ಬ್ರೇಕಿಂಗ್ ನ್ಯೂಸ್
13-02-22 08:39 pm HK Desk news ಕ್ರೈಂ
ತಿರುವನಂತಪುರ, ಫೆ.13 : ಅರ್ಥಶಾಸ್ತ್ರದಲ್ಲಿ ಎಂಎ ಪದವಿ, ಅದರ ಜೊತೆಗೆ ಎಂಬಿಎ ಓದಿದ್ದ ಯುವಕನೊಬ್ಬ ಐದು ಮಂದಿಯನ್ನು ಕೊಲೆಗೈದು ಪೊಲೀಸರ ಲಿಸ್ಟ್ ನಲ್ಲಿ ಸೀರಿಯಲ್ ಕಿಲ್ಲರ್ ಎಂಬ ಕುಖ್ಯಾತಿ ಪಡೆದಿದ್ದಲ್ಲದೆ, ನಾಲ್ಕು ವರ್ಷಗಳಿಂದ ತಲೆಮರೆಸಿಕೊಂಡು ಓಡಾಡಿದ್ದ ಘಟನೆ ಬೆಳಕಿಗೆ ಬಂದಿದೆ.
ಕನ್ಯಾಕುಮಾರಿ ನಿವಾಸಿ ರಾಜೇಂದ್ರನ್ ಅಲಿಯಾಸ್ ರಾಜೇಶ್ (39) ಎಂಬಾತನೇ ಈ ಸೀರಿಯಲ್ ಕಿಲ್ಲರ್ ಆಗಿದ್ದು ಪೊಲೀಸರು ಕಡೆಗೂ ಬಂಧಿಸಿದ್ದಾರೆ.
ತಮಿಳುನಾಡಿನ ಕನ್ಯಾಕುಮಾರಿ ಜಿಲ್ಲೆಯಲ್ಲಿ ಅಡಗಿಕೊಂಡಿದ್ದ ಆರೋಪಿಯನ್ನು ತಿರುವನಂತಪುರ ಪೊಲೀಸರು ಬಂಧಿಸಿ ಕರೆತಂದಿದ್ದಾರೆ. ಕಳೆದ ಫೆ.3ರಂದು ತಿರುವನಂತಪುರ ಜಿಲ್ಲೆಯ ಅಂಬಲಮುಕ್ಕು ಎಂಬಲ್ಲಿನ ನರ್ಸರಿ ಕೇಂದ್ರದಲ್ಲಿ ಕೆಲಸಕ್ಕಿದ್ದ 37 ವರ್ಷದ ಮಹಿಳೆ ವಿನೀತಾ ಎಂಬಾಕೆಯನ್ನು ಕೊಲೆಗೈದು ಚಿನ್ನದ ಸರ ಕಿತ್ತುಕೊಂಡು ಪರಾರಿಯಾಗಿದ್ದ. ಸಿಸಿಟಿವಿ ಆಧರಿಸಿ ಆರೋಪಿಯ ಚಹರೆ ಹಿಡಿದು ಕಾರ್ಯಾಚರಣೆ ನಡೆಸಿದ ಪೊಲೀಸರು ಕನ್ಯಾಕುಮಾರಿ ಜಿಲ್ಲೆಯಿಂದ ಬಂಧಿಸಿದ್ದಾರೆ.

ಚಹಾ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದ ರಾಜೇಂದ್ರನ್, ಮಹಿಳೆಯ ಕುತ್ತಿಗೆಯಲ್ಲಿ ಚಿನ್ನದ ಸರ ಇರುವುದನ್ನು ನೋಡಿ ಅದನ್ನು ಕಿತ್ತುಕೊಳ್ಳುವುದಕ್ಕಾಗಿ ನರ್ಸರಿ ಒಳಹೊಕ್ಕಿದ್ದ. ಕೆಲವು ದಿನಗಳಿಂದ ಮಹಿಳೆಯ ಬೆನ್ನು ಬಿದ್ದಿದ್ದ ಕಳೆದ ಭಾನುವಾರ ನರ್ಸರಿ ಒಳಗೆ ಯಾರೂ ಇರದೇ ಇರೋದನ್ನು ನೋಡಿ ಒಳನುಗ್ಗಿ ಮಹಿಳೆಯ ಕುತ್ತಿಗೆ ಕೊಯ್ದು ಚಿನ್ನ ಕಿತ್ತು ಪರಾರಿಯಾಗಿದ್ದ.
ಕಳವು, ದರೋಡೆ ನಡೆಸುತ್ತಿದ್ದ ರಾಜೇಂದ್ರನ್ ಅದರಲ್ಲಿ ಬಂದ ಹಣವನ್ನು ಆನ್ಲೈನ್ ಜೂಜಿಗೆ ಹಾಕುತ್ತಿದ್ದ. ವಿನೀತಾಳನ್ನು ಕೊಲೆಗೈದ ಬಳಿಕವೂ ಚಿನ್ನವನ್ನು ಅಡವಿಟ್ಟು ಆನ್ಲೈನ್ ಟ್ರೇಡ್ ಮಾಡಿದ್ದ. ಸಿಸಿಟಿವಿಯಲ್ಲಿ ರಾಜೇಶ್ ಆಟೋ ಚಾಲಕನ ಜತೆ ಮಾತನಾಡುತ್ತಿದ್ದುದು ಕಂಡುಬಂದಿತ್ತು. ಆಟೋ ಚಾಲಕ ನೀಡಿದ ಮಾಹಿತಿ ಆಧರಿಸಿ ಆರೋಪಿ ಪತ್ತೆ ಮಾಡಿದ್ದಾರೆ.
ತಮಿಳುನಾಡಿನಲ್ಲಿ ನಾಲ್ಕು ಕೊಲೆ ಪ್ರಕರಣಗಳಲ್ಲಿ ಭಾಗಿಯಾಗಿದ್ದ. 2014ರಲ್ಲಿ ಕಸ್ಟಮ್ಸ್ ಅಧಿಕಾರಿ ಹಾಗೂ ಆತನ ಪತ್ನಿಯನ್ನು ಕೊಲೆ ಮಾಡಿದ್ದ. ವಿವಿಧ ಸಮಯ, ಸಂದರ್ಭಗಳಲ್ಲಿ ಕಳವು, ದರೋಡೆಯಿಂದ ಹಣ ಗಳಿಸಿದ್ದ ಆನಂತರ ಅದನ್ನೇ ವೃತ್ತಿ ಮಾಡಿಕೊಂಡಿದ್ದ ರಾಜೇಂದ್ರನ್, ಕೊಲೆ ಸರಣಿಯ ಬಳಿಕ ತಲೆತಪ್ಪಿಸಿಕೊಂಡು ಓಡಾಡುತ್ತಿದ್ದ. ತಮಿಳುನಾಡಿನಲ್ಲಿ ಕೃತ್ಯ ಎಸಗಿದ ಬಳಿಕ ಕೇರಳದಲ್ಲಿ ತಪ್ಪಿಸಿಕೊಳ್ಳುತ್ತಿದ್ದ. ಹೀಗಾಗಿ ತಮಿಳುನಾಡಿನಲ್ಲಿ ಈತನ ವಿರುದ್ಧ ಗೂಂಡಾ ಕಾಯ್ದೆ ಹಾಕಲಾಗಿತ್ತು.
Thiruvananthapuram the police team probing the murder of Vinitha Mol at a plant nursery at Ambalamukku last Sunday took the suspect Rajendran to Kanyakumari district for evidence collection on Saturday. The team recovered four gold chains, including the one used by the slain woman, from a financial firm at Anjugramam near Kanyakumari.
12-05-26 02:26 pm
HK News Staffer
ಶೃಂಗೇರಿ ಕ್ಷೇತ್ರದ ಅಂಚೆ ಮತ ಗೊಂದಲ; ಕಾಂಗ್ರೆಸಿನ ರಾ...
11-05-26 09:36 pm
D Sudhakar Death: ಚಿತ್ರದುರ್ಗದ ಜನಾನುರಾಗಿ ಶಾಸಕ,...
10-05-26 01:04 pm
25ನೇ ವಿವಾಹ ವಾರ್ಷಿಕೋತ್ಸವದ ದಿನವೇ ಭೀಕರ ಅಪಘಾತ ;...
09-05-26 10:41 pm
12ನೇ ಶತಮಾನದ ಕಾಕತೀಯರ ಕಾಲದ ಪ್ರಾಚೀನ ಶಿವ ದೇಗುಲ ಧ್...
08-05-26 08:05 pm
12-05-26 11:34 am
HK News Staffer
ಒಂದು ವರ್ಷ ಚಿನ್ನ ಖರೀದಿಸ್ಬೇಡಿ...ಇಂಧನ ಉಳಿಸಿ, ವಿದ...
11-05-26 08:05 pm
ಗೋವಾ ಸಮುದ್ರದಲ್ಲಿ ಕಾರವಾರದ ಮೀನುಗಾರಿಕಾ ಬೋಟ್ ಪಲ್ಟ...
11-05-26 06:20 pm
ವಾಯುವ್ಯ ಪಾಕಿಸ್ತಾನದಲ್ಲಿ ಭೀಕರ ಭಯೋತ್ಪಾದಕ ದಾಳಿ;...
11-05-26 02:14 pm
ಪಶ್ಚಿಮ ಬಂಗಾಳದಲ್ಲಿ ಬದಲಾವಣೆಯ ಗಾಳಿ ; ಬಿಜೆಪಿ ಅಧಿಕ...
10-05-26 09:38 pm
12-05-26 12:05 am
Mangalore Correspondent
ಕುತ್ತಾರಿನಲ್ಲಿ ಕೊರಗಜ್ಜ ಸರ್ಕಲ್ ನಿರ್ಮಾಣ ; ಯಾರೋ ಹ...
09-05-26 11:51 pm
ಮಂಜೇಶ್ವರ ಕ್ಷೇತ್ರ ; ಸಿಪಿಎಂ ಅಭ್ಯರ್ಥಿಗೆ ಇತಿಹಾಸದಲ...
09-05-26 02:15 pm
ಮನೆ ಕಳ್ಳತನ ತಡೆಗೆ ಉಡುಪಿ ಪೊಲೀಸರ ಹೊಸ ಹೆಜ್ಜೆ ; “ಲ...
09-05-26 02:13 pm
Kuthar, Mangalore, UT Khader: ಕುತ್ತಾರಿನಲ್ಲಿ ಕ...
08-05-26 10:33 pm
12-05-26 01:54 pm
HK News Staffer
ಧರ್ಮಸ್ಥಳ ಬುರುಡೆ ಅಗೆದಿದ್ದೇ ಬಂತು..! ಹತ್ತು ತಿಂಗಳ...
12-05-26 01:11 pm
ಬೈಕಂಪಾಡಿಯಲ್ಲಿ ಮೊಬೈಲ್ ಅಂಗಡಿಗೆ ಕನ್ನ; 6 ವರ್ಷದಿಂದ...
12-05-26 11:19 am
ಮದುವೆ ನಿಶ್ಚಯವಾಗಿದ್ದ ಯುವಕ ಅಪಘಾತದಲ್ಲಿ ಸಾವು ; ಮನ...
11-05-26 04:58 pm
ಉಪ್ಪಿನಂಗಡಿಯಲ್ಲಿ ಭೀಕರ ಅಪಘಾತ; ಕಾರು-ಬೈಕ್ ಡಿಕ್ಕಿ,...
11-05-26 01:08 pm