ಬ್ರೇಕಿಂಗ್ ನ್ಯೂಸ್
26-05-22 08:08 pm Source: Vijayakarnataka ಡಿಜಿಟಲ್ ಟೆಕ್
ಭಾರತದ ಜನಪ್ರಿಯ ಗ್ರಾಹಕ ಎಲೆಕ್ಟ್ರಾನಿಕ್ಸ್ ಬ್ರ್ಯಾಂಡ್ Boat ತನ್ನ ಹೊಸ Airdopes 175 TWS ವೈರ್ಲೆಸ್ ಇಯರ್ಬಡ್ ಸಾಧನವನ್ನು ದೇಶೀಯ ಮಾರುಕಟ್ಟೆಗೆ ಪರಿಚಯಸಿದೆ. ಕೈಗೆಟುಕುವ ಬೆಲೆ ವಿಭಾಗದಲ್ಲಿ ಅತ್ಯುತ್ತಮ ವೈರ್ಲೆಸ್ ಇಯರ್ಬಡ್ ಸಾಧನವನ್ನು ಬಯಸುತ್ತಿರುವ ಜನರಿಗಾಗಿ Boat Airdopes 175 TWS ವೈರ್ಲೆಸ್ ಇಯರ್ಬಡ್ ಸಾಧನವನ್ನು ಬಿಡುಗಡೆ ಮಾಡಲಾಗಿದ್ದು, ಈ ಬೆಲೆ ಶ್ರೇಣಿಯಲ್ಲಿ ಸಾಕಷ್ಟು ಉತ್ತಮ ವೈಶಿಷ್ಟ್ಯಗಳೊಂದಿಗೆ ನೂತನ Boat Airdopes 175 TWS ವೈರ್ಲೆಸ್ ಇಯರ್ಬಡ್ಗಳನ್ನು ಒದಗಿಸಿದ್ದೇವೆ ಎಂದು ಕಂಪೆನಿ ಹೇಳಿಕೊಂಡಿದೆ. ಹಾಗಾದರೆ, ಹೊಸ Airdopes 175 TWS ಸಾಧನದ ವಿಶೇಷಣಗಳು ಯಾವುವು ಮತ್ತು ಬೆಲೆ ಎಷ್ಟು ಎಂಬ ವಿವರಗಳನ್ನು ನೋಡೋಣ ಬನ್ನಿ.
ಹೊಸದಾಗಿ ಬಿಡುಗಡೆಯಾರುವ Boat Airdopes 175 TWS ಇಯರ್ಬಡ್ ಸಾಧನವು ಬೇಸ್ನಲ್ಲಿ ಇನ್-ಇಯರ್ ಪ್ರೀಮಿಯಂ ವಿನ್ಯಾಸದಲ್ಲಿ ಆಗಮಿಸಿದೆ. ಬಳಕೆದಾರರಿಗೆ ಸಮತೋಲಿತ ಮತ್ತು ತಲ್ಲೀನಗೊಳಿಸುವ ಧ್ವನಿ ಗುಣಮಟ್ಟವನ್ನು ಖಾತ್ರಿಪಡಿಸುವ ಸಲುವಾಗಿ 10mm ಆಡಿಯೊ ಡ್ರೈವರ್ ಸೆಟಪ್ ಅನ್ನು ತರಲಾಗಿದೆ. ಈ ಸಾಧನವು ಧ್ವನಿ ಭಾಗದಲ್ಲಿ ಕ್ವಾಡ್ ಮೈಕ್ ಸೆಟಪ್ ಅನ್ನು ಒಳಗೊಂಡಿದ್ದು, ಇದು ಸ್ಪಷ್ಟವಾದ ಆಡಿಯೊ ಕರೆ ಅನುಭವವನ್ನು ಸಕ್ರಿಯಗೊಳಿಸಲು ಸಹಾಯ ಮಾಡುತ್ತದೆ ಎಂದು ಕಂಪೆನಿ ತಿಳಿಸಿದೆ. ಬ್ಲೂಟೂತ್ 5.2 ಸಂಪರ್ಕ ಬೆಂಬಲವನ್ನು ಹೊಂದಿರುವ ಈ ಸಾಧನವು ಎಲ್ಲಾ ಆಂಡ್ರಾಯ್ಡ್ ಸಾಧನಗಳಿಗೂ ಸಪೋರ್ಟ್ ಮಾಡುವುದನ್ನು ಕಂಪೆನಿ ಖಚಿತಪಡಿಸಿದ್ದು, ಗುಣಮಟ್ಟದ ಆಡಿಯೋ ಒದಗಿಸುವ ಖಾತರಿಯನ್ನು ಸಹ ನೀಡಿದೆ.
ಉತ್ಪನ್ನದ ಬಾಳಿಕೆ ಬಗ್ಗೆ ಮಾತನಾಡುವುದಾದರೆ, Boat ಕಂಪನಿಯು ಹೇಳಿರುವಂತೆ ಹೊಸ Airdopes 175 TWS ಸಾಧನವು ಒಂದೇ ಚಾರ್ಜ್ನಲ್ಲಿ 35 ಗಂಟೆಗಳವರೆಗೆ ಕಾರ್ಯನಿರ್ವಹಿಸಲಿದೆ. ಸಾಧನದ ಇಯರ್ಬಡ್ಗಳು 8 ಗಂಟೆಗಳವರೆಗೆ ಕೆಲಸ ನಿರ್ವಹಿಸುತ್ತವೆ ಆದರೆ ಚಾರ್ಜಿಂಗ್ ಕೇಸ್ ಹೆಚ್ಚುವರಿ 27 ಗಂಟೆಗಳ ಬ್ಯಾಟರಿ ಅವಧಿಯನ್ನು ಹೊಂದಿದೆ ಎಂದು ಕಂಪೆನಿ ತಿಳಿಸಿದೆ. ಇದಲ್ಲದೆ, ಬಳಕೆದಾರರು ತಮ್ಮ Airdopes 175 ಅನ್ನು ಕೇವಲ 5 ನಿಮಿಷಗಳ ತ್ವರಿತ ಚಾರ್ಜ್ ಮಾಡುವ ಮೂಲಕ 75 ನಿಮಿಷಗಳ ಪ್ಲೇಬ್ಯಾಕ್ ಅನ್ನು ಪಡೆಯಬಹುದು ಎಂದು ಕಂಪೆನಿ ತಿಳಿಸಿದೆ. ಈ ಸಾಧನದ ಚಾರ್ಜಿಂಗ್ ಕೇಸ್ ಚಾರ್ಜ್ ಮಾಡಲು USB ಟೈಪ್ C ಪೋರ್ಟ್ ಮತ್ತು ಸಾಧನಗಳ ತಡೆರಹಿತ ಜೋಡಣೆಗೆ ಅನುಮತಿಸುವ IWP ತಂತ್ರಜ್ಞಾನವನ್ನು ಹೊಂದಿದೆ.
ಮೊದಲೇ ಹೇಳಿದಂತೆ, ನೂತನ Airdopes 175 TWS ವೈರ್ಲೆಸ್ ಇಯರ್ಬಡ್ ಸಾಧನವನ್ನು ಕೈಗೆಟುಕುವ ಬೆಲೆ ವಿಭಾಗದಲ್ಲಿ ಪರಿಚಯಿಸಲಾಗಿದ್ದು, ಕೇವಲ 1,699 ರೂ.ಗಳಿಗೆ ಈ ಸಾಧನವನ್ನು ಖರೀದಿಸಬಹುದು. ಇದೇ ಮೇ 27 ರಿಂದ ಜನಪ್ರಿಯ ಇ-ಕಾಮರ್ಸ್ ಪ್ಲಾಟ್ಫಾರ್ಮ್ ಅಮೆಜಾನ್ ತಾಣದಲ್ಲಿ Airdopes 175 TWS ವೈರ್ಲೆಸ್ ಇಯರ್ಬಡ್ ಸಾಧನವು ಮಾರಾಟಕ್ಕೆ ಬರುತ್ತಿದೆ. ಇನ್ನು ಗ್ರಾಹಕರು ಕೆಂಪು, ನೀಲಿ, ಬಿಳಿ ಮತ್ತು ಕಪ್ಪು ಬಹುಬಣ್ಣದ ಆಯ್ಕೆಗಳಲ್ಲಿ Airdopes 175 TWS ವೈರ್ಲೆಸ್ ಇಯರ್ಬಡ್ ಸಾಧನವನ್ನು ತಮ್ಮದಾಗಿಸಿಕೊಳ್ಳಬಹುದು.
Boat Airdopes 175 Tws Launched In India Price At Rs 1699 Rs.
13-09-25 10:19 am
HK News Desk
Shikaripura Bike Accident: ಬೈಕ್ಗೆ ಡಿಕ್ಕಿ ಹೊಡ...
12-09-25 08:26 pm
Yatnal, Maddur: ರಾಜ್ಯದಲ್ಲಿ ಹೊಸ ಹಿಂದು ಪಾರ್ಟಿ ಕ...
12-09-25 03:04 pm
ಸಾಹಸಸಿಂಹ ವಿಷ್ಣುವರ್ಧನ್, ಹಿರಿಯ ನಟಿ ಬಿ.ಸರೋಜಾದೇವಿ...
11-09-25 10:11 pm
ಈದ್ ಮೆರವಣಿಗೆ : ಶಿವಮೊಗ್ಗದಲ್ಲಿ ಪಾಕಿಸ್ತಾನ್ ಜಿಂದಾ...
09-09-25 10:52 pm
12-09-25 11:33 am
HK News Desk
ನೇಪಾಳದಲ್ಲಿ ಕಮ್ಯುನಿಸ್ಟ್ ಸರಕಾರ ಪತನ ; ಹೊಸ ನಾಯಕ ಯ...
10-09-25 04:22 pm
ನೇಪಾಳದಲ್ಲಿ ಹಿಂಸಾಚಾರ ತೀವ್ರ ; ದೇಶ ಬಿಟ್ಟು ಓಡಿದ ಪ...
09-09-25 11:09 pm
ನೂತನ ಉಪ ರಾಷ್ಟ್ರಪತಿಯಾಗಿ ಎನ್.ಡಿ.ಎ ಮೈತ್ರಿಕೂಟದ ಸಿ...
09-09-25 09:38 pm
ಕಾಸರಗೋಡು ; ರಾಷ್ಟ್ರೀಯ ಹೆದ್ದಾರಿ ದಾಟಲೆತ್ನಿಸಿದ ಮಹ...
08-09-25 11:06 pm
12-09-25 10:58 pm
Mangalore Correspondent
Mahesh Vikram Hegde Arrested, Post Card Kanna...
12-09-25 09:25 pm
Sameer Md, Dharmasthala: ವಿದೇಶದಿಂದ ಫಂಡ್ ಬಂದಿ...
12-09-25 08:53 pm
RTI Dharmasthala Hostels, Mahesh Thimarodi: ಧ...
12-09-25 07:43 pm
Mangalore Road Accident, Pothole, Survery: ರಸ...
12-09-25 05:34 pm
13-09-25 11:36 am
Mangalore Correspondent
ಅಪ್ರಾಪ್ತ ಬಾಲಕಿಯನ್ನು ಅತ್ಯಾಚಾರಗೈದು ಹತ್ಯೆ ; ಬೆಳಗ...
12-09-25 11:07 pm
Ullal Police, Mangalore, Gold Robbery: ತೊಕ್ಕೊ...
12-09-25 10:48 pm
Udupi, Brahmavar Stabbing, Crime: ಬ್ರಹ್ಮಾವರ ;...
12-09-25 05:31 pm
Mangalore Police, Arrest: ಉರ್ವಾದಲ್ಲಿ ಪೊಲೀಸ್ ಕ...
11-09-25 09:13 pm