ಬ್ರೇಕಿಂಗ್ ನ್ಯೂಸ್
18-08-22 07:45 pm Source: Vijayakarnataka ಡಿಜಿಟಲ್ ಟೆಕ್
ಭಾರತದ ಟ್ಯಾಬ್ಲೆಟ್ ಮಾರುಕಟ್ಟೆಯಲ್ಲಿ ಹಲವು ಬಜೆಟ್ ಸಾಧನಗಳನ್ನು ಪರಿಚಯಿಸುತ್ತಿರುವ ಜನಪ್ರಿಯ ಟೆಕ್ ಬ್ರ್ಯಾಂಡ್ ಮೊಟೊರೊಲಾ ಇದೀಗ ಮತ್ತೊಂದು ಟ್ಯಾಬ್ ಅನ್ನು ಪರಿಚಯಿಸಿದೆ. ಕಡಿಮೆ ಬೆಲೆಯಲ್ಲಿ ಅತ್ಯುತ್ತಮ ಟ್ಯಾಬ್ ಒಂದನ್ನು ಹುಡುಕುತ್ತಿರುವ ಗ್ರಾಹಕರಿಗಾಗಿ Moto Tab G62 ಎಂಬ ಹೊಸ ಟ್ಯಾಬ್ ಅನ್ನು ದೇಶದಲ್ಲಿ ಬಿಡುಗಡೆ ಮಾಡಲಾಗಿದ್ದು, ಈ ಸಾಧನವು 60Hz ರಿಫ್ರೆಶ್ ರೇಟ್ ಸಾಮರ್ಥ್ಯದ 10.6 ಇಂಚಿನ IPS LCD ಡಿಸ್ಪ್ಲೇ, ಕ್ವಾಲ್ಕಮ್ ಸ್ನ್ಯಾಪ್ಡ್ರಾಗನ್ 680 SoC ಪ್ರೊಸೆಸರ್ ಮತ್ತು 7700 mAh ಸಾಮರ್ಥ್ಯದ ಬ್ಯಾಟರಿಯಂತಹ ವೈಶಿಷ್ಟ್ಯಗಳನ್ನು ಹೊಂದಿದೆ. ಹಾಗಾದರೆ, ನೂತನ Moto Tab G62 ಟ್ಯಾಬ್ ಹೇಗಿದೆ ಮತ್ತು ಬೆಲೆ ಎಷ್ಟು ಎಂಬ ಮಾಹಿತಿಯನ್ನು ತಿಳಿಯೋಣ ಬನ್ನಿ.
Moto Tab G62 ಟ್ಯಾಬ್ಲೆಟ್ ಬೆಲೆ ಮತ್ತು ಲಭ್ಯತೆ
ನೂತನ Moto Tab G62 ಸಾಧನವು 15,999 ರೂ.ಗಳ ಆರಂಭಿಕ ಬೆಲೆಯಲ್ಲಿ ದೇಶದಲ್ಲಿ ಬಿಡುಗಡೆಗೊಂಡಿದೆ. 4GB RAM ಮತ್ತು 64GB ಮೆಮೊರಿ ಜೊತೆಗೆ Wi-Fi ಮಾತ್ರ ಇರುವ ಸಾಧನವು 15,999 ರೂ.ಗೆ ಹಾಗೂ 4GB RAM ಮತ್ತು 64GB ಮೆಮೊರಿ ಜೊತೆಗೆ LTE ಕನೆಕ್ಟಿವಿಟಿ ಇರುವ ಸಾಧನವು 17,999 ರೂ. ಬೆಲೆಯಲ್ಲಿ ಖರೀದಿಗೆ ಲಭ್ಯವಿದೆ. ಏಕೈಕ ಫ್ರಾಸ್ಟ್ ಬ್ಲೂ ಬಣ್ಣದಲ್ಲಿ ಲಭ್ಯವಿರುವ ಈ ಸಾಧನವು ಫ್ಲಿಪ್ಕಾರ್ಟ್ ಮೂಲಕ ಈಗಾಗಲೇ ಮಾರಾಟಕ್ಕಿದೆ.
Moto Tab G62 ಟ್ಯಾಬ್ಲೆಟ್ ಫೀಚರ್ಸ್ ಯಾವುವು?
ನೂತನ Moto Tab G62 ಸಾಧನವು ಉನ್ನತ ದರ್ಜೆಯ ಅಲ್ಯೂಮಿನಿಯಂ ಬಿಲ್ಡ್ ಮತ್ತು ಡ್ಯುಯಲ್-ಟೋನ್ ಬ್ಯಾಕ್ ಪ್ಯಾನೆಲ್ ಹಾಗೂ 10.6 ಇಂಚಿನಷ್ಟು ದೊಡ್ಡದಾದ IPS LCD ಡಿಸ್ಪ್ಲೇಯನ್ನು ಹೊಂದಿದೆ. ಇದರ ಡಿಸ್ಪ್ಲೇಯು 2K ರೆಸಲ್ಯೂಶನ್ ಮತ್ತು 60Hz ರಿಫ್ರೆಶ್ ರೇಟ್ ಸಾಮರ್ಥ್ಯವನ್ನು ಹೊಂದಿದೆ. ಹುಡ್ ಅಡಿಯಲ್ಲಿ, Moto Tab G62 ಸಾಧನದಲ್ಲಿ ಶಕ್ತಿಯುತ ಕ್ವಾಲ್ಕಮ್ ಸ್ನ್ಯಾಪ್ಡ್ರಾಗನ್ 680 SoC ಪ್ರೊಸೆಸರ್ ಅನ್ನು ಅಳವಡಿಸಲಾಗಿದ್ದು, 4GB RAM ಮತ್ತು 64GB ಮೆಮೊರಿಯೊಂದಿಗೆ ಆಂಡ್ರಾಯ್ಡ್ 12 ಓಎಸ್ ನಲ್ಲಿ ಕಾರ್ಯನಿರ್ವಹಿಸಲಿದೆ. ಜೊತೆಗೆ ಬಾಹ್ಯ ಮೆಮೊರಿಯನ್ನು ಮೈಕ್ರೊ SD ಕಾರ್ಡ್ ಸ್ಲಾಟ್ ಮೂಲಕ 1TB ವರೆಗೂ ವಿಸ್ತರಿಸಬಹುದಾದ ಆಯ್ಕೆ ಇದೆ.
ಕ್ಯಾಮೆರಾ ವಿಭಾಗದಲ್ಲಿ, Moto Tab G62 ಸಾಧನದ ಹಿಂಬದಿಯಲ್ಲಿ 8 ಮೆಗಾಪಿಕ್ಸಲ್ ಹಾಗೂ ಮುಂಭಾಗದಲ್ಲಿ 8 ಮೆಗಾಪಿಕ್ಸಲ್ ಸೆನ್ಸಾರ್ ಸಾಮರ್ಥ್ಯದ ಸೆಲ್ಫಿ ಕ್ಯಾಮೆರಾಗಳನ್ನು ಒದಗಿಸಲಾಗಿದೆ. ಧೀರ್ಘಕಾಲ ಬ್ಯಾಟರಿ ಬಾಳಿಕೆಗಾಗಿ 7700 mAh ಸಾಮರ್ಥ್ಯದ ಬ್ಯಾಟರಿಯನ್ನು ಅಳವಡಿಸಲಾಗಿದ್ದು, ಈ ಬ್ಯಾಟರಿಯು 20W ಫಾಸ್ಟ್ ಚಾರ್ಜಿಂಗ್ ಸೌಲಭ್ಯವನ್ನು ಹೊಂದಿದೆ. ಇನ್ನುಳಿದಂತೆ ಡಾಲ್ಬಿ ಆಡಿಯೊದಿಂದ ಟ್ಯೂನ್ ಮಾಡಲಾದ ಕ್ವಾಡ್ ಸ್ಪೀಕರ್ಗಳು, ವಿಶೇಷ ರೀಡಿಂಗ್ ಮೋಡ್, ಬಹು ಬಳಕೆದಾರ ಖಾತೆಗಳು, ಗೂಗಲ್ ಕಿಡ್ಸ್ ಸ್ಪೇಸ್ನಂತಹ ಇತ್ಯಾದಿ ಪ್ರಮುಖ ವಿಶೇಷ ವೈಶಿಷ್ಟ್ಯಗಳೊಂದಿಗೆ ನೂತನ Moto Tab G62 ಸಾಧನವು ಬಿಡುಗಡೆಗೊಂಡಿದೆ.
Motorola Launches Moto Tab G62 Tablet In India.
16-03-25 10:32 pm
HK News Desk
Reservation for Muslims, Siddaramaiah, BJP: ಸ...
16-03-25 12:11 pm
BJP Leader Basavaraj Dadesugur: ಬಿಜೆಪಿ ಮಾಜಿ ಶ...
15-03-25 09:18 pm
Mangalore, Tamil actor Prabhu Deva, Kukke Sub...
15-03-25 03:55 pm
Elephant attack, Belur, Hassan: ಕಾಡಾನೆ ದಾಳಿ ;...
15-03-25 12:33 pm
13-03-25 03:49 pm
HK News Desk
Shiradi Ghat, Mangalore Bengalore, Mp Brijesh...
13-03-25 01:30 pm
ಪಾಕಿಸ್ತಾನದಲ್ಲಿ 500ಕ್ಕು ಹೆಚ್ಚು ಪ್ರಯಾಣಿಕರಿದ್ದ ರ...
12-03-25 11:41 am
ಅಮೆರಿಕದಲ್ಲಿ 20 ವರ್ಷದ ಭಾರತೀಯ ಮೂಲದ ಮೆಡಿಕಲ್ ವಿದ್...
10-03-25 10:17 pm
ಎಸ್ಸೆಸ್ಸೆಲ್ಸಿ ವಿದ್ಯಾರ್ಥಿನಿ ಜೊತೆಗೆ ಆಟೋ ಚಾಲಕನ ಸ...
10-03-25 11:45 am
16-03-25 10:55 pm
Mangalore Correspondent
Tejasvi Surya, Marriage, Udupi: ಉಡುಪಿ ಕೃಷ್ಣ ಮ...
16-03-25 10:10 pm
Mangalore Jail, Suicide, POSCO: ಮೂಡುಬಿದ್ರೆಯಲ್...
16-03-25 02:05 pm
ಸಂವಿಧಾನ ಉಲ್ಲಂಘಿಸಿ ವಕ್ಫ್ ಕಾಯ್ದೆ ಸರಿಯಲ್ಲ, ಪ್ರಾಣ...
15-03-25 10:00 pm
Mangalore court, Moral Police, Acquit: ಹಿಂದು...
15-03-25 08:32 pm
16-03-25 10:39 pm
Bangalore Correspondent
Mangalore Police, CCB, Drugs, CM: ರಾಜ್ಯದಲ್ಲೇ...
16-03-25 07:27 pm
Mangalore CCB police, Drugs, crime: ರಾಜ್ಯದಲ್ಲ...
16-03-25 10:43 am
Crypto Fraud Arrested In Kerala: ಗ್ಯಾರಂಟೆಕ್ಸ್...
14-03-25 05:02 pm
Ccb Police, Firearms, Mangalore crime: ವಾಮಂಜೂ...
13-03-25 06:44 pm