ಬ್ರೇಕಿಂಗ್ ನ್ಯೂಸ್
15-06-22 08:22 pm Source: Vijayakarnataka ಡಿಜಿಟಲ್ ಟೆಕ್
OnePlus ಸಹ-ಸಂಸ್ಥಾಪಕ ಕಾರ್ಲ್ ಪೀ ನೇತೃತ್ವದ ಯುಕೆ ಬ್ರ್ಯಾಂಡ್ Nothing ತನ್ನ ಮೊಟ್ಟ ಮೊದಲ ಸ್ಮಾರ್ಟ್ಫೋನ್ Nothing Phone 1 ಅನ್ನು ಜುಲೈ 12 ರಂದು ಭಾರತದಲ್ಲಿ ಬಿಡುಗಡೆ ಮಾಡಲು ಸಜ್ಜಾಗಿದೆ. ಇದೇ ವೇಳೆಗೆ ಮತ್ತೊಂದು ಸಿಹಿಸುದ್ದಿ ದೊರೆತಿದ್ದು, ದೇಶದಲ್ಲಿ ಪರಿಚತಗೊಳ್ಳುವ ಹಾಗೂ ಫ್ಲಿಪ್ಕಾರ್ಟ್ನಲ್ಲಿ ಈಗಾಗಲೇ ಮುಂಗಡ ಬುಕ್ಕಿಂಗ್ ಮಾಡಲು ಲಭ್ಯವಿರುವ Nothing Phone 1 ಸ್ಮಾರ್ಟ್ಫೋನ್ ಭಾರತದಲ್ಲೇ ತಯಾರಿಸಲ್ಪಟ್ಟಿದೆ ಎಂಬ ಸುದ್ದಿ ಹೊರಬಿದ್ದಿದೆ.! ಹೌದು, ನಥಿಂಗ್ ಇಂಡಿಯಾ ಉಪಾಧ್ಯಕ್ಷ ಮತ್ತು ಜನರಲ್ ಮ್ಯಾನೇಜರ್ 'ಮನು ಶರ್ಮಾ' ಅವರು ತಮ್ಮ ಸಂದರ್ಶನದ ಪ್ರಕಟಣೆಯಲ್ಲಿ ಉಲ್ಲೇಖಿಸಿದ್ದು, ಭಾರತದಲ್ಲಿ ಮಾರಾಟವಾಗುವ ಪ್ರತಿಯೊಂದು Nothing Phone 1 ಸ್ಮಾರ್ಟ್ಫೋನನ್ನು ಸ್ಥಳೀಯವಾಗಿ ತಯಾರಿಸಲಾಗುವುದು ಎಂದು ಟ್ವೀಟ್ ಮಾಡಿ ತಿಳಿಸಿದ್ದಾರೆ.
ಭಾರತದಲ್ಲಿ ಮಾರಾಟವಾಗುವ ಪ್ರತಿ @Nothing Phone 1 ಸ್ಮಾರ್ಟ್ಫೋನನ್ನು ಸ್ಥಳೀಯವಾಗಿ ತಯಾರಿಸಲಾಗುವುದು ಎಂದು ಘೋಷಿಸಲು ನಾವು ರೋಮಾಂಚನಗೊಂಡಿದ್ದೇವೆ. ಇದು ನಮ್ಮ ಪ್ರಯಾಣದ ನಿಜವಾದ ಆರಂಭವಾಗಿದೆ ಮತ್ತು ಭಾರತದಲ್ಲಿ ನಮ್ಮನ್ನು ಸ್ಥಾಪಿಸಲು ಉತ್ತಮ ಮಾರ್ಗವನ್ನು ನಾವು ಯೋಚಿಸಲು ಸಾಧ್ಯವಿಲ್ಲ, ಏಕೆಂದರೆ, ಭಾರತವು Nothing ಕಂಪೆನಿಗೆ ಪ್ರಮುಖ ಮಾರುಕಟ್ಟೆಯಾಗಿದೆ ಎಂದು ಮನು ಶರ್ಮಾ ಅವರು ಟ್ವೀಟ್ ಮಾಡಿ ಹೇಳಿದ್ದಾರೆ. ಇಷ್ಟೇ ಅಲ್ಲದೇ, Nothing ಕಂಪೆನಿ ಭಾರತದ ಮೊಬೈಲ್ ಮಾರುಕಟ್ಟೆಯನ್ನೇ ಹೆಚ್ಚು ಅವಲಂಬಿತವಾಗಿರುವ ಬಗ್ಗೆ ತಿಳಿಸಿರುವ ಅವರು, ದೇಶದಲ್ಲಿ Nothing ಕಂಪೆನಿಯ ಮಾರುಕಟ್ಟೆಯನ್ನು ಬಲವಾಗಿ ವಿಸ್ತರಿಸುವ ಹಾಗೂ ಗ್ರಾಹಕರಿಗೆ ಅಭೂತಪೂರ್ವ ಗ್ರಾಹಕ ಸೇವೆಯನ್ನು ಒದಗಿಸುವ ಬಗ್ಗೆ ಕೂಡ ಮಾಹಿತಿಯನ್ನು ಹಂಚಿಕೊಂಡಿದ್ದಾರೆ.
Nothing Phone 1 ಸ್ಮಾರ್ಟ್ಫೋನಿನ ಸ್ಥಳೀಯ ಉತ್ಪಾದನೆಯ ಹೊರತಾಗಿ, Nothing ಕಂಪನಿಯು ಮುಂಬರುವ Nothing Phone 1 ಉನ್ನತ ಮಟ್ಟದಲ್ಲಿ ತನ್ನ ಗ್ರಾಹಕರ ಬೆಂಬಲವನ್ನು ವಿಸ್ತರಿಸುತ್ತಿದೆ ಎಂದು ಮನು ಶರ್ಮಾ ಅವರು ಹೇಳಿದ್ದಾರೆ. ದೇಶದ 250 ಕ್ಕೂ ಹೆಚ್ಚು ನಗರಗಳಲ್ಲಿ 270 ಕ್ಕೂ ಹೆಚ್ಚು ಅಧಿಕೃತ ಸೇವಾ ಕೇಂದ್ರಗಳನ್ನು ತೆರೆಯಲು Nothing ಕಂಪನಿ ಮುಂದಾಗಿದ್ದು, "ನಥಿಂಗ್ ಇಂಡಿಯಾ ಚಾನಲ್ಗಳ ಮೂಲಕ ವರ್ಷಪೂರ್ತಿ ಬೆಂಬಲವನ್ನು" ನೀಡುವ ಬಗ್ಗೆ ಭರವಸೆ ನೀಡಿದ್ದಾರೆ. ಇನ್ನು ಈ Nothing Phone 1 ಅನ್ನು ಭಾರತದಲ್ಲಿ ತಯಾರಿಸಲಾಗಿದ್ದರೂ, ಅದರ ಬ್ಯಾಟರಿಯನ್ನು ಚೀನಾದಿಂದ ಆಮದು ಮಾಡಿಕೊಳ್ಳಲಾಗಿದು ಎಂದು ಟಿಪ್ಸ್ಟರ್ ಮುಕುಲ್ ಶರ್ಮಾ ಅವರು ಹೇಳಿದ್ದು, Nothing Phone 1 ಸ್ಮಾರ್ಟ್ಫೋನ್ ಅನ್ನು ತಮಿಳುನಾಡಿನಲ್ಲಿ ತಯಾರಿಸಲಾಗುತ್ತಿದೆ ಎಂಬುದು ಸಹ ತಿಳಿಸಿದ್ದಾರೆ.
ನಾವು ಮೊದಲೇ ಹೇಳಿದಂತೆ, Nothing ಕಂಪೆನಿಯ ಮೊಟ್ಟ ಮೊದಲ ಸ್ಮಾರ್ಟ್ಫೋನ್ Nothing Phone 1 ಅನ್ನು ಇದೇ ಜುಲೈ 12 ರಂದು ದೇಶದಲ್ಲಿ ಬಿಡುಗಡೆ ಮಾಡಲಾಗುತ್ತಿದೆ. ಜುಲೈ 12 ರಂದು ರಾತ್ರಿ 8.30 ಗಂಟೆಗೆ 'ರಿಟರ್ನ್ ಟು ಇನ್ಸ್ಟಿಂಕ್ಟ್' ಎಂಬ ವರ್ಚುವಲ್ ಈವೆಂಟ್ ನಲ್ಲಿ Nothing Phone 1 ಸ್ಮಾರ್ಟ್ಫೋನನ್ನು ಪರಿಚಯಿಸಲಾಗುತ್ತಿದ್ದು, ಕಂಪೆನಿಯ ಅಧಿಕೃತ ಯೂಟ್ಯೂಬ್ ಚಾನೆಲ್ ಮೂಲಕ ಲೈವ್ಸ್ಟ್ರೀಮ್ ಮಾಡಲಾಗುತ್ತದೆ. ಇನ್ನು ಭಾರತದಲ್ಲಿ ಈಗಾಗಲೇ ಮುಂಗಡ ಬುಕ್ಕಿಂಗ್ ಮಾಡಲು ಲಭ್ಯವಿರುವ Nothing Phone 1 ಸ್ಮಾರ್ಟ್ಫೋನನ್ನು ಕೇವಲ 2,000 ರೂ. ಪಾವತಿಸಿ ಫ್ಲಿಪ್ಕಾರ್ಟ್ನಲ್ಲಿ ಬುಕ್ ಮಾಡಬಹುದಾಗಿದೆ. ಇನ್ನು ಈ ಸ್ಮಾರ್ಟ್ಪೋನ್ 45W ವೇಗದ ಚಾರ್ಜಿಂಗ್ ಬೆಂಬಲ ಹಾಗೂ ಅರೆಪಾರದರ್ಶಕ ವಿನ್ಯಾಸವನ್ನು ಹೊಂದಿರುವುದನ್ನು ಈಗಾಗಲೇ ಖಚಿತಪಡಿಸಲಾಗಿದೆ.
Nothing Phone 1 To Be Manufactured In India With Over 270 Service Centres.
24-07-25 10:52 pm
HK News Desk
ಕಾಲ್ತುಳಿತ ಪ್ರಕರಣ ; ಆರ್ ಸಿಬಿ, ಡಿಎನ್ಎ, ಕೆಎಸ್ ಸಿ...
24-07-25 08:01 pm
Lokayukta Raid, IAS Vasanthi: ಐಎಎಸ್ ಅಧಿಕಾರಿ ಮ...
24-07-25 07:29 pm
ಜಿಎಸ್ಟಿ ಬಾಕಿ ಪಾವತಿ ನೋಟಿಸ್ ವಾಪಸ್ ; ಆತಂಕಗೊಂಡಿದ...
24-07-25 05:01 pm
ಕೆಂಪುಕಲ್ಲು ಗಣಿಗಾರಿಕೆಗೆ ಅಧಿಕೃತ ಪರವಾನಿಗೆ ನೀಡಲು...
23-07-25 08:03 pm
24-07-25 09:06 pm
HK News Desk
Supreme Court, Actor Darshan, Murder case: ನಟ...
24-07-25 07:54 pm
3,000 ಕೋಟಿ ಸಾಲ ವಂಚನೆ ಕೇಸ್ ; ಅನಿಲ್ ಅಂಬಾನಿ ಮೇಲ...
24-07-25 03:29 pm
ಕುಡುಬಿ ಸಮುದಾಯ ಎಸ್ಸಿ ಪಟ್ಟಿಗೆ ಸೇರಿಸಲು ರಾಜ್ಯದಿಂದ...
22-07-25 07:21 pm
Shashi Tharoor, Thiruvananthapuram: ಶಶಿ ತರೂರ್...
22-07-25 03:04 pm
24-07-25 10:26 pm
Mangalore Correspondent
Dharmasthala Case, Investigation, Advocate,...
24-07-25 05:27 pm
Mangalore Indiana Hospital: ಮಂಗಳೂರಿನಲ್ಲಿ ಪ್ರಥ...
24-07-25 11:30 am
ಕರಾವಳಿ ಜಿಲ್ಲೆಗಳಿಗೆ ಜುಲೈ 26ರ ವರೆಗೆ ಭಾರೀ ಮಳೆಯ ರ...
23-07-25 10:49 pm
Mangalore Extortion Jail, Sudheer Kumar Reddy...
23-07-25 10:25 pm
24-07-25 10:38 pm
Bangalore Correspondent
ದೇಶದಲ್ಲಿ ಅಲ್ ಖೈದಾ ಉಗ್ರವಾದಿ ಗುಂಪಿಗೆ ಯುವಜನರ ಸೇರ...
24-07-25 12:01 pm
Hyderabad, Udupi, Crime: ಹೈದರಾಬಾದಿನಲ್ಲಿ ರಿಯಲ್...
23-07-25 04:49 pm
ಟೆಲಿಗ್ರಾಮ್ ಆ್ಯಪ್ನಲ್ಲಿ ಹೂಡಿಕೆ ಮೇಲೆ ಕಮಿಷನ್ ; ಆ...
23-07-25 03:25 pm
Udupi Police, Chaddi Gang: ಉಡುಪಿಗೆ ಎಂಟ್ರಿ ಕೊಟ...
23-07-25 11:36 am