ಬ್ರೇಕಿಂಗ್ ನ್ಯೂಸ್
14-07-22 08:19 pm Source: Vijayakarnataka ಡಿಜಿಟಲ್ ಟೆಕ್
ಜನಪ್ರಿಯ ಸ್ಮಾರ್ಟ್ವಾಚ್ ಬ್ರ್ಯಾಂಡ್ Amazfit ಭಾರತದಲ್ಲಿ ತನ್ನ ಮತ್ತೊಂದು ವಿನೂತನ ಸ್ಮಾರ್ಟ್ವಾಚ್ ಅನ್ನು ಘೊಷಿಸಿದ್ದು, Amazfit GTS 4 Mini ಎಂಬ ಹೆಸರಿನಲ್ಲಿ ಪ್ರಿಮಿಯಂ ವೈಶಿಷ್ಟ್ಯಗಳನ್ನು ಹೊಂದಿರುವ ಹೊಸ ಸ್ಮಾರ್ಟ್ವಾಚ್ ಅನ್ನು ಪರಿಚಯಿಸಿದೆ. 120 ಕ್ರೀಡಾ ವಿಧಾನಗಳು, ನಿರಂತರ ಹೃದಯ ಬಡಿತ ಮೇಲ್ವಿಚಾರಣೆ ಮತ್ತು 5 ATM ರೇಟಿಂಗ್ ಸೇರಿದಂತೆ 15 ದಿನಗಳ ಬ್ಯಾಟರಿ ಅವಧಿಯಯನ್ನು ಹೊಂದಿರುವ ವೈಶಿಷ್ಟ್ಯಗಳಲ್ಲಿ ಈ ಸಾಧನವನ್ನು ಬಿಡುಗಡೆಗೊಳಿಸಲಾಗಿದ್ದು, ಫ್ಲೆಮಿಂಗೊ ಪಿಂಕ್, ಮಿಂಟ್ ಬ್ಲೂ, ಮೂನ್ಲೈಟ್ ವೈಟ್ ಮತ್ತು ಕಪ್ಪು ಬಣ್ಣಗಳಲ್ಲಿ ಇದೇ ಜುಲೈ 16 ರಿಂದ ಮಾರಾಟಕ್ಕೆ ಬರುತ್ತಿದೆ. ಹಾಗಾದರೆ, ನೂತನ Amazfit GTS 4 Mini ಸ್ಮಾರ್ಟ್ವಾಚ್ ಸಾಧನವು ಹೇಗಿದೆ ಮತ್ತು ಬೆಲೆ ಎಷ್ಟು ಎಂಬ ಮಾಹಿತಿಗಳನ್ನು ತಿಳಿಯೋಣ ಬನ್ನಿ.
Amazfit GTS 4 Mini ಸಾಧನದ ವೈಶಿಷ್ಟ್ಯಗಳು
ನೂತನ Amazfit GTS 4 Mini ಸಾಧನವು ಬಲಭಾಗದಲ್ಲಿ ಒಂದು ಬಟನ್ ಹಾಗೂ ಚೌಕಾಕಾರದ ಸಿಲಿಕೋನ್ ಪಟ್ಟಿಗಳನ್ನು ಹೊಂದಿರುವ ವಿನ್ಯಾಸದಲ್ಲಿ ಬಂದಿದೆ. 70.2 ಪ್ರತಿಶತ ಸ್ಕ್ರೀನ್-ಟು-ಬಾಡಿ ಅನುಪಾತದೊಂದಿಗೆ 1.65-ಇಂಚಿನ HD AMOLED ಡಿಸ್ಪ್ಲೇಯನ್ನು ಹೊಂದಿರುವ ಈ ಸಾಧನವು ಯಾವಾಗಲೂ ಆನ್ ಡಿಸ್ಪ್ಲೇ (AoD) ವೈಶಿಷ್ಟ್ಯದಲ್ಲಿರುವುದರಿಂದ ಹೆಚ್ಚು ಬ್ಯಾಟರಿಯನ್ನು ಬೇಡುತ್ತದೆ. ಆದರೆ, ಹೊಸ Amazfit ವಾಚ್ 270mAh ಬ್ಯಾಟರಿಯನ್ನು ಒಳಗೊಂಡಿದೆದ್ದು, ಇದು 15 ದಿನಗಳ ಬ್ಯಾಟರಿ ಅವಧಿಯನ್ನು ಮತ್ತು ಬ್ಯಾಟರಿ ಸೇವರ್ ಮೋಡ್ನಲ್ಲಿ 45 ದಿನಗಳವರೆಗೆ ಬ್ಯಾಟರಿ ಅವಧಿಯನ್ನು ನೀಡಲಿದೆ ಎಂದು ಕಂಪನಿ ಹೇಳಿಕೊಂಡಿದೆ. ಇನ್ನು 5 ATM ರೇಟಿಂಗ್ ಹೊಂದಿರುವ ಈ ಸಾಧನವು ನೀರು-ನಿರೋಧಕವಾಗಿದೆ ಎಂಬುದನ್ನು ನಾವು ತಿಳಿಯಬಹುದು.
Amazfit GTS 4 Mini ಸಾಧನವು 120 ಕ್ಕೂ ಹೆಚ್ಚು ಕ್ರೀಡಾ ವಿಧಾನಗಳನ್ನು ಹೊಂದಿದೆ ಮತ್ತು ಇದು ಏಳು ಕ್ರೀಡಾ ಚಲನೆಗಳನ್ನು ಸಹ ಸ್ವಯಂಚಾಲಿತವಾಗಿ ಗುರುತಿಸುತ್ತದೆ ಎಂದು ಕಂಪೆನಿಯು ಹೇಳಿಕೊಂಡಿದೆ. ಇದು ರಕ್ತ-ಆಮ್ಲಜನಕದ ಶುದ್ಧತ್ವ, ಹೃದಯ ಬಡಿತ ಮತ್ತು ಒತ್ತಡದ ಮಟ್ಟವನ್ನು ನಿರಂತರವಾಗಿ ಮೇಲ್ವಿಚಾರಣೆ ಮಾಡಬಹುದು. ಪ್ರತಿ ಇತರ ಅಮಾಜ್ಫಿಟ್ ವಾಚ್ನಂತೆ, ಇದು ಒಬ್ಬರ ಆರೋಗ್ಯ ಸ್ಥಿತಿಯ ಅವಲೋಕನವನ್ನು ನೀಡಲು ಸಹಾಯ ಮಾಡುವ PAI ಆರೋಗ್ಯ ಮೌಲ್ಯಮಾಪನ ವ್ಯವಸ್ಥೆಯನ್ನು ಹೊಂದಿದೆ. ಇಷ್ಟೇ ಅಲ್ಲದೇ, ಮುಟ್ಟಿನ ಚಕ್ರಗಳ ಡೇಟಾವನ್ನು ನೀಡುವ ಸಾಮರ್ಥ್ಯವನ್ನು ಹೊಂದಿದೆ. ಬಳಕೆದಾರರು ತಮ್ಮ ನಿದ್ರೆಯ ಮಾದರಿಗಳನ್ನು ಸಹ ಟ್ರ್ಯಾಕ್ ಮಾಡಲು ಸಾಧ್ಯವಾಗುತ್ತದೆ ಹಾಗೂ ಅಮೆಜಾನ್ ಅಲೆಕ್ಸಾಗೆ ಬ್ರ್ಯಾಂಡ್ ಬೆಂಬಲವನ್ನು ಸಹ ಪಡೆಯಲಿದ್ದಾರೆ.
Amazfit GTS 4 Mini: ಭಾರತದಲ್ಲಿನ ಬೆಲೆ ಮತ್ತು ಮಾರಾಟದ ದಿನಾಂಕ
ಭಾರತದಲ್ಲಿ Amazfit GTS 4 Mini 7,999 ರೂ.ಗಳ ಎಂಆರ್ಪಿ ಬೆಲೆಯಲ್ಲಿ ಬಿಡುಗಡೆಗೊಂಡಿದೆ. ಆದರೆ, ಪರಿಚಯಾತ್ಮಕ ಕೊಡುಗೆಯಾಗಿ ಗ್ರಾಹಕರು ಇದನ್ನು ಸೀಮಿತ ಅವಧಿಗೆ 6,999 ರೂ.ಗಳ ರಿಯಾಯಿತಿ ಬೆಲೆಯಲ್ಲಿ ಖರರೀದಿಸಬಹುದು ಎಂದು ಕಂಪೆನಿ ತಿಳಿಸಿದೆ. ಇನ್ನು ಇದೇ ಜುಲೈ 16 ರಿಂದ ಇ-ಕಾಮರ್ಸ್ ಜಾಲತಾಣ ಅಮೆಜಾನ್ ಮೂಲಕ ಮಾರಾಟವಾಗಲಿರುವ ಈ ಸಾಧನಚನ್ನು, ಮಿಡ್ನೈಟ್ ಬ್ಲಾಕ್, ಫ್ಲೆಮಿಂಗೊ ಪಿಂಕ್, ಮಿಂಟ್ ಬ್ಲೂ ಮತ್ತು ಮೂನ್ಲೈಟ್ ವೈಟ್ ಸೇರಿದಂತೆ ನಾಲ್ಕು ಬಣ್ಣಗಳಲ್ಲಿ ಖರೀದಿಸಬಹುದು.
Amazfit Gts 4 Mini Launched In India Price, Sale Date.
16-03-25 10:32 pm
HK News Desk
Reservation for Muslims, Siddaramaiah, BJP: ಸ...
16-03-25 12:11 pm
BJP Leader Basavaraj Dadesugur: ಬಿಜೆಪಿ ಮಾಜಿ ಶ...
15-03-25 09:18 pm
Mangalore, Tamil actor Prabhu Deva, Kukke Sub...
15-03-25 03:55 pm
Elephant attack, Belur, Hassan: ಕಾಡಾನೆ ದಾಳಿ ;...
15-03-25 12:33 pm
13-03-25 03:49 pm
HK News Desk
Shiradi Ghat, Mangalore Bengalore, Mp Brijesh...
13-03-25 01:30 pm
ಪಾಕಿಸ್ತಾನದಲ್ಲಿ 500ಕ್ಕು ಹೆಚ್ಚು ಪ್ರಯಾಣಿಕರಿದ್ದ ರ...
12-03-25 11:41 am
ಅಮೆರಿಕದಲ್ಲಿ 20 ವರ್ಷದ ಭಾರತೀಯ ಮೂಲದ ಮೆಡಿಕಲ್ ವಿದ್...
10-03-25 10:17 pm
ಎಸ್ಸೆಸ್ಸೆಲ್ಸಿ ವಿದ್ಯಾರ್ಥಿನಿ ಜೊತೆಗೆ ಆಟೋ ಚಾಲಕನ ಸ...
10-03-25 11:45 am
16-03-25 10:55 pm
Mangalore Correspondent
Tejasvi Surya, Marriage, Udupi: ಉಡುಪಿ ಕೃಷ್ಣ ಮ...
16-03-25 10:10 pm
Mangalore Jail, Suicide, POSCO: ಮೂಡುಬಿದ್ರೆಯಲ್...
16-03-25 02:05 pm
ಸಂವಿಧಾನ ಉಲ್ಲಂಘಿಸಿ ವಕ್ಫ್ ಕಾಯ್ದೆ ಸರಿಯಲ್ಲ, ಪ್ರಾಣ...
15-03-25 10:00 pm
Mangalore court, Moral Police, Acquit: ಹಿಂದು...
15-03-25 08:32 pm
16-03-25 10:39 pm
Bangalore Correspondent
Mangalore Police, CCB, Drugs, CM: ರಾಜ್ಯದಲ್ಲೇ...
16-03-25 07:27 pm
Mangalore CCB police, Drugs, crime: ರಾಜ್ಯದಲ್ಲ...
16-03-25 10:43 am
Crypto Fraud Arrested In Kerala: ಗ್ಯಾರಂಟೆಕ್ಸ್...
14-03-25 05:02 pm
Ccb Police, Firearms, Mangalore crime: ವಾಮಂಜೂ...
13-03-25 06:44 pm