ಬ್ರೇಕಿಂಗ್ ನ್ಯೂಸ್
19-08-22 06:50 pm Source: Vijayakarnataka ಡಿಜಿಟಲ್ ಟೆಕ್
ಭಾರತದ ಜನಪ್ರಿಯ ಸ್ಮಾರ್ಟ್ಫೋನ್ ಬ್ರ್ಯಾಂಡ್ಗಳಲ್ಲಿ ಒಂದಾದ Realme ಕಂಪೆನಿ ದೇಶದಲ್ಲಿ ತನ್ನ ಇತ್ತೀಚಿನ ಕೈಗೆಟುಕುವ Realme 9i 5G ಸ್ಮಾರ್ಟ್ಫೋನ್ ಅನ್ನು ಬಿಡುಗಡೆ ಮಾಡಿದೆ. ಬಜೆಟ್ ಬೆಲೆಯಲ್ಲಿ 5G ಸ್ಮಾರ್ಟ್ಪೋನ್ ಒಂದನ್ನು ಖರೀದಿಸಲು ಇಚ್ಚಿಸಿರುವ ಗ್ರಾಹಕರನ್ನು ಗುರಿಯಾಗಿಸಿಕೊಂಡು ನೂತನ Realme 9i 5G ಸ್ಮಾರ್ಟ್ಫೋನನ್ನು ಪರಿಚಯಿಸಲಾಗಿದ್ದು, ಈ ಸ್ಮಾರ್ಟ್ಫೋನಿನಲ್ಲಿ 90Hz ರಿಫ್ರೆಶ್ ರೇಟ್ ಸಾಮರ್ಥ್ಯದ 6.6-ಇಂಚಿನ ಡಿಸ್ಪ್ಲೇ, ಮೀಡಿಯಾ ಟೆಕ್ ಡೈಮೆನ್ಸಿಟಿ 810 ಪ್ರೊಸೆಸರ್, 50-ಮೆಗಾಪಿಕ್ಸೆಲ್ ಟ್ರಿಪಲ್ ರಿಯರ್ ಕ್ಯಾಮೆರಾ ಸೆಟಪ್ ಮತ್ತು 5,000mAh ಬ್ಯಾಟರಿಯಂತಹ ವೈಶಿಷ್ಟ್ಯಗಳನ್ನು ತರಲಾಗಿದೆ. ಹಾಗಾದರೆ, ನೂತನ Realme 9i 5G ಸ್ಮಾರ್ಟ್ಫೋನ್ ಹೊಂದಿರುವ ಎಲ್ಲಾ ವೈಶಿಷ್ಟ್ಯಗಳು ಮತ್ತು ಬೆಲೆಗಳು ಎಷ್ಟು ಎಂಬ ಸಂಪೂರ್ಣ ಮಾಹಿತಿಯನ್ನು ನೋಡೋಣ ಬನ್ನಿ.
Realme 9i 5G ವಿಶೇಷಣಗಳು
ನೂತನ Realme 9i 5G ಸ್ಮಾರ್ಟ್ಫೋನ್ 6.6-ಇಂಚಿನ ಫುಲ್ HD+ ಡಿಸ್ಪ್ಲೇಯನ್ನು ಹೊಂದಿದೆ. ಈ ಡಿಸ್ಪ್ಲೇಯು 1,080x2,400 ಪಿಕ್ಸೆಲ್ ಸಾಮರ್ಥ್ಯದಲ್ಲಿ 90Hz ರಿಫ್ರೆಶ್ ರೇಟ್ ಮತ್ತು 400 nits ಬ್ರೈಟ್ನೆಸ್ ಅನ್ನು ನೀಡಲಿದೆ. ಹುಡ್ ಅಡಿಯಲ್ಲಿ, ಆಕ್ಟಾ-ಕೋರ್ ಮೀಡಿಯಾ ಟೆಕ್ ಡೈಮೆನ್ಸಿಟಿ 810 5G SoC ಪ್ರೊಸೆಸರ್ ನಿಂದ ಚಾಲಿತವಾಗಿರುವ ಈ ಸ್ಮಾರ್ಟ್ಫೋನನ್ನು 6GB RAM ಮತ್ತು 128GB ಆಂತರಿಕ ಮೆಮೊರಿಯೊಂದಿಗೆ ಜೋಡಿಸಲಾಗಿದೆ. ಮೈಕ್ರೋ SD ಕಾರ್ಡ್ ಮೂಲಕ ಸ್ಮಾರ್ಟ್ಫೋನಿನ ಮೆಮೊರಿಯನ್ನು 1TB ವರೆಗೆ ಹೆಚ್ಚಿಸಬಹುದು ಮತ್ತು ಆಪ್ ರೆಸ್ಪಾನ್ಸಿವ್ ಅನ್ನು ಸುಧಾರಿಸಲು ವರ್ಚುವಲ್ RAM ಅನ್ನು ಸೇರಿಸುವ ಡೈನಾಮಿಕ್ RAM ವಿಸ್ತರಣೆ ತಂತ್ರಜ್ಞಾನದೊಂದಿಗೆ Realme 9i 5G ಸ್ಮಾರ್ಟ್ಫೋನ್ ಬಂದಿದೆ ಎಂದು Realme ಕಂಪೆನಿ ಹೇಳಿಕೊಂಡಿದೆ.
ಫೋಟೋಗಳು ಮತ್ತು ವೀಡಿಯೊಗಳಿಗಾಗಿ, Realme 9i 5G ಸ್ಮಾರ್ಟ್ಫೋನಿನಲ್ಲಿ f/1.8 ಅಪರ್ಚರ್ ಲೆನ್ಸ್ನೊಂದಿಗೆ 50-ಮೆಗಾಪಿಕ್ಸೆಲ್ ಮುಖ್ಯ ಸಂವೇದಕವಿರುವ ಟ್ರಿಪಲ್ ಹಿಂಬದಿಯ ಕ್ಯಾಮೆರಾವನ್ನು ಅಳವಡಿಸಲಾಗಿದೆ. ಈ ಕ್ಯಾಮೆರಾವುಪೋರ್ಟ್ರೇಟ್ ಶೂಟರ್ ಮತ್ತು ಮ್ಯಾಕ್ರೋ ಕ್ಯಾಮೆರಾದೊಂದಿಗೆ ಜೋಡಿಯಾಗಿದೆ. ಸೆಲ್ಫಿಗಳು ಮತ್ತು ವೀಡಿಯೊ ಕರೆಗಳಿಗಾಗಿ, f/2.0 ಅಪರ್ಚರ್ ಲೆನ್ಸ್ನೊಂದಿಗೆ 8-ಮೆಗಾಪಿಕ್ಸೆಲ್ ಕ್ಯಾಮೆರಾವನ್ನು ನೀಡಲಾಗಿದೆ. ಕನೆಕ್ಟಿವಿಟಿ ಆಯ್ಕೆಗಳಲ್ಲಿ, 5G, 4G LTE, Wi-Fi, ಬ್ಲೂಟೂತ್ v5.2, GPS/AGPS, ಮತ್ತು USB ಟೈಪ್-C ಪೋರ್ಟ್ ವೈಶಿಷ್ಟ್ಯಗಳಿವೆ. ಇನ್ನುಳಿದಂತೆ 18W ಕ್ವಿಕ್ ಚಾರ್ಜಿಂಗ್ ಬೆಂಬಲದೊಂದಿಗೆ 5,000mAh ಬ್ಯಾಟರಿ, ಡ್ಯುಯಲ್-ಸಿಮ್ (ನ್ಯಾನೊ), Android 12 ಅನ್ನು ಆಧರಿಸಿದ Realme UI 3.0 ಓಸ್ ನಂತಹ ವೈಶಿಷ್ಟ್ಯಗಳನ್ನು ನೋಡಬಹುದು.
Realme 9i 5G ಬೆಲೆ, ಲಭ್ಯತೆ
ಭಾರತದಲ್ಲಿ Realme 9i 5G ಸ್ಮಾರ್ಟ್ಫೋನ್ ಕೇವಲ 14,999 ರೂ. ಬೆಲೆಯಲ್ಲಿ ಬಿಡುಗಡೆಗೊಂಡಿದೆ. 4GB RAM + 64GB ಸ್ಟೋರೇಜ್ ಆವೃತ್ತಿಯು 14,999 ರೂ. ಮತ್ತು 6GB RAM + 128GB ಸ್ಟೋರೇಜ್ ಆವೃತ್ತಿಯು 16,999 ಬೆಲೆಯನ್ನು ಹೊಂದಿವೆ. ಆದರೆ, ಸ್ಮಾರ್ಟ್ಫೋನ್ ಬಿಡುಗಡೆ ಕೊಡುಗೆಯಾಗಿ HDFC ಬ್ಯಾಂಕ್ ಗ್ರಾಹಕರಿಗೆ 1,000 ರೂ. ರಿಯಾಯಿತಿಯೊಂದಿಗೆ ಕ್ರಮವಾಗಿ 13,999 ರೂ. ಹಾಗೂ 14,999 ರೂ. ಬೆಲೆಗಳಲ್ಲಿ Realme 9i 5G ಸ್ಮಾರ್ಟ್ಫೋನ್ ಖರೀದಿಗೆ ಲಭ್ಯವಿರಲಿದೆ. ಇನ್ನು ಇದೇ ಆಗಸ್ಟ್ 24 ರಂದು ಮಧ್ಯಾಹ್ನ 12 ಗಂಟೆಗೆ (ಮಧ್ಯಾಹ್ನ) ಮೆಟಾಲಿಕಾ ಗೋಲ್ಡ್, ರಾಕಿಂಗ್ ಬ್ಲ್ಯಾಕ್ ಮತ್ತು ಸೋಲ್ಫುಲ್ ಬ್ಲೂ ಬಣ್ಣದ ಆಯ್ಕೆಗಳಲ್ಲಿ Realme 9i 5G ಸ್ಮಾರ್ಟ್ಫೋನ್ ಮಾರಾಟವಾಗಲಿದೆ ಎಂದು ಕಂಪೆನಿ ತಿಳಿಸಿದೆ.
Realme 9i 5g With 50 Megapixel Main Camera Launched In India.
15-03-25 09:18 pm
HK News Desk
Mangalore, Tamil actor Prabhu Deva, Kukke Sub...
15-03-25 03:55 pm
Elephant attack, Belur, Hassan: ಕಾಡಾನೆ ದಾಳಿ ;...
15-03-25 12:33 pm
DySP Kanakalakshmi arrested, suicide: ಬೋವಿ ನಿ...
14-03-25 11:11 pm
Swamiji, Bagalkot, Police Video: ದುಡ್ಡು ಪಡೆದು...
14-03-25 08:30 pm
13-03-25 03:49 pm
HK News Desk
Shiradi Ghat, Mangalore Bengalore, Mp Brijesh...
13-03-25 01:30 pm
ಪಾಕಿಸ್ತಾನದಲ್ಲಿ 500ಕ್ಕು ಹೆಚ್ಚು ಪ್ರಯಾಣಿಕರಿದ್ದ ರ...
12-03-25 11:41 am
ಅಮೆರಿಕದಲ್ಲಿ 20 ವರ್ಷದ ಭಾರತೀಯ ಮೂಲದ ಮೆಡಿಕಲ್ ವಿದ್...
10-03-25 10:17 pm
ಎಸ್ಸೆಸ್ಸೆಲ್ಸಿ ವಿದ್ಯಾರ್ಥಿನಿ ಜೊತೆಗೆ ಆಟೋ ಚಾಲಕನ ಸ...
10-03-25 11:45 am
15-03-25 10:00 pm
Mangalore Correspondent
Mangalore court, Moral Police, Acquit: ಹಿಂದು...
15-03-25 08:32 pm
Mangalore Mary Hill, Boy Death; ಮೇರಿಹಿಲ್ ; ಏಳ...
15-03-25 04:11 pm
Dr Vamana Nandavar, Mangalore Death: ತುಳು, ಕನ...
15-03-25 01:47 pm
Mangalore Student Missing, ,Kidnap, Hitein Bh...
15-03-25 12:35 pm
14-03-25 05:02 pm
HK News Desk
Ccb Police, Firearms, Mangalore crime: ವಾಮಂಜೂ...
13-03-25 06:44 pm
Kothanur Police, Bangalore crime, Murder: ನಾಲ...
11-03-25 07:34 pm
Tanishq showroom, Bihar Robbery: ಬಿಹಾರದಲ್ಲಿ ಹ...
10-03-25 10:48 pm
Actress Ranya Rao, CBI, Gold case; ನಟಿ ರನ್ಯಾ...
09-03-25 05:06 pm