿ ಬಿಡುಗಡೆ ಮಾಡಲಾಗಿದೆ. ಕೇವಲ ಒಂದೇ ಕಪ್ಪು ಬಣ್ಣದಲ್ಲಿ ಖರೀದಿಗೆ ಲಭ್ಯವಿರುವ Oppo Enco Buds 2 ಸಾಧನವನ್ನು ಇದೇ ಆಗಸ್ಟ್ 31 ರಿಂದ ಕಂಪನಿಯ ವೆಬ್ಸೈಟ್ ಮತ್ತು ಫ್ಲಿಪ್ಕಾರ್ಟ್ ತಾಣಗಳ ಮೂಲಕ ಮಾರಾಟಕ್ಕ ಇಡಲಾಗುವುದು ಎಂದು ಕಂಪೆನಿ ತಿಳಿಸಿದೆ.
Oppo Enco Buds2 ಸಾಧನದ ಸಂಪೂರ್ಣ ವೈಶಿಷ್ಟ್ಯಗಳು ಯಾವುವು?
ನೂತನ Oppo Enco Buds 2 ಇಯರ್ಬಡ್ ಸಾಧನವು 10mm ಟೈಟಾನಿಯಂ ಡ್ರೈವರ್ಗಳ (ವಿದ್ಯುತ್ ಶಕ್ತಿಯನ್ನು ಧ್ವನಿ ಶಕ್ತಿಯನ್ನಾಗಿ ಪರಿವರ್ತಿಸುವ ಸಾಧನ) ಸಾಮರ್ಥ್ಯದ ಇಯರ್ಬಡ್ಗಳನ್ನು ಹೊಂದಿದ್ದು, ಇವು 20Hz ನಿಂದ 20,000Hz ವರೆಗಿನ ಫ್ರಿಕ್ವೆನ್ಸಿ ರೆಸ್ಪಾನ್ಸ್ ರೇಂಜ್ ಸಾಮರ್ಥ್ಯದಲ್ಲಿವೆ. ಇನ್-ಇಯರ್ ವಿನ್ಯಾಸದಲ್ಲಿ ಪ್ರೀಮಿಯಂ ಲುಕ್ ಅನ್ನು ಹೊಂದಿರುವ ಈ ಇಯರ್ಬಡ್ಗಳು ಟೈಟಾನಿಯಂ ಡಯಾಫ್ರಾಮ್ ವೈಶಿಷ್ಟ್ಯದ ಮೂಲಕ ಗುಣಮಟ್ಟ ಧ್ವನಿಯನ್ನು ನೀಡಲಿವೆ ಎಂದು ಕಂಪೆನಿ ತಿಳಿಸಿದೆ. ಇನ್ನು IPX4-ರೇಟೆಡ್ ಧೂಳು ಮತ್ತು ನೀರು-ನಿರೋಧಕವಾಗಿರುವ Oppo Enco Buds 2 ಇಯರ್ಬಡ್ ಸಾಧನವನ್ನು ವ್ಯಾಯಾಮದ ಸಮಯದಲ್ಲಿ ಬಳಸಲು ಯೋಗ್ಯವಾಗಿರುವಂತೆ ನಿರ್ಮಿಸಲಾಗಿದ್ದು, ಈ ಸಾಧನವು ಉತ್ತಮ ಬೆವರು ಪ್ರತಿರೋಧವನ್ನು ಸಹ ಹೊಂದಿದೆ.
ಕಾರ್ಯನಿರ್ವಹಣೆಯಲ್ಲಿ, TWS Dolby Atmos ಅನ್ನು ಬೆಂಬಲಿಸುವ ಸಾಧನವು ಬೇಸಿಕ್ ಸೌಂಡ್, ಬಾಸ್ ಬೂಸ್ಟ್ ಮತ್ತು ಕ್ಲಿಯರ್ ವೋಕಲ್ಸ್ ನಂತಹ ಮೂರು ಸೆಟ್ಟಿಂಗ್ಸ್ ಹಾಗೂ OPPO ಕಂಪೆನಿಯ ಸ್ವಂತ ತಂತ್ರಜ್ಞಾನವಾದ ಎನ್ಕೋ ಲೈವ್ ಸ್ಟಿರಿಯೊ ಸೌಂಡ್ ಎಫೆಕ್ಟ್ಸ್ ಮೂಲಕ ಬಳಕೆದಾರರಿಗೆ ಸಂಗೀತದಲ್ಲಿ ವಿವಿಧ ಅನುಭವವನ್ನು ನೀಡಲಿದೆ. ಡೀಪ್ ನ್ಯೂರಲ್ ನೆಟ್ವರ್ಕ್ (DNN) ಆಧಾರಿತ AI ಅಲ್ಗಾರಿದಮ್ ಮೂಲಕ ಕರೆಗಳ ಸಮಯದಲ್ಲಿ ಹಿನ್ನೆಲೆ ಅಡಚಣೆಗಳಿಂದ ಪ್ರತ್ಯೇಕಿಸುತ್ತದೆ. ಬ್ಲೂಟೂತ್ 5.2 ನಲ್ಲಿ ಕಾರ್ಯನಿರ್ವಹಿಸುವ ಈ ಸಾಧನವು ಸಂಪೂರ್ಣ ಚಾರ್ಜ್ನಲ್ಲಿ ಏಳು ಗಂಟೆಗಳ ವರೆಗೆ ಸಂಗೀತವನ್ನು ಆಲಿಸಲು ಅನುಮತಿಸುತ್ತದೆ 10 ನಿಮಿಷಗಳ ವೇಗದ ಚಾರ್ಜಿಂಗ್ ಬಳಕೆದಾರರಿಗೆ ನೇರವಾಗಿ ಒಂದು ಗಂಟೆಯವರೆಗೆ ಸಂಗೀತವನ್ನು ಆನಂದಿಸಲು ಸಹಾಯ ಮಾಡುತ್ತದೆ ಎಂದು ಕಂಪೆನಿ ಹೇಳಿಕೊಂಡಿದೆ.
Oppo Enco Buds2 Launched In India.
15-03-25 09:18 pm
HK News Desk
Mangalore, Tamil actor Prabhu Deva, Kukke Sub...
15-03-25 03:55 pm
Elephant attack, Belur, Hassan: ಕಾಡಾನೆ ದಾಳಿ ;...
15-03-25 12:33 pm
DySP Kanakalakshmi arrested, suicide: ಬೋವಿ ನಿ...
14-03-25 11:11 pm
Swamiji, Bagalkot, Police Video: ದುಡ್ಡು ಪಡೆದು...
14-03-25 08:30 pm
13-03-25 03:49 pm
HK News Desk
Shiradi Ghat, Mangalore Bengalore, Mp Brijesh...
13-03-25 01:30 pm
ಪಾಕಿಸ್ತಾನದಲ್ಲಿ 500ಕ್ಕು ಹೆಚ್ಚು ಪ್ರಯಾಣಿಕರಿದ್ದ ರ...
12-03-25 11:41 am
ಅಮೆರಿಕದಲ್ಲಿ 20 ವರ್ಷದ ಭಾರತೀಯ ಮೂಲದ ಮೆಡಿಕಲ್ ವಿದ್...
10-03-25 10:17 pm
ಎಸ್ಸೆಸ್ಸೆಲ್ಸಿ ವಿದ್ಯಾರ್ಥಿನಿ ಜೊತೆಗೆ ಆಟೋ ಚಾಲಕನ ಸ...
10-03-25 11:45 am
15-03-25 10:00 pm
Mangalore Correspondent
Mangalore court, Moral Police, Acquit: ಹಿಂದು...
15-03-25 08:32 pm
Mangalore Mary Hill, Boy Death; ಮೇರಿಹಿಲ್ ; ಏಳ...
15-03-25 04:11 pm
Dr Vamana Nandavar, Mangalore Death: ತುಳು, ಕನ...
15-03-25 01:47 pm
Mangalore Student Missing, ,Kidnap, Hitein Bh...
15-03-25 12:35 pm
14-03-25 05:02 pm
HK News Desk
Ccb Police, Firearms, Mangalore crime: ವಾಮಂಜೂ...
13-03-25 06:44 pm
Kothanur Police, Bangalore crime, Murder: ನಾಲ...
11-03-25 07:34 pm
Tanishq showroom, Bihar Robbery: ಬಿಹಾರದಲ್ಲಿ ಹ...
10-03-25 10:48 pm
Actress Ranya Rao, CBI, Gold case; ನಟಿ ರನ್ಯಾ...
09-03-25 05:06 pm