ಬ್ರೇಕಿಂಗ್ ನ್ಯೂಸ್
28-06-22 07:58 pm Source: Vijayakarnataka ಡಿಜಿಟಲ್ ಟೆಕ್
ಜನಪ್ರಿಯ ಸ್ಮಾರ್ಟ್ಪೋನ್ ಬ್ರ್ಯಾಂಡ್ Poco ಕಳೆದ ವಾರವಷ್ಟೇ ಭಾರತದಲ್ಲಿ ತನ್ನ ವಿನೂತನ Poco F4 5G ಸ್ಮಾರ್ಟ್ಫೋನನ್ನು ಪರಿಚಯಿಸಿದ್ದು, ಮಧ್ಯಮ ಬೆಲೆಯಲ್ಲಿ ಹೈ-ಎಂಡ್ ವೈಶಿಷ್ಟ್ಯಗಳನ್ನು ಹೊಂದಿರುವ Poco F4 5G ಸ್ಮಾರ್ಟ್ಫೋನ್ ಇಂದಿನಿಂದ (ಜೂನ್ 27) ದೇಶದಲ್ಲಿ ಮಾರಾಟಕ್ಕೆ ಬಂದಿದೆ. ಇಂದು ಮಧ್ಯಾಹ್ನ 12 ಗಂಟೆಯಿಂದ ಫ್ಲಿಪ್ಕಾರ್ಟ್ ಕೆಲವು ಉಡಾವಣಾ ಕೊಡುಗೆಗಳೊಂದಿಗೆ Poco F4 5G ಸ್ಮಾರ್ಟ್ಫೋನ್ ಖರೀದಿಗೆ ಲಭ್ಯವಿದ್ದು, 1,000 ರೂ ಪರಿಚಯಾತ್ಮಕ ರಿಯಾಯಿತಿ. ಹಾಗೂ ಎಸ್ಬಿಐ ಕಾರ್ಡ್ ಬಳಕೆದಾರರಿಗೆ ಹೆಚ್ಚುವರಿಯಾಗಿ 3,000 ರೂ.ಗಳ ರಿಯಾಯಿತಿಯನ್ನು ಪ್ರಕಟಿಸಲಾಗಿದೆ. ಇನ್ನು ಸಾಂಪ್ರದಾಯಿಕವಾಗಿ ಒಂದು ವರ್ಷದ ವಾರಂಟಿ ಭರವಸೆ ನೀಡುವ Poco ತನ್ನ ಈ ನೂತನ Poco F4 5G ಸ್ಮಾರ್ಟ್ಫೋನ್ ಮೇಲೆ ಎರಡು ವರ್ಷಗಳ ವಾರಂಟಿಯನ್ನು ನೀಡುವುದಾಗಿ ತಿಳಿಸಿದೆ.
ಭಾರತದಲ್ಲಿ Poco F4 5G ಸ್ಮಾರ್ಟ್ಫೋನ್ ಬೆಲೆಗಳು
ಭಾರತದಲ್ಲಿ Poco F4 5G ಸ್ಮಾರ್ಟ್ಫೋನ್ ಆರಂಭಿಕ ಬೆಲೆಗಳು 27,999 ರೂ.ಗಳಿಂದ ಆರಂಭವಾಗಿವೆ. ಬೇಸ್ 6GB RAM + 128GB ಸ್ಟೋರೇಜ್ ಮಾದರಿಯ Poco F4 5G ಸ್ಮಾರ್ಟ್ಫೋನ್ 27,999 ರೂ.ಗಳಿಗೆ ಬಿಡುಗಡೆಯಾಗಿದ್ದರೆ, ಇದರ 8GB + 128GB ಮಾದರಿಯು 29,999 ರೂ.ಗಳಿಗೆ ಮತ್ತು ಇದರ ಟಾಪ್-ಆಫ್-ಲೈನ್ ಫೋನ್ 12GB + 256GB ಮಾದರಿಯ 33,999 ರೂ.ಗಳ ಬೆಲೆಯನ್ನು ಹೊತ್ತು ಮಾರುಕಟ್ಟೆಗೆ ಬಂದಿದೆ.
ಭಾರತದಲ್ಲಿ Poco F4 5G ಸ್ಮಾರ್ಟ್ಫೋನಿನ ವೈಶಿಷ್ಟ್ಯಗಳು ಹೀಗಿವೆ.
ಭಾರತದಲ್ಲಿ ಬಿಡುಗಡೆಯಾಗಿರುವ ನೂತನ Poco F4 5G ಸ್ಮಾರ್ಟ್ಫೋನ್ ಕಾರ್ನಿಂಗ್ ಗೊರಿಲ್ಲಾ ಗ್ಲಾಸ್ 5 ರಕ್ಷಣೆಯಿಂದ ರಕ್ಷಿಸಲ್ಪಟ್ಟಿರುವ 6.67-ಇಂಚಿನ ಪೂರ್ಣ-HD+ (1,080x2,400 ಪಿಕ್ಸೆಲ್ಗಳು) E4 AMOLED ಡಿಸ್ಪ್ಲೇಯನ್ನು ಹೊಂದಿದೆ. ಈ ಡಿಸ್ಪ್ಲೇಯು 120Hz ರಿಫ್ರೆಶ್ ರೇಟ್ ಮತ್ತು 360Hz ಟಚ್ ಸ್ಯಾಂಪ್ಲಿಂಗ್ ರೇಟ್, DCI-P3 ಕಲರ್ ಗ್ಯಾಮೆಟ್ ವೈಶಿಷ್ಟ್ಯಗಳನ್ನು ಒಳಗೊಂಡಿದೆ ಹಾಗೂ Amazon Prime ವೀಡಿಯೊದಲ್ಲಿ HDR10+ ಜೊತೆಗೆ Netflix ನಲ್ಲಿ Dolby Vision ಬೆಂಬಲವನ್ನು ನೀಡುತ್ತದೆ. ಹುಡ್ ಅಡಿಯಲ್ಲಿ, Poco F4 5G ಸ್ಮಾರ್ಟ್ಫೋನ್ 12GB ವರೆಗಿನ LPDDR5 RAM ಜೊತೆಗೆ ಜೊಡಿಯಾಗಿರುವ Snapdragon 870 SoC ಪ್ರೊಸೆಸರ್ನಿಂದ ಚಾಲಿತವಾಗಿದೆ. ಈ Poco F4 5G ಸ್ಮಾರ್ಟ್ಫೋನ್ 256GB ವರೆಗಿನ UFS 3.1 ಆಂತರಿಕ ಸಂಗ್ರಹಣೆಯೊಂದಿಗೆ ಬಂದಿದ್ದು, ಮೈಕ್ರೊ SD ಕಾರ್ಡ್ ಮೂಲಕ ಆಂತರಿಕ ಸಂಗ್ರಹಣೆಯು ವಿಸ್ತರಿಸಲು ಸಾಧ್ಯವಿಲ್ಲ ಎಂಬುದನ್ನು ಗಮನಿಸಲಾಗಿದೆ. ಇನ್ನು ಡ್ಯುಯಲ್-ಸಿಮ್ (ನ್ಯಾನೋ) ಸಾಮರ್ಥ್ಯದ Poco F4 5G ಸ್ಮಾರ್ಟ್ ಆಂಡ್ರಾಯ್ಡ್ 12 ಅನ್ನು MIUI 13 ನಲ್ಲಿ ಕಾರ್ಯ ನಿರ್ವಹಿಸುತ್ತದೆ.
ಕ್ಯಾಮೆರಾ ವಿಬಾಗದಲ್ಲಿ, Poco F4 5G ಸ್ಮಾರ್ಟ್ಫೋನ್ ಟ್ರಿಪಲ್ ರಿಯರ್ ಕ್ಯಾಮೆರಾ ಸೆಟಪ್ ಅನ್ನು ಹೊಂದಿದ್ದು, ಇದು f/1.8 ಲೆನ್ಸ್ನೊಂದಿಗೆ ಆಪ್ಟಿಕಲ್ ಇಮೇಜ್ ಸ್ಟೆಬಿಲೈಸೇಶನ್ (OIS) ಬೆಂಬಲಿಸುವ 64-ಮೆಗಾಪಿಕ್ಸೆಲ್ ಪ್ರಾಥಮಿಕ ಕ್ಯಾಮೆರಾವನ್ನು ಹಾಗೂ 8-ಮೆಗಾಪಿಕ್ಸೆಲ್ ಅಲ್ಟ್ರಾ-ವೈಡ್ ಶೂಟರ್ ಮತ್ತು 2-ಮೆಗಾಪಿಕ್ಸೆಲ್ ಮ್ಯಾಕ್ರೋ ಶೂಟರ್ ಗಳನ್ನು ಒಳಗೊಂಡಿದೆ.ಸೆಲ್ಫಿಗಳು ಮತ್ತು ವೀಡಿಯೊ ಚಾಟ್ಗಳಿಗಾಗಿ, Poco F4 5G ಫೋನಿನಲ್ಲಿ 20-ಮೆಗಾಪಿಕ್ಸೆಲ್ ಸೆಲ್ಫಿ ಕ್ಯಾಮೆರಾವನ್ನು ಅಳವಡಿಸಲಾಗಿದೆ. Poco F4 5G ಸ್ಮಾರ್ಟ್ಫೋನಿನ ಕನೆಕ್ಟಿವಿಟಿ ಆಯ್ಕೆಗಳಲ್ಲಿ 5G, 4G LTE, Wi-Fi 802.11ac, ಬ್ಲೂಟೂತ್ v5.2, GPS/ A-GPS/ NavIC, NFC, ಮತ್ತು USB ಟೈಪ್-C ಪೋರ್ಟ್ ವೈಶಿಷ್ಟ್ಯಗಳಿವೆ. ಬ್ಯಾಟರಿ ವಿಭಾಗದಲ್ಲಿ, 67W ವೇಗದ ಚಾರ್ಜಿಂಗ್ ಅನ್ನು ಬೆಂಬಲಿಸುವ 4,500mAh Li-Polymer ಬ್ಯಾಟರಿಯನ್ನು ಒಳಗೊಂಡಿರುವ Poco F4 5G ಸ್ಮಾರ್ಟ್ಪೋನ್ ಸ್ಟಿರಿಯೊ ಸ್ಪೀಕರ್ಗಳೊಂದಿಗ Dolby Atmos ಮತ್ತು ಹೈ-ರೆಸ್ ಆಡಿಯೊ ಬೆಂಬಲವನ್ನು ಹೊಂದಿದೆ. ಶಬ್ದ ರದ್ದತಿಗಾಗಿ ಎರಡು ಮೈಕ್ರೊಫೋನ್ಗಳೂ ಸಹ ಇವೆ.
Poco F4 5g Goes On Sale In India: Price, Offers And Specifications Details.
30-04-25 05:08 pm
Bangalore Correspondent
R Ahsok, Cm Siddaramaiah, Pak: ಕಾಂಗ್ರೆಸ್ನವರಿ...
29-04-25 10:45 pm
CM Siddaramaiah, Belagavi, BJP Suresh Kumar:...
29-04-25 09:51 pm
Protest Kalaburagi, islamabad Locality: ಕಲಬುರ...
29-04-25 09:20 pm
Kudupu Murder, Mob attack, Parameshwar: ಕುಡುಪ...
29-04-25 04:28 pm
30-04-25 06:59 pm
HK News Desk
India Pakistan War: ಭಾರತೀಯ ಸೇನಾಪಡೆಗೆ ಪರಮಾಧಿಕಾ...
30-04-25 03:14 pm
Pakistan, No-fly zone islamabad: ಭಾರತದ ಪ್ರತೀಕ...
30-04-25 02:13 pm
ಮೋದಿ 'ಗಾಯಬ್' ಎಂದು ಕಾಂಗ್ರೆಸ್ ಪೋಸ್ಟ್ ; ಕಾಂಗ್ರೆಸ...
29-04-25 03:45 pm
'ನನಗೆ ಪಾಕಿಸ್ತಾನದಲ್ಲಿ ಯಾರೂ ಇಲ್ಲ, ದಯವಿಟ್ಟು ಉಳಿಸ...
28-04-25 06:52 pm
30-04-25 11:26 pm
Mangalore Correspondent
Kudupu Murder Case, SDPI, Ravindra Nayak: ಗುಂ...
30-04-25 11:07 pm
Nidhi Land Developers, Mangalore, Sky Garden:...
30-04-25 08:29 pm
Mangalore, Dinesh Gundurao, Kudupu Murder: ಕು...
30-04-25 04:06 pm
ಗುಂಪು ಥಳಿತಕ್ಕೆ ಸಾವು ಪ್ರಕರಣ ; ಕೇರಳ ಮೂಲದ ಯುವಕನೆ...
30-04-25 11:26 am
30-04-25 04:09 pm
Mangalore Correspondent
Mangalore Mudipu Murder, Mob, Police, Crime:...
29-04-25 09:59 pm
Kudupu Murder, Mangalore Crime, Police: ಕುಡುಪ...
29-04-25 02:53 pm
Belthagady, Blackmail, Mangalore crime: ಬೆಳ್ತ...
28-04-25 11:39 am
Shootout Bakrebail, Mangalore Crime: ಬಾಕ್ರಬೈಲ...
28-04-25 11:24 am