ಬ್ರೇಕಿಂಗ್ ನ್ಯೂಸ್
18-07-22 07:43 pm Source: Vijayakarnataka ಡಿಜಿಟಲ್ ಟೆಕ್
ಬಜೆಟ್ ಬೆಲೆಯ ಸ್ಮಾರ್ಟ್ಫೋನ್ಗಳ ತಯಾರಿಕೆಯಲ್ಲಿ ಹೆಸರುವಾಸಿಯಾಗಿರುವ ಜನಪ್ರಿಯ ಮೊಬೈಲ್ ಬ್ರ್ಯಾಂಡ್ Tecno ದೇಶದಲ್ಲಿಂದು ತನ್ನ ವಿನೂತನ Tecno Spark 9 ಸ್ಮಾರ್ಟ್ಫೋನನ್ನು ಬಿಡುಗಡೆಗೊಳಿಸಿದೆ. ದೇಶದಲ್ಲೇ ಅತ್ಯಂತ ಕಡಿಮೆ ಬೆಲೆಯಲ್ಲಿ 11GB ವಿಸ್ತೃತ RAM ಹೊಂದಿರುವ ಸ್ಮಾರ್ಟ್ಫೋನ್ ಇದಾಗಿದೆ ಎಂದು ಕಂಪೆನಿ ಹೇಳಿಕೊಂಡಿದ್ದು, ಆಕ್ಟಾ-ಕೋರ್ MediaTek Helio G37 SoC ಪ್ರೊಸೆಸರ್, 90Hz ರಿಫ್ರೆಶ್ ರೇಟ್ ಸಾಮರ್ಥ್ಯದ 6.6-ಇಂಚಿನ ಡಿಸ್ಪ್ಲೇ ಮತ್ತು 13-ಮೆಗಾಪಿಕ್ಸೆಲ್ ಎಐ ಡ್ಯುಯಲ್ ರಿಯರ್ ಕ್ಯಾಮೆರಾ ಸೆಟಪ್ ನಂತಹ ವೈಶಿಷ್ಟ್ಯಗಳನ್ನು ಹೊತ್ತು Tecno Spark 9 ಸ್ಮಾರ್ಟ್ಫೋನ್ ಮಾರುಕಟ್ಟೆಗೆ ಎಂಟ್ರಿ ನೀಡಿದೆ. ಹಾಗಾದರೆ, ನೂತನ Tecno Spark 9 ಸ್ಮಾರ್ಟ್ಫೋನ್ ಹೇಗಿದೆ ಮತ್ತು ಏನೆಲ್ಲಾ ವೈಶಿಷ್ಟ್ಯಗಳನ್ನು ಹೊಂದಿದೆ ಎಂಬುದನ್ನು ನೋಡೋಣ ಬನ್ನಿ.
Tecno Spark 9 ಸ್ಮಾರ್ಟ್ಫೋನಿನ ವೈಶಿಷ್ಟ್ಯಗಳು
ನೂತನ Tecno Spark 9 ಸ್ಮಾರ್ಟ್ಫೋನ್ ಮುಂಭಾಗದಲ್ಲಿ ವಾಟರ್-ಡ್ರಾಪ್ ಶೈಲಿಯ ನಾಚ್ ಹಾಗೂ ಹಿಂಭಾಗದಲ್ಲಿ ಡ್ಯುಯಲ್ ರಿಯರ್ ಕ್ಯಾಮೆರಾ ಹೊಂದಿರುವ ಮಧ್ಯಮ ಪ್ರೀಮಿಯಂ ವಿನ್ಯಾಸದಲ್ಲಿ ಬಿಡುಗಡೆಯಾಗಿದೆ. ಮೊದಲೇ ಹೇಳಿದಂತೆ, ಈ Tecno Spark 9 ಸ್ಮಾರ್ಟ್ಫೋನಿನಲ್ಲಿ 90Hz ರಿಫ್ರೆಶ್ ರೇಟ್ ಸಾಮರ್ಥ್ಯದ 6.6-ಇಂಚಿನ HD+ ರೆಸಲ್ಯೂಶನ್ ಡಿಸ್ಪ್ಲೇಯನ್ನು ಅಳವಡಿಸಲಾಗಿದೆ. ಹುಡ್ ಅಡಿಯಲ್ಲಿ, MediaTek Helio G37 SoC ಪ್ರೊಸೆಸರ್ನಿಂದ ಚಾಲಿತವಾಗಿರುವ Tecno Spark 9 ಸ್ಮಾರ್ಟ್ಫೋನ್ ಒಟ್ಟು 11GB ವಿಸ್ತೃತ RAM ನಿಂದ ಚಾಲಿತವಾಗಿರಲಿದೆ ಎಂದು ಕಂಪೆನಿ ತಿಳಿಸಿದೆ. ಇದರಲ್ಲಿ 6GB RAM ಸ್ಮಾರ್ಟ್ಫೋನಿನಲ್ಲಿ ನೀಡಲಾಗಿರುವ ಆಂತರಿಕ RAM ಆದರೆ, ಉಳಿದ 5GB RAM ಆಂತರಿಕ ಮೆಮೊರಿಯಿಂದ ವಿಸ್ತರಿಸಬಹುದಾದ ವರ್ಚುವಲ್ RAM ವೈಶಿಷ್ಟ್ಯದಿಂದ ಸಿಗಲಿದೆ.
ಇದಲ್ಲದೇ, Tecno Spark 9 ಸ್ಮಾರ್ಟ್ಫೋನ್ 128GB ವರೆಗೆ ಅಂತರ್ಗತ ಸಂಗ್ರಹಣೆ ಶಕ್ತಿಯನ್ನು ಸಹ ಹೊಂದಿದೆ. ಕ್ಯಾಮೆರಾ ವಿಭಾಗದಲ್ಲಿ, ಸ್ಕ್ವೇರ್ ಮಾದರಿಯ ಡ್ಯುಯಲ್ ಕ್ಯಾಮೆರಾ ಮಾಡ್ಯೂಲ್ ಅನ್ನು ನೀಡಲಾಗಿದ್ದು, ಇದು 13-ಮೆಗಾಪಿಕ್ಸೆಲ್ AI ಡ್ಯುಯಲ್ ರಿಯರ್ ಕ್ಯಾಮೆರಾ ಜೊತೆಗೆ LED ಫ್ಲ್ಯಾಷ್ ಅನ್ನು ಹೊಂದಿದೆ. ಸೆಲ್ಫಿ ಕ್ಯಾಮೆರಾವನ್ನು ಅಳವಡಿಸಲಾಗಿದೆಯಾದರೂ, ಇದರ ಸಾಮರ್ಥ್ಯ ಎಷ್ಟು ಎಂಬ ಮಾಹಿತಿಯು ದೊರೆತಿಲ್ಲ. ಇನ್ನು Tecno Spark 9 ಸ್ಮಾರ್ಟ್ಫೋನಿನ ವಿಶೇಷತೆಯಾಗಿ, ಕ್ಯಾಮೆರಾ ಮಾಡ್ಯೂಲ್ನಲ್ಲೇ ಫಿಂಗರ್ ಪ್ರಿಂಟ್ ಸ್ಕ್ಯಾನರ್ ಅನ್ನು ನೀಡಲಾಗಿದೆ. ಹಾಗೆಯೇ, 5,000mAh ಬ್ಯಾಟರಿಯನ್ನು ಹೊಂದಿರುವ Tecno Spark 9 ಸ್ಮಾರ್ಟ್ಫೋನ್ ಡಿಟಿಎಸ್ ಚಾಲಿತ ಸ್ಪೀಕರ್ ಸೆಟಪ್ನೊಂದಿಗೆ ಬರುತ್ತದೆ ಮತ್ತು ಆಂಡ್ರಾಯ್ಡ್ 12 ಔಟ್-ಆಫ್-ದಿ-ಬಾಕ್ಸ್ ನಲ್ಲಿ ಕಾರ್ಯನಿರ್ವಹಿಸಲಿದೆ.
Tecno Spark 9 ಸ್ಮಾರ್ಟ್ಫೋನ್ ಬೆಲೆ ಮತ್ತು ಲಭ್ಯತೆ
ಭಾರತದಲ್ಲಿ Tecno Spark 9 ಸ್ಮಾರ್ಟ್ಫೋನ್ 8,499 ರೂ.ಗಳ ಆರಂಭಿಕ ಬೆಲೆಯಲ್ಲಿ ಬಿಡುಗಡೆಯಾಗಿದೆ. 4GB + 64GB ಸ್ಟೋರೇಜ್ ಆಯ್ಕೆಯ ಸ್ಮಾರ್ಟ್ಫೋನ್ 8,499 ರೂ.ಗಳಿಗೆ ಹಾಗೂ 6GB RAM + 128GB ಸ್ಟೋರೇಜ್ ಆಯ್ಕೆಯ ಸ್ಮಾರ್ಟ್ಫೋನ್ ಬೆಲೆ 9,499 ರೂ.ಗಳಾಗಿವೆ. ಇನ್ನು ಈ Tecno Spark 9 ಸ್ಮಾರ್ಟ್ಫೋನ್ ಅನ್ನು ಅಮೆಜಾನ್ ಪ್ರೈಮ್ ಡೇ ಸೇಲ್ 2022 ರ ಭಾಗವಾಗಿ ಅಮೆಜಾನ್ ಜಾಲತಾಣದ ಮೂಲಕ ಇದೇ ಜುಲೈ 23 ರಿಂದ ಮಾರಾಟ ಮಾಡಲಾಗುವುದು ಎಂದು ಕಂಪೆನಿ ತಿಳಿಸಿದೆ. ಈ ಸ್ಮಾರ್ಟ್ಫೋನ್ ಅನ್ನು ನೀವು ಇನ್ಫಿನಿಟಿ ಬ್ಲಾಕ್ ಮತ್ತು ಸ್ಕೈ ಮಿರರ್ ಬಣ್ಣಗಳ ಆಯ್ಕೆಯಲ್ಲಿ ಖರೀದಿಸಬಹುದು.
ಟೆಕ್ನೋ ಸ್ಪಾರ್ಕ್ 9 ಸ್ಪೆಸಿಫಿಕೇಶನ್ಸ್
ಪರ್ಫಾಮೆನ್ಸ್ | MediaTek Helio A35 |
ಡಿಸ್ಪ್ಲೇ | 6.5 inches (16.51 cm) |
ಸ್ಟೋರೇಜ್ | 64 GB |
ಕ್ಯಾಮರಾ | 16 MP |
ಬ್ಯಾಟರಿ | 6000 mAh |
ಭಾರತದಲ್ಲಿ ಬೆಲೆ | 7407 |
ರ್ಯಾಮ್ | 3 GB |
Tecno Spark 9 Launched In India Price, Specifications Details.
18-03-25 11:02 pm
Bangalore Correspondent
ಬಿಡದಿಯಲ್ಲಿ ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ...
18-03-25 10:34 pm
Bangalore JCB Accident, Two Killed; ರಸ್ತೆ ಕಾಮ...
18-03-25 02:30 pm
Tumkur Wedding News, Water: ನೀರಿನ ವಿಚಾರದಲ್ಲಿ...
18-03-25 01:08 pm
ಎಸ್.ಟಿ. ಸೋಮಶೇಖರ್, ಶಿವರಾಮ ಹೆಬ್ಬಾರ್ ಸದ್ಯದಲ್ಲೇ...
17-03-25 11:54 am
17-03-25 10:57 pm
HK News Desk
Case against Orry at Vaishno Devi: ವೈಷ್ಣೋದೇವಿ...
17-03-25 09:43 pm
Kerala Christan girls missing, PC George: ಕೊಟ...
13-03-25 03:49 pm
Shiradi Ghat, Mangalore Bengalore, Mp Brijesh...
13-03-25 01:30 pm
ಪಾಕಿಸ್ತಾನದಲ್ಲಿ 500ಕ್ಕು ಹೆಚ್ಚು ಪ್ರಯಾಣಿಕರಿದ್ದ ರ...
12-03-25 11:41 am
18-03-25 10:09 pm
Mangalore Correspondent
Electricity, Malekudiya Tribal, Belthangady:...
18-03-25 08:53 pm
Mangalore accident, Kinnigoli, Bike, Vidoe: ಕ...
18-03-25 03:15 pm
ಮಂಗಳೂರು- ಮುಂಬೈ ವಂದೇ ಭಾರತ್ ರೈಲು ಸನ್ನಿಹಿತ ; ಉಡು...
17-03-25 11:02 pm
Mangalore Accident, Kallapu: ನಿಯಂತ್ರಣ ತಪ್ಪಿ ಆ...
17-03-25 08:01 pm
18-03-25 06:31 pm
Mangalore Correspondent
Ccb Police Mangalore, Kali Yogesh, Underworld...
17-03-25 07:51 pm
Bangalore crime, Fraud, Bank Manager: ಮನೆ ಮಾರ...
16-03-25 10:39 pm
Mangalore Police, CCB, Drugs, CM: ರಾಜ್ಯದಲ್ಲೇ...
16-03-25 07:27 pm
Mangalore CCB police, Drugs, crime: ರಾಜ್ಯದಲ್ಲ...
16-03-25 10:43 am