ಬ್ರೇಕಿಂಗ್ ನ್ಯೂಸ್
24-08-22 07:29 pm Source: GIZBOT ಡಿಜಿಟಲ್ ಟೆಕ್
ಇ-ಕಾಮರ್ಸ್ ದೈತ್ಯ ಅಮೆಜಾನ್ ಆನ್ಲೈನ್ ಶಾಪಿಂಗ್ ಪ್ರಿಯರ ನೆಚ್ಚಿನ ತಾಣ ಎನಿಸಿಕೊಂಡಿದೆ. ತನ್ನ ಪ್ಲಾಟ್ಫಾರ್ಮ್ನಲ್ಲಿ ಆನ್ಲೈನ್ ಗ್ರಾಹಕರಿಗಾಗಿ ಒಂದಿಲ್ಲೊಂದು ಸೇಲ್ ನಡೆಸುತ್ತಲೇ ಬಂದಿದೆ. ಹಬ್ಬ ಹರಿದಿನಗಳು ಮಾತ್ರವಲ್ಲದೆ ವಿಕೆಂಡ್, ಮಂತ್ಎಂಡ್ನಲ್ಲಿಯೂ ವಿಶೇಷ ಸೇಲ್ಗಳನ್ನು ನಡೆಸಲಿದೆ. ಸದ್ಯ ಇದೀಗ ತನ್ನ ಪ್ಲಾಟ್ಫಾರ್ಮ್ನಲ್ಲಿ ಗ್ರ್ಯಾಂಡ್ ಗೇಮಿಂಗ್ ಡೇಸ್ ಸೇಲ್ ನಡೆಸುತ್ತಿದೆ. ಈ ಸೇಲ್ ಇಂದು ಕೊನೆಯಾಗಲಿದ್ದು, ಗೇಮಿಂಗ್ ಗ್ಯಾಜೆಟ್ಸ್ ಖರೀದಿಸುವವರಿಗೆ 50% ತನಕ ಡಿಸ್ಕೌಂಟ್ ಲಭ್ಯವಾಗಲಿದೆ.
ಹೌದು, ಅಮೆಜಾನ್ ತನ್ನ ಪ್ಲಾಟ್ಫಾರ್ಮ್ನಲ್ಲಿ ನಡೆಸುತ್ತಿರುವ ಗ್ರ್ಯಾಂಡ್ ಗೇಮಿಂಗ್ ಡೇಸ್ ಸೇಲ್ ಇಂದು ಅಂತ್ಯವಾಗಲಿದೆ. ಈ ಸೇಲ್ನಲ್ಲಿ ಗೇಮಿಂಗ್ ಪ್ರಿಯರು ಗೇಮಿಂಗ್ ಡಿವೈಸ್ಗಳನ್ನು ಭರ್ಜರಿ ಡಿಸ್ಕೌಂಟ್ ಮೂಲಕ ಪಡೆದುಕೊಳ್ಳಬಹುದಾಗಿದೆ. ಇದರಲ್ಲಿ ಗೇಮಿಂಗ್ ಲ್ಯಾಪ್ಟಾಪ್ಗಳು, ಡೆಸ್ಕ್ಟಾಪ್ಗಳು, ಮಾನಿಟರ್ಗಳು, ಸುಧಾರಿತ ಹೆಡ್ಫೋನ್ಗಳು, ಗೇಮಿಂಗ್ ಕನ್ಸೋಲ್ಗಳು, ಗ್ರಾಫಿಕ್ ಕಾರ್ಡ್ಗಳ ಮೇಲೆ 50% ರಿಯಾಯಿತಿಯನ್ನು ಪಡೆದುಕೊಳ್ಳಬಹುದಾಗಿದೆ. ಹಾಗಾದ್ರೆ ಅಮೆಜಾನ್ ಗ್ರ್ಯಾಂಡ್ ಗೇಮಿಂಗ್ ಡೇಸ್ ಸೇಲ್ನಲ್ಲಿ ಏನೆಲ್ಲಾ ಡಿಸ್ಕೌಂಟ್ ಲಭ್ಯವಾಗಲಿದೆ ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತಿವಿ ಓದಿರಿ.
ಲೆನೊವೊ ಐಡಿಯಾ ಪ್ಯಾಡ್ ಗೇಮಿಂಗ್ 3
ಲೆನೊವೊ ಐಡಿಯಾ ಪ್ಯಾಡ್ ಗೇಮಿಂಗ್ 3 ಲ್ಯಾಪ್ಟಾಪ್ ಅಮೆಜಾನ್ ಸೇಲ್ನಲ್ಲಿ ಪ್ರಸ್ತುತ 32% ಡಿಸ್ಕೌಂಟ್ ಪಡೆದುಕೊಂಡಿದೆ. ಈ ಲ್ಯಾಪ್ಟಾಪ್ ಡಿಸ್ಕೌಂಟ್ನಲ್ಲಿ ಕೇವಲ 64,990 ರೂಗಳಲ್ಲಿ ಲಭ್ಯವಾಗಲಿದೆ. ಇನ್ನು ಲೆನೊವೊ ಐಡಿಯಾ ಪ್ಯಾಡ್ ಗೇಮಿಂಗ್ 3 ಲ್ಯಾಪ್ಟಾಪ್ 15.6 ಇಂಚಿನ ಫುಲ್ ಹೆಚ್ಡಿ ಡಿಸ್ಪ್ಲೇ ಹೊಂದಿದೆ. ಇದು 10ನೇ ತಲೆಮಾರಿನ ಇಂಟೆಲ್ ಕೋರ್ i5 ಪ್ರೊಸೆಸರ್ ನಲ್ಲಿ ಕಾರ್ಯನಿರ್ವಹಿಸಲಿದೆ. ಇದಕ್ಕೆ ಪೂರಕವಾಗಿ ವಿಂಡೋಸ್ 10ನಲ್ಲಿ ರನ್ ಆಗಲಿದೆ. ಈ ಲ್ಯಾಪ್ಟಾಪ್ ಆಂಟಿ-ಗ್ಲೇರ್ ಸ್ಕ್ರೀನ್, ಬ್ಯಾಕ್ಲಿಟ್ ಮೈಕ್ರೊಫೋನ್, ಬಿಲ್ಟ್-ಇನ್ ಫೀಚರ್ಸ್ಹೊಂದಿದ್ದು, ನಿಮ್ಮ ಗೇಮಿಂಗ್ ಅಗತ್ಯಗಳನ್ನು ಪೂರೈಸುತ್ತದೆ.
ಆಸುಸ್ ಟಫ್ ಗೇಮಿಂಗ್ F15 ಲ್ಯಾಪ್ಟಾಪ್ (2021)
ಆಸುಸ್ ಟಫ್ ಗೇಮಿಂಗ್ F15 ಲ್ಯಾಪ್ಟಾಪ್ (2021) ಅಮೆಜಾನ್ ಗ್ರ್ಯಾಂಡ್ ಗೇಮಿಂಗ್ ಸೇಲ್ನಲ್ಲಿ 27% ಡಿಸ್ಕೌಂಟ್ ಪಡೆದುಕೊಂಡಿದೆ. ಆದರಿಂದ ಈ ಲ್ಯಾಪ್ಟಾಪ್ ನಿಮಗೆ ಕೇವಲ 54,990 ರೂ. ಬೆಲೆಗೆ ಲಭ್ಯವಾಗಲಿದೆ. ಇನ್ನು ಈ ಲ್ಯಾಪ್ಟಾಪ್ 15.6-ಇಂಚಿನ ಡಿಸ್ಪ್ಲೇಯನ್ನು ಹೊಂದಿದೆ. ಇದು 10 ನೇ ತಲೆಮಾರಿನ ಇಂಟೆಲ್ ಕೋರ್ i5-10300H ಪ್ರೊಸೆಸರ್ನಲ್ಲಿ ಕಾರ್ಯನಿರ್ವಹಿಸದ್ದು, 2.5 GHz ನೊಂದಿಗೆ ಕಾನ್ಫಿಗರ್ ಮಾಡಲಾಗಿದೆ. ಈ ಗೇಮಿಂಗ್ ಲ್ಯಾಪ್ಟಾಪ್ ಮಲ್ಟಿ-ಫಂಕ್ಷನ್ ಅನ್ನು ಬೆಂಬಲಿಸಲಿದೆ. ಹಾಗೆಯೇ 8GB RAM ಮತ್ತು 512GB ಇಂಟರ್ ಸ್ಟೋರೇಜ್ ಹೊಂದಿದೆ. ಈ ಲ್ಯಾಪ್ಟಾಪ್ ಖರೀದಿಯೊಂದಿಗೆ ಗ್ರಾಹಕರು Xbox ಗೇಮ್ ಪಾಸ್ಗೆ ಒಂದು ತಿಂಗಳ ಚಂದಾದಾರಿಕೆಯನ್ನು ಸಹ ಪಡೆಯಬಹುದು.
ಎಲ್ಜಿ Nano IPS ಅಲ್ಟ್ರಾಗೇರ್ ಗೇಮಿಂಗ್ 32 ಇಂಚಿನ ಲ್ಯಾಪ್ಟಾಪ್
ಎಲ್ಜಿ ನ್ಯಾನೋ ಐಪಿಎಸ್ ಅಲ್ಟ್ರಾಗೇರ್ ಗೇಮಿಂಗ್ 32 ಇಂಚಿನ ಲ್ಯಾಪ್ಟಾಪ್ ಅಮೆಜಾನ್ನಲ್ಲಿ 19% ಡಿಸ್ಕೌಂಟ್ ಪಡೆದಿದೆ. ಇದರಿಂದ ಈ ಲ್ಯಾಪ್ಟಾಪ್ ನಿಮಗೆ ಕೇವಲ 39,999ರೂ. ಬೆಲೆಗೆ ದೊರೆಯಲಿದೆ. ಈ ಲ್ಯಾಪ್ಟಾಪ್ 32 ಇಂಚಿನ ಫುಲ್ ಹೆಚ್ಡಿ ಡಿಸ್ಪ್ಲೇಯನ್ನು ಹೊಂದಿದೆ. ಈ ಡಿಸ್ಪ್ಲೇ 165 Hz OC- 180 Hz ರಿಫ್ರೆಶ್ ರೇಟ್ ಅನ್ನು ಒಳಗೊಂಡಿದೆ. ಇದು ನ್ಯಾನೋ IPS ತಂತ್ರಜ್ಞಾನದೊಂದಿಗೆ ಬರುತ್ತದೆ. ಈ ಲ್ಯಾಪ್ಟಾಪ್ 165 Hz ನ ಅಲ್ಟ್ರಾ-ಫಾಸ್ಟ್ ಸ್ಪೀಡ್ನೊಂದಿಗೆ ಬರುತ್ತದೆ.
ಗೇಮಿಂಗ್ ಆಕ್ಸಿಸರೀಸ್ ಹೈಪರ್ಎಕ್ಸ್ ಸ್ಟ್ರೀಮರ್ ಸ್ಟಾರ್ಟರ್ ಪ್ಯಾಕ್
ಗೇಮಿಂಗ್ ಪ್ರಿಯರು ಅಮೆಜಾನ್ ಗ್ರ್ಯಾಂಡ್ ಗೇಮಿಂಗ್ ಡೇಸ್ ಸೇಲ್ನಲ್ಲಿ ಹೈಪರ್ಎಕ್ಸ್ ಸ್ಟ್ರೀಮರ್ ಸ್ಟಾರ್ಟರ್ ಪ್ಯಾಕ್ ಅನ್ನು ಡಿಸ್ಕೌಂಟ್ನಲ್ಲಿ ಖರೀದಿಸಬಹುದಾಗಿದೆ. ಇದನ್ನು ನೀವು ಅಮೆಜಾನ್ನಲ್ಲಿ ಕೇವಲ 11,490ರೂ. ಬೆಲೆಗೆ ಖರೀದಿಸಬಹುದು.
ಆಂಟ್ ಎಸ್ಪೋರ್ಟ್ಸ್ MK1000 ಮಲ್ಟಿಕಲರ್ ಗೇಮಿಂಗ್ ಕೀಬೋರ್ಡ್
ಈ ಕೀಬೋರ್ಡ್ ಅಮೆಜಾನ್ ಸೇಲ್ನಲ್ಲಿ ನಿಮಗೆ 2,099 ರೂ. ಬೆಲೆಗೆ ಲಭ್ಯವಾಗಲಿದೆ. ಇದು 6-ಬಣ್ಣದ ಬ್ಯಾಕ್ಲೈಟ್, 9 ನಿಯೋಜಿಸಬಹುದಾದ ಬೆಳಕಿನ ಪರಿಣಾಮಗಳಿಗಾಗಿ 2 ಸ್ಲಾಟ್ಗಳು. ಬ್ಲೂ ಸ್ವಿಚ್ಗಳು, ಫುಲ್ ಎನ್-ಕೀ ರೋಲ್ಓವರ್ಗಳನ್ನು ಹೊಂದಿದೆ.
Amazon Grand Gaming Days Sale 50 percent Discount on Laptops.
16-03-25 10:32 pm
HK News Desk
Reservation for Muslims, Siddaramaiah, BJP: ಸ...
16-03-25 12:11 pm
BJP Leader Basavaraj Dadesugur: ಬಿಜೆಪಿ ಮಾಜಿ ಶ...
15-03-25 09:18 pm
Mangalore, Tamil actor Prabhu Deva, Kukke Sub...
15-03-25 03:55 pm
Elephant attack, Belur, Hassan: ಕಾಡಾನೆ ದಾಳಿ ;...
15-03-25 12:33 pm
13-03-25 03:49 pm
HK News Desk
Shiradi Ghat, Mangalore Bengalore, Mp Brijesh...
13-03-25 01:30 pm
ಪಾಕಿಸ್ತಾನದಲ್ಲಿ 500ಕ್ಕು ಹೆಚ್ಚು ಪ್ರಯಾಣಿಕರಿದ್ದ ರ...
12-03-25 11:41 am
ಅಮೆರಿಕದಲ್ಲಿ 20 ವರ್ಷದ ಭಾರತೀಯ ಮೂಲದ ಮೆಡಿಕಲ್ ವಿದ್...
10-03-25 10:17 pm
ಎಸ್ಸೆಸ್ಸೆಲ್ಸಿ ವಿದ್ಯಾರ್ಥಿನಿ ಜೊತೆಗೆ ಆಟೋ ಚಾಲಕನ ಸ...
10-03-25 11:45 am
16-03-25 10:55 pm
Mangalore Correspondent
Tejasvi Surya, Marriage, Udupi: ಉಡುಪಿ ಕೃಷ್ಣ ಮ...
16-03-25 10:10 pm
Mangalore Jail, Suicide, POSCO: ಮೂಡುಬಿದ್ರೆಯಲ್...
16-03-25 02:05 pm
ಸಂವಿಧಾನ ಉಲ್ಲಂಘಿಸಿ ವಕ್ಫ್ ಕಾಯ್ದೆ ಸರಿಯಲ್ಲ, ಪ್ರಾಣ...
15-03-25 10:00 pm
Mangalore court, Moral Police, Acquit: ಹಿಂದು...
15-03-25 08:32 pm
16-03-25 10:39 pm
Bangalore Correspondent
Mangalore Police, CCB, Drugs, CM: ರಾಜ್ಯದಲ್ಲೇ...
16-03-25 07:27 pm
Mangalore CCB police, Drugs, crime: ರಾಜ್ಯದಲ್ಲ...
16-03-25 10:43 am
Crypto Fraud Arrested In Kerala: ಗ್ಯಾರಂಟೆಕ್ಸ್...
14-03-25 05:02 pm
Ccb Police, Firearms, Mangalore crime: ವಾಮಂಜೂ...
13-03-25 06:44 pm