ಬ್ರೇಕಿಂಗ್ ನ್ಯೂಸ್
23-07-22 08:27 pm Source: Vijayakarnataka ಡಿಜಿಟಲ್ ಟೆಕ್
ಭಾರತ ಸೇರಿದಂತೆ ವಿಶ್ವ ಮೊಬೈಲ್ ಮಾರುಕಟ್ಟೆಯು ಬಹುನಿರೀಕ್ಷೆಯಿಂದ ಎದುರುನೋಡುತ್ತಿರುವ OnePlus 10T 5G ಸ್ಮಾರ್ಟ್ಫೋನ್ ದೇಶದಲ್ಲಿ ಇದೇ ಆಗಸ್ಟ್ 3 ರಿಂದ ಪ್ರೀ-ಬುಕ್ ಮಾಡಲು ಲಭ್ಯವಿರುತ್ತದೆ. ಬಹುನಿರೀಕ್ಷಿತ OnePlus 10T 5G ಸ್ಮಾರ್ಟ್ಫೋನಿನ ಅಧಿಕೃತ ಮಾರಾಟಗಾರ ಇ-ಕಾಮರ್ಸ್ ತಾಣ ಅಮೆಜಾನ್ ಇಂಡಿಯಾದಲ್ಲಿ ಹೊಸದಾಗಿ ವೆಬ್ಪುಟವೊಂದನ್ನು ತೆರೆಯಲಾಗಿದ್ದು, ಇದರಲ್ಲಿ OnePlus 10T ಸ್ಮಾರ್ಟ್ಫೋನಿನ ಹೊಸ ಟೀಸರ್ ಚಿತ್ರವೊಂದನ್ನು ಬಿಡುಗಡೆಗೊಳಿಸಲಾಗಿದೆ. ಟೀಸರ್ ಚಿತ್ರದಲ್ಲಿ ಕಾಣಿಸುವಂತೆ, OnePlus 10T ಸ್ಮಾರ್ಟ್ಫೋನ್ ಕಪ್ಪು ಮತ್ತು ಹಸಿರು ಬಣ್ಣದ ಎರಡು ಆಯ್ಕೆಗಳಲ್ಲಿ ಟೆಕ್ಸ್ಚರ್ಡ್ ಬ್ಯಾಕ್ ಪ್ಯಾನೆಲ್ ಅನ್ನು ಒಳಗೊಂಡಿರುವ ಸಾಧ್ಯತೆಯಿದೆ ಹಾಗೂ ಸ್ನಾಪ್ಡ್ರಾಗನ್ 8+ Gen 1 SoC ನಿಂದ ಚಾಲಿತವಾಗಿರಲಿದೆ ಎಂಬ ಮಾಹಿತಿಗಳು ಬಹಿರಂಗಗೊಂಡಿವೆ.
ಇದೇ ಆಗಸ್ಟ್ 3 ರಂದು ಸಂಜೆ 7.30pm IST ಕ್ಕೆ ನ್ಯೂಯಾರ್ಕ್ ನಗರದಲ್ಲಿ ನಡೆಯಲಿರುವ ಈವೆಂಟ್ನಲ್ಲಿ OnePlus ತನ್ನ ಬಹುನಿರೀಕ್ಷಿತ OnePlus 10T 5G ಸ್ಮಾರ್ಟ್ಫೋನ್ ಅನ್ನು ಬಿಡುಗಡೆ ಮಾಡುವುದು ಈಗಾಗಲೇ ಖಚಿತವಾಗಿತ್ತು. ಆದರೆ, ಭಾರತದಲ್ಲಿ ಸಹ OnePlus 10T 5G ಸ್ಮಾರ್ಟ್ಫೋನ್ ಬಿಡುಗಡೆ ಬಗ್ಗೆ ಯಾವುದೇ ಅಧಿಕೃತ ಮಾಹಿತಿಗಳು ಇರಲಿಲ್ಲ. ಆದರೆ, ಇದೀಗ ಅಮೆಜಾನ್ ಇಂಡಿಯಾದಲ್ಲಿ ತೆರೆದಿರುವ ಹೊಸ ಪೇಜ್ನಲ್ಲಿ ದೇಶದಲ್ಲಿ OnePlus 10T 5G ಸ್ಮಾರ್ಟ್ಫೋನ್ ಬರುವಿಕೆಯನ್ನು ಖಚಿತಪಡಿಸಲಾಗಿದೆ. ಅಂದರೆ, ಆಗಸ್ಟ್ 3 ರಂದು ನ್ಯೂಯಾರ್ಕ್ ನಲ್ಲಿ ಬಿಡುಗಡೆಯಾದ ವೇಳೆಯಲ್ಲೇ ಭಾರತದಲ್ಲೂ OnePlus 10T ಸ್ಮಾರ್ಟ್ಫೋನ್ ಪ್ರೀ-ಬುಕ್ ಆಯ್ಕೆಯನ್ನು ಪಡೆದುಕೊಳ್ಳಲಿದೆ. ಇನ್ನು OnePlus 10T ಪೋನ್ ಬೆಲೆ ಎಷ್ಟು ಎಂಬ ವಂದಂತಿಯ ಸುದ್ದಿ ಸಹ ವೈರಲ್ ಆಗಿದೆ.
ಭಾರತದಲ್ಲಿ OnePlus 10T ಬೆಲೆ (ನಿರೀಕ್ಷಿತ)
ವಿಶ್ವದ ಪ್ರಮುಖ ಟೆಕ್ ಮಾಧ್ಯಮಗಳು ಇತ್ತೀಚಿಗಷ್ಟೇ ವರದಿ ಮಾಡಿರುವಂತೆ, ನೂತನ OnePlus 10T 5G ಸ್ಮಾರ್ಟ್ಫೋನ್ ಸುಮಾರು ಸಿಎನ್ವೈ 3,000 (ಸುಮಾರು ರೂ. 35,500) ಮತ್ತು ಸಿಎನ್ವೈ 4,000 (ಸುಮಾರು ರೂ. 47,400) ನಡುವೆ ಬೆಲೆಗಳನ್ನು ಹೊಂದಿರಬಹುದೆಂದು ನಿರೀಕ್ಷಿಸಲಾಗಿದೆ. OnePlus 10T 5G ಸ್ಮಾರ್ಟ್ಫೋನಿನ ಮೂಲ ಮಾದರಿಯು ಭಾರತದಲ್ಲಿ 49,999 ರೂ. ಬೆಲೆಯನ್ನು ಹೊಂದಿರಬಹುದು ಎಂದು ಹೇಳಲಾಗಿದೆ. ಆದರೆ, ಕಂಪೆನಿ ಈ ಬಗ್ಗೆ ಯಾವುದೇ ಅಧಿಕರತ ಮಾಹಿತಿಯನ್ನು ಒದಗಿಸಿಲ್ಲ.
OnePlus 10T ವಿಶೇಷಣಗಳು (ನಿರೀಕ್ಷಿತ)
ಮೇಲೆ ತಿಳಿಸಿದಂತೆ, OnePlus 10T ಸ್ಮಾರ್ಟ್ಫೋನ್ Qualcomm Snapdragon 8+ Gen 1 SoC ಪ್ರೊಸೆಸರ್ನಿಂದ ಕಾರ್ಯನಿರ್ವಹಿಸುತ್ತದೆ ಎಂಬ ಮಾಹಿತಿ ಖಚಿತವಾಗಿದೆ. ಇನ್ನುಳಿದಂತೆ, ಈ ಸ್ಮಾರ್ಟ್ಫೋನ್ 6.7-ಇಂಚಿನ AMOLED ಡಿಸ್ಪ್ಲೇಯನ್ನು 120Hz ರಿಫ್ರೆಶ್ ರೇಟ್ ಮತ್ತು ಪೂರ್ಣ-HD+ ರೆಸಲ್ಯೂಶನ್ನೊಂದಿಗೆ ಹೊಂದಿರುತ್ತದೆ ಎಂದು ವರದಿಯಾಗಿದೆ. ಇಷ್ಟೇ ಅಲ್ಲದೇ, 50-ಮೆಗಾಪಿಕ್ಸೆಲ್ ಮುಖ್ಯ ಸಂವೇದಕ, 8-ಮೆಗಾಪಿಕ್ಸೆಲ್ ಸೆಕೆಂಡರಿ ಲೆನ್ಸ್ ಮತ್ತು 2-ಮೆಗಾಪಿಕ್ಸೆಲ್ ಶೂಟರ್ನೊಂದಿಗೆ ಟ್ರಿಪಲ್ ರಿಯರ್ ಕ್ಯಾಮೆರಾ ಸೆಟಪ್, 150W ವೇಗದ ಚಾರ್ಜಿಂಗ್ ಬೆಂಬಲದೊಂದಿಗೆ 4,800mAh ಬ್ಯಾಟರಿ 512GB UFS 3.1 ಅಂತರ್ಗತ ಸಂಗ್ರಹಣೆಯೊಂದಿಗೆ 16GB LPDDR5 RAM ನಂತಹ ವೈಶಿಷ್ಟ್ಯಗಳನ್ನು ಈ ಸ್ಮಾರ್ಟ್ಫೋನ್ ಒಳಗೊಂಡಿರುತ್ತದೆ ಎಂದು ವರದಿಯಾಗಿದೆ.
Oneplus 10t Pre Orders Starting On August 3.
30-04-25 05:08 pm
Bangalore Correspondent
R Ahsok, Cm Siddaramaiah, Pak: ಕಾಂಗ್ರೆಸ್ನವರಿ...
29-04-25 10:45 pm
CM Siddaramaiah, Belagavi, BJP Suresh Kumar:...
29-04-25 09:51 pm
Protest Kalaburagi, islamabad Locality: ಕಲಬುರ...
29-04-25 09:20 pm
Kudupu Murder, Mob attack, Parameshwar: ಕುಡುಪ...
29-04-25 04:28 pm
30-04-25 06:59 pm
HK News Desk
India Pakistan War: ಭಾರತೀಯ ಸೇನಾಪಡೆಗೆ ಪರಮಾಧಿಕಾ...
30-04-25 03:14 pm
Pakistan, No-fly zone islamabad: ಭಾರತದ ಪ್ರತೀಕ...
30-04-25 02:13 pm
ಮೋದಿ 'ಗಾಯಬ್' ಎಂದು ಕಾಂಗ್ರೆಸ್ ಪೋಸ್ಟ್ ; ಕಾಂಗ್ರೆಸ...
29-04-25 03:45 pm
'ನನಗೆ ಪಾಕಿಸ್ತಾನದಲ್ಲಿ ಯಾರೂ ಇಲ್ಲ, ದಯವಿಟ್ಟು ಉಳಿಸ...
28-04-25 06:52 pm
30-04-25 04:06 pm
Mangalore Correspondent
ಗುಂಪು ಥಳಿತಕ್ಕೆ ಸಾವು ಪ್ರಕರಣ ; ಕೇರಳ ಮೂಲದ ಯುವಕನೆ...
30-04-25 11:26 am
Puttur Elephant Attack: ಕಾಡಾನೆ ತಿವಿತಕ್ಕೆ ಪುತ್...
29-04-25 11:00 pm
Mangalore, Ullal Nethravathi Bridge: ಉಳ್ಳಾಲ ನ...
29-04-25 05:45 pm
Mangalore, Dr Kalladka Bhat: ಹೆಣ್ಣು ಮಕ್ಕಳು ವ್...
29-04-25 12:40 pm
30-04-25 04:09 pm
Mangalore Correspondent
Mangalore Mudipu Murder, Mob, Police, Crime:...
29-04-25 09:59 pm
Kudupu Murder, Mangalore Crime, Police: ಕುಡುಪ...
29-04-25 02:53 pm
Belthagady, Blackmail, Mangalore crime: ಬೆಳ್ತ...
28-04-25 11:39 am
Shootout Bakrebail, Mangalore Crime: ಬಾಕ್ರಬೈಲ...
28-04-25 11:24 am