ಬ್ರೇಕಿಂಗ್ ನ್ಯೂಸ್
11-07-22 07:40 pm Source: Vijayakarnataka ಡಿಜಿಟಲ್ ಟೆಕ್
ಭಾರತೀಯರ ನೆಚ್ಚಿನ ಸ್ಮಾರ್ಟ್ಫೋನ್ ಬ್ರ್ಯಾಂಡ್ Samsung ತನ್ನ ಬಹುನಿರೀಕ್ಷಿತ Galaxy M13 5G ಬಜೆಟ್ ಸ್ಮಾರ್ಟ್ಫೋನ್ ಅನ್ನು ದೇಶದ ಮಾರುಕಟ್ಟೆಗೆ ಪರಿಚಯಿಸುವ ಸಮಯ ಅಧಿಕೃತವಾಗಿದೆ. ಇದೇ ಜುಲೈ 14 ರಂದು Samsung ತನ್ನ ಅತ್ಯಂತ ಕಡಿಮೆ ಬೆಲೆಯ Galaxy M ಸರಣಿಯಲ್ಲಿ ವಿನೂತನ Galaxy M13 5G ಬಜೆಟ್ ಸ್ಮಾರ್ಟ್ಫೋನನ್ನು ಪರಿಚಯಿಸುತ್ತಿದ್ದು, ಕೇವಲ 10 ಸಾವಿರ ಬೆಲೆಯಲ್ಲಿ ಆಕ್ಟಾ-ಕೋರ್ Exynos 850 SoC ಪ್ರೊಸೆಸರ್, 15W ವೇಗದ ಚಾರ್ಜಿಂಗ್ ಅನ್ನು ಬೆಂಬಲಿಸುವ 5,000mAh ಬ್ಯಾಟರಿ, 6.6 ಇಂಚಿನ ಫುಲ್ ಎಚ್ಡಿ + ಡಿಸ್ಪ್ಲೇ ಜೊತೆಗೆ ವಾಟರ್ಡ್ರಾಪ್-ಶೈಲಿಯ ನಾಚ್ ವಿನ್ಯಾಸದಂತಹ ವೈಶಿಷ್ಟ್ಯಗಳನ್ನು ಹೊತ್ತು Galaxy M13 5G ಸ್ಮಾರ್ಟ್ಫೋನ್ ಎಂಟ್ರಿ ನೀಡುತ್ತಿದೆ ಎಂದು ಹೇಳಲಾಗುತ್ತಿದೆ.!
ಹೌದು, Samsung ತನ್ನ ನೂತನ Galaxy M13 5G ಸ್ಮಾರ್ಟ್ಫೋನ್ ಅನ್ನು ಕಳೆದ ತಿಂಗಳ ಅಂತ್ಯದಲ್ಲೇ ತನ್ನ ವೆಬ್ಸೈಟ್ನಲ್ಲಿ ಪಟ್ಟಿ ಮಾಡಿತ್ತು. ವೆಬ್ಸೈಟ್ನಲ್ಲಿ ಪಟ್ಟಿ ಮಾಡಿರುವಂತೆ, ನೂತನ Galaxy M13 5G ಸ್ಮಾರ್ಟ್ಫೋನ್, ಆಕ್ಟಾ-ಕೋರ್ Exynos 850 SoC ಪ್ರೊಸೆಸರ್, 15W ವೇಗದ ಚಾರ್ಜಿಂಗ್ ಅನ್ನು ಬೆಂಬಲಿಸುವ 5,000mAh ಬ್ಯಾಟರಿ, 6.6 ಇಂಚಿನ ಫುಲ್-ಎಚ್ಡಿ + ಡಿಸ್ಪ್ಲೇ ಜೊತೆಗೆ ವಾಟರ್ಡ್ರಾಪ್-ಶೈಲಿಯ ನಾಚ್ ವಿನ್ಯಾಸದಂತಹ ವೈಶಿಷ್ಟ್ಯಗಳನ್ನು ಹೊತ್ತು ಬರುವುದು ಖಚಿತವಾಗಿತ್ತು. ಇದೀಗ ಇದೀಗ ಜುಲೈ 14 ರಂದು Galaxy M13 5G ಸ್ಮಾರ್ಟ್ಫೋನಿನ ಉಡಾವಣೆಯನ್ನು ನಿಗಧಿಪಡಿಸಲಾಗಿದ್ದು, ಅಂದು ಬೆಲೆ ಮತ್ತು ಲಭ್ಯತೆ ಕುರಿತಂತೆ ಮಾಹಿತಿಗಳು ಲಭ್ಯವಾಗಲಿವೆ.
ಸ್ಯಾಮ್ಸಂಗ್ ಕಂಪೆನಿಯ ಅಧಿಕೃತ ವೆಬ್ಸೈಟ್ನಲ್ಲಿ ಈಗಾಗಲೇ ಪಟ್ಟಿ ಮಾಡಿರುವಂತೆ, ನೂತನ Samsung Galaxy M13 5G ಸ್ಮಾರ್ಟ್ಫೋನ್ ಫುಲ್ HD+ ರೆಸಲ್ಯೂಶನ್ನೊಂದಿಗೆ 6.6-ಇಂಚಿನ ಇನ್ಫಿನಿಟಿ-V ಡಿಸ್ಪ್ಲೇಯನ್ನು ಹೊಂದಿದೆ. 4GB RAM ಮತ್ತು 128GB ವರೆಗಿನ ಸಂಗ್ರಹಣೆಯೊಂದಿಗೆ ಆಕ್ಟಾ-ಕೋರ್ Exynos 850 SoC ಅನ್ನು ಪ್ರೊಸೆಸರ್ ಅನ್ನು ಅಳವಡಿಸಲಾಗಿರುವ ಈ ಸ್ಮಾರ್ಟ್ಫೋನಿನ ಸಂಗ್ರಹಣೆಯನ್ನು ಮೈಕ್ರೋ SD ಕಾರ್ಡ್ ಮೂಲಕ 1TB ವರೆಗೆ ವಿಸ್ತರಿಸಬಹುದಾದ ಆಯ್ಕೆ ಇದೆ ಈ ಸ್ಯಾಮ್ಸಂಗ್ ಸ್ಮಾರ್ಟ್ಫೋನ್ ಒನ್ ಯುಐ 4.1 ಸ್ಕಿನ್ನೊಂದಿಗೆ ಆಂಡ್ರಾಯ್ಡ್ 12 ನಲ್ಲಿ ಕಾರ್ಯನಿರ್ವಹಿಸುತ್ತದೆ ಮತ್ತು Samsung Knox ಮೊಬೈಲ್ ಭದ್ರತಾ ವೇದಿಕೆಯನ್ನು ಒಳಗೊಂಡಿದೆ ಎಂಬ ಮಾಹಿತಿಯನ್ನು ಒದಗಿಸಲಾಗಿದೆ.
ಕ್ಯಾಮೆರಾ ವಿಭಾಗದಲ್ಲಿ, Samsung Galaxy M13 5G ಸ್ಮಾರ್ಟ್ಫೋನ್ ಟ್ರಿಪಲ್ ರಿಯರ್ ಕ್ಯಾಮೆರಾ ಸೆಟಪ್ ಅನ್ನು ಒಳಗೊಂಡಿದೆ. ಇದರಲ್ಲಿ 50-ಮೆಗಾಪಿಕ್ಸೆಲ್ ಮುಖ್ಯ ಸಂವೇದಕದ ಜೊತೆಗೆ f.18 ಅಪಾರ್ಚರ್ ಇದೆ. ಜೊತೆಗೆ f/2.2 ಅಪಾರ್ಚರ್ನೊಂದಿಗೆ 5-ಮೆಗಾಪಿಕ್ಸೆಲ್ ಅಲ್ಟ್ರಾ-ವೈಡ್ ಸಂವೇದಕ ಮತ್ತು f/2.4 ಅಪಾರ್ಚರ್ನೊಂದಿಗೆ 2-ಮೆಗಾಪಿಕ್ಸೆಲ್ ಡೆಪ್ತ್ ಸಂವೇದಕವನ್ನು ಅಳವಡಿಸಲಾಗಿದೆ. ಸೆಲ್ಫಿಗಳಿಗಾಗಿ ಮುಂಭಾಗದಲ್ಲಿ, f/2.2 ಅಪಾರ್ಚರ್ನೊಂದಿಗೆ 8-ಮೆಗಾಪಿಕ್ಸೆಲ್ ಫಿಕ್ಸೆಡ್-ಫೋಕಸ್ ಕ್ಯಾಮೆರಾವನ್ನು f/2.2 ನೀಡಲಾಗಿದೆ. ಇನ್ನು ಸೈಡ್-ಮೌಂಟೆಡ್ ಫಿಂಗರ್ಪ್ರಿಂಟ್ ಸಂವೇದಕ, 5G, 4G LTE, ಡ್ಯುಯಲ್-ಬ್ಯಾಂಡ್ Wi-Fi (2.5Ghz/ 5GHz), ಮತ್ತು ಬ್ಲೂಟೂತ್ v5.0 ಸಂಪರ್ಕಗಳನ್ನು ಈ ಸ್ಮಾರ್ಟ್ಫೋನ್ ಬೆಂಬಲಿಸಲಿದೆ.
Galaxy M ಸರಣಿಯಲ್ಲಿ ಈ ಹಿಂದಿನ Galaxy M12 ಸ್ಮಾರ್ಟ್ಫೋನ್ ಅನ್ನು ಕಳೆದ ಮಾರ್ಚ್ 2021 ರಲ್ಲಷ್ಟೇ ದೇಶದಲ್ಲಿ ಬಿಡುಗಡೆ ಮಾಡಲಾಗಿತ್ತು. ಅಂದು ದೇಶದಲ್ಲಿ Galaxy M12 ಸ್ಮಾರ್ಟ್ಫೋನಿನ ಉಡಾವಣಾ ಬೆಲೆ 4GB + 64GB ಸಂಗ್ರಹಣೆ ಆಯ್ಕೆಗೆ 10,999 ರೂ.ಗಳಾಗಿದ್ದವು. ಇದೀಗ ಇದೇ ಬೆಲೆಯಲ್ಲಿ Galaxy M13 5G ಸ್ಮಾರ್ಟ್ಫೋನನ್ನು ಕೂಡ ಪರಿಚಯಿಸಲಾಗುತ್ತಿದೆ ಎಂದು ಉದ್ಯಮ ಮೂಲಗಳ ಮಾಹಿತಿಯನ್ನು ಉಲ್ಲೇಖಿಸಿ ಪ್ರಮುಖ ಟೆಕ್ ಮಾಧ್ಯಮಗಳು ವರದಿ ಮಾಡಿವೆ.
Samsung Galaxy M13 5g Launching In India This Week.
01-05-25 01:08 pm
HK News Desk
MA Saleem, DGP-IGP, Prashanth Thakur, Police:...
30-04-25 05:08 pm
R Ahsok, Cm Siddaramaiah, Pak: ಕಾಂಗ್ರೆಸ್ನವರಿ...
29-04-25 10:45 pm
CM Siddaramaiah, Belagavi, BJP Suresh Kumar:...
29-04-25 09:51 pm
Protest Kalaburagi, islamabad Locality: ಕಲಬುರ...
29-04-25 09:20 pm
30-04-25 06:59 pm
HK News Desk
India Pakistan War: ಭಾರತೀಯ ಸೇನಾಪಡೆಗೆ ಪರಮಾಧಿಕಾ...
30-04-25 03:14 pm
Pakistan, No-fly zone islamabad: ಭಾರತದ ಪ್ರತೀಕ...
30-04-25 02:13 pm
ಮೋದಿ 'ಗಾಯಬ್' ಎಂದು ಕಾಂಗ್ರೆಸ್ ಪೋಸ್ಟ್ ; ಕಾಂಗ್ರೆಸ...
29-04-25 03:45 pm
'ನನಗೆ ಪಾಕಿಸ್ತಾನದಲ್ಲಿ ಯಾರೂ ಇಲ್ಲ, ದಯವಿಟ್ಟು ಉಳಿಸ...
28-04-25 06:52 pm
01-05-25 12:23 pm
Mangalore Correspondent
Congress Harish Kumar, Kudupu Murder case, Ma...
30-04-25 11:26 pm
Kudupu Murder Case, SDPI, Ravindra Nayak: ಗುಂ...
30-04-25 11:07 pm
Nidhi Land Developers, Mangalore, Sky Garden:...
30-04-25 08:29 pm
Mangalore, Dinesh Gundurao, Kudupu Murder: ಕು...
30-04-25 04:06 pm
30-04-25 04:09 pm
Mangalore Correspondent
Mangalore Mudipu Murder, Mob, Police, Crime:...
29-04-25 09:59 pm
Kudupu Murder, Mangalore Crime, Police: ಕುಡುಪ...
29-04-25 02:53 pm
Belthagady, Blackmail, Mangalore crime: ಬೆಳ್ತ...
28-04-25 11:39 am
Shootout Bakrebail, Mangalore Crime: ಬಾಕ್ರಬೈಲ...
28-04-25 11:24 am