ಬ್ರೇಕಿಂಗ್ ನ್ಯೂಸ್
23-09-21 05:11 pm Headline Karnataka News Network ಕ್ರೈಂ
ಬೆಂಗಳೂರು, ಸೆ. 23: ನಿದ್ರೆಗೆ ಜಾರಿದ್ದ ಯುವತಿ ಮೇಲೆ ಅತ್ಯಾಚಾರ ಎಸಗಿದ ಆರೋಪದಡಿ ಕ್ಯಾಬ್ ಚಾಲಕನನ್ನು ಜೀವನ್ ಭೀಮಾ ನಗರ ಪೊಲೀಸರು ಬಂಧಿಸಿದ್ದಾರೆ. ಬಂಧಿತ ಆರೋಪಿ ಕ್ಯಾಬ್ನಲ್ಲೇ ಬಿಟ್ಟು ಹೋಗಿದ್ದ ಮೊಬೈಲ್ನಲ್ಲಿ ಅತ್ಯಾಚಾರಕ್ಕೂ ಮುನ್ನ ಆತ ಅರೆಬೆತ್ತಲೆಯಲ್ಲಿ ಯುವತಿಯ ಪೋಟೋ ಕ್ಲಿಕ್ಕಿಸಿಕೊಂಡಿದ್ದ ಸಂಗತಿ ಬಯಲಾಗಿದೆ.
ಎಸ್ಎಸ್ಅರ್ ಲೇಔಟ್ನ ತನ್ನ ಸ್ನೇಹಿತನ ಮನೆಗೆ ಹೋಗಿದ್ದ ಯುವತಿ ರಾತ್ರಿ 3.20 ರ ಸುಮಾರಿಗೆ ಮನೆ ಬಿಟ್ಟು ಮುರುಗೇಶ್ ಪಾಳ್ಯಕ್ಕೆ ಕಾರು ಬುಕ್ ಮಾಡಿದ್ದಳು. ಕಾರಿನಲ್ಲಿ ಬರುವಾಗ ಯುವತಿ ನಿದ್ದೆಗೆ ಜಾರಿದ್ದಳು. ಯುವತಿಯನ್ನು ಎಬ್ಬಿಸಲು ಹೋದ ಕಾರು ಚಾಲಕ ದೇವರಾಜ್ ಆಕೆಯ ಮೈಮೇಲೆ ಬಿದ್ದು ಅತ್ಯಾಚಾರ ಎಸಗಿದ್ದಾನೆ. ಅತ್ಯಾಚಾರ ಕುರಿತು ಸಂತ್ರಸ್ತ ಯುವತಿ 112 ಕಂಟ್ರೋಲ್ ರೂಮ್ಗೆ ಕರೆ ಮಾಡಿ ಮಾಹಿತಿ ನೀಡಿದ್ದು, ಯುವತಿಯ ಮನೆಗೆ ಹೋಗಿ ಪೊಲೀಸರು ಮಾಹಿತಿ ಪಡೆದುಕೊಂಡಿದ್ದಾರೆ. ಮಹಿಳಾ ಅಧಿಕಾರಿಯನ್ನು ಕರೆಸಿ ಯುವತಿಯನ್ನು ಪೊಲೀಸ್ ಠಾಣೆಗೆ ಕರೆದುದೊಯ್ದು ಹೇಳಿಕೆ ದಾಖಲಿಸಿಕೊಂಡಿದ್ದಾರೆ.
ಯುವತಿ ನೀಡಿದ ಮಾಹಿತಿ ಮೇರೆಗೆ ಉಬರ್ ಆರು ನಂಬರ್ ಹಾಗೂ ಆರೋಪಿಯ ವಿವರ ಪಡೆದು ಆವಲಹಳ್ಳಿಯ ರೂಮ್ ನಲ್ಲಿದ್ದ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ. ಕೃತ್ಯ ನಡೆದ ಧರಿಸಿದ್ದ ಬಟ್ಟೆಯನ್ನೇ ಧರಿಸಿದ್ದ ಆರೋಪಿಯನ್ನು ಇಂದು ನ್ಯಾಯಾಧೀಶರ ಮುಂದೆ ಹಾಜರು ಪಡಿಸಿ ಹೆಚ್ಚಿನ ವಿಚಾರಣೆಗಾಗಿ ಪೊಲೀಸ್ ಕಸ್ಟಡಿಗೆ ಪಡೆಯಲಿದ್ದಾರೆ. ಸಂತ್ರಸ್ತ ಯುವತಿ ಹಾಗೂ ಆರೋಪಿತ ಚಾಲಕನಿಗೂ ವೈದ್ಯಕೀಯ ಪರೀಕ್ಷೆ ನಡೆಸಿದ್ದು, ಅತ್ಯಾಚಾರ ನಡೆದಿರುವುದು ಮೇಲ್ನೋಟಕ್ಕೆ ಕಂಡು ಬಂದಿದೆ.
ಯುವತಿ ನಿದ್ರೆಯಲ್ಲಿದ್ದಾಗ, ಕಾರು ನಿಲ್ಲಿಸಿದ್ದ ಆರೋಪಿತ ಚಾಲಕ, ಯುವತಿಯನ್ನು ಅರೆಬೆತ್ತಲೆಗೊಳಿಸಿ ಸೆಲ್ಪಿ ತೆಗೆದುಕೊಂಡಿದ್ದ. ಕಾರಿನ ಹಿಂದಿನ ಸೀಟ್ನಲ್ಲಿ ಕುಳಿತಿದ್ದ ಯುವತಿಯ ಪಕ್ಕದಲ್ಲಿ ಕೂತು ಕಾರು ಚಾಲಕ ಸೆಲ್ಪಿ ತೆಗೆದುಕೊಂಡಿದ್ದು, ಮೊಬೈಲ್ ಪರಿಶೀಲನೆ ವೇಳೆ ಸಿಕ್ಕಿದ್ದು, ಪೊಲೀಸರು ವಶಪಡಿಸಿಕೊಂಡಿದ್ದಾರೆ.
ಯುವತಿ ಐಡಿಯಾದಿಂದ ಪ್ರಕರಣ ಪತ್ತೆ;
ಯುವತಿ ಮೇಲೆ ಅತ್ಯಾಚಾರ ಎಸಗಿದ್ದ ಕಾರು ಚಾಲಕನ ಕೃತ್ಯ ನೋಡಿ ಯುವತಿ ಕಿರುಚಾಡಿದ್ದಳು. ಇದರಿಂದ ಭಯಗೊಂಡು ಕಾರಿನ ಹಿಂಬದಿ ಸೀಟಿನಿಂದ ಕೆಳಗೆ ಇಳಿದು ಹೊರಗೆ ಬಂದಿದ್ದ. ಈ ವೇಳೆ ಸೀಟ್ ಮೇಲೆ ಬಿದ್ದಿದ್ದ ಆರೋಪಿಯ ಮೊಬೈಲ್ನ್ನು ಯುವತಿ ಬ್ಯಾಗ್ನಲ್ಲಿ ಹಾಕಿಕೊಂಡಿದ್ದಾಳೆ. ಆ ಬಳಿಕ ಕಾರಿನಿಂದ ಮನೆಗೆ ತೆರಳಿ ಪೊಲೀಸರಿಗೆ ಕರೆ ಮಾಡಿ ವಿಷಯ ತಿಳಿಸಿದ್ದಾಳೆ. ಮೊಬೈಲ್ ಹುಡುಕಿಕೊಂಡು ಅದೇ ಸ್ಥಳಕ್ಕೆ ಬಂದಿದ್ದ ಆರೋಪಿ ಚಾಲಕನನ್ನು ಪೊಲೀಸರು ಬಂಧಿಸಿದ್ದಾರೆ.
Read: ಬೆಂಗಳೂರು; ಕಾರ್ ಡೋರ್ ಲಾಕ್ ಮಾಡಿ ಪಾನಮತ್ತ ಯುವತಿಯ ಮೇಲೆ ಅತ್ಯಾಚಾರ ; ಉಬರ್ ಟ್ಯಾಕ್ಸಿ ಡ್ರೈವರ್ ಬಂಧನ !
The police, on Wednesday, arrested a taxi driver after a 24-year-old woman filed a complaint alleging that he raped her earlier in the morning. Within hours of the woman filing the complaint, the Jeevan Bima Nagar police tracked down and arrested the cab driver.
05-04-25 02:47 pm
HK News Satff
Kalaburagi Accident Mini Bus and Truck: ಕಲಬುರ...
05-04-25 12:21 pm
Ankola Robbery, Talat gang: ಅಂಕೋಲಾದಲ್ಲಿ ನಗದು...
04-04-25 10:54 pm
Mla Pradeep Eshwar, H D Kumaraswamy: ಕುಮಾರಸ್ವ...
04-04-25 09:55 pm
Waqf Amendment, Deve Gowda, Rajya Sabha: ವಕ್ಫ...
04-04-25 12:00 pm
04-04-25 09:29 pm
HK News Desk
Waqf Controversy, BJP, Kharge: ವಕ್ಫ್ ಆಸ್ತಿ ಕ...
04-04-25 08:50 pm
Waqf Amendment Bill: ಸಂಸತ್ತಿನ ಎರಡೂ ಸದನಗಳಲ್ಲಿ...
04-04-25 12:44 pm
Mangalore MP Brijesh Chowta: ನಿವೃತ್ತ ಸೈನಿಕರ ಅ...
03-04-25 11:10 pm
Waqf Bill, Amit Shah; ಸುದೀರ್ಘ ಚರ್ಚೆ ಬಳಿಕ ಸಂಸತ...
03-04-25 01:04 pm
05-04-25 07:49 pm
Udupi Correspondent
Mangalore Jail, Jammer, Vedavyas Kamath; ಜೈಲಿ...
05-04-25 01:16 pm
Mangalore, Thokkottu: ತೊಕ್ಕೊಟ್ಟು ಫ್ಲೈಓವರ್ ಕೆಳ...
04-04-25 11:07 pm
Mangalore Hotel Moti Mahal closed, Milagres:...
04-04-25 11:00 pm
Mangalore Bus Accident, Uppinangady: ನೀರಕಟ್ಟೆ...
04-04-25 01:39 pm
05-04-25 04:27 pm
HK News Staff
Anwar Manippady threat, Mangalore crime: ವಕ್ಪ...
04-04-25 03:03 pm
Kalaburagi Murder, Three killed: ಕೌಟುಂಬಿಕ ಕಲಹ...
03-04-25 05:01 pm
Mandya Marriage Fraud: ಒಬ್ಬರಲ್ಲ, ಮೂವರು ಯುವಕರ...
03-04-25 01:02 pm
Mangalore police, Cow trafficking, Kaikamba,...
02-04-25 05:49 pm