ಬ್ರೇಕಿಂಗ್ ನ್ಯೂಸ್
03-08-22 07:39 pm Source: Vijayakarnataka ಡಿಜಿಟಲ್ ಟೆಕ್
ಕಳೆದ ವಾರವಷ್ಟೇ ಜಾಗತಿಕ ಮಾರುಕಟ್ಟೆಗಳಲ್ಲಿ ಪರಿಚಯವಾಗಿದ್ದ ಮೊಟೊರೊಲಾ G-ಸರಣಿಯ ಹೊಸ ಮೋಟೋ G32 ಸ್ಮಾರ್ಟ್ಫೋನ್ ಭಾರತದಲ್ಲಿ ಬಿಡುಗಡೆಯಾಗುವ ದಿನಾಂಕ ಹೊರಬಿದ್ದಿದೆ. 30W ವೇಗದ ಚಾರ್ಜಿಂಗ್ ಅನ್ನು ಬೆಂಬಲಿಸುವ 5000mAh ಸಾಮರ್ಥ್ಯದ ಬ್ಯಾಟರಿ, 50 ಮೆಗಾಪಿಕ್ಸೆಲ್ ಸೆನ್ಸಾರ್ ಸಾಮರ್ಥ್ಯದ ಟ್ರಿಪಲ್ ರಿಯರ್ ಕ್ಯಾಮೆರಾ ಸೆಟ್ಅಪ್, 90Hz ರಿಫ್ರೆಶ್ ರೇಟ್ ಸಾಮರ್ಥ್ಯದ ಡಿಸ್ಪ್ಲೇ ಮತ್ತು ಕ್ವಾಲ್ಕಾಮ್ ಸ್ನಾಪ್ಡ್ರಾಗನ್ 680 ಪ್ರೊಸೆಸರ್ ಸೇರಿದಂತೆ ಹಲವು ವೈಶಿಷ್ಟ್ಯಗಳನ್ನು ಹೊತ್ತು 'ಮೋಟೋ G32' ಸ್ಮಾರ್ಟ್ಫೋನ್ ಇದೇ ಆಗಸ್ಟ್ 9 ರಂದು ದೇಶದಲ್ಲಿ ಬಿಡುಗಡೆಯಾಗಲಿದೆ. ಹಾಗಾದರೆ, ನೂತನ 'ಮೋಟೋ G32' ಸ್ಮಾರ್ಟ್ಫೋನ್ ಹೊಂದಿರುವ ಸಂಪೂರ್ಣ ವೈಶಿಷ್ಟ್ಯಗಳು ಯಾವುವು ಮತ್ತು ಬೆಲೆ ಎಷ್ಟು ಎಂಬ ಸಂಪೂರ್ಣ ಮಾಹಿತಿಗಳನ್ನು ತಿಳಿಯೋಣ ಬನ್ನಿ.
'ಮೋಟೋ G32' ಸ್ಮಾರ್ಟ್ಫೋನ್ ವೈಶಿಷ್ಟ್ಯಗಳು
ಈಗಾಗಲೇ ವಿಶ್ವ ಮಾರುಕಟ್ಟೆಗೆ ಎಂಟ್ರಿ ನೀಡಿರುವ ನೂತನ ಮೋಟೋ G32 ಸ್ಮಾರ್ಟ್ಫೋನಿನಲ್ಲಿ 85.4% ಸ್ಕ್ರೀನ್-ಟು-ಬಾಡಿ ನಡುವಿನ ರೇಷ್ಯೂ ಹೊಂದಿರುವ 6.5 ಇಂಚಿನ ದೊಡ್ಡ ಫುಲ್ ಹೆಚ್ಡಿ ಪ್ಲಸ್ ಎಲ್ಸಿಡಿ ಡಿಸ್ಪ್ಲೇಯನ್ನು ಅಳವಡಿಸಲಾಗಿದೆ. ಈ ಡಿಸ್ಪ್ಲೇಯು 90Hz ಸ್ಕ್ರೀನ್ ರಿಫ್ರೆಶ್ ರೇಟ್ ಸಾಮರ್ಥದಲ್ಲಿ ಮತ್ತು 20:9 ರಚನೆಯ ಅನುಪಾತ 1,080x2,400 ಪಿಕ್ಸೆಲ್ ಸ್ಕ್ರೀನ್ ರೆಸಲ್ಯೂಶನ್ ಸಾಮರ್ಥ್ಯವನ್ನು ಹೊಂದಿದೆ. ಹುಡ್ ಅಡಿಯಲ್ಲಿ, ಮೋಟೋ G32 ಸ್ಮಾರ್ಟ್ಫೋನಿನಲ್ಲಿ ಕ್ವಾಲ್ಕಾಮ್ ಸ್ನಾಪ್ಡ್ರಾಗನ್ 680 ಪ್ರೊಸೆಸರ್ ಅನ್ನು ಅಳವಡಿಸಲಾಗಿದ್ದು, ಈ ಪ್ರೊಸೆಸರ್ ಅನ್ನು 4GB RAM ಮತ್ತು 128GB ಆಂತರಿಕ ಮೆಮೊರಿಯನ್ನು ಜೋಡಿಸಲಾಗಿದೆ ಮತ್ತು ಎಸ್ಡಿ ಮೆಮೊರಿ ಕಾರ್ಡ್ ಮೂಲಕ ಸಂಗ್ರಹ ಸಾಮರ್ಥ್ಯವನ್ನು 1TB ವರೆಗೆ ವಿಸ್ತರಿಸಬಹುದಾದ ಆಯ್ಕೆ ಕೂಡ ಮೋಟೋ G32 ಸ್ಮಾರ್ಟ್ಫೋನಿನಲ್ಲಿದೆ. ಇನ್ನು ಈ ನೂತನ ಮೋಟೋ G32 ನ್ ಸ್ಮಾರ್ಟ್ಫೋನ್ ಆಂಡ್ರಾಯ್ಡ್ 12 ನಲ್ಲಿ ಕಾರ್ಯನಿರ್ವಹಿಸಲಿದೆ ಎಂದು ಕಂಪೆನಿ ತಿಳಿಸಿದೆ.
ಕ್ಯಾಮೆರಾ ವಿಭಾಗದಲ್ಲಿ, ಮೋಟೋ G32 ಸ್ಮಾರ್ಟ್ಫೋನ್ ರಿಯರ್ ಕ್ಯಾಮೆರಾ ಸೆಟ್ಅಪ್ ಅನ್ನು ನೀಡಲಾಗಿದೆ. ಇದರ ಪ್ರಾಥಮಿಕ ಕ್ಯಾಮೆರಾವು F1.8 ಅಪಾರ್ಚರ್ ಲೆನ್ಸ್ ಜೊತಗೆ 50 ಮೆಗಾಪಿಕ್ಸೆಲ್ ಕ್ಯಾಮೆರಾವನ್ನು ಹೊಂದಿದೆ ಹೊಂದಿದೆ. ಇದರ ಜೊತೆಗೆ F2.2 ಲೆನ್ಸ್ ಹೊಂದಿರುವ 8 ಮೆಗಾಪಿಕ್ಸೆಲ್ ಅಲ್ಟ್ರಾವೈಡ್ ಸೆನ್ಸಾರ್ ಮತ್ತು F2 ಜೊತೆಗೆ 2-ಮೆಗಾಪಿಕ್ಸೆಲ್ ಮ್ಯಾಕ್ರೋ ಸೆನ್ಸಾರ್ ಕ್ಯಾಮೆರಾಗಳನ್ನು ನೀಡಲಾಗಿದೆ. ಸೆಲ್ಫಿ ಮತ್ತು ವಿಡಿಯೋ ಕರೆಗಳಿಗಾಗಿ 16 ಮೆಗಾಪಿಕ್ಸೆಲ್ ಸಾಮರ್ಥ್ಯದ ಫ್ರಂಟ್ ಕ್ಯಾಮೆರಾವನ್ನು ಸಹ ಮೋಟೋ G32 ಸ್ಮಾರ್ಟ್ಫೋನ್ ಒಳಗೊಂಡಿದೆ. ಇನ್ನು ಕನೆಕ್ಟಿವಿಟಿ ಆಯ್ಕೆಗಳಲ್ಲಿ ಡ್ಯುಯಲ್-ಬ್ಯಾಂಡ್ ವೈಫೈ, ಬ್ಲೂಟೂತ್ 5.2 ಮತ್ತು ಎನ್ಎಫ್ಸಿಗೆ ಬೆಂಬಲವನ್ನು ನೀಡಲಿರುವ ಮೋಟೋ G32 ಸ್ಮಾರ್ಟ್ಫೋನ್ 5000mAh ಸಾಮರ್ಥ್ಯದ ಬ್ಯಾಟರಿಯನ್ನು ಹೊಂದಿದೆ. ಇದು 30W ವೇಗದ ಚಾರ್ಜಿಂಗ್ ಅನ್ನು ಬೆಂಬಲಿಸುತ್ತದೆ. ಈ ಸ್ಮಾರ್ಟ್ಫೋನ್ ಚಾರ್ಜಿಂಗ್ ಮತ್ತು ಡೇಟಾ ವರ್ಗಾವಣೆಗಾಗಿ USB-C ಪೋರ್ಟ್ ಅನ್ನು ಬಳಸುತ್ತದೆ.
'ಮೋಟೋ G32' ಸ್ಮಾರ್ಟ್ಫೋನ್ ಬೆಲೆ
ಮೋಟೋ G32 ಸ್ಮಾರ್ಟ್ಫೋನ್ ಜಾಗತಿಕ ಮತ್ತು ಯುರೋಪಿಯನ್ ಮಾರುಕಟ್ಟೆಯಲ್ಲಿ ಈಗಾಗಲೇ ಬಿಡುಗಡೆಗೊಂಡಿದ್ದು, ಕೇವಲ ಒಂದೇ 4GB RAM ಮತ್ತು 128GB ಸ್ಟೋರೇಜ್ ಮಾದರಿಯಲ್ಲಿ ಮೋಟೋ G32 ಸ್ಮಾರ್ಟ್ಫೋನ್ ಅನ್ನು EUR 209.99 (ಅಂದಾಜು 17,000 ರೂ.) ಬೆಲೆಯಲ್ಲಿ ಮಾರುಕಟ್ಟೆಗೆ ಪರಿಚಯಿಸಲಾಗಿದೆ. ಇನ್ನು ಮೋಟೋ G32 ಸ್ಮಾರ್ಟ್ಫೋನ್ ಇದೇ ಬೆಲೆಗಳಲ್ಲಿ ಭಾರತದ ಮಾರುಕಟ್ಟೆಗೂ ಎಂಟ್ರಿ ನೀಡುವ ಸಾಧ್ಯತೆ ಇದೆ.
Moto G32 India Launch Date Confirmed.
15-03-25 09:18 pm
HK News Desk
Mangalore, Tamil actor Prabhu Deva, Kukke Sub...
15-03-25 03:55 pm
Elephant attack, Belur, Hassan: ಕಾಡಾನೆ ದಾಳಿ ;...
15-03-25 12:33 pm
DySP Kanakalakshmi arrested, suicide: ಬೋವಿ ನಿ...
14-03-25 11:11 pm
Swamiji, Bagalkot, Police Video: ದುಡ್ಡು ಪಡೆದು...
14-03-25 08:30 pm
13-03-25 03:49 pm
HK News Desk
Shiradi Ghat, Mangalore Bengalore, Mp Brijesh...
13-03-25 01:30 pm
ಪಾಕಿಸ್ತಾನದಲ್ಲಿ 500ಕ್ಕು ಹೆಚ್ಚು ಪ್ರಯಾಣಿಕರಿದ್ದ ರ...
12-03-25 11:41 am
ಅಮೆರಿಕದಲ್ಲಿ 20 ವರ್ಷದ ಭಾರತೀಯ ಮೂಲದ ಮೆಡಿಕಲ್ ವಿದ್...
10-03-25 10:17 pm
ಎಸ್ಸೆಸ್ಸೆಲ್ಸಿ ವಿದ್ಯಾರ್ಥಿನಿ ಜೊತೆಗೆ ಆಟೋ ಚಾಲಕನ ಸ...
10-03-25 11:45 am
15-03-25 10:00 pm
Mangalore Correspondent
Mangalore court, Moral Police, Acquit: ಹಿಂದು...
15-03-25 08:32 pm
Mangalore Mary Hill, Boy Death; ಮೇರಿಹಿಲ್ ; ಏಳ...
15-03-25 04:11 pm
Dr Vamana Nandavar, Mangalore Death: ತುಳು, ಕನ...
15-03-25 01:47 pm
Mangalore Student Missing, ,Kidnap, Hitein Bh...
15-03-25 12:35 pm
16-03-25 10:43 am
Mangalore Correspondent
Crypto Fraud Arrested In Kerala: ಗ್ಯಾರಂಟೆಕ್ಸ್...
14-03-25 05:02 pm
Ccb Police, Firearms, Mangalore crime: ವಾಮಂಜೂ...
13-03-25 06:44 pm
Kothanur Police, Bangalore crime, Murder: ನಾಲ...
11-03-25 07:34 pm
Tanishq showroom, Bihar Robbery: ಬಿಹಾರದಲ್ಲಿ ಹ...
10-03-25 10:48 pm