ಬ್ರೇಕಿಂಗ್ ನ್ಯೂಸ್
27-06-22 07:27 pm Source: Vijayakarnataka ಡಿಜಿಟಲ್ ಟೆಕ್
ಕಳೆದ ತಿಂಗಳು ಯುರೋಪ್ ಸೇರಿದಂತೆ ಜಾಗತಿಕ ಮಾರುಕಟ್ಟೆಗಳಲ್ಲಿ ಬಿಡುಗಡೆಯಾಗಿರುವ ಬಹುನಿರೀಕ್ಷಿತ OnePlus Nord 2T 5G ಸ್ಮಾರ್ಟ್ಫೋನನ್ನು ಭಾರತದಲ್ಲಿ ಬಿಡುಗಡೆ ಮಾಡುವ ಕುರಿತು ಇದೀಗ ಅಧಿಕೃತ ಮಾಹಿತಿ ಹೊರಬಿದ್ದಿದೆ. OnePlus Nord 2T 5G ಭಾರತಕ್ಕೆ "ಶೀಘ್ರದಲ್ಲೇ ಬರಲಿದೆ" ಎಂಬ ಅಧಿಕೃತ ಟೀಸರ್ ಒಂದನ್ನು OnePlus ಕಂಪೆನಿ ಬಿಡುಗಡೆಗೊಳಿಸಿದ್ದು, ದೇಶದಲ್ಲಿ OnePlus Nord 2T 5G ಸ್ಮಾರ್ಟ್ಫೋನ್ ಬರುವಿಕೆಯನ್ನು ಖಚಿತಪಡಿಸಿದೆ. ಆದರೆ, ಟೀಸರ್ ನಲ್ಲಿ ನಿಖರವಾದ ಉಡಾವಣಾ ದಿನಾಂಕ ಯಾವುವು ಎಂಬುದನ್ನು ಬಹಿರಂಗಪಡಿಸಲಾಗಿಲ್ಲ. ಇತ್ತ ಜನಪ್ರಿಯ ಟಿಪ್ಸ್ಟರ್ ಅಭಿಷೇಕ್ ಯಾದವ್ ಅವರು ಭಾರತದಲ್ಲಿ ಇದೇ ಜುಲೈ 1 ರಿಂದ OnePlus Nord 2T 5G ಪ್ರಾರಂಭವಾಗಲಿದೆ ಎಂದು ಹೇಳಿಕೊಂಡಿರುವುದು ದೇಶದ ಮೊಬೈಲ್ ಮಾರುಕಟ್ಟೆಯಲ್ಲಿ ಕುತೂಹಲ ಮೂಡಿಸಿದೆ.
ಕಳೆದ OnePlus Nord 2 ಸ್ಮಾರ್ಟ್ಫೋನ್ ಉತ್ತರಾಧಿಕಾರಿಯಾಗಿ OnePlus Nord 2T 5G ಸ್ಮಾರ್ಟ್ಫೋನ್ ವಿಶ್ವ ಮಾರುಕಟ್ಟೆಗೆ ಕಾಲಿಟ್ಟಿದ್ದು, ಆಕ್ಟಾ-ಕೋರ್ ಮೀಡಿಯಾ ಟೆಕ್ ಡೈಮೆನ್ಸಿಟಿ 1300 SoC ಪ್ರೊಸೆಸರ್, ಜನಪ್ರಿಯ OnePlus 10R 5G ನಲ್ಲಿ ಕಂಡುಬರುವ ಅದೇ ಟ್ರಿಪಲ್ ಹಿಂಬದಿಯ ಕ್ಯಾಮೆರಾ ಸೆಟಪ್, 80W ವೇಗದ ಚಾರ್ಜಿಂಗ್ ಬೆಂಬಲ ಸೇರಿದಂತೆ ಹಲವು ಪ್ರಮುಖ ವೈಶಿಷ್ಟ್ಯಗಳನ್ನು ಹೊತ್ತು ತಂದಿದೆ. ಯುರೋಪ್ನಲ್ಲಿ ಬಿಡುಗಡೆಗೊಂಡಿರುವ ಅದೇ ವೈಶಿಷ್ಟ್ಯಗಳಲ್ಲಿ OnePlus Nord 2T 5G ಸ್ಮಾರ್ಟ್ಫೋನ್ ಭಾರತಕ್ಕೂ ಬರಲಿದೆ ಎಂಬುದನ್ನು Amazon ತಾಣದಲ್ಲಿ OnePlus Nord 2T 5G ಗಾಗಿ ಮೀಸಲಾದ ವೆಬ್ಪುಟದಲ್ಲಿ ಸೂಚಿಸಲಾಗಿದೆ. ಹಾಗಾದರೆ, OnePlus Nord 2T 5G ಸ್ಮಾರ್ಟ್ಫೋನ್ ಹೇಗಿದೆ ಮತ್ತು ಬೆಲೆ ಎಷ್ಟು ಎಂಬ ಸಂಪೂರ್ಣ ಮಾಹಿತಿಯನ್ನು ತಿಳಿಯೋಣ ಬನ್ನಿ.
OnePlus Nord 2T ವೈಶಿಷ್ಟ್ಯಗಳು
ಜಾಗತಿಕ ಮಾರುಕಟ್ಟೆಯಲ್ಲಿ ಬಿಡುಗಡೆಯಾಗಿರುವ ನೂತನ OnePlus Nord 2T ಸ್ಮಾರ್ಟ್ಫೋನಿನಲ್ಲಿ ಎಡ ಮೂಲೆಯಲ್ಲಿ ಹೋಲ್-ಪಂಚ್ ಕಟೌಟ್ ವಿನ್ಯಾಸದ 6.43-ಇಂಚಿನ FHD+ AMOLED ಡಿಸ್ಪ್ಲೇಯನ್ನು ಅಳವಡಿಸಲಾಗಿದೆ. ಈ ಡಿಸ್ಪ್ಲೇಯು 90Hz ರಿಫ್ರೆಶ್ ರೇಟ್ ಅನ್ನು ಬೆಂಬಲಿಸಲಿದೆ ಮತ್ತು ಕಾರ್ನಿಂಗ್ ಗೊರಿಲ್ಲಾ ಗ್ಲಾಸ್ 5 ರಕ್ಷಣೆಯನ್ನು ಸಹ ಹೊಂದಿದೆ. ಇನ್ನು ಇತ್ತೀಚಿಗಷ್ಟೇ ತೈವಾನೀಸ್ ಚಿಪ್ಮೇಕರ್ ಮೀಡಿಯಾಟೆಕ್ ಪರಿಚಯಿಸಿರುವ ಹೊಸ 'ಮೀಡಿಯಾ ಟೆಕ್ ಡೈಮೆನ್ಸಿಟಿ 1300' ಚಿಪ್ಸೆಟ್ ಅನ್ನು OnePlus Nord 2T ಸ್ಮಾರ್ಟ್ಫೋನಿನಲ್ಲಿ ಅಳವಡಿಸಲಾಗಿದ್ದು, 8GB LPDDR4X RAM ಜೊತೆಗೆ 128GB UFS 3.1 ಸ್ಟೋರೇಜ್ ಮತ್ತು 12GB LPDDR4X RAM ಜೊತೆಗೆ 256GB UFS 3.1 ಸ್ಟೋರೇಜ್ ಮಾದರಿಗಳಲ್ಲಿ ಸ್ಮಾರ್ಟ್ಫೋನ್ ಬಿಡುಗಡೆಗೊಂಡಿದೆ. ಆದರೆ, ಸ್ಮಾರ್ಟ್ಫೋನಿನಲ್ಲಿ ಮೆಮೊರಿಯನ್ನು ಹೆಚ್ಚಿಸಲು ಮೆಮೊರಿ ಸ್ಲಾಟ್ ಆಯ್ಕೆ ಇಲ್ಲ.
ಕ್ಯಾಮೆರಾ ವೈಶಿಷ್ಟ್ಯಗಳನ್ನು ನೋಡುವುದಾದರೆ, OnePlus Nord 2T ಸ್ಮಾರ್ಟ್ಫೋನ್ ಟ್ರಿಪಲ್ ಹಿಂಬದಿಯ ಕ್ಯಾಮೆರಾ ಸೆಟಪ್ ಅನ್ನು ಹೊಂದಿದೆ. ಇದು OIS ಗೆ ಬೆಂಬಲದೊಂದಿಗೆ 50MP ಸೋನಿ IMX766 ಮುಖ್ಯ ಕ್ಯಾಮೆರಾ 8MP ಅಲ್ಟ್ರಾವೈಡ್ ಮತ್ತು 2MP ಸೆಕೆಂಡರಿ ಕ್ಯಾಮೆರಾಗಳನ್ನು ಒಳಗೊಂಡಿವೆ. ಸೆಲ್ಫಿಗಳಿಗಾಗಿ ಸ್ಮಾರ್ಟ್ಫೋನಿನ ಮುಂಭಾಗದಲ್ಲಿ 32MP ಸೆಲ್ಫಿ ಕ್ಯಾಮೆರಾವನ್ನು ನೀಡಲಾಗಿದೆ. ಕನೆಕ್ಟಿವಿಟಿ ಆಯ್ಕೆಗಳಲ್ಲಿ 5G, 4G LTE, ಡ್ಯುಯಲ್-ಬ್ಯಾಂಡ್ Wi-Fi 6, ಬ್ಲೂಟೂತ್ 5.2, GPS, NFC, ಬೀಡೌ, ಗೆಲಿಲಿಯೋ ಮತ್ತು USB ಟೈಪ್-C ಪೋರ್ಟ್ ವೈಶಿಷ್ಟ್ಯಗಳನ್ನು ನಾವು ನೋಡಬಹುದು. ಇನ್ನು ಆಂಡ್ರಾಯ್ಡ್ 12 ನಲ್ಲಿ ಆಕ್ಸಿಜನ್ ಓಎಸ್ 12 ನಲ್ಲಿ ಕೆಲಸ ನಿರ್ವಹಿಸಲಿರುವ ಈ ಸ್ಮಾರ್ಟ್ಪೋನ್ 80W ವೇಗದ ಚಾರ್ಜಿಂಗ್ಗೆ ಬೆಂಬಲದೊಂದಿಗೆ 4500mAh ಸಾಮರ್ಥ್ಯದ ಬ್ಯಾಟರಿಯನ್ನು ಸಹ ಹೊಂದಿದೆ.
ಜಾಗತಿಕವಾಗಿ OnePlus Nord 2T ಬೆಲೆ
ಜಾಗತಿಕ ಮೊಬೈಲ್ ಮಾರುಕಟ್ಟೆಯಲ್ಲಿ OnePlus Nord 2T ಸ್ಮಾರ್ಟ್ಫೋನ್ ಶಾಡೋ ಮತ್ತು ಜೇಡ್ ಫಾಗ್ ಬಣ್ಣ ಆಯ್ಕೆಗಳಲ್ಲಿ EUR 399 ಆರಂಭಿಕ ಬೆಲೆಯಲ್ಲಿ ಬಿಡುಗಡೆಗೊಂಡಿದೆ. ಭಾರತೀಯ ರೂಪಾಯಿಗಳ ಲೆಕ್ಕದಲ್ಲಿ ಈ ಸ್ಮಾರ್ಟ್ಫೋನ್ ಬೆಲೆ 32,400 ರೂ.ಗಳಾಗುತ್ತವೆ. OnePlus Nord 2T 5G ಅನ್ನು ಮೇ ತಿಂಗಳಲ್ಲಿ ಹಲವಾರು ದೇಶಗಳಲ್ಲಿ 8GB RAM + 128GB ಸ್ಟೋರೇಜ್ ಮತ್ತು 12GB RAM + 256GB ಸ್ಟೋರೇಜ್ ಮಾದರಿಗಳಲ್ಲಿ ಬಿಡುಗಡೆ ಮಾಡಲಾಗಿತ್ತು. ಇದರಲ್ಲಿ 8GB RAM + 128GB ಸ್ಟೋರೇಜ್ ಮಾದರಿ ಫೋನ್ ಬೆಲೆ EUR 399 32,400 ಗಳಾದರೆ, 12GB RAM + 256GB ಸ್ಟೋರೇಜ್ ಮಾದರಿಯ ಫೋನ್ EUR 499 (ಸರಿಸುಮಾರು ರೂ. 41,600) ಬೆಲೆಯಲ್ಲಿ ಬಿಡುಗಡೆಗೊಂಡಿತ್ತು.
Oneplus Nord 2t 5g India Launch Teased.
30-04-25 05:08 pm
Bangalore Correspondent
R Ahsok, Cm Siddaramaiah, Pak: ಕಾಂಗ್ರೆಸ್ನವರಿ...
29-04-25 10:45 pm
CM Siddaramaiah, Belagavi, BJP Suresh Kumar:...
29-04-25 09:51 pm
Protest Kalaburagi, islamabad Locality: ಕಲಬುರ...
29-04-25 09:20 pm
Kudupu Murder, Mob attack, Parameshwar: ಕುಡುಪ...
29-04-25 04:28 pm
30-04-25 06:59 pm
HK News Desk
India Pakistan War: ಭಾರತೀಯ ಸೇನಾಪಡೆಗೆ ಪರಮಾಧಿಕಾ...
30-04-25 03:14 pm
Pakistan, No-fly zone islamabad: ಭಾರತದ ಪ್ರತೀಕ...
30-04-25 02:13 pm
ಮೋದಿ 'ಗಾಯಬ್' ಎಂದು ಕಾಂಗ್ರೆಸ್ ಪೋಸ್ಟ್ ; ಕಾಂಗ್ರೆಸ...
29-04-25 03:45 pm
'ನನಗೆ ಪಾಕಿಸ್ತಾನದಲ್ಲಿ ಯಾರೂ ಇಲ್ಲ, ದಯವಿಟ್ಟು ಉಳಿಸ...
28-04-25 06:52 pm
30-04-25 11:26 pm
Mangalore Correspondent
Kudupu Murder Case, SDPI, Ravindra Nayak: ಗುಂ...
30-04-25 11:07 pm
Nidhi Land Developers, Mangalore, Sky Garden:...
30-04-25 08:29 pm
Mangalore, Dinesh Gundurao, Kudupu Murder: ಕು...
30-04-25 04:06 pm
ಗುಂಪು ಥಳಿತಕ್ಕೆ ಸಾವು ಪ್ರಕರಣ ; ಕೇರಳ ಮೂಲದ ಯುವಕನೆ...
30-04-25 11:26 am
30-04-25 04:09 pm
Mangalore Correspondent
Mangalore Mudipu Murder, Mob, Police, Crime:...
29-04-25 09:59 pm
Kudupu Murder, Mangalore Crime, Police: ಕುಡುಪ...
29-04-25 02:53 pm
Belthagady, Blackmail, Mangalore crime: ಬೆಳ್ತ...
28-04-25 11:39 am
Shootout Bakrebail, Mangalore Crime: ಬಾಕ್ರಬೈಲ...
28-04-25 11:24 am