ಬ್ರೇಕಿಂಗ್ ನ್ಯೂಸ್
16-08-22 07:43 pm Source: Vijayakarnataka ಡಿಜಿಟಲ್ ಟೆಕ್
ಭಾರತೀಯ ಮೊಬೈಲ್ ಕಂಪನಿಗಳನ್ನು ಪ್ರೋತ್ಸಾಹಿಸುವ ಸಲುವಾಗಿ 12,000 ರೂ.ಗಿಂತ ಕಡಿಮೆ ಬೆಲೆಯ ಚೀನಾ ಮೂಲದ ಸ್ಮಾರ್ಟ್ಫೋನ್ಗಳ ಮೇಲೆ ನಿಷೇಧ ಹೇರಲಾಗುತ್ತಿದೆ ಎಂಬ ಸುದ್ದಿಗೆ ಇದೀಗ ಬ್ರೇಕ್ ಬಿದ್ದಿದೆ. ಈ ವಾರದ ಆರಂಭದಲ್ಲಿ ಪ್ರಮುಖ ಮಾಧ್ಯಮ ವರದಿಯೊಂದು 12,000 ರೂ. ರೂ ಬೆಲೆಯ ವ್ಯಾಪ್ತಿಯಲ್ಲಿನ ಚೀನೀ ಬ್ರಾಂಡ್ಗಳ ಸ್ಮಾರ್ಟ್ಫೋನ್ಗಳನ್ನು ನಿಷೇಧಿಸಲು ಭಾರತ ಸರ್ಕಾರವು ಪ್ರಯತ್ನಿಸುತ್ತಿದೆ ಎಂದು ಹೇಳಿತ್ತು. ಆದರೆ, ಇಂತಹ ಯಾವುದೇ ಯೋಜನೆಯನ್ನು ಸರ್ಕಾರವು ಹೊಂದಿಲ್ಲ. ಇದು ಕೇವಲ ಊಹಾಪೋಹವಷ್ಟೇ ಎಂದು ದೇಶದ ಪ್ರಮುಖ ಮಾಧ್ಯಮಗಳು ವರದಿ ಮಾಡಿವೆ. ಇಂತಹದೊಂದು ವರದಿಯ ಕುರಿತಂತೆ ಸರ್ಕಾರದ ಮೂಲಗಳನ್ನು ವಿಚಾರಿಸಿರುವ ಮಾಧ್ಯಮಗಳಿಗೆ, ಸರ್ಕಾರದ ಮಟ್ಟದಲ್ಲಿ ಇಂತಹದೊಂದು ಪ್ರಶ್ನೆಯೇ ಎದುರಾಗಿಲ್ಲ ಎಂದು ಹೇಳಲಾಗಿದೆ.!
ಹೌದು, CNBC-TV18 ಮಾಧ್ಯಮ ವರದಿಯಂತೆ 12,000 ರೂ.ಗಿಂತ ಕಡಿಮೆ ಬೆಲೆಯ ಚೀನಾ ಮೂಲದ ಸ್ಮಾರ್ಟ್ಫೋನ್ಗಳ ಮೇಲೆ ನಿಷೇಧ ಹೇರಲು ಸರ್ಕಾರ ಯೋಜಿಸಿಲ್ಲ ಎಂಬುದನ್ನು ನಾವು ಸರ್ಕಾರದ ಮೂಲಗಳಿಂದ ಕಂಡುಕೊಂಡಿದ್ದೇವೆ ಎಂದು ಹೇಳಿದೆ. ಇದೇ ರೀತಿ ಸರ್ಕಾರದ ಮೂಲ ಮಾಹಿತಿಗಳನ್ನು ಪರಿಶೀಲಿಸಿರುವ ಹಲವು ಮಾಧ್ಯಮಗಳಿಗೂ ಇದೇ ಉತ್ತರ ದೊರೆತಿದೆ ಎಂದು ತಿಳಿದುಬಂದಿದೆ. 12,000 ರೂ.ಗಿಂತ ಕಡಿಮೆ ಬೆಲೆಯ ಚೀನಾ ಮೂಲದ ಸ್ಮಾರ್ಟ್ಫೋನ್ಗಳ ಮೇಲೆ ನಿಷೇಧ ಹೇರಲಾಗುತ್ತಿರುವ ಸುದ್ದಿಯ ಸಂಪೂರ್ಣ ವದಂತಿಯ ಸುದ್ದಿಯಾಗಿರಬಹುದು. ಆದರೆ, ಇಂತಹದೊಂದು ಆಲೋಚನೆ ಬಂದಿರುವುದು ಆಶ್ಚರ್ಯವೇನಲ್ಲ ಎಂದು ಕೆಲ ಪ್ರಮುಖ ಮಾಧ್ಯಮಗಳು ಅಭಿಪ್ರಾಯಪಟ್ಟಿವೆ. ದೇಶದಲ್ಲಿ ಚೀನಾ ಮೊಬೈಲ್ ಕಂಪೆನಿಗಳ ಆರ್ಭಟ ಇಂತಹದೊಂದು ಸುದ್ದಿಯನ್ನು ವೈರಲ್ ಮಾಡಿದೆ.
ಕೌಂಟರ್ಪಾಯಿಂಟ್ ರಿಸರ್ಚ್ ಪ್ರಕಾರ, 2022 ತ್ರೈ ಮಾಸಿಕದಲ್ಲಿ 150 ಡಾಲರ್ಗಿಂತ ಕಡಿಮೆ ಬೆಲೆಯ ಸ್ಮಾರ್ಟ್ ಫೋನ್ಗಳು ಭಾರತದ ಮಾರುಕಟ್ಟೆಯ ಮೂರನೇ ಒಂದು ಭಾಗವನ್ನು ಆಕ್ರಮಿಸಿಕೊಂಡಿದೆ. ಇದರಲ್ಲಿ ಜೂನ್ನಲ್ಲಿ ಚೀನಾದ ಮೊಬೈಲ್ ಕಂಪನಿಗಳು ಪ್ರಾಬಲ್ಯ ಸಾಧಿಸಿದ್ದು, ಶೇ. 80 ಕ್ಕಿಂತ ಹೆಚ್ಚು ಬಜೆಟ್ ಸ್ಮಾರ್ಟ್ಫೋನ್ಗಳ ಮಾರುಕಟ್ಟೆಯ ಪಾಲು ಚೀನಾ ಕಂಪನಿಗಳ ಕೈನಲ್ಲೇ ಇದೆ ಎಂದು ವರದಿಯಾಗಿತ್ತು. ಇದೇ ವೇಳೆ ಭಾರತೀಯ ಮೊಬೈಲ್ ಕಂಪನಿಗಳನ್ನು ಪ್ರೋತ್ಸಾಹಿಸುವ ಸಲುವಾಗಿ 12,000 ರೂ.ಗಿಂತ ಕಡಿಮೆ ಬೆಲೆಯ ಚೀನಾ ಮೂಲದ ಸ್ಮಾರ್ಟ್ಫೋನ್ಗಳ ಮೇಲೆ ನಿಷೇಧ ಹೇರಲಾಗುತ್ತಿದೆ ಎಂಬ ವದಂತಿಯ ಸುದ್ದಿ ಹೊರಬಿದ್ದಿತ್ತು. ಈ ಎರಡೂ ಸುದ್ದಿಗಳು ಒಮ್ಮೆಲೆ ಸಿಕ್ಕಿದ್ದರಿಂದ ದೇಶದಲ್ಲಿ ಚೀನಾ ಮೂಲದ ಬಜೆಟ್ ಸ್ಮಾರ್ಟ್ಫೋನ್ಗಳ ಮೇಲೆ ನಿಷೇಧದ ಸುದ್ದಿ ಕಾಡ್ಗಿಚ್ಚಿನಂತೆ ಹಚ್ಚಿಕೊಂಡಿತ್ತು.
ಈ ವದಂತಿಯ ಸುದ್ದಿ ನಿಜ ಕೂಡ ಆಗಬಹುದು!
ಭಾರತ ಹಾಗೂ ಚೀನಾ ದೇಶಗಳ ನಡುವೆ ಶೀತಲ ಸಮರದಂತಹ ವಾತಾವರಣ ಇದ್ದೇ ಇದೆ. ಹಾಗಾಗಿಯೇ, ಭಾರತ ಸರ್ಕಾರವು 2020 ರಿಂದ ಎಲ್ಲಾ ಚೀನಾ ಅಪ್ಲಿಕೇಶನ್ಗಳನ್ನು ನಿಷೇಧಿಸುತ್ತಿದೆ. ಚೀನಾ ಮೂಲದ ಅಪ್ಲಿಕೇಷನ್ಗಳು ಭಾರತೀಯರ ಡೇಟಾವನ್ನು ಹೊಂದುವುದನ್ನು ತಪ್ಪಿಸಲು ಇಲ್ಲಿಯವರೆಗೆ 349 ಕ್ಕೂ ಹೆಚ್ಚು ಚೈನೀಸ್ ಅಪ್ಲಿಕೇಶನ್ಗಳನ್ನು ನಿಷೇಧಿಸಲಾಗಿದೆ. ಇದೀಗ 12,000 ರೂ.ಗಿಂತ ಕಡಿಮೆ ಬೆಲೆಯ ಚೀನಾ ಮೂಲದ ಸ್ಮಾರ್ಟ್ಫೋನ್ಗಳ ಮೇಲೆ ನಿಷೇಧ ಹೇಡುವ ಸುದ್ದಿ ಹೊರಬಿದ್ದಿದ್ದು, ಇದು ಸರ್ಕಾರದ ಮಟ್ಟದಲ್ಲಿ ಖಚಿತವಾದ ಸುದ್ದಿಯಾಗದಿದ್ದರೂ ಸಹ, ದೇಶದ ಉನ್ನತ ವ್ಯವಸ್ಥೆಯು ಇಂತಹದೊಂದು ಯೋಚನೆಯನ್ನು ಮಾಡಿದ್ದರೆ ಅಚ್ಚರಿ ಏನಿಲ್ಲ. ಹಾಗಾಗಿ, ಈ ವದಂತಿಯ ಸುದ್ದಿ ನಿಜ ಕೂಡ ಆಗಬಹುದು.! ಈ ಬಗ್ಗೆ ನಿಮ್ಮ ಅಭಿಪ್ರಾಯ ಏನು ಎಂಬುದನ್ನು ಕಾಮೆಂಟ್ ಮಾಡಿ ತಿಳಿಸಿ.
Indian Government Has No Plans To Ban Chinese Smartphones Under Rs, 12,000.
15-03-25 09:18 pm
HK News Desk
Mangalore, Tamil actor Prabhu Deva, Kukke Sub...
15-03-25 03:55 pm
Elephant attack, Belur, Hassan: ಕಾಡಾನೆ ದಾಳಿ ;...
15-03-25 12:33 pm
DySP Kanakalakshmi arrested, suicide: ಬೋವಿ ನಿ...
14-03-25 11:11 pm
Swamiji, Bagalkot, Police Video: ದುಡ್ಡು ಪಡೆದು...
14-03-25 08:30 pm
13-03-25 03:49 pm
HK News Desk
Shiradi Ghat, Mangalore Bengalore, Mp Brijesh...
13-03-25 01:30 pm
ಪಾಕಿಸ್ತಾನದಲ್ಲಿ 500ಕ್ಕು ಹೆಚ್ಚು ಪ್ರಯಾಣಿಕರಿದ್ದ ರ...
12-03-25 11:41 am
ಅಮೆರಿಕದಲ್ಲಿ 20 ವರ್ಷದ ಭಾರತೀಯ ಮೂಲದ ಮೆಡಿಕಲ್ ವಿದ್...
10-03-25 10:17 pm
ಎಸ್ಸೆಸ್ಸೆಲ್ಸಿ ವಿದ್ಯಾರ್ಥಿನಿ ಜೊತೆಗೆ ಆಟೋ ಚಾಲಕನ ಸ...
10-03-25 11:45 am
15-03-25 10:00 pm
Mangalore Correspondent
Mangalore court, Moral Police, Acquit: ಹಿಂದು...
15-03-25 08:32 pm
Mangalore Mary Hill, Boy Death; ಮೇರಿಹಿಲ್ ; ಏಳ...
15-03-25 04:11 pm
Dr Vamana Nandavar, Mangalore Death: ತುಳು, ಕನ...
15-03-25 01:47 pm
Mangalore Student Missing, ,Kidnap, Hitein Bh...
15-03-25 12:35 pm
14-03-25 05:02 pm
HK News Desk
Ccb Police, Firearms, Mangalore crime: ವಾಮಂಜೂ...
13-03-25 06:44 pm
Kothanur Police, Bangalore crime, Murder: ನಾಲ...
11-03-25 07:34 pm
Tanishq showroom, Bihar Robbery: ಬಿಹಾರದಲ್ಲಿ ಹ...
10-03-25 10:48 pm
Actress Ranya Rao, CBI, Gold case; ನಟಿ ರನ್ಯಾ...
09-03-25 05:06 pm